• Home
  • »
  • News
  • »
  • trend
  • »
  • Deepinder Goyal: ಸ್ವತಃ ಫುಡ್‌ ಆರ್ಡರ್‌ ಡೆಲಿವರಿ ಮಾಡ್ತಾರಂತೆ ಜೊಮೆಟೊ CEO!

Deepinder Goyal: ಸ್ವತಃ ಫುಡ್‌ ಆರ್ಡರ್‌ ಡೆಲಿವರಿ ಮಾಡ್ತಾರಂತೆ ಜೊಮೆಟೊ CEO!

ದೀಪಿಂದರ್‌ ಗೋಯೆಲ್‌

ದೀಪಿಂದರ್‌ ಗೋಯೆಲ್‌

Deepinder Goyal: ಸಾಕಷ್ಟು ಫೇಮಸ್‌ ಆಗಿರೋ ಈ ಆಪ್‌ನ ಸಿಇಒ ದೀಪಿಂದರ್‌ ಗೋಯೆಲ್ ಪ್ರತಿ ಮೂರು ತಿಂಗಳಿಗೊಮ್ಮೆ ಕಂಪನಿಯ ಟಿ-ಶರ್ಟ್‌ನಲ್ಲಿ ಹೋಗಿ ಆರ್ಡರ್‌ಗಳನ್ನು ತಲುಪಿಸಿ ಬರ್ತಾರಂತೆ.

  • Trending Desk
  • 4-MIN READ
  • Last Updated :
  • Share this:

ಬಹಳಷ್ಟು ವ್ಯಕ್ತಿಗಳಿಗೆ (Persons) ತಾವೇನೋ ಸಾಧನೆ ಮಾಡಿದ್ದೇವೆ ಅಥವಾ ಶ್ರೀಮಂತರಾಗಿದ್ದೇವೆ ಅಂದಕೂಡಲೇ ಒಂದಷ್ಟು ಶ್ರೀಮಂತಿಕೆಯ ಅಹಂ ಬಂದುಬಿಡುತ್ತದೆ. ಇದು ಸಹಜವೇನೋ ಆದರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಎಲ್ಲರೊಂದಿಗೂ ಸರಳವಾಗಿಯೇ ಇರುತ್ತಾರೆ. ತಾವೇ ಹುಟ್ಟು ಹಾಕಿದ ಕಂಪನಿಯ ಉದ್ಯೋಗಿಗಳ (Company Employee) ಜೊತೆ ಚೆನ್ನಾಗಿರ್ತಾರೆ. ಸಮಸ್ಯೆಗಳನ್ನು (Problems) ಅರಿತು ತಮ್ಮದೇ ಉದ್ಯೋಗಿಗಳ ನೆರವಿಗೆ ನಿಲ್ತಾರೆ. ಅಂಥವರಲ್ಲಿ ಒಬ್ಬರು ದೀಪೆಂದರ್ ಗೋಯಲ್. 


ಅಂದಹಾಗೆ ನೀವು ಜೋಮೆಟೊ ಅಪ್ಲಿಕೇಷನ್‌ ಬಗ್ಗೆ ಕೇಳಿರ್ತೀರಾ. ಸಿಟಿಗಳಲ್ಲಂತೂ ಅದನ್ನು ಬಳಸದಿರುವ ವ್ಯಕ್ತಿಗಳೇ ವಿರಳ. ಫುಡ್‌ ಡೆಲಿವರಿ ಅಪ್ಲಿಕೇಷನ್‌ ಜೊಮೆಟೊ ಆರ್ಡರ್‌ ಮಾಡಿದ ಫುಡ್‌ ಅನ್ನು ನಮೂದಿಸಿದ ಹೊಟೆಲ್‌, ರೆಸ್ಟೋರೆಂಟ್‌ ಗಳಿಂದ ನಾವಿದ್ದಲ್ಲಿಗೆ ತಲುಪಿಸುತ್ತೆ.


ಸಾಕಷ್ಟು ಫೇಮಸ್‌ ಆಗಿರೋ ಈ ಆಪ್‌ನ ಸಿಇಒ ದೀಪಿಂದರ್‌ ಗೋಯೆಲ್.‌ ಇವರು ಪ್ರತಿ ಮೂರು ತಿಂಗಳಿಗೊಮ್ಮೆ ಕಂಪನಿಯ ಟಿ-ಶರ್ಟ್‌ನಲ್ಲಿ ಹೋಗಿ ಆರ್ಡರ್‌ಗಳನ್ನು ತಲುಪಿಸಿ ಬರ್ತಾರಂತೆ. ಹೀಗಂತ ಸ್ವತಃ Naukri.com ಸಂಸ್ಥಾಪಕರಾದ ಸಂಜೀವ್ ಬಿಖ್‌ಚಂದಾನಿ ಬಹಿರಂಗ ಪಡಿಸಿದ್ದಾರೆ. ನೌಕರಿ ಡಾಟ್‌ ಕಾಮ್‌ ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಂಜೀವ್ ಬಿಖ್‌ಚಂದಾನಿ ಇತ್ತೀಚೆಗೆ ಟ್ವಿಟರ್ ಪೋಸ್ಟ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. Zomato ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಯ ಕೆಂಪು ಬಣ್ಣದ ಯುನಿಫಾರ್ಮ್‌ ಧರಿಸಿ ಆರ್ಡರ್‌ ತಲುಪಿಸುತ್ತಾರೆ ಎಂದಿದ್ದಾರೆ.


ಮೂರು ತಿಂಗಳಿಗೊಮ್ಮೆ ಆರ್ಡರ್‌ ತಲುಪಿಸ್ತಾರಂತೆ!


ಸಂಜೀವ್ ಬಿಖ್‌ಚಂದಾನಿ ತಮ್ಮ ಟ್ವೀಟ್‌ ನಲ್ಲಿ, "ದೀಪಿಂದರ್‌ ಗೋಯೆಲ್‌ ಹಾಗೂ ಜೊಮೆಟೊ ತಂಡವನ್ನು ಭೇಟಿಯಾಗಿದ್ದೇನೆ. ಅಲ್ಲಿ ದೀಪಿಂದರ್ ಸೇರಿದಂತೆ ಎಲ್ಲಾ ಹಿರಿಯ ಮ್ಯಾನೇಜರ್‌ಗಳು ಕೆಂಪು ಝೊಮಾಟೊ ಟೀ ಧರಿಸುತ್ತಾರೆ. ಅವರು ಕನಿಷ್ಠ ಮೂರು ತಿಂಗಳಲ್ಲಿ ಒಂದು ದಿನ ಮೋಟಾರ್‌ ಸೈಕಲ್‌ನಲ್ಲಿ ಹೋಗಿ ಒಮ್ಮೆಯಾದರೂ ಆರ್ಡರ್‌ ಗಳನ್ನು ವಿತರಿಸುತ್ತಾರೆ.


ಅಲ್ಲದೇ ಅವರನ್ನು ಇಲ್ಲಿಯವರೆಗೂ ಯಾರೂ ಕಂಡುಹಿಡಿದಿಲ್ಲ ಎಂದು ದೀಪಿಂದರ್‌ ಹೇಳಿದರು” ಎಂದಿದ್ದಾರೆ. ಅಲ್ಲದೇ, ಸಮವಸ್ತ್ರ ಧರಿಸಿ ಬೈಕ್‌ನಲ್ಲಿ ಆರ್ಡರ್‌ಗಳನ್ನು ಯಾರ ಗಮನಕ್ಕೂ ಬಾರದೆ ತಲುಪಿಸುವ ಪರಿಪಾಠ ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಉದ್ಯಮಿ ತಿಳಿಸಿದ್ದಾರೆ. ಇನ್ನು ಈ ಪೋಸ್ಟ್‌ ಗೆ ಸಾಕಷ್ಟು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.


ಇದನ್ನೂ ಓದಿ: ಪಾರ್ಕಿಂಗ್​ ಸ್ಥಳದಲ್ಲಿದ್ದ ಬೈಕ್​ಗಳ ಮೇಲೆ ಚಲಿಸಿದ ಹೊಸ ಕಾರು! ದೃಶ್ಯ ಇಲ್ಲಿದೆ ನೋಡಿ


ಗ್ರಾಹರೊಡನೆ ಮಾತುಕತೆ


ಕೆಲವರು ಇದನ್ನು ಅದ್ಭುತ ಎಂದು ಕರೆದಿದ್ದಾರೆ. ಇನ್ನು ಕೆಲವರು "ಗ್ರಾಹಕರು, ವ್ಯವಹಾರ, ಪಾಲುದಾರರನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸರತಿ ಸಾಲಿನಲ್ಲಿ ನಿಂತು, ಸಾಮಾನ್ಯ ಗ್ರಾಹಕರಂತೆ ಸಿಬ್ಬಂದಿಯೊಂದಿಗೆ ಮಾತನಾಡಲು, ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು, ಗ್ರಾಹಕರ ಅಭಿಪ್ರಾಯಗಳನ್ನು ಸ್ಥಳದಲ್ಲೇ ಪಡೆಯಲು ಇದು ಸಹಾಯಕವಾಗುತ್ತೆ" ಎಂದು ಮತ್ತೊಬ್ಬರು ಹೇಳಿದ್ದಾರೆ.


ಇನ್ನೊಬ್ಬರು, ಇದು ಅತ್ಯುತ್ತಮ ಉಪಕ್ರಮ, ಗ್ರಾಹಕರಿಗೆ ಹತ್ತಿರವಾಗುವುದಕ್ಕಿಂತ ಬೇರೆ ಇನ್ನೇನು ಬೇಕು. ಇನ್ಕ್ರೆಡಿಬಲ್ ಇನ್‌ ಸೈಟ್ಸ್‌ ಅಂತ ಹೇಳಿದ್ದಾರೆ. ಮತ್ತೊಬ್ಬ ಟ್ವಿಟ್ಟರ್‌ ಬಳಕೆದಾರ, "ಪಾಲುದಾರರನ್ನು ತಲುಪಿಸುವ ನೋವಿನ ಬಿಂದುವನ್ನು ಅರ್ಥಮಾಡಿಕೊಳ್ಳಲು ಉತ್ತಮ ಮಾರ್ಗ" ಎಂದು ಹೇಳಿದ್ದಾರೆ. ಇನ್ನು, "ಯಾವುದೇ ಕೆಲಸವು ತುಂಬಾ ಚಿಕ್ಕದಲ್ಲ. ಒಬ್ಬರು ತಮ್ಮ ಸಹವರ್ತಿಗಳಿಂದ ನಿರೀಕ್ಷಿಸುವುದನ್ನು ಮಾಡುವುದು ಮತ್ತು ಅನುಭವಿಸುವುದು ಉತ್ತಮವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ: ಗಾಳಿಯಲ್ಲಿ ತೇಲುವಾಸೆ ಅಂತ ಆಡ್ತಾ ಇದ್ದ ಹುಡುಗನಿಗೆ ಏನಾಯ್ತು ನೋಡಿ!


ಈ ಮಧ್ಯೆ , ಉನ್ನತ ಕಾರ್ಯನಿರ್ವಾಹಕರು ತಮ್ಮ ಉದ್ಯೋಗಿಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ, ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಸವಾರರನ್ನು ಕರೆದೊಯ್ದಿದ್ದರು.


ಉದ್ಯೋಗಿಗಳ ಸಮಸ್ಯೆ ಅರ್ಥಮಾಡಿಕೊಳ್ಳಲು ಸಹಕಾರಿ


ಒಟ್ಟಾರೆ, ತಮ್ಮ ಉದ್ಯೋಗಿಗಳನ್ನು ಅರ್ಥ ಮಾಡಿಕೊಳ್ಳುವುದು, ಅವರ ಸಮಸ್ಯೆಗಳು ಕೇಳುವುದು ಹಾಗೆಯೇ ಪ್ರಾಯೋಗಿಕವಾಗಿ ಅದನ್ನು ಗ್ರಹಿಸುವುದು ಮುಖ್ಯವಾಗುತ್ತೆ. ಇದರಿಂದ ಅವರಿಗೆ ಸಮಸ್ಯೆ ಅರ್ಥವಾಗುವುದರ ಜೊತೆಗೆ ಅವರು ತಮ್ಮ ಉದ್ಯೋಗಿಗಳಿಗೂ ಹತ್ತಿರವಾಗ್ತಾರೆ. ಇದರಿಂದ ಕಂಪನಿಯ ಜೊತೆಗೆ ಉದ್ಯೋಗಿಗಳು ಹೆಚ್ಚು ಕನೆಕ್ಟ್‌ ಆಗೋದಿಕ್ಕೆ ಸಹಾಯವಾಗುತ್ತೆ.

First published: