HOME » NEWS » Trend » DELHI COUPLES ECO FRIENDLY WEDDING IS SETTING GREEN GOALS STG HG

ತುಳಸಿ ಹಾರ, ಸೈಕಲ್​ ಮೇಲೆ ಮೆರವಣಿಗೆ: ಗ್ರೀನ್​ ಗೋಲ್ಸ್​ಗೆ ಮುನ್ನುಡಿ ಬರೆದ ದೆಹಲಿ ಜೋಡಿಯ ಪರಿಸರ ಸ್ನೇಹಿ ಮದುವೆ

ಆದಿತ್ಯ ಅಗರ್​ವಾಲ್​ ಮತ್ತು ಮಾಧುರಿ ಬಲೋಡಿಯವರು ಪರಿಸರ ಸ್ನೇಹಿ ವಿವಾಹವಾಗಲು ನಿರ್ಧರಿಸಿದರು. 32 ವರ್ಷದ ವರ ಕಾರು ಅಥವಾ ರಥದ ಬದಲಿಗೆ ಪರಿಸರ ಸ್ನೇಹಿ ವಾಹನವನ್ನು ಬಳಸಿಕೊಂಡು ಮದುವೆಯ ಸ್ಥಳಕ್ಕೆ ಬರಲು ನಿರ್ಧರಿಸಿದರು. ಈ ರೀತಿಯಾದ ಅರ್ಥಪೂರ್ಣ ಮದುವೆಯ ಆಲೋಚನೆ ಸಾಮಾಜಿಕ ಉದ್ಯಮಿಯಾಗಿರುವ ವಧುವಿನದ್ದಾಗಿತ್ತು

news18-kannada
Updated:April 3, 2021, 12:52 PM IST
ತುಳಸಿ ಹಾರ, ಸೈಕಲ್​ ಮೇಲೆ ಮೆರವಣಿಗೆ: ಗ್ರೀನ್​ ಗೋಲ್ಸ್​ಗೆ ಮುನ್ನುಡಿ ಬರೆದ ದೆಹಲಿ ಜೋಡಿಯ ಪರಿಸರ ಸ್ನೇಹಿ ಮದುವೆ
Image credit: Instagram
  • Share this:
ಕೊರೊನಾ ಸಾಂಕ್ರಾಮಿಕ ಕಾಲಘಟ್ಟದಲ್ಲೂ ಸಹ ಸಾಕಷ್ಟು ಜನರು ದುಬಾರಿ ವೆಚ್ಚದಲ್ಲಿ ಮದುವೆ ಮಾಡಿಕೊಳ್ಳುತ್ತಿರುವ ವರದಿಯನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ದೆಹಲಿಯ ಜೋಡಿಯೊಂದು ಇದೆಲ್ಲದರಿಂದ ದೂರವೇ ಉಳಿದು, ಅನನ್ಯ ರೀತಿಯಲ್ಲಿ ಮದುವೆಯಾಗಿದ್ದಾರೆ. ನಿಸರ್ಗದ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದ ಪರಿಸರ ಸ್ನೇಹಿ ರೀತಿಯಲ್ಲಿ ವಿವಾಹವಾಗಿದ್ದಾರೆ. ಆ ಮೂಲಕ ಇನ್ನಿತರರಿಗೂ ಮಾದರಿಯಾಗಿದ್ದಾರೆ. ಪರಿಸರ ಮಾಲಿನ್ಯವನ್ನು ನಿವಾರಿಸಲು ತಕ್ಷಣವೇ ಕೈ ಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಇದು ಉತ್ತಮ ಆರಂಭವಾಗಿದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಜನರು ನಿಧಾನವಾಗಿ ಪರಿಸರದ ಬಗ್ಗೆ ಸೂಕ್ಷ್ಮ ದೃಷ್ಟಿ ಬೆಳೆಸಿಕೊಂಡು ಜಾಗೃತರಾಗುತ್ತಿದ್ದಾರೆ ಎನ್ನುವುದನ್ನು ಈ ವಿವಾಹ ತಿಳಿಸುತ್ತಿದೆ.

ಆದಿತ್ಯ ಅಗರ್​ವಾಲ್​ ಮತ್ತು ಮಾಧುರಿ ಬಲೋಡಿಯವರು ಪರಿಸರ ಸ್ನೇಹಿ ವಿವಾಹವಾಗಲು ನಿರ್ಧರಿಸಿದರು. 32 ವರ್ಷದ ವರ ಕಾರು ಅಥವಾ ರಥದ ಬದಲಿಗೆ ಪರಿಸರ ಸ್ನೇಹಿ ವಾಹನವನ್ನು ಬಳಸಿಕೊಂಡು ಮದುವೆಯ ಸ್ಥಳಕ್ಕೆ ಬರಲು ನಿರ್ಧರಿಸಿದರು. ಈ ರೀತಿಯಾದ ಅರ್ಥಪೂರ್ಣ ಮದುವೆಯ ಆಲೋಚನೆ ಸಾಮಾಜಿಕ ಉದ್ಯಮಿಯಾಗಿರುವ ವಧುವಿನದ್ದಾಗಿತ್ತು. ಮದುವೆ ಸ್ಥಳದ ಅಲಂಕಾರಕ್ಕೆ ಬಂಟಿಂಗ್ ಮತ್ತು ಪೆಂಡಾಲ್​ಗಳು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದವು. ಅಲ್ಲದೇ ಈ ಸಮಾರಂಭದಲ್ಲಿ ಪ್ಲಾಸ್ಟಿಕ್ ಬಾಟೆಲ್​ಗಳನ್ನು ಸಹ ಬಳಸಲಿಲ್ಲ.








View this post on Instagram






A post shared by आदि (@aadityaagg)






ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕಡಿಮೆ ಜನರನ್ನು ಮದುವೆಗೆ ಆಹ್ವಾನಿಸಲಾಗಿತ್ತು. ದಂಪತಿ ಧರಿಸಿದ್ದ ಹಾರ ತುಳಸಿ ಎಲೆಗಳ ಮಾಲೆಯಾಗಿತ್ತು. ಅಲ್ಲದೇ ಈ ಮದುವೆಗೆ ಆಹ್ವಾನ ಪತ್ರಿಕೆಯನ್ನು ಸಹ ಮುದ್ರಿಸಿರಲಿಲ್ಲ. ಬದಲಿಗೆ ವಾಟ್ಸ್‌ಆ್ಯಪ್‌​ ಮೂಲಕ ಮದುವೆಯ ಎಲ್ಲಾ ಮಾಹಿತಿಯನ್ನು ಕಳಿಸಲಾಗಿತ್ತು. ಮದುವೆಗೆ ಬಂದ ಅತಿಥಿಗಳಿಗೆ ಗಿಡವನ್ನು ನೀಡಲಾಗಿತ್ತು. ಜೊತೆಗೆ ದಂಪತಿಗೆ ನೀಡಲಾಗುವ ಉಡುಗೊರೆಯನ್ನು ಪೇಪರ್​ಗಳಿಂದ ಸುತ್ತಿ ಕೊಡಲಾಗಿತ್ತು. ಇದು ಈ ಮದುವೆಯನ್ನು ಇನ್ನಷ್ಟು ವಿಶಿಷ್ಟಗೊಳಿಸಿತ್ತು. ಈ ಹಿನ್ನೆಲೆ ಸರಾಸರಿ 50 ಲಕ್ಷ ಹಣ ಖರ್ಚು ಮಾಡಿ ಮಾಡುವ ಮದುವೆ ಕೇವಲ 2 ಲಕ್ಷದಲ್ಲಿ ಮುಗಿದಿದೆ.










View this post on Instagram






A post shared by आदि (@aadityaagg)






ನ್ಯಾಷನಲ್ ಹೆರಾಲ್ಡ್‌ನ ವರದಿಯ ಪ್ರಕಾರ, 'ಮದುವೆ ಎಂದರೆ ಸಂತೋಷ ಮತ್ತು ಆಚರಣೆಗಳು. ಆ ಸಂತೋಷಕ್ಕೆ ಹಣದ ಅಗತ್ಯವಿಲ್ಲ. ದುಬಾರಿ ವೆಚ್ಚದ ಮದುವೆಗಳು ಹಣವನ್ನು ವ್ಯರ್ಥಮಾಡಿದಂತೆ' ಎಂದು ಮಾಧುರಿ ಅವರು ಹೇಳಿದ್ದಾರೆ. ಈ ಜೋಡಿಗಳಿಬ್ಬರು ನಿಜವಾದ ಪರಿಸರ ಪ್ರೇಮಿಗಳಾಗಿರುವುದೇ ಪರಿಸರ ಸ್ನೇಹಿ ರೀತಿಯಲ್ಲಿ ಮದುವೆಯಾಗಲು ಕಾರಣವೆಂದು ತಿಳಿಸಿದ್ದಾರೆ. ' ಮದುವೆಗೆ ವಸ್ತುಗಳನ್ನು ಖರೀದಿಸುವ ಬದಲು ಮರುಬಳಕೆ ಮಾಡುವುದು ಸೂಕ್ತವೆನಿಸಿತು. ಅತಿ ಹೆಚ್ಚು ಹಣವನ್ನು ಖರ್ಚು ಮಾಡದಿರುವುದು, ಪರಿಸರಕ್ಕೆ ಹಾನಿಯುಂಟು ಮಾಡದಿರುವುದೇ ಈ ಮದುವೆಯ ಹಿಂದಿನ ಯೋಜನೆ' ಎಂದು ಮಾಧುರಿ ಹೇಳುತ್ತಾರೆ.

ಇದೆಲ್ಲದರ ನಡುವೆಯೇ ಆದಿತ್ಯ ಅವರಿಗೆ ಒಂದು ಭಯವಿತ್ತಂತೆ. ಜನರು ಇದನ್ನು ಆಡಿಕೊಂಡರೆ ಏನು ಮಾಡುವುದು ಎನ್ನುವ ಅಂಜಿಕೆ ಇತ್ತಂತೆ. ಆದರೆ ಮದುವೆಯ ದಿನ ಎಲ್ಲರೂ ಸಹ ನಮ್ಮ ನಿರ್ಧಾರವನ್ನು ಪ್ರಶಂಸನೆ ನೀಡಿದರು ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಮದುವೆಗೆ ಹಣ ಹೊಂದಿಸಬೇಕೆಂದು ಮದುವೆಯನ್ನು ಮುಂದಕ್ಕೆ ಹಾಕುವ ಅಥವಾ ಮದುವೆಗೆ ಹಣವಿಲ್ಲದೇ ಪರಿತಪಿಸುತ್ತಿರುವ ಎಷ್ಟೋ ಪೋಷಕರಿಗೆ ಹಾಗೂ ಜೋಡಿಗಳಿಗೆ ಈ ದಂಪತಿ ಮಾದರಿ ಮತ್ತು ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಪರಿಸರದ ಜೊತೆಗೆ ನಮ್ಮ ಬದುಕು ಹೊಂದಿಕೊಂಡರೆ ಸಹಬಾಳ್ವೆ ಸಾಧ್ಯ ಎನ್ನುವುದನ್ನು ಅರ್ಥ ಮಾಡಿಸಿದ್ದಾರೆ.
First published: April 3, 2021, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories