• Home
  • »
  • News
  • »
  • trend
  • »
  • Zomato: ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಎತ್ತಿದ ಗ್ರಾಹಕ, ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!

Zomato: ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಎತ್ತಿದ ಗ್ರಾಹಕ, ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!

ವೈರಲ್ ಆದ ಫೋಟೋ

ವೈರಲ್ ಆದ ಫೋಟೋ

ಜನರು ತಾವು ಆರ್ಡರ್ ಮಾಡಿದ ಊಟ, ತಿಂಡಿ ಸ್ವಲ್ಪ ತಡವಾಗಿ ಬಂದರೂ ಸಹ ಆ ಡೆಲಿವರಿ ಬಾಯ್ ಅನ್ನು ಬಾಯಿಗೆ ಬಂದಂತೆ ಬಯ್ಯುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದೆ ನೋಡಿ, ಅದನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ

  • Share this:

ಸಾಮಾನ್ಯವಾಗಿ ನಾವೆಲ್ಲಾ ಈ ಫುಡ್ (Food) ಅಗ್ರಿಗೆಟರ್​​ಗಳಾದ ಜೊಮ್ಯಾಟೋ ಮತ್ತು ಸ್ವಿಗ್ಗಿ (Swiggy) ಯಲ್ಲಿ ಊಟವನ್ನು ಆರ್ಡರ್ ಮಾಡಿದರೆ ಅಲ್ಲಿ ತೋರಿಸಿದ ಸಮಯದ ಐದು ಹತ್ತು ನಿಮಿಷ ಹೆಚ್ಚು ಕಡಿಮೆ ಅನ್ನುವಂತೆ ಮನೆ ಬಾಗಿಲಿಗೆ ಬಂದು ನಿಮ್ಮ ಊಟವನ್ನು ತಲುಪಿಸಿ ಹೋಗಿರುತ್ತಾರೆ. ಆದರೆ ಈ ಹಬ್ಬ (Festival) ದ ದಿನಗಳಲ್ಲಿ ಅಥವಾ ನಗರಗಳಲ್ಲಿ ಯಾವುದೋ ಒಂದು ದೊಡ್ಡ ಕಾರ್ಯಕ್ರಮಗಳಿದ್ದು, ಅಲ್ಲಿ ರಸ್ತೆಯ ಮೇಲೆ ಲಕ್ಷಾಂತರ ಜನರು ಸೇರಿದ್ದರೆ, ಆಗ ಟ್ರಾಫಿಕ್ ಜಾಮ್ (Traffic Jam) ಆಗುವುದಂತೂ ಗ್ಯಾರೆಂಟಿ. ಅಂತಹ ಸಂದರ್ಭಗಳಲ್ಲಿ ನೀವು ಈ ಮೊಬೈಲ್ ಅಪ್ಲಿಕೇಶನ್(Mobile Application)  ಗಳಲ್ಲಿ ಆರ್ಡರ್ ಮಾಡಿರುವ ಊಟ ಸ್ವಲ್ಪ ತಡವಾಗಿಯೇ ಬರುತ್ತದೆ ಅಂತ ಹೇಳಬಹುದು. ಟ್ರಾಫಿಕ್ ಜಾಮ್ ನಲ್ಲಿ ಆ ಡೆಲಿವರಿ ಬಾಯ್ (Delivery Boy) ಸಿಕ್ಕಿ ಹಾಕಿಕೊಂಡಿದ್ದರೆ ಮಾತ್ರ ನಿಮ್ಮ ಊಟ ನಿಮ್ಮ ಕೈ ಸೇರುವ ಸಮಯವನ್ನು ಯಾರಿಂದಲೂ ಸರಿಯಾಗಿ ಊಹಿಸಲು ಸಾಧ್ಯವಾಗುವುದಿಲ್ಲ.


ಡೆಲಿವರಿ ಲೇಟಾಗಿ ಬಂದಿದ್ದಕ್ಕೆ ಈತ ಮಾಡಿದ್ದೇನೆ?


ಈ ಹಿಂದೊಮ್ಮೆ ಒಂದು ವೀಡಿಯೋ ನೋಡಿದ್ದೆವು, ಅದರಲ್ಲಿ ಹೀಗೆ ತಡವಾಗಿ ಬಂದ ಡೆಲಿವರಿ ಬಾಯ್ ಅನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದು ಕಾದು ಕುಳಿತ ಗ್ರಾಹಕನು ಮನೆಯ ಬಾಗಿಲು ತೆರೆದು ನೋಡಿದಾಗ ಆ ಹುಡುಗನು ವಿಕಲಚೇತನನಾಗಿರುವುದನ್ನು ನೋಡಿ ಅವನ ಕಷ್ಟವನ್ನು ಅರ್ಥ ಮಾಡಿಕೊಂಡು ಅವರ ಬಳಿ ಕ್ಷಮೆ ಕೇಳಿ ಕಳುಹಿಸಿದ ಒಂದು ಘಟನೆ ನಡೆದಿತ್ತು.


ಊಟ ಆರ್ಡರ್​ ತಡವಾಗಿ ಬಂದ್ರೆ ಕೋಪ ಬರುತ್ತಾ?


ಆದರೆ ಹೆಚ್ಚು ಜನರು ತಾವು ಆರ್ಡರ್ ಮಾಡಿದ ಊಟ, ತಿಂಡಿ ಸ್ವಲ್ಪ ತಡವಾಗಿ ಬಂದರೂ ಸಹ ಆ ಡೆಲಿವರಿ ಬಾಯ್ ಅನ್ನು ಬಾಯಿಗೆ ಬಂದಂತೆ ಬಯ್ಯುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದೆ ನೋಡಿ, ಅದನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಮತ್ತು ಅದರ ಜೊತೆಗೆ ನೀವು ನಕ್ಕು ನಕ್ಕು ಸುಸ್ತಾಗುವುದು ಗ್ಯಾರೆಂಟಿ ಅಂತ ಹೇಳಬಹುದು.


ಇದನ್ನೂ ಓದಿ: ಈ ನಾಯಿ ಮನುಷ್ಯರೊಂದಿಗೆ ಹೇಗೆ ವಾಲಿಬಾಲ್ ಆಡ್ತಿದೆ ನೋಡಿ


ವೀಡಿಯೋದಲ್ಲಿ ಅಂತಹದ್ದೇನಿದೆ ನೋಡಿ!


ಸಾಮಾನ್ಯವಾಗಿ ಈ ಹಬ್ಬಗಳ ಸಮಯವು ಖಂಡಿತವಾಗಿಯೂ ಅನೇಕರಿಗೆ ಸಂತೋಷವನ್ನು ತರುತ್ತದೆ, ಆದರೆ ಇದು ಎಲ್ಲಾ ಆಹಾರ ವಿತರಣಾ ಏಜೆಂಟರಿಗೆ ದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತದೆ ನೋಡಿ. ನಿರಂತರ ಸಂಚಾರವು ಇವರ ಕಷ್ಟವನ್ನು ಹೆಚ್ಚಿಸುತ್ತದೆ. ಈಗ, ಒಬ್ಬ ವ್ಯಕ್ತಿಯು ಜೊಮ್ಯಾಟೊ ಡೆಲಿವರಿ ಏಜೆಂಟ್ ಅನ್ನು ಒಳ್ಳೆ ಫಿಲ್ಮಿಯ ರೀತಿಯಲ್ಲಿ ಸ್ವಾಗತಿಸುವ ವೀಡಿಯೋ ನೋಡಿ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.ಸಂಜೀವ್ ತ್ಯಾಗಿ ಅವರು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಘಟನೆಯ ಒಂದು ನೋಟವನ್ನು ತೋರಿಸುತ್ತದೆ. ಸಂಜೀವ್ ಅವರು ದಸರಾದ ವಿಶೇಷ ಔತಣವಾಗಿ ಹಲ್ದಿರಾಮ್ ನಿಂದ ಚೋಲೆ ಭತುರೆಯನ್ನು ಆರ್ಡರ್ ಮಾಡಿದ್ದರು. ಆದಾಗ್ಯೂ, ದೆಹಲಿಯಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಡೆಲಿವರಿ ಸುಮಾರು ಒಂದು ಗಂಟೆ ತಡವಾಗಿ ಮನೆಗೆ ಬಂದಿತು.


ಇದನ್ನೂ ಓದಿ: ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಮಹತ್ವ ತಿಳಿಯಿರಿ


ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ!


ಸಿಟ್ಟು ಕೋಪ ಎಲ್ಲವೂ ಇದ್ದರೂ ಸಹ ಮನಸ್ಥಿತಿಯನ್ನು ಹಗುರಗೊಳಿಸಲು, ಸಂಜೀವ್ ಅವರು ಆ ಡೆಲಿವರಿ ಎಕ್ಸಿಕ್ಯುಟೀವ್ ಅನ್ನು ಆರತಿ ತಟ್ಟೆಯಿಂದ ಆರತಿ ಮಾಡಿ ಸ್ವಾಗತಿಸಲು ಮುಂದಾದರು ಮತ್ತು ‘ಆಯಿಯೇ ಆಪ್ಕಾ ಇಂತೆಜಾರ್ ಥಾ’ ಅಂತ ಹಾಡನ್ನು ಸಹ ಹಾಡಿದರು. ಡೆಲಿವರಿ ಏಜೆಂಟ್ ಸಹ ಇದಕ್ಕೆ ಸಹಕರಿಸಿ ಹಣೆಯ ಮೇಲೆ ತಿಲಕವನ್ನು ಹಚ್ಚಿಸಿಕೊಳ್ಳಲು ತನ್ನ ತಲೆಯ ಮೇಲೆ ಹಾಕಿಕೊಂಡ ಹೆಲ್ಮೆಟ್ ಅನ್ನು ತೆಗೆದನು.


ಕಾಮೆಂಟ್ ನೋಡಿ ಹೇಗೆ ಬಂದಿವೆ ಅಂತ


‘ದೆಹಲಿಯ ಟ್ರಾಫಿಕ್ ಹೊರತಾಗಿಯೂ ನಿಮ್ಮ ಆರ್ಡರ್ ಪಡೆಯುವುದು.. ಎಂದರೆ ಧನ್ಯವಾದಗಳು ಜೊಮ್ಯಾಟೊ’ ಅಂತ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ವೀಡಿಯೊವು 4 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವರು ಈ ವೀಡಿಯೋ ವಿನೋದಮಯವಾಗಿದೆ ಎಂದು ಬರೆದರೆ, ಇತರರು ವಿಳಂಬವನ್ನು ತುಂಬಾ ಲಘುವಾಗಿ ತೆಗೆದುಕೊಂಡಿದ್ದಕ್ಕಾಗಿ ಮತ್ತು ಅದನ್ನು ಒಂದು ಹಾಸ್ಯಭರಿತ ವೀಡಿಯೋವನ್ನು ಮಾಡಿದ್ದಕ್ಕಾಗಿ ಸಂಜೀವ್ ಅವರನ್ನು ತುಂಬಾನೇ ಶ್ಲಾಘಿಸಿದ್ದಾರೆ.

Published by:ವಾಸುದೇವ್ ಎಂ
First published: