Masala Dosa Roll: ಯಪ್ಪಾ ಮಸಾಲೆ ದೋಸೆಯ ಐಸ್‌ಕ್ರೀಮ್ ರೋಲ್ ಮಾಡ್ತಾರೆ ಇಲ್ಲಿ....! ವಿಡಿಯೋ ನೋಡಿ

ನಿಜವಾಗಿಯೂ ಮಸಾಲೆ ದೋಸೆ ಪ್ರಿಯರಿಗೆ ಮತ್ತು ಐಸ್‌ಕ್ರೀಮ್ ಅನ್ನು ತಿನ್ನುವ ಜನರಿಗೆ ತುಂಬಾನೇ ಕೋಪ ಬರಬಹುದು, ಆದರೆ ಇದೊಂದು ವಿನೂತನ ಪ್ರಯತ್ನ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ ರಾತೋ ರಾತ್ರಿ ಜನಪ್ರಿಯವಾಗಲು (Famous) ಮತ್ತು ಹೆಚ್ಚು ಜನರಿಂದ ಲೈಕ್ ಗಳನ್ನು ಮತ್ತು ಕಾಮೆಂಟ್ ಗಳನ್ನು ಪಡೆಯಲು ಕೆಲವು ಜನರು ಏನನ್ನಾದರೂ ಮಾಡಲು ಸಿದ್ದರಿದ್ದಾರೆ. ಅದರಲ್ಲೂ ಈ ಪ್ರಾಣಿ ಪಕ್ಷಿಗಳ ವೀಡಿಯೋ ಮಾಡುವುದು ಒಂದು ಕಡೆ ಆದರೆ ಇನ್ನೊಂದು ಕಡೆಯಲ್ಲಿ ಈ ಬೀದಿ ಬದಿಯಲ್ಲಿರುವ ಆಹಾರದ ಮತ್ತು ಟಿಫಿನ್ (Tiffin Carts) ಬಂಡಿಗಳಲ್ಲಿ ರುಚಿಕರವಾದ (Delicious Food) ಆಹಾರವನ್ನು ಮಾಡಿ ಆ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹಾಕಿ ಅದರಿಂದ ಜನಪ್ರಿಯರಾಗುವುದು ನೋಡಿದ್ದೇವೆ.

ನೆಟ್ಟಿಗರು ಸಾಕಪ್ಪಾ ಸಾಕು
ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಹುಟ್ಟಿಕೊಂಡಿದ್ದು, ವಿಭಿನ್ನವಾದ ಮತ್ತು ವಿಚಿತ್ರ ಏನಿಸುವ ಈ ಆಹಾರಗಳ ಮಿಕ್ಸಿಂಗ್ ಮಾಡಿ ಬೇರೆ ಆಹಾರ ತಯಾರಿಸುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿದ್ದು, ನೆಟ್ಟಿಗರು ಸಾಕಪ್ಪಾ ಸಾಕು..ನಿಲ್ಲಿಸಿ ಇಂತಹ ವೀಡಿಯೋಗಳನ್ನು ಮಾಡುವುದು ಅನ್ನೋ ಮಟ್ಟಿಗೆ ಜನರು ಬೇಸತ್ತಿದ್ದಾರೆ ಇದನ್ನು ನೋಡಿ ಎಂದು ಹೇಳಬಹುದು.

ಕೆಲವು ದಿನಗಳ ಹಿಂದೆ ನಾವು ಈ ಬೀದಿ ಬದಿಯಲ್ಲಿ ಫೈರ್ ಪಾನಿ ಪುರಿಯನ್ನು ಮಾಡಿರುವುದನ್ನು ನೋಡಿದ್ದೆವು ಮತ್ತು ಫುಡ್ ಬ್ಲಾಗರ್ ಒಬ್ಬರು ಜಾಮೂನು ಸಮೋಸ ಎರಡನ್ನೂ ಸೇರಿಸಿಕೊಂಡು ತಿನ್ನಲು ಹೋಗಿ ವಿಚಿತ್ರ ರೀತಿಯಲ್ಲಿ ಮುಖಭಾವ ವ್ಯಕ್ತಪಡಿಸಿದ ವೀಡಿಯೋವೊಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ನಮಗೆಲ್ಲಾ ತಿಳಿದೇ ಇದೆ.

ಇದನ್ನೂ ಓದಿ: Breakfast Recipe: ಮಸಾಲ ದೋಸೆ, ಸೆಟ್​ ದೋಸೆ ರುಚಿ ಗೊತ್ತು,ಬಾಳೆಹಣ್ಣಿನ ದೋಸೆ ಟೇಸ್ಟ್​ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ವಿಡಿಯೋ ಸಕತ್‌ ವೈರಲ್
ಇಲ್ಲೊಬ್ಬ ಭೂಪ ಏನು ಮಾಡಿದ್ದಾನೆ ಅಂತ ನೀವು ನೋಡಿದರೆ ಖಂಡಿತವಾಗಿ ನೀವು ಬೆಚ್ಚಿ ಬಿಳ್ತೀರಾ. ರುಚಿಕರವಾದ ಐಸ್‌ಕ್ರೀಮ್ ಅನ್ನು ಯಾರಾದರೂ ತಮ್ಮ ಊಟವಾದ ನಂತರ ತಿನ್ನಲು ಇಷ್ಟ ಪಡುತ್ತಾರೆ. ಆದರೆ ಈ ಭೂಪ ಇದೇ ಐಸ್‌ಕ್ರೀಮ್ ಅನ್ನು ಮಸಾಲೆ ದೋಸೆಯೊಂದಿಗೆ ಸೇರಿಸಿ ಮಿಶ್ರಣ ಮಾಡಿ ರೋಲ್ ಮಾಡಿದ್ದಾನೆ. ಈ ವೀಡಿಯೋ ತುಣುಕು ತುಂಬಾನೇ ವೈರಲ್ ಆಗಿದ್ದು, ಇದರಲ್ಲಿ ನಿಮಗೆ ಐಸ್‌ಕ್ರೀಮ್ ಮತ್ತು ಮಸಾಲೆ ದೋಸೆಯನ್ನು ಮಿಕ್ಸ್ ಮಾಡಿ ಹೇಗೆ ರೋಲ್ ಗಳನ್ನು ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾನೆ.

ವಿಡಿಯೋ ನೋಡಿ:




ಇದನ್ನು ನೋಡಿ ನಿಜವಾಗಿಯೂ ಮಸಾಲೆ ದೋಸೆ ಪ್ರಿಯರಿಗೆ ಮತ್ತು ಐಸ್‌ಕ್ರೀಮ್ ಅನ್ನು ತಿನ್ನುವ ಜನರಿಗೆ ತುಂಬಾನೇ ಕೋಪ ಬರಬಹುದು, ಆದರೆ ಇದೊಂದು ವಿನೂತನ ಪ್ರಯತ್ನ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದೆಹಲಿಯ ಅಂಗಡಿಯೊಂದರಲ್ಲಿ ಐಸ್‌ಕ್ರೀಮ್ ಮತ್ತು ಮಸಾಲೆ ದೋಸೆಯನ್ನು ಬಳಸಿಕೊಂಡು ಊಹಿಸಲಾಗದ ಡಿಷ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಐಸ್‌ಕ್ರೀಮ್ ರೋಲ್
‘ದಿ ಗ್ರೇಟ್ ಇಂಡಿಯನ್ ಫೂಡಿ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೋ ತುಣುಕಿನಲ್ಲಿ ಒಬ್ಬ ವ್ಯಕ್ತಿಯು ಮಸಾಲೆ ದೋಸೆ ಮತ್ತು ಐಸ್‌ಕ್ರೀಮ್ ತಯಾರಿಸುವುದನ್ನು ಕಾಣಬಹುದು. ನಂತರ ಅದೇ ವ್ಯಕ್ತಿಯು ಆ ಮಸಾಲೆ ದೋಸೆಯನ್ನು ಕತ್ತರಿಸಿ ಪುಡಿ ಮಾಡಿ ಮತ್ತು ಅದಕ್ಕೆ ವೆನಿಲ್ಲಾ ಐಸ್‌ಕ್ರೀಮ್ ನ ಸ್ಕೂಪ್ ಗಳನ್ನು ಸೇರಿಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ದೋಸೆಯನ್ನು ಮತ್ತು ಐಸ್‌ಕ್ರೀಮ್ ಅನ್ನು ಮಿಶ್ರಣ ಮಾಡಿದ ನಂತರ ಅವನು ಐಸ್‌ಕ್ರೀಮ್ ರೋಲ್ ಗಳನ್ನು ತಯಾರಿಸುವುದನ್ನು ನಾವು ನೋಡಬಹುದು. ನಂತರ ಅದರ ಮೇಲೆ ಆಲೂಗಡ್ಡೆ ಪಲ್ಯವನ್ನು ಮತ್ತು ಚಟ್ನಿಯನ್ನು ಪಕ್ಕದಲ್ಲಿ ಹಾಕಿ ಕೊಡುವುದರೊಂದಿಗೆ ವೀಡಿಯೋ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Viral Video: ರೋಬೋಟ್​ಗಳಿಗಿಂತ ವೇಗವಾಗಿ ದೋಸೆ ಮಾಡುವ ವ್ಯಕ್ತಿಯ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿರುವ ಈ ವೀಡಿಯೋವನ್ನು 1.5 ದಶಲಕ್ಷಕ್ಕೂ ಹೆಚ್ಚು ಬಾರಿ ಜನರು ವೀಕ್ಷಿಸಿದ್ದಾರೆ ಮತ್ತು 17,000 ಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ಇಷ್ಟ ಪಟ್ಟಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಅನೇಕ ಅಸಹ್ಯವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಈ ವಿಲಕ್ಷಣ ಭಕ್ಷ್ಯವನ್ನು ದುಃಸ್ವಪ್ನ ಎಂದು ಹೇಳಿದರೆ, ಇತರರು ತಮ್ಮ ನೆಚ್ಚಿನ ತಿಂಡಿಯ ಹತ್ಯಾಕಾಂಡವನ್ನು ನೋಡಿ ಗಾಬರಿಗೊಂಡರು.
Published by:vanithasanjevani vanithasanjevani
First published: