ಹಾಡು ಬದಲಿಸಲು ಹೇಳಿದ ವ್ಯಕ್ತಿಯನ್ನೇ ಇರಿದು ಕೊಂದ ಡಿಜೆ

news18
Updated:May 7, 2018, 7:05 PM IST
ಹಾಡು ಬದಲಿಸಲು ಹೇಳಿದ ವ್ಯಕ್ತಿಯನ್ನೇ ಇರಿದು ಕೊಂದ ಡಿಜೆ
news18
Updated: May 7, 2018, 7:05 PM IST
ನ್ಯೂಸ್ 18 ಕನ್ನಡ

ನವದೆಹಲಿ(ಮೇ.07) : ಹುಟ್ಟುಹಬ್ಬದ ಆಚರಣೆಯಲ್ಲಿ ಹಾಡನ್ನು ಬದಲಿಸಲು ಬೇಡಿಕೆಯಿಟ್ಟ ವ್ಯಕ್ತಿಯನ್ನು ಡಿಜೆಯೊಬ್ಬರು ಕೊಲೆ ಮಾಡಿರುವ ಘಟನೆ ಪೂರ್ವ ದೆಹಲಿಯಲ್ಲಿ ಭಾನುವಾರ ನಡೆದಿದೆ. ಕೊಲೆಯಾದ ವ್ಯಕ್ತಿ ವಿಜಯ್​ದೀಪ್(34)​ ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಆರೋಪಿ ಡಿಜೆ ದೀಪಕ್ ವಸಿಷ್ಠ ಅವರನ್ನು ಪೋಲಿಸರು ಬಂಧಿಸಿದ್ದಾರೆ.

ಇಶ್ಮಿತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು 10 ಜನ ಸ್ನೇಹಿರೊಂದಿಗೆ ದೆಹಲಿಯ ಪಂಜಾಬಿ ಬಾಗ್​ನ ರಫ್ತಾರ್ ಕ್ಲಬ್​ಗೆ ಬಂದಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಇಶ್ಮಿತ್ ಸ್ನೇಹಿತ ವಿಜಯ್​ದೀಪ್, ಡಿಜೆ ದೀಪಕ್​ರನ್ನು ಹಾಡು ಬದಲಿಸುವಂತೆ ಕೇಳಿಕೊಂಡಿದ್ದರು.

ಆದರೆ ವಿಜಯ್​ದೀಪ್ ಕೋರಿಕೆಯನ್ನು ಡಿಜೆ ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೋಪಗೊಂಡ ಇಶ್ಮಿತ್ ಗೆಳೆಯರು ಬಾರ್​ನಲ್ಲಿ ದಾಂದಲೆ ಎಬ್ಬಿಸಿ, ಡಿಜೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಡಿಜೆ ದೀಪಕ್ ಚಾಕುವಿನಿಂದ ವಿಜಯ್​ದೀಪ್​ರನ್ನು ಇರಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ವಿಜಯ್​ದೀಪ್ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಘಟನೆಯ ಬಗ್ಗೆ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯ್​ದೀಪ್ ಗೆಳೆತಿ ಕೂಡ ದೀಪಕ್ ಮೇಲೆ ಬಾಟಲ್​ನಿಂದ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಆಕೆಗೂ ಗಾಯಗಳಾಗಿವೆ. ಘಟನೆ ಬಳಿಕ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದು, ಕೊಲೆ ಆರೋಪಿ ಡಿಜೆ ದೀಪಕ್​ರನ್ನು ಅವರ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಬಂಧಿಸಲಾಗಿದೆ. ರಫ್ತಾರ್​ ಬಾರ್​ನ ಸಿಸಿಟಿವಿ ವಿಡಿಯೋ ವಶಪಡಿಸಿಕೊಂಡಿರುವ ಪೋಲಿಸರು ಡಿಜೆ ದೀಪಕ್ ವಿರುದ್ಧ ಎಫ್​ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
First published:May 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...