ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬ ವೇಷ ಧರಿಸಿ ಪ್ರಾಣಿಯಂತೆ ವರ್ತಿಸಿದ್ದಾನೆ. ಸಮಾಜ ಬಾಂಧವರು ತಲೆ ತಗ್ಗಿಸುವ ರೀತಿಯಲ್ಲಿ ಇವನ ವರ್ತನೆಯಾಗಿದೆ. ಸಾರ್ವಜನಿಕ ಉದ್ಯಾನವನದಲ್ಲಿ (Public Park) ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ದೇಶಾದ್ಯಂತ ಇದೀಗ ಭಾರೀ ಸಂಚಲನ ಮೂಡಿಸಿದೆ. ಮೂಕಪ್ರಾಣಿಗಳ ಮೇಲೆ ಇಂತಹ ಹೇಯ ಕೃತ್ಯ ಎಸಗಿದ ವ್ಯಕ್ತಿಯನ್ನು ಬಿಡಬಾರದು ಎಂದು ಪ್ರಾಣಿ ಪ್ರಿಯರು ಹಾಗೂ ಜನಸಾಮಾನ್ಯರು ಆಗ್ರಹಿಸಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನಾಯಿಯ (Street Dog) ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪೊಲೀಸರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ಈ ಕ್ರಮವನ್ನು ಜನರು ದೂರುತ್ತಿದ್ದಾರೆ.
ಹೌದು , ಸದ್ಯ ಈ ಘಟನೆ ದೆಹಲಿಯ ಸಾರ್ವಜನಿಕ ಉದ್ಯಾನವನದಲ್ಲಿ ನಡೆದಿದ್ದು ಇದನ್ನು ನೋಡಿದ ಜನರು, ಸಮಾಜ ಬಾಂಧವರು ಇವನ ವಿರುದ್ಧ ಕಠಿಣ ಶಿಕ್ಷೆ ಆಗಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಈತ ಮನುಷ್ಯ ಅಲ್ಲ ಪ್ರಾಣಿ
ಇದೀಗ ದೆಹಲಿಯಲ್ಲಿ ಮತ್ತೊಂದು ಕ್ರೂರ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಹರಿನಗರ ಪ್ರದೇಶದ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಬೀದಿನಾಯಿಯ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀದಿನಾಯಿಗೆ ಅತ್ಯಾಚಾರ ಮಾಡುವ ಮನುಷ್ಯನಂತಹ ಪ್ರಾಣಿಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಪೋಸ್ಟ್ ಮಾಡಿದ ಕೆಲವೇ ಕ್ಷಣದಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ.
ಇದನ್ನೂ ಓದಿ: ಹೊಸದಾಗಿ ಮದುವೆ ಆದ ಹುಡುಗೀರು ಗೂಗಲ್ನಲ್ಲಿ ಹೀಗೆಲ್ಲಾ ಸರ್ಚ್ ಮಾಡ್ತಾರಂತೆ!
ಇನ್ನು ಮನುಷ್ಯ ಮೂಕಪ್ರಾಣಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ಪ್ರಾಣಿ ಹಿಂಸೆ ಎಂದು ಪರಿಗಣಿಸಬೇಕು, ಇಂತಹ ಕ್ರೂರ ವರ್ತನೆಗೆ ಕಾರಣರಾದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಪೊಲೀಸರನ್ನು ಟೀಕಿಸಿದ ನೆಟ್ಟಿಗರು
ಪ್ರಾಣಿ ಪ್ರಿಯರು ಈ ವೀಡಿಯೋ ತೋರಿಸಿ ಅತ್ಯಾಚಾರ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದು, ಪೊಲೀಸರಿಗೆ ತೋರಿಸಿದರೂ ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ಟೀಕೆಗೆ ಗುರಿಯಾಗಿದೆ. ವಾಟ್ಸಾಪ್ ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಆಧಾರದ ಮೇಲೆ ನಾಯಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ. ಇದನ್ನು ಗಮನಿಸಿದ ನೋಡುಗರು ಎಷ್ಟು ಸಮಂಜಸ ಎಂದು ಅವರನ್ನು ಪ್ರಶ್ನಿಸುತ್ತಿದ್ದಾರೆ.
ಮತ್ತೊಂದೆಡೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ AICC)) ಸದಸ್ಯ ಪಂಖೂರಿ ಪಾಠಕ್ ಕೂಡ ದೆಹಲಿ ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿ ಪೊಲೀಸರು ಮತ್ತು ಇತರ ಕೆಲವು ಅಧಿಕಾರಿಗಳನ್ನು ಟ್ಯಾಗ್ ಮಾಡಿ, " ಎಫ್‌ಐಆರ್ ದಾಖಲಿಸದೆ ಈ ರಾಕ್ಷಸನನ್ನು ಬಂಧಿಸದೆ ಅತ್ಯಾಚಾರಿಯನ್ನು ರಕ್ಷಿಸುತ್ತಿದ್ದಾರೆ ಎಂದು @DelhiPolice ಅವರನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಕೊನೆಗೂ ಕ್ರಮ ಕೈಗೊಂಡ ಪೊಲೀಸರು
ಹಲವಾರು ಟ್ವಿಟ್ಟರ್ ಬಳಕೆದಾರರು ಈ ವಿಷಯದಲ್ಲಿ ದೆಹಲಿ ಪೊಲೀಸರ ಪಾತ್ರವನ್ನು ಪ್ರಶ್ನಿಸಿದ ನಂತರ, ದೆಹಲಿ ಪೊಲೀಸರು ಅವರ ಉತ್ತರವನ್ನು ಟ್ವೀಟ್ ಮಾಡಿದ್ದಾರೆ, "ಈ ವಿಷಯವನ್ನು ತಿಳಿದಿದ್ದೇವೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ