• Home
  • »
  • News
  • »
  • trend
  • »
  • Weight Loss Story: ದೊಡ್ಡ ಹೊಟ್ಟೆಯ ಪೊಲೀಸಪ್ಪ ಈಗ ಸೂಪರ್ ಫಿಟ್! 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿದ್ದು ಹೇಗೆ?

Weight Loss Story: ದೊಡ್ಡ ಹೊಟ್ಟೆಯ ಪೊಲೀಸಪ್ಪ ಈಗ ಸೂಪರ್ ಫಿಟ್! 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿದ್ದು ಹೇಗೆ?

ತೂಕ ಇಳಿಸಿಕೊಂಡ ಪೊಲೀಸ್​ ಅಧಿಕಾರಿ

ತೂಕ ಇಳಿಸಿಕೊಂಡ ಪೊಲೀಸ್​ ಅಧಿಕಾರಿ

130 ಕೆಜಿ ಇದ್ದ ಮೆಟ್ರೋದ ಡೆಪ್ಯುಟಿ ಕಮಿಷನರ್ ಜಿತೇಂದ್ರ ಮಣಿ ಇದೀಗ 10 ರಿಂದ 20 ಕೆಜಿ ಅಲ್ಲ, ಬರೋಬ್ಬರಿ 46 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

  • Trending Desk
  • Last Updated :
  • Karnataka, India
  • Share this:

ಸಾಮಾನ್ಯವಾಗಿ ನಾವು ಪ್ರತಿದಿನ ಈ ಟ್ರಾಫಿಕ್ ಜಂಕ್ಷನ್ ಗಳಲ್ಲಿ (Traffic Junction) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು (Police) ನೋಡುತ್ತೇವೆ. ಅವರನ್ನು ನೋಡಿದಾಗ ನಮ್ಮ ಕಣ್ಣು ನೇರವಾಗಿ ಹೋಗುವುದೇ ಅವರ ದಪ್ಪವಾದ ಹೊಟ್ಟೆಯ (Stomach) ಮೇಲೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ‘ಯಪ್ಪಾ ಎಷ್ಟೊಂದು ದಪ್ಪ ಈ ಪೊಲೀಸಪ್ಪ, ಸ್ವಲ್ಪ ದೇಹವನ್ನ ಫಿಟ್ (Body Fit) ಆಗಿ ಇಟ್ಕೋಬಾರ್ದ’ ಅಂತ ಮನಸ್ಸಿನಲ್ಲಿ ಅಂದು ಕೊಂಡಿರುವುದು ಸಹ ಇರುತ್ತದೆ.


ಪೊಲೀಸರು ಅಂದ್ರೆ ಸ್ವಲ್ಪ ಫಿಟ್ ಆಗಿ ಇರಬೇಕು ಅಂತ ನಾವು ಈ ಸಿನೆಮಾಗಳಲ್ಲಿನ ಪೊಲೀಸ್ ಪಾತ್ರಗಳನ್ನು ನೋಡಿ ಅನೇಕ ಬಾರಿ ಅಂದು ಕೊಂಡಿರುತ್ತೇವೆ. ಆದರೆ ನಿಜವಾಗಿ ಹೇಳುವುದಾದರೆ, ಪೊಲೀಸರಿಗೆ ತಮ್ಮ ಕೆಲಸದಿಂದ ಬಿಡುವು ಸಿಗುವುದು ತುಂಬಾನೇ ಕಷ್ಟ, ಏಕೆಂದರೆ 8-10 ಗಂಟೆಗಳ ಕಾಲ ಅವರು ರಸ್ತೆಯ ಮೇಲೆ ನಿಂತು ವಾಹನ ದಟ್ಟಣೆಯನ್ನು ಸುಗಮಗೊಳಿಸಲು ಮತ್ತು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಆಗುವ ಅಪರಾಧಗಳ ಮೇಲೆ ನಿಗಾ ಇಡಲು ಮತ್ತು ಅವುಗಳನ್ನು ಆಗದಂತೆ ತಡೆಯಲು ಹಗಲು ರಾತ್ರಿ ಅಂತ ನೋಡದೆ ಕೆಲಸ ಮಾಡುತ್ತಿರುತ್ತಾರೆ.


Delhi Cop Sheds 46 Kg In 8 Months. Here's His Diet, Exercise Plan
ತೂಕ ಇಳಿಸಿಕೊಂಡ ಪೊಲೀಸ್​ ಅಧಿಕಾರಿ


ಇದು ಎಲ್ಲಾ ಪೊಲೀಸರಿಗೆ ಅನ್ವಯಿಸುವುದಿಲ್ಲ, ಏಕೆಂದರೆ ಕೆಲವೊಬ್ಬರು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ, ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕು ಅಂತ ಎಷ್ಟೇ ಕೆಲಸದಿಂದ ರಾತ್ರಿ ತಡವಾಗಿ ಮನೆಗೆ ಬಂದು ಮಲಗಿದ್ರು, ಬೆಳಿಗ್ಗೆ ಬೇಗ ಎದ್ದು ಆಟದ ಮೈದಾನಕ್ಕೆ ಹೋಗಿ 5-6 ರೌಂಡ್ ಜಾಗಿಂಗ್ ಮಾಡಿ ಬರುತ್ತಾರೆ.


ತಮ್ಮ ಬ್ಯುಸಿಯಾದ ಕೆಲಸದಲ್ಲಿ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗದೆ, ಎಲ್ಲಿ ಬೇಕಾದರಲ್ಲಿ ತಿಂಡಿ ತಿನ್ನುವುದರಿಂದ ಈ ರೀತಿಯಾಗಿ ತಮ್ಮ ದೇಹದ ತೂಕವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ತುಂಬಾ ಫ್ಯಾಟ್ ಇದ್ದ ಪೊಲೀಸಪ್ಪ ಈಗ ಫಿಟ್ ಕಾಪ್!


ಇಲ್ಲೊಬ್ಬರು ಪೊಲೀಸ್ ಅಧಿಕಾರಿ 8 ತಿಂಗಳುಗಳ ಹಿಂದೆ ತುಂಬಾನೇ ದಪ್ಪ ಇದ್ರಂತೆ, ಆದರೆ ಈಗ ಅವರು ತಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಂಡು ಫಿಟ್ ಪೊಲೀಸಪ್ಪ ಆಗಿದ್ದಾರೆ ನೋಡಿ. ಇವರು ಕಡಿಮೆ ಮಾಡಿಕೊಂಡಿದ್ದು 10-20 ಕೆಜಿ ಅಲ್ಲ, ಬರೋಬ್ಬರಿ 46 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇಷ್ಟೊಂದು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿದ್ದಕ್ಕೆ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗೆ ಪೊಲೀಸ್ ಆಯುಕ್ತರು ಪ್ರಶಂಸೆಯಾಗಿ ಸೂಕ್ತ ಬಹುಮಾನವನ್ನು ಸಹ ನೀಡಿದ್ದಾರೆ.


ಇವರು ಮೊದಲು 130 ಕೆಜಿ ತೂಕ ಇದ್ರಂತೆ..


130 ಕಿಲೋ ಗ್ರಾಂ ತೂಕವಿರುವ ಮೆಟ್ರೋದ ಡೆಪ್ಯುಟಿ ಕಮಿಷನರ್ ಜಿತೇಂದ್ರ ಮಣಿ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟಗಳು ಅಧಿಕಾರಿಯ ಆರೋಗ್ಯವನ್ನು ನಿರಂತರವಾಗಿ ಅಪಾಯಕ್ಕೆ ತಳ್ಳುವ ಕೆಲವು ಕಾಯಿಲೆಗಳಾಗಿದ್ದವು.


ತಮ್ಮ ದೇಹವನ್ನು ಹೀಗೆ ಬಿಟ್ಟರೆ, ಕಾಯಿಲೆಗಳು ಇನ್ನೂ ಅಪಾಯವನ್ನುತಂದೊಡ್ಡಬಹುದು ಅಂತ ಮನವರಿಕೆ ಮಾಡಿಕೊಂಡ ಪೊಲೀಸ್ ಅಧಿಕಾರಿ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದರು. ಆ ನಿರ್ಧಾರ ಅವರನ್ನು ಇವತ್ತು ಫಿಟ್ ಆಗಿ ಮಾಡಿದೆ ಅಂತ ಹೇಳಬಹುದು. ಅವರು ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯುವ ಮೂಲಕ ಮತ್ತು ಆರೋಗ್ಯಕರವಾದ ಆಹಾರಕ್ರಮವನ್ನು ಇವರು ಶುರು ಮಾಡಿದರು. "ನಾನು ರೊಟ್ಟಿ ಮತ್ತು ಅನ್ನದಂತಹ ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೂಪ್, ಸಲಾಡ್ ಮತ್ತು ಹಣ್ಣುಗಳಂತಹ ಹೆಚ್ಚು ಪೌಷ್ಟಿಕ ಆಯ್ಕೆಗಳಿಗೆ ಬದಲಾಯಿಸಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ: Viral News: 12 ಪತ್ನಿಯರು, 102 ಮಕ್ಕಳಾದ್ಮೇಲೆ ಇವನಿಗೆ ಇನ್ನು ಮಕ್ಕಳು ಬೇಡ್ವಂತೆ!


ತೂಕ ಇಳಿಸೋದಕ್ಕೆ ಏನೆಲ್ಲಾ ಮಾಡಿದ್ರು ನೋಡಿ ಈ ಅಧಿಕಾರಿ..


ಕಟ್ಟುನಿಟ್ಟಾದ ಆಹಾರವನ್ನು ಅನುಸರಿಸಿ, ಕೇವಲ ಎಂಟು ತಿಂಗಳಲ್ಲಿ, ಅವರು ತಮ್ಮ ಸೊಂಟದಿಂದ 12 ಇಂಚುಗಳನ್ನು ಕಳೆದುಕೊಂಡರು ಮತ್ತು ಅವರ ಕೊಲೆಸ್ಟ್ರಾಲ್ ಮಟ್ಟವನ್ನು ಐದನೇ ಒಂದು ಭಾಗದಷ್ಟು ಕಡಿಮೆ ಮಾಡಿಕೊಂಡರು. "ನಾನು ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆಗಳನ್ನು ನಡೆಯುವ ಗುರಿಯನ್ನು ಹೊಂದಿದ್ದೆ. ಕಳೆದ 8 ತಿಂಗಳಲ್ಲಿ ನಾನು 32 ಲಕ್ಷಕ್ಕೂ ಹೆಚ್ಚು ಹೆಜ್ಜೆಗಳನ್ನು ನಡೆದಿದ್ದೇನೆ" ಎಂದು ಡಿಸಿಪಿ ಮಣಿ ಹೇಳಿದರು.


ಅವರ ಪ್ರಯತ್ನವನ್ನು ನೋಡಿ ಪೊಲೀಸ್ ಆಯುಕ್ತರಾದ ಸಂಜಯ್ ಅರೋರಾ ಅವರು ಶ್ಲಾಘಿಸಿದರು, ಅವರು 90,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಪರವಾಗಿ ಪ್ರಶಂಸಾ ಪ್ರಮಾಣಪತ್ರವನ್ನು ನೀಡಿದರು.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು