• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ದೀಪ್​ವೀರ್​ ಮದುವೆ ಕುತೂಹಲ ಸಾಮಾನ್ಯ ಜನರನ್ನು ಮಾತ್ರವಲ್ಲ, ಕೇಂದ್ರ ಸಚಿವರನ್ನು ಕಾಡುತ್ತಿದೆ

ದೀಪ್​ವೀರ್​ ಮದುವೆ ಕುತೂಹಲ ಸಾಮಾನ್ಯ ಜನರನ್ನು ಮಾತ್ರವಲ್ಲ, ಕೇಂದ್ರ ಸಚಿವರನ್ನು ಕಾಡುತ್ತಿದೆ

  • News18
  • 4-MIN READ
  • Last Updated :
  • Share this:

ಬಾಲಿವುಡ್​ನ ಅತ್ಯಾಕರ್ಷ ಜೋಡಿ ಎಂದೇ ಖ್ಯಾತರಾದ ದೀಪಿಕಾ ಪಡುಕೋಟೆ- ರಣವೀರ್​ ಸಿಂಗ್​ ಇಂದು ಅಧಿಕೃತವಾಗಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಹಾಕಿದ್ದಾರೆ.

ಇಟಲಿಯಲ್ಲಿ ಲೆಕ್​ಕೋಮ್​ದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ದೀಪಿಕಾ ರಣವೀರ್​ ಗಂಡ-ಹೆಂಡತಿಯಾಗಿದ್ದಾರೆ. ಇವರ ಮದುವೆ ಕುರಿತು ಎಲ್ಲರಲ್ಲಿಯೂ ಕುತೂಹಲ ಮೂಡಿದೆ. ಈ ಕುತೂಹಲ ಯಾವ ಮಟ್ಟಿಗೆ ಮೂಡಿದೆ ಎಂದರೆ ಕೇಂದ್ರ ಸಚಿವರನ್ನು ಕಾಡುವಷ್ಟು ಮಟ್ಟಿಗೆ ಮೂಡಿದೆ.

ಬಾಲಿವುಡ್​ ಐಷಾರಾಮಿ ಮದುವೆಗಳ ಬಗ್ಗೆ ಸಾಮಾನ್ಯ ಜನರಿಗೆ ಒಂದು ರೀತಿಯ ಕುತೂಹಲ ಸದಾ ಇರುತ್ತದೆ. ಅದ್ದೂರಿ ಮದುವೆಗಳಲ್ಲಿ ನಟಿಯರು ಹೇಗೆ ಸಿಂಗಾರಿಸಿಕೊಂಡಿದ್ದರು.  ನಟ ಮದುಮಗ ಯಾವ ರೀತಿ ಅಲಂಕಾರಗೊಂಡಿದ್ದ ಎಂಬ ಬಗ್ಗೆ ತಿಳಿಯಲು ಕಾತುರಾರಗಿರುತ್ತಾರೆ.
 
View this post on Instagram
 

#when you have waited for #deepveer #wedding #pics for too longgggg 🤦‍♀️


A post shared by Smriti Irani (@smritiiraniofficial) on

ಅದೇ ರೀತಿ ದೀಪಿಕಾ ಮದುವೆ ತಿಳಿಯುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಈ ಆಸೆಗೆ ಈ ಜೋಡಿ ತಣ್ಣಿರೆರಚಿದೆ. ದೂರದ ಸ್ವರ್ಗದಂತಿರುವ ಪ್ರದೇಶದಲ್ಲಿ ಮದುವೆಯಾಗುತ್ತಿರುವ ಈ 'ರಾಮ್​-ಲೀಲಾ' ಜೋಡಿ ತಮ್ಮ ಮದುವೆಯ ಖಾಸಗಿತನದಲ್ಲಿ ಗೌಪ್ಯತೆ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಗೆ ಬರುವವರಿಗೂ ತಮ್ಮ ಮದುವೆಯ ಪೋಟೋಗಳನ್ನು ಎಲ್ಲಿಯೂ ಹರಿಯಬಿಡದಂತೆ ಸೂಚನೆ ನೀಡಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿದೆ.


ಪ್ಯಾಪಾರಾಜಿಗಳ ಮೂಲಕವೂ ಅಥವಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೊವನ್ನು ಹಾಕುತ್ತಾರೆ ಎಂದು ಕಾಯುತ್ತಿದ್ದಾರೆ. ಈ ರೀತಿ ಕಾಯುವಿಕೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಇರುವುದು ವಿಶೇಷ.


ದೀಪಿಕಾ-ರಣವೀರ್​ ಮದುವೆ ಫೋಟೋಗೆ ಕಾದು ಕುಳಿತವರು ಹೇಗಾಗಬಹುದು ಎಂಬುದನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಾವು ಕೂಡ ದೀಪ್​ವೀರ್​ ಮದುವೆ ಬಗ್ಗೆ ತಿಳಿಯಲು ಕಾತುರರಾಗಿದ್ದೇನೆ ಎಂದು ತಿಳಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು