• Home
 • »
 • News
 • »
 • trend
 • »
 • Marriage: ಹೀಗೂ ಉಂಟೇ? ಊಟ ಬಡಿಸೋದು ಲೇಟಾಯ್ತು ಅಂತ ಮದ್ವೆಯನ್ನೇ ಕ್ಯಾನ್ಸಲ್​ ಮಾಡಿದ ವರ!

Marriage: ಹೀಗೂ ಉಂಟೇ? ಊಟ ಬಡಿಸೋದು ಲೇಟಾಯ್ತು ಅಂತ ಮದ್ವೆಯನ್ನೇ ಕ್ಯಾನ್ಸಲ್​ ಮಾಡಿದ ವರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral News: ಬಿಹಾರದ ಪುರ್ನಿಯಾದ ಮೊಹಾನಿ ಪಂಚಾಯತ್‌ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ಅದ್ದೂರಿ ವಿವಾಹ ಸಮಾರಂಭ ಆಯೋಜನೆಯಾಗಿತ್ತು.. ವರ ಅಮರಿ ಕುಕ್ರೌನ್‌ನ ರಾಜ್‌ಕುಮಾರ್ ಓರಾನ್ ವಧುವಿನ ಕೈ ಹಿಡಿಯಲು ಮದುವೆ ಮನೆಗೆ ಬಂದಾಗಿತ್ತು. ಆದ್ರೆ ಮದುವೆ ಮನೆಯಲ್ಲಿ ನಡೆದ ಸಿಲ್ಲಿ ಕಾರಣದಿಂದಾಗಿ ವರ ಮದುವೆಯನ್ನು ಮುರಿದು ಕೊಂಡಿದ್ದಾನೆ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಮದುವೆ (Marriage) ನಿಲ್ಲುವುದಕ್ಕೆ ಕ್ಷುಲ್ಲಕ ಕಾರಣಗಳೇ (Reason) ಕಾರಣವಾಗಿವೆ.. ಅಡುಗೆಯಲ್ಲಿ (Food) ಉಪ್ಪು (Salt) ಕಡಿಮೆ ಇದೆ ಎಂದು ಅಥವಾ ಮದುವೆ ಅಲಂಕಾರ ಚೆನ್ನಾಗಿಲ್ಲ ಎಂದು ಕೇಳಿದ್ದನ್ನು ಕೊಡಲಿಲ್ಲ ಎಂದು ಇದ್ದಕ್ಕಿದ್ದಂತೆ ಮಂಟಪದವರೆಗೆ ಬಂದ ಅದೆಷ್ಟು ಮದುವೆಗಳು ನಿಂತಿರುವ ಹಲವಾರು ಘಟನೆಗಳನ್ನು (Incident) ನಾವು ನೋಡಿದ್ದೇವೆ.. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇನ್ನೇನು ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವ ಸಂದರ್ಭದಲ್ಲಿ ಅನಗತ್ಯವಾದ ವಿಚಾರಗಳಿಂದ ಮದುವೆಯ ರದ್ದಾಗಿರುವ ಅಸಂಖ್ಯಾತ ಉದಾಹರಣೆಗಳು ನಮ್ಮ ಮುಂದೆ ಇವೆ.. ಈಗ ಅದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.


  ಊಟ ಬಡಿಸಲು ವಿಳಂಬವಾಯಿತು ಎನ್ನುವ ಕಾರಣಕ್ಕೆ ಮದುವೆ ಕ್ಯಾನ್ಸಲ್


  ಮದುವೆ ಮಂಟಪಗಳಲ್ಲೇ ಮದುವೆ ನಿಲ್ಲೋ ಪ್ರಕರಣಗಳನ್ನು ನಾವು ಕೇಳಿರ್ತೀವಿ. ಮದುವೆ ಯಾಕೆ ರದ್ದಾಗಿದೆ ಅಂತಾ ಕಾರಣ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಈ ಸಿಲ್ಲಿ ಕಾರಣಕ್ಕೆ ಮದುವೆ ನಿಲ್ಲಿಸಿದ್ರಾ ಅನ್ಸುತ್ತೆ. ವಿಚಿತ್ರ ಆದರೂ ಇವೆಲ್ಲಾ ನೈಜ ಘಟನೆಗಳು. ಈಗೆಲ್ಲಾ ಸಣ್ಣ ಸಣ್ಣ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತವೆ.


  ಇದನ್ನೂ ಓದಿ: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?


  ಹೌದು ಬಿಹಾರದ ಪುರ್ನಿಯಾದ ಮೊಹಾನಿ ಪಂಚಾಯತ್‌ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ಅದ್ದೂರಿ ವಿವಾಹ ಸಮಾರಂಭ ಆಯೋಜನೆಯಾಗಿತ್ತು.. ವರ ಅಮರಿ ಕುಕ್ರೌನ್‌ನ ರಾಜ್‌ಕುಮಾರ್ ಓರಾನ್ ವಧುವಿನ ಕೈ ಹಿಡಿಯಲು ಮದುವೆ ಮನೆಗೆ ಬಂದಾಗಿತ್ತು. ಆದ್ರೆ ಮದುವೆ ಮನೆಯಲ್ಲಿ ನಡೆದ ಸಿಲ್ಲಿ ಕಾರಣದಿಂದಾಗಿ ವರ ಮದುವೆಯನ್ನು ಮುರಿದು ಕೊಂಡಿದ್ದಾನೆ..


  ಹೌದು ಮದುವೆ ಮನೆಯನ್ನು ವರ ತಲುಪಿದ ಕೂಡಲೇ ಹುಡುಗಿಯ ಮನೆಯವರು ವಿವಾಹದ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಇದರಿಂದಾಗಿ ದೂರದ ಪ್ರದೇಶದಿಂದ ಮದುವೆ ಮನೆಗೆ ಬಂದ ವರನ ಕುಟುಂಬಸ್ಥರಿಗೆ ಊಟ ಬಡಿಸಲು ಕೊಂಚ ತಡವಾಗಿದೆ.
  ಈ ವಿಷಯ ವರ ರಾಜಕುಮಾರ್ ಅವರ ತಂದೆಯನ್ನು ಕೆರಳಿಸಿದೆ. ಹೀಗಾಗಿ ರಾಜಕುಮಾರ್ ತಂದೆ ಮದುವೆ ಮುರಿಯುವ ನಿರ್ಧಾರಕ್ಕೆ ಬಂದು ಮದುವೆ ಮಂಟಪದಿಂದ ಹುಡುಗನ ಸಮೇತ ಹಿಂದಿರುಗುವ ನಿರ್ಧಾರಕ್ಕೆ ಬಂದಿದ್ದಾರೆ.


  ಪಂಚಾಯತಿ ಮಾಡಿದ್ರು ಬಗೆಹರಿಯದ ಸಮಸ್ಯೆ


  ಇನ್ನು ವರ ರಾಜಕುಮಾರ್ ತಂದೆ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿಯುವ ವಿಷಯಕ್ಕೆ ಬರುತ್ತಿದ್ದಂತೆ ಸ್ಥಳೀಯರು ಹಾಗೂ ಪಂಚಾಯತಿಯವರು ಪ್ರವೇಶಿಸಿ ವಧು-ವರನ ಕಡೆಯವರ ನಡುವೆ ರಾಜಿ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಪಂಚಾಯಿತಿ ನಡೆಯುವ ವೇಳೆಯೇ ವರನ ಕಡೆಯವರು ಸ್ಥಳದಿಂದ ಪಲಾಯನ ಮಾಡಿದ್ದಾರೆ.. ಹೀಗಾಗಿ ಮದುವೆ ನಡೆಯದೇ ನಿಂತಿದೆ. ಇನ್ನು ವರನ ತಂದೆ ವಧುವಿನ ಕುಟುಂಬಕ್ಕೆ ಅಡುಗೆ ಮಾಡಲು ತಗಲುವ ವೆಚ್ಚವನ್ನು, ಬೈಕ್ ಮತ್ತು ವರದಕ್ಷಿಣೆಯಾಗಿ ನೀಡಿದ ಎಲ್ಲಾ ಉಡುಗೊರೆಗಳನ್ನು ವಾಪಾಸ್​ ನೀಡಿದರು. ಇದೀಗ ವಧುವಿನ ತಾಯಿ, ವರ ಹಾಗೂ ಆತನ ತಂದೆ ವಿರುದ್ಧ ಕಸ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.


  ವರಮಾಲೆ ಎಸೆದಿದ್ದಕ್ಕೆ ಮದುವೆ ರದ್ದು


  ಇನ್ನು ಈ ಹಿಂದೆ ಕೇವಲ ವರಮಾಲೆಯನ್ನು ಅವರ ಎಸೆದಿದ್ದಾನೆ ಎಂಬ ಕಾರಣಕ್ಕೆ ವಧು ಮದುವೆಯನ್ನು ನಿಲ್ಲಿಸಿದ್ದಳು. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿನ ಸ್ಥಳೀಯ ಸಂಪ್ರದಾಯದಂತೆ ವರನು ವಧುವಿನ ಕೊರಳಿಗೆ ವರಮಾಲೆ ಅಂದರೆ ಹಾರವನ್ನು ಹಾಕಬೇಕು. ವರ ಹೀಗೆ ಹಾರ ಹಾಕುವ ಬದಲು ವರಮಾಲೆಯನ್ನು ವಧುವಿನ ಮೇಲೆ ಎಸೆದು ಬಿಟ್ಟಿದ್ದಾನೆ. ಆಮೇಲೆ ಇನ್ನೇನು.. ಕೋಪಗೊಂಡ ವಧು ಮದುವೆಯೇ ಬೇಡ ಎಂದು ರದ್ದುಗೊಳಿಸಿದ್ದಳು.


  ಇದನ್ನೂ ಓದಿ: ನಿಮಗೊಂದು ಚಾಲೆಂಜ್! ಈ ಫೋಟೋವನ್ನ ಸರಿಯಾಗಿ ನೋಡಿ ಯಾವುದಾದರು ಪದ ಕಾಣಿಸ್ತಾ ಇದೆಯಾ?


  ಇನ್ನು ಕಳೆದ ವರ್ಷ, ಸುಕಿಂದಾದಲ್ಲಿ ವರನೊಬ್ಬ ಮದುವೆಯ ವಿಧಿವಿಧಾನ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ತನ್ನ ಮದುವೆಯನ್ನು ರದ್ದುಗೊಳಿಸಿದನು. 27 ವರ್ಷದ ವರನನ್ನು ರಮಾಕಾಂತ್ ಪಾತ್ರ ಎಂದು ಗುರುತಿಸಲಾಗಿದ್ದು, ವಧುವಿನ ಕುಟುಂಬದವರು ಹಬ್ಬದಲ್ಲಿ ಕುರಿಯೂಟವನ್ನು ಬಡಿಸಲು ವಿಫಲವಾದ ಕಾರಣಕ್ಕೆ ಅಸಮಾಧಾನಗೊಂಡಿದ್ದಾನೆ. ಅಷ್ಟೇ ಅಲ್ಲದೇ ಮನೆಗೆ ಹಿಂದಿರುಗುವ ಮೊದಲು ಅವನು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಕೂಡ ಮುಂದಾಗಿದ್ದ.

  Published by:ranjumbkgowda1 ranjumbkgowda1
  First published: