Viral Dance: ವಿದ್ಯಾರ್ಥಿನಿ ಜೊತೆ ಡ್ಯಾನ್ಸ್ ಮಾಡಿ ಪ್ರೋತ್ಸಾಹಿಸಿದ ಟೀಚರ್, ಸರ್ಕಾರಿ ಶಾಲೆ ವಿಡಿಯೋ ವೈರಲ್

ನಮ್ಮ ಶಾಲಾ ದಿನದ ಅಂತ್ಯದ ಒಂದು ಇಣುಕು ನೋಟ" ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆದು 'ದೆಹಲಿ ಸರ್ಕಾರಿ ಶಾಲೆ' ಮತ್ತು 'ನನ್ನ ವಿದ್ಯಾರ್ಥಿಗಳು ನನ್ನ ಹೆಮ್ಮೆ' ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಸಹ ಅದಕ್ಕೆ ಸೇರಿಸಿದ್ದಾರೆ. ಇತರ ವಿದ್ಯಾರ್ಥಿಗಳು ಹುರಿದುಂಬಿಸುತ್ತಿದ್ದಂತೆ ಶಿಕ್ಷಕಿ ಮತ್ತು ಅವರ ವಿದ್ಯಾರ್ಥಿನಿ ತರಗತಿಯಲ್ಲಿಯೇ ಸಂತೋಷದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.

ಶಿಕ್ಷಕಿ-ವಿದ್ಯಾರ್ಥಿನಿಯ ನೃತ್ಯ

ಶಿಕ್ಷಕಿ-ವಿದ್ಯಾರ್ಥಿನಿಯ ನೃತ್ಯ

  • Share this:
ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕಲಿಯುವುದೇ ಅಪ್ಪ - ಅಮ್ಮನಿಂದ ಮತ್ತು ಅವರನ್ನು ಹೊರತು ಪಡಿಸಿದರೆ ಅವರ ಶಾಲೆಯಲ್ಲಿ ಅವರಿಗೆ ಅಕ್ಷರ ಕಲಿಸುವ ಶಿಕ್ಷಕರಿಂದ (Teachers) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಶಾಲೆಯಲ್ಲಿ ಪಾಠ ಹೇಳಿ ಕೊಡುವುದರ (Teaching) ಜೊತೆಗೆ ಶಿಸ್ತನ್ನು ಸಹ ಹೇಳಿಕೊಡುವ ಶಿಕ್ಷಕ ಮತ್ತು ಶಿಕ್ಷಕಿಯರನ್ನು ನಾವು ನೋಡಬಹುದು, ಹಾಗೆಯೇ ಮಕ್ಕಳ ಜೊತೆ ಬೆರೆತು ನಗು ನಗುತಾ ಪಾಠ ಹೇಳಿಕೊಡುತ್ತಾ ತಮ್ಮ ವಿದ್ಯಾರ್ಥಿಗಳ (Students) ಜೊತೆಯಲ್ಲಿ ಅವರು ಮಕ್ಕಳಂತೆ ಆಟವಾಡುವ ಕೆಲವು ಶಿಕ್ಷಕರನ್ನು ಸಹ ನಾವು ನೋಡುತ್ತವೆ. ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ನಮ್ಮ ಶಿಕ್ಷಕರೊಂದಿಗೆ ಇದ್ದಂತಹ ಒಡನಾಟ, ಸಲುಗೆ ಎಲ್ಲವೂ ಭವಿಷ್ಯದಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ತುಂಬಾನೇ ಸಹಾಯಕವಾಗುತ್ತವೆ ಎಂದು ಹೇಳಬಹುದು.

ಶಿಕ್ಷಕರು ಮಕ್ಕಳ ಜೀವನದ ಮೇಲೆ ಅಗಾಧವಾದ ಪ್ರಭಾವವನ್ನು ಬೀರುತ್ತಾರೆ ಮತ್ತು ಇಂದಿನ ಮಕ್ಕಳು ಭವಿಷ್ಯದಲ್ಲಿ ಯಾವ ರೀತಿಯ ಪ್ರಜೆಯಾಗಬೇಕು ಎಂಬುದನ್ನು ಸಹ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಾವು ನಮ್ಮ ಶಾಲಾ ದಿನಗಳಲ್ಲಿ ನಮ್ಮ ನೆಚ್ಚಿನ ಶಿಕ್ಷಕರ ಜೊತೆಗೆ ಕಳೆದ ಆ ಸಮಯ ನಮಗೆ ಯಾವಾಗಲೂ ನೆನಪಿನಲ್ಲಿರುತ್ತದೆ. ಇಲ್ಲಿಯೂ ಸಹ ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿನಿ ಮಾಡುತ್ತಿರುವ ಡ್ಯಾನ್ಸ್ ನೋಡಿಕೊಂಡು ಅವರು ಹೆಜ್ಜೆ ಹಾಕಿರುವ ಒಂದು ಮುದ್ದಾದ ವಿಡಿಯೋ ಒಳ್ಳೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ತುಂಬಾನೇ ವೈರಲ್ ಆಗಿದೆ ನೋಡಿ.

ಶಿಕ್ಷಕಿ ಮತ್ತು ಅವರ ವಿದ್ಯಾರ್ಥಿನಿಯ ಡ್ಯಾನ್ಸ್

"ವಿದ್ಯಾರ್ಥಿಗಳು ಕೆಲವೊಮ್ಮೆ ಶಿಕ್ಷಕರಾಗಲು ಇಷ್ಟ ಪಡುತ್ತಾರೆ, ಅವರು ಈ ಪಾತ್ರಗಳ ಬದಲಾವಣೆಯನ್ನು ಇಷ್ಟ ಪಡುತ್ತಾರೆ. 'ಮೇಡಂ ನೀವು ಮಾಡಿ, ನಾನು ಹೇಳಿಕೊಡುತ್ತೇನೆ’ ಇಂಗ್ಲೀಷ್‌ ಭಾಷೆಯ ಬೋಧನೆಯ ನಂತರ ಸ್ವಲ್ಪ ಹರಿಯಾನ್ವಿ ಸಂಗೀತ. ನಮ್ಮ ಶಾಲಾ ದಿನದ ಅಂತ್ಯದ ಒಂದು ಇಣುಕು ನೋಟ" ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆದು 'ದೆಹಲಿ ಸರ್ಕಾರಿ ಶಾಲೆ' ಮತ್ತು 'ನನ್ನ ವಿದ್ಯಾರ್ಥಿಗಳು ನನ್ನ ಹೆಮ್ಮೆ' ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಸಹ ಅದಕ್ಕೆ ಸೇರಿಸಿದ್ದಾರೆ. ಇತರ ವಿದ್ಯಾರ್ಥಿಗಳು ಹುರಿದುಂಬಿಸುತ್ತಿದ್ದಂತೆ ಶಿಕ್ಷಕಿ ಮತ್ತು ಅವರ ವಿದ್ಯಾರ್ಥಿನಿ ತರಗತಿಯಲ್ಲಿಯೇ ಸಂತೋಷದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.





ವೈರಲ್ ಆಯ್ತು ವಿಡಿಯೋ

ಈ ವಿಡಿಯೋವನ್ನು ಮನು ಗುಲಾಟಿ ಎಂಬ ಮಹಿಳೆ ಟ್ವಿಟ್ಟರ್‌ನಲ್ಲಿ ಹಂಚಿ ಕೊಂಡಿದ್ದಾರೆ. "ನಾನು ದೆಹಲಿ ಸರ್ಕಾರಿ ಶಾಲೆಯ ಹೆಮ್ಮೆಯ ಶಿಕ್ಷಕಿ, ಫುಲ್‌ಬ್ರೈಟ್ ಫೆಲೋ ಮತ್ತು ಪಿಎಚ್‌ಡಿ ಸ್ಕಾಲರ್" ಎಂದು ಅವರ ಬಯೋದಲ್ಲಿ ಬರೆಯಲಾಗಿದೆ. ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 19,000 ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ ಮತ್ತು ಜನರ ಮುಖದಲ್ಲಿ ನಗುವನ್ನು ತರುವಂತಹ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.

ಇದನ್ನೂ ಓದಿ: Virat Kohli: ಪುಷ್ಪಾ ಸಿನಿಮಾದ 'ಊ ಅಂಟಾವಾ' ಹಾಡಿಗೆ ಕೊಹ್ಲಿ ಡ್ಯಾನ್ಸ್

ಈ ವಿಡಿಯೋವನ್ನು ಏಪ್ರಿಲ್ 25 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ತಮ್ಮ ಸುಂದರವಾದ ಬಂಧವನ್ನು ಮೆಚ್ಚುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಇದು ಗಳಿಸಿದೆ. ಇದು ಇಲ್ಲಿಯವರೆಗೆ 63 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ ಮತ್ತು 3,000ಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಗಳಿಸಿದೆ.

ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ವಿಡಿಯೋ ನೋಡಿ "ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಪರಿಪೂರ್ಣ ಸಂಬಂಧವನ್ನು ನೋಡುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಕರ್ತವ್ಯವನ್ನು ಅಷ್ಟು ಚೆನ್ನಾಗಿ ನಿಭಾಯಿಸುತ್ತಿರುವ ನಿಮಗೆ ಒಳ್ಳೆಯದಾಗಲಿ ಮೇಡಮ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನಾನು ಇಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಒಟ್ಟಿಗೆ ನೋಡುತ್ತಿದ್ದೇನೆ. ಇದು ತುಂಬಾನೇ ಮಧುರವಾಗಿದೆ ಮತ್ತು ನೀವು ಹುಡುಗಿಯೊಂದಿಗೆ ಡ್ಯಾನ್ಸ್ ಮಾಡಿದ ರೀತಿ ತುಂಬಾ ಸುಂದರವಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ವರನನ್ನ ಮೆಚ್ಚಿಸಲು ಹೋಗಿ ಮದುವೆಯ ಮೊದಲ ರಾತ್ರಿಯೇ ಆಸ್ಪತ್ರೆ ಸೇರಿದ ವಧು

ಮತ್ತೊಬ್ಬ ಬಳಕೆದಾರರು ವಿಡಿಯೋ ನೋಡಿ “ಶಿಕ್ಷಕಿ ತನ್ನ ವಿದ್ಯಾರ್ಥಿಯೊಂದಿಗೆ ಡ್ಯಾನ್ಸ್ ಮಾಡಿದ್ದನ್ನು ನೋಡಲು ತುಂಬಾ ಸುಂದರವಾಗಿದೆ. ತರಗತಿಯಲ್ಲಿ ಹೆಚ್ಚಿನ ಶಿಕ್ಷಕರು ಇದನ್ನು ಮಾಡಬೇಕೆಂದು ನಾನು ಬಯಸುತ್ತೇನೆ, ಆಗಲೇ ಶಾಲೆಗಳಲ್ಲಿ ಮಕ್ಕಳು ಹೆಚ್ಚು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Divya D
First published: