Spain: ಸತ್ತು ಹೋಗಿದ್ದಾನೆ ಎಂದು ತಿಳಿದ ವ್ಯಕ್ತಿ ಬಚಾವ್​ ಆಗಿದ್ದು ಗೊರಕೆಯಿಂದ

ವೈದ್ಯರ ಆಘಾತಕಾರಿ ತಪ್ಪಿನ ನಂತರ, ಜಿಮೆನೆಜ್ ಅವರನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು, ಅಲ್ಲಿ ಜಿಮೆನೆಜ್ ಸ್ಥಿರ ಸ್ಥಿತಿಯಲ್ಲಿದ್ದು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸತ್ತು ಹೋದ (Dead) ಎಂದು ಅಂದುಕೊಂಡವನು ಮತ್ತೆ ಬದುಕಿ (Alive) ಬಂದರೆ ಆ ಅನುಭವ ಹೇಗಿರುತ್ತೆ ಅಲ್ವಾ..? ಸತ್ತವರು ಬದುಕಿ ಬಂದರೆ ಸಂತೋಷವಾಗುತ್ತದೆಯೋ ಅಥವಾ ಭಯವಾಗುತ್ತದೆಯೋ..? ಗೊತ್ತಿಲ್ಲ. ಆದರೆ ವಿಚಿತ್ರ ಅಂತಾ ಅನ್ಸೋದು ಮಾತ್ರ ಸತ್ಯ.ಸತ್ತು ಹೋಗಿದ್ದವ ಮತ್ತೆ ಎದ್ದು ಕೂತ, ಇನ್ನೇನು ಅಗ್ನಿ ಸ್ಪರ್ಶ ಮಾಡಬೇಕು ಅನ್ನೋವಷ್ಟರಲ್ಲಿ ಹೆಣ ಎದ್ದು ಕುಳಿತಿತು. ಹೀಗೆ ಇಂಥ ಹಲವು ವಿಲಕ್ಷಣ ಘಟನೆಗಳನ್ನು ಕೇಳಿರ್ತೀವಿ, ಏಕೆ ಹೀಗೆ ಆಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಕೆಲವು ಕಾರಣಗಳಿವೆ. ಆದರೆ ಆ ಕ್ಷಣದಲ್ಲಿ ಅಲ್ಲಿರುವವರು ಅನುಭವಿಸುವ ಗೊಂದಲ ಮಾತ್ರ ಹೇಳ ತೀರದು.

ಹೌದು, ಸತ್ತ ಒಬ್ಬ ಖೈದಿಯನ್ನು ಮರಣೋತ್ತರ ಪರೀಕ್ಷೆಗೆ ಎಂದು ಕೊಠಡಿಗೆ ಕರೆತರಲಾಗಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ ಸತ್ತ ಖೈದಿ ಎಚ್ಚರಗೊಂಡಿರುವ ವಿಲಕ್ಷಣ ಘಟನೆ ಸ್ಪೇನ್‌ನಲ್ಲಿ ನಡೆದಿದೆ.

ಗೊಂಜಾಲೊ ಮೊಂಟೊಯಾ ಜಿಮೆನೆಜ್ ಎಂಬ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಸ್ಪೇನ್‌ನ ಮೂವರು ವೈದ್ಯರು ಘೋಷಿಸಿದ್ದರು. ನಂತರ ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಯ ಕೊಠಡಿಗೆ ಕರೆ ತಂದಿದ್ದಾರೆ. ಇನ್ನೇನು ವೈದ್ಯರು ಆತನ ಮರಣೋತ್ತರ ಪರೀಕ್ಷೆಗಾಗಿ ಕತ್ತರಿಸಲು ಸಿದ್ಧರಾಗುವ ಮುನ್ನವೇ ಸತ್ತ ಹೋಗಿದ್ದಾನೆ ಎಂದುಕೊಂಡಿದ್ದ ಗೊಂಜಾಲೊ ಮೊಂಟೊಯಾ ಜಿಮೆನೆಜ್ ಎಂಬ ಖೈದಿ ಎಚ್ಚರಗೊಂಡು ಎಲ್ಲರಿಗೂ ಶಾಕ್ ನೀಡಿದ್ದಾನೆ.

ಗೊಂಜಾಲೊ ಮೊಂಟೊಯಾ ಜಿಮೆನೆಜ್‌ನನ್ನು ಸ್ಪೇನ್‌ನ ವಿಲ್ಲಬೊನಾದಲ್ಲಿರುವ ಆಸ್ಟುರಿಯಾಸ್ ಸೆಂಟ್ರಲ್ ಪೆನಿಟೆನ್ಷಿಯರಿಯಲ್ಲಿ ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆಗ ತಕ್ಷಣ ಪೊಲೀಸರು ಒವಿಡೊದಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಮೆಡಿಸಿನ್‌ಗೆ ಕರೆತಂದಿದ್ದಾರೆ. ಅಲ್ಲದೇ ಈ ವಿಷಯವನ್ನು ಖೈದಿಯ ಮನೆಯವರಿಗೆ ಸಹ ತಿಳಿಸಲಾಗಿತ್ತು.

ಇದನ್ನೂ ಓದಿ: ದಕ್ಷಿಣ ಕೊರಿಯಾದ ಈ ಹೊಸ ಮಾಸ್ಕ್​ ಬರೀ ಮುಚ್ಚಿಕೊಳ್ಳೋಕಂತೆ

ಸ್ಪ್ಯಾನಿಷ್ ಜೈಲು ಸೇವೆಯ ಕೆಲವು ನಿಯಮಗಳ ಪ್ರಕಾರ ಖೈದಿ ಗೊಂಜಾಲೊ ಮೊಂಟೊಯಾ ಸತ್ತು ಹೋಗಿದ್ದಾರೆ ಎಂದು ಆತನ ಕುಟುಂಬಕ್ಕೂ ಸಹ ವಿಷಯವನ್ನು ತಲುಪಿಸಲಾಗಿತ್ತು. ಪ್ರಿಯಾನ್ ಕಾರ್ಯವಿಧಾನದ ಭಾಗವಾಗಿ ಈ ವಿಚಾರವನ್ನು ಜೈಲು ಸಿಬ್ಬಂದಿಗಳು ಹೇಳಿದ್ದರು.

ಜಿಮೆನೆಜ್‌ ಅನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಅಲ್ಲಿ ಮೂವರು ವೈದ್ಯರು ಆತನನ್ನು ಪರೀಕ್ಷೆ ನಡೆಸಿದ್ದಾರೆ. ನಂತರ ಸ್ವಲ್ಪ ಸಮಯ ಬಿಟ್ಟು ಗೊಂಜಾಲೊ ಮೊಂಟೊಯಾ ಜಿಮೆನೆಜ್‌ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.

ಜೈಲಿನಲ್ಲಿರುವ ವ್ಯಕ್ತಿ ಸಾವನ್ನಪ್ಪಿರುವುದರಿಂದ ಕೆಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ನ್ಯಾಯಾಲಯವು ವಿಧಿವಿಜ್ಞಾನ ವೈದ್ಯರನ್ನು ಕಳುಹಿಸಿತು ಮತ್ತು ಅವರು ಸಹ ಖೈದಿಯ ಸಾವನ್ನು ದೃಢ ಪಡಿಸದರು.

ವಕ್ತಾರರ ಪ್ರಕಾರ, ಇಬ್ಬರು ಕರ್ತವ್ಯದಲ್ಲಿರುವ ವೈದ್ಯರು ಜಿಮೆನೆಜ್ ಸತ್ತಿದ್ದಾರೆ ಎಂದು ದೃಢಪಡಿಸಿದರು ಮತ್ತು ವಿಧಿವಿಜ್ಞಾನ ವೈದ್ಯರು ನಂತರ ಅದನ್ನು ದೃಢಪಡಿಸಿದರು ಎಂದಿದ್ದಾರೆ.

ಗೊರಕೆ ಶಬ್ದದಿಂದ ಬದುಕಿರುವ ಸತ್ಯ ಬಯಲು

ಜಿಮೆನೆಜ್ ಸೈನೋಸಿಸ್‌ನ ಲಕ್ಷಣಗಳನ್ನು ಹೊಂದಿದ್ದನು, ಮತ್ತು ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ವರದಿಯನ್ನು ನೀಡಿದ್ದರು. ಹೀಗೆ ಸತ್ತ ವ್ಯಕ್ತಿಯ ದೇಹವನ್ನು ಬ್ಯಾಗ್‌ನೊಳಗೆ ಹಾಕಿ ಶವಾಗಾರಕ್ಕೆ ಕೊಂಡೊಯ್ಯುತ್ತಿರುವಾಗ ಬ್ಯಾಗ್‌ನೊಳಗಿಂದ ಗೊರಕೆ ಹೊಡೆಯುತ್ತಿರುವ ಶಬ್ದ ಕೇಳಿದಂತಾಗಿತ್ತು.

ತಕ್ಷಣ ಫೊರೆನ್ಸಿಕ್ ವೈದ್ಯರು ಚೀಲದ ಒಳಗಿನಿಂದ ಬರುವ ಶಬ್ದಗಳನ್ನು ಆಲಿಸಿ ಮೊಂಟೊಯಾ ಸತ್ತಿಲ್ಲ ಇನ್ನೂ ಜೀವಂತವಾಗಿರುವುದನ್ನು ಕಂಡುಕೊಂಡರು.

ಮರಣೋತ್ತರ ಪರೀಕ್ಷೆಗಾಗಿ ಆತನ ದೇಹದ ಮೇಲೆ ಪೆನ್ ಗುರುತುಗಳನ್ನು ಸಹ ಹಾಕಲಾಗಿತ್ತು ಎಂದು ವರದಿಗಳು ತಿಳಿಸಿವೆ. ಶವಪರೀಕ್ಷೆಗೆ ಕೆಲವೇ ಕ್ಷಣಗಳ ಮೊದಲು ಎಚ್ಚರಗೊಂಡ ಜಿಮೆನೆಜ್ ಅಲ್ಲಿದ್ದವರಿಗೆ ಅಚ್ಚರಿ ಉಂಟುಮಾಡಿದ್ದಾರೆ.

ವೈದ್ಯರ ಆಘಾತಕಾರಿ ತಪ್ಪಿನ ನಂತರ, ಜಿಮೆನೆಜ್ ಅವರನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು, ಅಲ್ಲಿ ಜಿಮೆನೆಜ್ ಸ್ಥಿರ ಸ್ಥಿತಿಯಲ್ಲಿದ್ದು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ದುಬೈನಲ್ಲಿ 44 ಕೋಟಿಯ ಲಾಟರಿ ಗೆದ್ದ ಭಾರತದ ಮಹಿಳೆ

ಇದೇ ರೀತಿಯ ಘಟನೆಯೊಂದು ಕೀನ್ಯಾದಲ್ಲಿ ನಡೆದಿತ್ತು. ಸತ್ತಿರುವ ವ್ಯಕ್ತಿಯ ದೇಹದಿಂದ ರಕ್ತವನ್ನು ಎಂಬಾಮ್ ಮಾಡಲು ಮತ್ತು ಹೊರಹಾಕಲು ತಯಾರಿ ನಡೆಸುತ್ತಿರುವಾಗ 32 ವರ್ಷದ ಪೀಟರ್ ಕಿಗೆನ್ ಎಂಬ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಎಚ್ಚರಗೊಂಡಿದ್ದರು. ವ್ಯಕ್ತಿಗೆ ಪ್ರಜ್ಞೆ ಬಂದು ತನ್ನ ಕಾಲನ್ನು ಎಳೆದುಕೊಂಡಾಗ ಶವಾಗಾರದೊಳಗಿನ ಸಿಬ್ಬಂದಿ ಹೌಹಾರಿ ಕಿರುಚಲು ಪ್ರಾರಂಭಿಸಿದ್ದರಂತೆ.
Published by:Sandhya M
First published: