ಮಹಿಳಾ ಪೊಲೀಸರ ಸಖತ್ ಸ್ಟೆಪ್ಸ್: ವಿಡಿಯೋ ಫುಲ್ ವೈರಲ್

ಕಾರ್ಯಕ್ರಮ ಸಮಾರೋಪದ ಅಂತ್ಯಕ್ಕೆ ಬರುತ್ತಿದ್ದಂತೆ ಸಪ್ನಾ ಚೌಧರಿ ಅವರ ಪ್ರಸಿದ್ಧ ಗೀತೆ ತೇರಿ ಆಂಕ್ಯ ಕ ಯೊ ಕಾಜಲ್ ಎಂಬ ಸಾಂಗ್ ಪ್ಲೇ ಮಾಡಲಾಯಿತು.

zahir | news18
Updated:April 1, 2019, 4:41 PM IST
ಮಹಿಳಾ ಪೊಲೀಸರ ಸಖತ್ ಸ್ಟೆಪ್ಸ್: ವಿಡಿಯೋ ಫುಲ್ ವೈರಲ್
ಪೊಲೀಸ್
  • News18
  • Last Updated: April 1, 2019, 4:41 PM IST
  • Share this:
ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಸದಾ ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಆಕೆಯ ಹಾಡುಗಳು. ಹರ್ಯಾಣಿ, ಭೋಜ್​ಪುರಿ, ಪಂಜಾಬಿ ಮತ್ತು ಬಾಲಿವುಡ್​ ಹಾಡುಗಳಿಗೆ ಡಾನ್ಸ್ ಮಾಡಿ ಕೋಟ್ಯಾಂತರ ಮಂದಿ ಮನಗೆದ್ದಿರುವ ಸಪ್ನಾ ಚೌಧರಿ ಹಾಡಿನ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ದೆಹಲಿ ಮಹಿಳಾ ಪೊಲೀಸರು ಸಪ್ನಾ ಚೌಧರಿ ಅವರ 'ತೇರಿ ಆಂಖ್ಯ ಕ ಯೊ ಕಾಜಲ್...' ಗೀತೆಗೆ ಭರ್ಜರಿ ಸ್ಟೆಪ್ಸ್​ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.

ಮಾರ್ಚ್​ 30 ರಂದು ದೆಹಲಿಯ ಮಹಿಳಾ ಪೊಲೀಸ್ 'ಸುನೇ ಸಹೇಲಿ' ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಅಂತ್ಯದಲ್ಲಿ ವೇದಿಕೆ ಏರಿದ ಮಹಿಳಾ ಖಾಕಿಪಡೆಗಳು ನೃತ್ಯ ಮಾಡಿ ಸಂಭ್ರಮಿಸಿದರು.

ಸಮಾರೋಪದ ವೇಳೆ ಸಪ್ನಾ ಚೌಧರಿ ಅವರ ಪ್ರಸಿದ್ಧ ಗೀತೆ 'ತೇರಿ ಆಂಕ್ಯ ಕ ಯೊ ಕಾಜಲ್..' ಎಂಬ ಸಾಂಗ್ ಪ್ಲೇ ಮಾಡಲಾಯಿತು. ದೇಶದಾದ್ಯಂತ ವ್ಯಾಪಕ ಕ್ರೇಜ್ ಹುಟ್ಟುಹಾಕಿರುವ ಈ ಗೀತೆ ಪ್ಲೇ ಆಗುತ್ತಿದ್ದಂತೆ ಇಬ್ಬರು ಮಹಿಳಾ ಪೊಲೀಸರು ನೃತ್ಯ ಮಾಡಲು ಶುರು ಮಾಡಿದರು. ಇದರ ಬೆನ್ನಲ್ಲೇ ಇತರೆ ಪೊಲೀಸ್ ಸಿಬ್ಬಂದಿಗಳು ಕೂಡ ಸ್ಟೇಜ್ ಹತ್ತಿದರು. ಅಷ್ಟೇ ಅಲ್ಲದೆ ಐಪಿಎಸ್​ ಅಧಿಕಾರಿಯನ್ನು ಕೂಡ ಡ್ಯಾನ್ಸ್ ಮಾಡಿಸಿ ಕುಣಿದು ಕುಪ್ಪಳಿಸಿದರು. ಈ ಡ್ಯಾನ್ಸಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ಮಹಿಳಾ ಖಾಕಿ ಪಡೆಗಳ ಭರ್ಜರಿ ಸ್ಟೆಪ್ಸ್​ಗೆ ಹಲವರು ತಲೆದೂಗಿದ್ದಾರೆ.


First published:April 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading