Viral News: ಅಸಭ್ಯ ಅರ್ಥದ ನೋಂದಣಿ ಸಂಖ್ಯೆ ನೀಡಿದ್ದ RTO ಗೆ ಮಹಿಳಾ ಆಯೋಗ ನೋಟಿಸ್!

Women Commission: ಮಹಿಳಾ ಆಯೋಗ ಈ ಪ್ರಕರಣವನ್ನು ಸುಮೊಟೊವಾಗಿ ಕೈಗೆತ್ತಿಕೊಂಡಿದೆ. ರಿಜಿಸ್ಟ್ರೇಶನ್​ ಸಂಖ್ಯೆಯನ್ನು ಬದಲಿಸುವಂತೆ ಒತ್ತಾಯ ಮಾಡಿ RTO ಅಧಿಕಾರಿಗಳಿಗೆ ನೋಟಿಸ್ ನೀಡಿದೆ

ವಾಹನ

ವಾಹನ

 • Share this:
  ಇತ್ತೀಚೆಗೆ ಹೊಸ ಸ್ಕೂಟಿ(Scooter) ಖರೀದಿಸಿದ್ದ ದೆಹಲಿ(Delhi) ಯುವತಿಯೊಬ್ಬಳು(Women) ತನ್ನ ದ್ವಿಚಕ್ರ ವಾಹನಕ್ಕೆ ಅಸಾಮಾನ್ಯ ನೋಂದಣಿ ಸಂಖ್ಯೆಯನ್ನು(Registration Number) ಪಡೆದಿದ್ದರಿಂದ ಮುಜುಗರಕ್ಕೊಳಗಾಗಿದ್ದಳು... ದೆಹಲಿಯ ಪ್ರಾದೇಶಿಕ ಸಾರಿಗೆ ಕಚೇರಿ(Delhi RTO) ಸ್ಕೂಟಿಗೆ DL 3 SEX ನೋಂದಣಿ ಸಂಖ್ಯೆಯನ್ನು(Number) ನಿಗದಿಪಡಿಸಿದೆ. ಇದು ಈ ಯುವತಿಯನ್ನು ಮುಜುಗರಕ್ಕೀಡು ಮಾಡಿತ್ತು.. ಸೋಶಿಯಲ್ ಮೀಡಿಯಾದಲ್ಲಿ ಆ ದ್ವಿಚಕ್ರವಾಹನದ ಫೋಟೋ(Photo) ವೈರಲ್ ಆಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು..ಅಲ್ಲದೆ ಯುವತಿ ಯುವತಿಯ ತಂದೆ RTO ಹಾಗೂ ದೆಹಲಿ ಕಮಿಷನರ್​​ರನ್ನೂ ಕೂಡ ಭೇಟಿಯಾಗಿ ನಂಬರ್ ಬದಲಿಸಿಕೊಡುವಂತೆ ಕೇಳಿದ್ದರು. ಆದರೆ ಈ ಸರಣಿ ಮೊದಲೇ ನಿರ್ಧರಿತವಾಗಿರುತ್ತದೆ. ಹಾಗಾಗಿ ಅದನ್ನು ಬದಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.ಈಗ ಇದೆ ಪ್ರಕರಣದಲ್ಲಿ ಮಹಿಳಾ ಆಯೋಗ ಯುವತಿಯ ಪರ ನಿಂತಿದೆ..

  ವಿವಾದಾತ್ಮಕ ನೊಂದಣಿ ಸಂಖ್ಯೆ ಪ್ರಕರಣದಲ್ಲಿ ಯುವತಿ ಪರ ನಿಂತ ಮಹಿಳಾ ಆಯೋಗ

  ಯುವತಿ ತನಗಾಗುತ್ತಿರುವ ಸಮಸ್ಯೆ, ದೌರ್ಜನ್ಯದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಳು. ಸ್ಕೂಟಿ ನೋಡಿ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಹಾಗಾಗಿ ಸ್ಕೂಟಿ ತಗೆದುಕೊಂಡರೂ ಅದನ್ನು ಬದಿಗೆ ಇಡುವಂತೆ ಆಗಿದೆ.. ಜನ ನನ್ನ ಬಗ್ಗೆ ಇಲ್ಲ-ಸಲ್ಲದು ಮಾತನಾಡಿ ನೋವು ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಳು. ಅದರ ಬೆನ್ನಲ್ಲೇ ಮಹಿಳಾ ಆಯೋಗ ಈ ಪ್ರಕರಣವನ್ನು ಸುಮೊಟೊವಾಗಿ ಕೈಗೆತ್ತಿಕೊಂಡಿದೆ. ರಿಜಿಸ್ಟ್ರೇಶನ್​ ಸಂಖ್ಯೆಯನ್ನು ಬದಲಿಸುವಂತೆ ಒತ್ತಾಯ ಮಾಡಿ RTO ಅಧಿಕಾರಿಗಳಿಗೆ ನೋಟಿಸ್ ನೀಡಿದೆ..

  ಇದನ್ನೂ ಓದಿ: ವ್ಯಾಟ್​ ಕಡಿತಗೊಳಿಸಿದ ದೆಹಲಿ ಸರ್ಕಾರ; ಪೆಟ್ರೋಲ್​ ಬೆಲೆಯಲ್ಲಿ ಭಾರೀ ಇಳಿಕೆ​

  ಅಲ್ಲದೆ SEX ಈ ಸರಣಿಯಲ್ಲಿ ಆಗಿರುವ ನೋಂದಣಿಯನ್ನು ರದ್ದುಗೊಳಿಸಿ, ಅಂಥ ವಾಹನಗಳಿಗೆ ಬೇರೆ ರಿಜಿಸ್ಟರ್​ ನಂಬರ್ ಕೊಡಬೇಕು ಎಂದು ಮಹಿಳಾ ಆಯೋಗ ಸಾರಿಗೆ ಇಲಾಖೆಯನ್ನು ಕೇಳಿದೆ.

  ಏನಿದು ಪ್ರಕರಣ..?

  ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿಯಾಗಿರುವ ಯುವತಿ ಜನಕಪುರಿಯಿಂದ ನೋಯ್ಡಾಕ್ಕೆ ಮೆಟ್ರೋ ಮೂಲಕ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಮೆಟ್ರೋದಲ್ಲಿ ದೂರ ಪ್ರಯಾಣ ಕಷ್ಟವಾದ ಕಾರಣ ತನಗೆ ಸ್ಕೂಟಿ ಕೊಡಿಸಿ ಎಂದು ತನ್ನ ತಂದೆಯನ್ನು ಕೇಳಿದ್ದಳು. ನಿರಂತರವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಕೆಯ ತಂದೆಗೆ ವಿನಂತಿಸಿದ ನಂತರ ಅವರು ಅಂತಿಮವಾಗಿ ಇದೇ ವರ್ಷದ ದೀಪಾವಳಿಯಂದು ಆಕೆಗೆ ಉಡುಗೊರೆಯಾಗಿ ತಂದೆ ಸ್ಕೂಟಿ ಕೊಡಿಸಿದ್ದಾರೆ. ಅದರಂತೆ ಸ್ಕೂಟಿಗೆ ನೋಂದಣಿ ಸಂಖ್ಯೆ ಕೂಡ ಸಿಕ್ಕಿದೆ. ಆದರೆ ಸ್ಕೂಟಿ ನಂಬರ್ ಪ್ಲೇಟ್‌ನಲ್ಲಿ ಪದವನ್ನು ಕಂಡು ಕುಟುಂಬಸ್ಥರು ಅಚ್ಚರಿಗೊಂಡಿದ್ರು.

  ಬಳಿಕ ನನ್ನ ನೆರೆಹೊರೆಯವರು ನಾಚಿಕೆಯಿಲ್ಲದವಳು ಎಂದು ನನಗೆ ಕರೆಯುತ್ತಿದ್ದಾರೆ. ನನ್ನ ಸುತ್ತಲಿನ ಎಲ್ಲರೂ ನನ್ನನ್ನು ಬೆದರಿಸುತ್ತಿದ್ದಾರೆ ಎಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ. ಮಗಳ ಮೇಲಿನ ಅಪಹಾಸ್ಯದ ನಂತರ ಆಕೆಯ ತಂದೆ ದ್ವಿಚಕ್ರ ವಾಹನ ಮಾರಾಟಗಾರನನ್ನು ನಂಬರ್ ಬದಲಾಯಿಸಲು ವಿನಂತಿಸಿದರು, ಆದರೆ ಮಾರಾಟಗಾರರು ಈ ವಿನಂತಿಯನ್ನು ನಿರಾಕರಿಸಿದರು ಹೀಗಾಗಿ ಸ್ಕೂಟಿ ಬಳಸದೆ ಮನೆಯಲ್ಲೇ ನಿಲ್ಲಿಸುವಂತಾಗಿದೆ. ಹೀಗಾಗಿ ಸಂಖ್ಯೆ ಬದಲಿಸಿ ಕೊಡಿ ಎಂದು ಯುವತಿ ಅಳಲು ತೋಡಿಕೊಂಡಿದ್ದಳು

  ಇದನ್ನೂ ಓದಿ: ನಿಮ್ಮ ವಾಹನ 15 ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಯಾವಾಗ ಬೇಕಿದ್ರೂ ಜಪ್ತಿ ಮಾಡ್ಬಹುದು, ಜೋಕೆ!

  ದೆಹಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ‘ಎಸ್’ ಆಂಗ್ಲ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ನಂತರ ವಾಹನ ಸೂಚಕವಾಗಿ ಕಾರಿಗೆ ಸಿ ಬೈಕಿಗೆ ಎಸ್ ಎಂದು ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್ ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್‍ಇಎಕ್ಸ್ ಎಂದು ನಂಬರ್ ನೀಡಲಾಗುತ್ತದೆ. ಹೀಗಾಗಿ ಯುವತಿಗೆ ತನ್ನ ಗಾಡಿ ನೊಂದಣಿ ಸಂಖ್ಯೆ SE** ಎಂದು ಆಗಿತ್ತು.. ಇದರಿಂದಲೇ ಇವತ್ತು ಇಷ್ಟೆಲ್ಲಾ ಪಾಡುಪಡುವ ಅಂತಹ ಸ್ಥಿತಿ ನಿರ್ಮಾಣವಾಗಿತ್ತು
  Published by:ranjumbkgowda1 ranjumbkgowda1
  First published: