Unity In Humanity: ಝೊಮಾಟೊಗೆ ಸಹಾಯ ಮಾಡಿದ ಸ್ವಿಗ್ಗಿ; ಅಪರೂಪದ ಸ್ನೇಹ ಇಲ್ಲಿದೆ ನೋಡಿ

ದೆಹಲಿಯ ಬೀದಿಯಲ್ಲಿ ಸೈಕಲ್‍ನಲ್ಲಿ ಹೋಗುತ್ತಿದ್ದ ಝೊಮಾಟೊ ಡೆಲಿವರಿ ವ್ಯಕ್ತಿಗೆ, ಬೈಕ್‍ನಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲಿವರಿ ವ್ಯಕ್ತಿ ಸಹಾಯ ಮಾಡಿದ್ದಾನೆ. ಆತನ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿದ್ದಾನೆ. ಅದರಿಂದ ಸೈಕಲ್‍ನಲ್ಲಿ ವ್ಯಕ್ತಿಯು ವೇಗವಾಗಿ ಹೋಗಲು ಸಹಾಯವಾಗಿದೆ.

ಸಹಾಯ ಮಾಡುತ್ತಿರುವುದು

ಸಹಾಯ ಮಾಡುತ್ತಿರುವುದು

  • Share this:
ಮಾಡುವ ಕೆಲಸ ಒಂದೇ, ಆದ್ರೆ ಬೇರೆ ಬೇರೆ ಕಂಪನಿ (Company). ಎಲ್ಲಿ ಕೆಲಸ (Work) ಮಾಡುತ್ತಿದ್ದರೇನು? ಮಾನವೀಯತೆ (Humanity) ಗೆ ಕೊರತೆ ಇರಬಾರದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಮನಸ್ಸಿದ್ದ ಮೇಲೆ ಅದನ್ನು ಕಾರ್ಯ ರೂಪಕ್ಕೆ ತರಬೇಕು ಅಷ್ಟೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. ಅಂತದ್ದೇ ಘಟನೆಯೊಂದ ದೆಹಲಿಯಲ್ಲಿ ನಡೆದಿದೆ. ದೆಹಲಿಯ (Delhi) ಬೀದಿಯಲ್ಲಿ ಸೈಕಲ್‍ನಲ್ಲಿ ಹೋಗುತ್ತಿದ್ದ ಝೊಮಾಟೊ (Zomato) ಡೆಲಿವರಿ (Delivery) ವ್ಯಕ್ತಿಗೆ, ಬೈಕ್‍ನಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲಿವರಿ ವ್ಯಕ್ತಿ ಸಹಾಯ ಮಾಡಿದ್ದಾನೆ. ಆತನ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿದ್ದಾನೆ. ಅದರಿಂದ ಸೈಕಲ್‍ನಲ್ಲಿ ವ್ಯಕ್ತಿಯು ವೇಗವಾಗಿ ಹೋಗಲು ಸಹಾಯವಾಗಿದೆ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕೈ ಹಿಡಿದು ಇನ್ನೊಂದು ಕಂಪನಿ ನೌಕರನಿಗೆ ಸಹಾಯ
ಕೆಲವೊಮ್ಮೆ ಒಂದೇ ಕಂಪನಿಯ ನೌಕರರೇ ಒಬ್ಬರಿಗೊಬ್ಬರು ಸಹಾಯ ಮಾಡೋದು ಕಷ್ಟ. ಸಹಾಯ ಕೇಳಿದ್ರೆ ಗೊತ್ತಿದ್ರೂ ಮಾಡಲ್ಲ. ಆದ್ರೆ ಇಲ್ಲಿ ಬೇರೆ ಬೇರೆ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸಹಾಯ ಮಾಡಿದ್ದಾರೆ. ಬಿಸಿಲಿನಲ್ಲಿ ಕಷ್ಟ ಪಟ್ಟು ಸೈಕಲ್‍ನಲ್ಲಿ ಝೊಮಾಟೊ ಡೆಲಿವರಿ ವ್ಯಕ್ತಿ ತನ್ನ ಡೆಲಿವರಿ ಕೊಡಲು ಹೋಗುತ್ತಿದ್ದ. ಆಗ ಅದೇ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಆತನಿಗೆ ಸಹಾಯ ಮಾಡಿದ್ದಾನೆ. ಕೈ ಹಿಡಿದುಕೊಂಡು ಮುನ್ನೆಡೆದಿದ್ದಾನೆ. ಆಗ ಸೈಕಲ್‍ನಲ್ಲಿ ಹೋಗುತ್ತಿದ್ದ ಡೆಲಿವರಿ ಬಾಯ್ ಬೇಗ ಹೋಗಲು ಸಹಾಯವಾಗಿದೆ. ಈ ಮಾನವೀಯತೆಯಲ್ಲಿ ಏಕತೆ ಸಾರಿದ ವಿಡಿಯೋ ದೆಹಲಿಯಲ್ಲಿ ನಡೆದಿದ್ದು.

ದೆಹಲಿಯ ಬಿಸಿಯಲ್ಲಿ ತಂಪಾದ ಸ್ನೇಹ
ಈ ವಿಡಿಯೋವನ್ನು ಸಂಹರೋರಾ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ದೆಹಲಿಯಲ್ಲಿ ಈ ಅತ್ಯಂತ ಬಿಸಿ ಮತ್ತು ಅಸಹನೀಯ ದಿನಗಳಲ್ಲಿ ಕಂಡ ನಿಜವಾದ ಸ್ನೇಹ" ಎಂದು ಶಿರ್ಷಿಕೆ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ. ಈ ರೀತಿ ನಿಜವಾದ ಸ್ನೇಹ ಕಂಡುಬದುವುದು ಅಪರೂಪ ಎಂದಿದ್ದಾರೆ.
https://www.instagram.com/reel/Cfx_vfuJCN-/?utm_source=ig_web_copy_link

3,82, 503 ಜನ ವೀಕ್ಷಣೆ
ಸಂಹರೋರಾ ಎನ್ನುವವರು ಹಾಕಿದ ವಿಡಿಯೋವನ್ನು 3,82, 503 ಜನ ವೀಕ್ಷಿಸಿದ್ದಾರೆ. ಟನ್‍ಗಳಷ್ಟು ಕಾಮೆಂಟ್ ಬಂದಿವೆ. ಇದು ನಿಜವಾದ ಸ್ನೇಹ. ಸುಂದರ ಸ್ನೇಹ. ನೋಡಿದ್ರೆ ಖುಷಿಯಾಗುತ್ತೆ. ಇವರ ಸಹಾಯ ಮಾಡುವ ಗುಣ ಹೀಗೆ ಮುಂದುವರೆಯಲಿ. ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್‍ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Zomato: ಜೊಮ್ಯಾಟೋ ಮತ್ತು ಡೈರೆಕ್ಟ್ ಆರ್ಡರ್ ಬಿಲ್ ನಡುವೆ ವ್ಯತಾಸ ಎಷ್ಟಿರುತ್ತೆ!?

ಝೊಮಾಟೊ ಡೆಲಿವರಿ ಏಜೆಂಟ್‍ಗೆ ಸ್ವಿಗ್ಗಿ ಡೆಲಿವರಿ ವ್ಕಕ್ತಿ ಸಹಾಯ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಷ್ಟೋ ಜನ ವಿಡಿಯೋವನ್ನು ನೆಚ್ಚಿಕೊಂಡಿದ್ದಾರೆ. ತಮ್ಮ ವಾಟ್ಸಾಪ್ ಸ್ಟೇಟಸ್, ಟ್ವಿಟರ್ ಖಾತೆಯಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಸಿಕ್ಕಾಪಟ್ಟೆ ವೈರಲ್​ ಆಗಿತ್ತು ಕುದುರೆ ಸವಾರನ ವಿಡಿಯೋ!

ಕೆಲವು ದಿನಗಳ ಹಿಂದೆ ಡೆಲಿವರಿ ಬಾಯ್ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕಾರಣ, ಸ್ಕೂಟರ್, ಬೈಕ್ ಅಥವಾ ಬೈಸಿಕಲ್​ನಲ್ಲಿ ಆ ವ್ಯಕ್ತಿ ಹೋಗುತ್ತಿರಲಿಲ್ಲ. ಈ ಸ್ವಿಗ್ಗಿ ಹುಡುಗ ಫುಡ್ ಡೆಲಿವರಿ ಮಾಡಲು ಕುದುರೆಯ ಮೇಲೆ ಹೋಗುತ್ತಿದ್ದ. ಈತನ ಫೋಟೊ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದನ್ನೂ ಓದಿ: Swiggy: ಈ ಡೆಲಿವರಿ ಬಾಯ್​ನ ಸುಳಿವು ಕೊಟ್ರೆ, 5 ಸಾವಿರ ಕೊಡುತ್ತೆ ಸ್ವಿಗ್ಗಿ! ಕಾರಣ ನೋಡಿ ಸಖತ್​ ಇಂಟ್ರೆಸ್ಟಿಂಗ್​

ಈ ಕುದುರೆ ಸವಾರನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಹಲವಾರು ಮೀಮ್‌ಗಳು ಕೂಡ ಸೃಷ್ಟಿಯಾಗಿವೆ. "ಇವನು ನನ್ನ ಕನಸಿನ ರಾಜಕುಮಾರ, ಕುದುರೆಯ ಮೇಲೆ ಕುಳಿತು ನನಗೆ ಪಿಜ್ಜಾ ತರುತ್ತಾನೆ" ಎಂದು ವಿಡಿಯೋದಲ್ಲಿ ಕಾಮೆಂಟ್‌ಗಳು ಬಂದಿತ್ತು. ಈ ಹಲವು ಕಾಮೆಂಟ್‌ಗಳಿಗೆ ಸ್ವಿಗ್ಗಿ ಕೂಡ ಪ್ರತ್ಯುತ್ತರ ನೀಡುತ್ತಿದೆ.  "ಇವನು ನನ್ನ ಕನಸಿನ ರಾಜಕುಮಾರ, ಕುದುರೆಯ ಮೇಲೆ ಕುಳಿತು ನನಗೆ ಪಿಜ್ಜಾ ತರುತ್ತಾನೆ" ಎಂದು ವಿಡಿಯೋದಲ್ಲಿ ಕಾಮೆಂಟ್‌ಗಳು ಬಂದಿತ್ತು.
Published by:Savitha Savitha
First published: