ಕೊರೋನಾ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗಣಿತ, ವಿಜ್ಞಾನ ವಿಷಯಗಳು ಸಂಪೂರ್ಣವಾಗಿ ಮರೆತೇ ಹೋಗುವ ಹಂತಕ್ಕೆ ಮಕ್ಕಳು ತಲುಪುತ್ತಿದ್ದಾರೆ ಎನ್ನುವುದು ಹಲವಾರ ವಾದ. ಹೌದು ಅಂದ ಮಾತ್ರಕ್ಕೆ ಮಕ್ಕಳನ್ನು ಕೊರೋನಾಕ್ಕೆ ಬಲಿಕೊಡುವುದು ಸಹ ಸಾಧ್ಯವಿಲ್ಲ. ಒಟ್ಟಿನಲ್ಲಿ ಕೊರೋನಾದಿಂದ ಶಿಕ್ಷಣದ ಸ್ಥಿತಿ ಕತ್ತರಿಯ ಮಧ್ಯೆ ಸಿಲುಕಿದ ಅಡಕೆಯ ರೀತಿ ಆಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಆನ್ಲೈನ್ ತರಗತಿಗಳನ್ನು ಜಾರಿಗೆ ತಂದವು. ಆದರೆ ಇದು ಉಳ್ಳವರಿಗೆ ಮಾತ್ರ ಸೀಮಿತವಾಗುತ್ತಿದೆ. ಇದರ ಬಗ್ಗೆ ಅರಿತರೂ ಸರ್ಕಾರ ಉಳಿದ ಮಕ್ಕಳ ಬಗ್ಗೆ ಚಿಂತಿಸುತ್ತಿಲ್ಲ. ಇದರಿಂದ ಎಷ್ಟೋ ಮಕ್ಕಳ ವಿದ್ಯಾಭ್ಯಾಸದ ಮುಂದಿನ ಹಾದಿ ಏನು ಎಂಬುದು ಎಲ್ಲರ ಪ್ರಶ್ನೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇಲ್ಲೊಬ್ಬ ಶಿಕ್ಷಕರು ಆನ್ಲೈನ್ ತರಗತಿ ಪಡೆದುಕೊಳ್ಳಲು ಸಾಧ್ಯವಾಗದ ಮಕ್ಕಳಿಗೆ ಆಶಾಕಿರಣವಾಗಿ ನಿಂತಿದ್ದಾರೆ. ಸಿಕ್ಕ ಸಣ್ಣ ಜಾಗದಲ್ಲೇ ಬಿಳಿ ಬೋರ್ಡ್ ನೇತು ಹಾಕಿ ಸಿಕ್ಕ ಸಮಯದಲ್ಲಿ ಒಂದಿಷ್ಟಾದರೂ ಕಲಿಸುವ ಎಂಬ ಭಾವನೆಯೊಂದಿಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.
ಹೌದು. ದೆಹಲಿಯ ಕೊಳೆಗೇರಿ ಹತ್ತಿರವಿರುವ ಇವರು ಅರೆ ಕಾಮಗಾರಿ ಸೇತುವೆಯ ಕೆಳಗೆ ಒಂದಿಷ್ಟು ಮಕ್ಕಳಿಗೆ ಪಾಠ ಮಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಕೊರೋನಾ ಕಾರಣ ಸರ್ಕಾರ ಎಲ್ಲ ಮಕ್ಕಳಿಗೆ ಆನ್ಲೈನ್ ತರಗತಿ ಕಡ್ಡಾಯಗೊಳಿಸಿದೆ. ಆದರೆ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಮಕ್ಕಳಿಗೆ ಸತ್ಯೇಂದ್ರ ಪಾಲ್ ಪಾಠ ಮಾಡುತ್ತಿದ್ದಾರೆ.
ಈ ಪೋಸ್ಟ್ ಅನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿಯಾದ ಸುಶಾಂತ್ ನಂದ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದು, ಶಿಕ್ಷಕರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
हो कहीं भी आग, लेकिन आग जलनी चाहिए🙏 pic.twitter.com/NL0WqQBZQU
— Susanta Nanda IFS (@susantananda3) April 13, 2021
ನಾನು ಮಹಾಮಾರಿ ಕೊರೋನಾ ಕಾರಣ ಮಾರ್ಚ್ ತಿಂಗಳಿಂದ ಪಾಠ ಮಾಡುವುದನ್ನು ನಿಲ್ಲಿಸಿದೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಪಾಠ ಮುಂದುವರೆಸುವಂತೆ ಒತ್ತಾಯಿಸಿದರು. ನಾನು ನನ್ನ ಬಗ್ಗೆ ಯೋಚಿಸಿ ನನಗೆ ಬೇಕಾದಷ್ಟು ಹಣ ಸಂಪಾದಿಸಬಹುದು. ಆದರೆ ನಾನು ಮಕ್ಕಳಿಗೆ ಕಲಿಸಿದರೆ ನನ್ನೊಂದಿಗೆ ಅವರು ಸಂಪಾದಿಸುತ್ತಾರೆ ಎಂದು ಹೇಳುತ್ತಾರೆ ಶಿಕ್ಷಕ ಸತ್ಯೇಂದ್ರ ಪಾಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ