ಕಪ್ ಕಾಫಿಯೊಂದಿಗೆ ಸಾವಿನ ರುಚಿ ತೋರಿಸುವ ವಿಚಿತ್ರ ಕಾಫಿ ಶಾಪ್​!

news18
Updated:April 21, 2018, 4:48 PM IST
ಕಪ್ ಕಾಫಿಯೊಂದಿಗೆ ಸಾವಿನ ರುಚಿ ತೋರಿಸುವ ವಿಚಿತ್ರ ಕಾಫಿ ಶಾಪ್​!
news18
Updated: April 21, 2018, 4:48 PM IST
ನ್ಯೂಸ್​ 18 ಕನ್ನಡ

ನಗರಗಳ ಯಾವುದೇ ಮೂಲೆಗೂ ಹೋದರು ಅಲ್ಲೊಂದು ಅಚ್ಚುಕಟ್ಟಾದ ಕಾಫಿ ಶಾಪ್ ಕಾಣ ಸಿಗುತ್ತದೆ. ಏಕಾಂತದಿಂದ ಕಾಲ ಕಳೆಯಲು ಮತ್ತು ಹರಟೆ ಹೊಡೆಯಲು ಕಾಫಿ ಶಾಫ್ ಸೀಮಿತವೆಂದು ನಿಮಗನಿಸಿದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಬ್ಯಾಂಕಾಂಗ್​ನಲ್ಲೊಂದು ವಿಶೇಷ ಕಾಫಿ ಶಾಪ್ ಇದೆ. ಅಲ್ಲಿ ನೀವು ಕೇವಲ ಕಾಫಿ ರುಚಿಯನ್ನು ಮಾತ್ರವಲ್ಲ ನೋಡುವುದಿಲ್ಲ. ಜತೆಗೆ ಸಾವಿನ ಅನುಭವವನ್ನು ಪಡೆಯಬಹುದಾಗಿದೆ.

'ಕಿಡ್ ಮಾಯ್​ ಡೆತ್​ ಕೆಫೆ' ಎಂಬ ಹೆಸರಿನ ಕಾಫಿ ಶಾಪ್​ ಇರುವುದು ಇರುವುದು ಥಾಯ್ಲೆಂಡ್ ದೇಶದ ರಾಜಧಾನಿ ಬ್ಯಾಂಕಾಂಕ್​ ನಗರದಲ್ಲಿ. 'ಸಾವಿನ ಜಾಗೃತಿ' ಕೆಫೆ ಎಂದೇ ಇದು ಪ್ರಸಿದ್ಧಿಯಾಗಿದೆ.  ಈ ಕೆಫೆಯಲ್ಲಿ ನೀಡಲಾಗುವ ಮೆನುವಿನಲ್ಲಿ 'ಡೆತ್​'(ಮರಣ) ಮತ್ತು 'ಪೇನ್​' (ನೋವು) ಎಂಬ ಆಯ್ಕೆಗಳಿವೆ.

ಈ ಕೆಫೆಯ ಹೆಸರಿನಲ್ಲಿರುವ 'ಕಿಡ್ ಮಾಯ್' ಎಂಬ ಪದದ ಅರ್ಥ ಹೊಸದಾಗಿ ಯೋಚಿಸು (ಥಿಂಕ್ ನ್ಯೂ) ಎಂದು.  ಹೆಸರಲ್ಲೇ ಇರುವಂತೆ ನೀವು ಆಯ್ಕೆ ಮಾಡಿಕೊಂಡ ಪಾನೀಯಕ್ಕನುಗುಣವಾಗಿ ನಿಮಗೆ ಶವಪೆಟ್ಟಿಗೆಯ ವಿನ್ಯಾಸವೊಂದು ಸಿದ್ಧವಾಗಿರುತ್ತದೆ. ಅಲಂಕೃತವಾದ ಬಿಳಿ ಶವಪೆಟ್ಟಿಗೆಯಲ್ಲಿ ಕೆಲಕಾಲ ಮಲಗುದರೊಂದಿಗೆ ನಿಮ್ಮ ಅಂತಿಮ ಕ್ಷಣಗಳು ಹೇಗಿರಲಿವೆ ಎಂದು ಊಹಿಸಿಕೊಳ್ಳಬಹುದು. ಕೆಲವು ನಿಮಿಷಗಳ ಕಾಲ ಮರಣದ ಅನುಭವ ಪಡೆಯುವ ನಿಮಗೆ, ಪಾನೀಯದ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತದೆ.

ಇತ್ತೀಚೆಗೆ ಈ ಕೆಫೆಯಲ್ಲಿ ಚಾಕೊಲೇಟ್ 'ಡೆತ್ ಸ್ಮೂಧಿ' ಪಾನೀಯ ಸೇವಿಸಿದ 28ರ ಹರೆಯದ ಡುವಾಂಗ್ಹತಿ ಬೂನ್ಮೋಹ್​ ಅವರ ಅನುಭವ ಅವರ ಮಾತಿನಲ್ಲೇ ಕೇಳುವುದು ಚೆಂದ. 'ಪಾನೀಯ ಕುಡಿದ ಬಳಿಕ ನನ್ನ ಸ್ನೇಹಿತರು ಶವ ಪೆಟ್ಟಿಯಲ್ಲಿ ನನ್ನನ್ನು ಮಲಗಿಸಿ ಅದನ್ನು ಮುಚ್ಚಿದರು. ಇದಾದ ಬಳಿಕ ನನಗನಿಸಿದ್ದು ಇದನ್ನು ಯಾರೂ ತೆರೆಯದಿದ್ದರೆ? ಎಂಬ ಭಯ ಕಾಡಿತ್ತು. ನಾನು ಇಲ್ಲಿ ಜೀವಂತವಾಗಿದ್ದೀನಿ ಎಂದು ಎಲ್ಲರಿಗೂ ಕೂಗಿ ಹೇಳುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿತ್ತು. ಬಹುಶಃ ಸಾವು ಸನಿಹ ಬಂದಾಗಲೂ ನಮ್ಮ ಭಾವನೆ ಈ ರೀತಿಯಾಗಿ ಇರಲಿದೆ ಎಂದು ಭಾವಿಸುತ್ತೇನೆ' ಎಂದು ಡುವಾಂಗ್ಹತಿ ಬೂನ್ಮೋಹ್​ ಅಭಿಪ್ರಾಯ ಪಟ್ಟಿದ್ದಾರೆ.

'ಥಾಯ್ಲೆಂಡ್ ರಾಜಧಾನಿಯಲ್ಲಿ ಎಲ್ಲ ರೀತಿಯ ರೆಸ್ಟೊರಂಟ್​ಗಳು ಮತ್ತು ಕಾಫಿ ಶಾಪ್​ಗಳಿವೆ. ಆದರೆ ಪಟ್ಟಣದಲ್ಲಿರುವ ಶೇ.90ರಷ್ಟು ಬೌದ್ಧ ಧರ್ಮೀಯರಿದ್ದಾರೆ. ಇವರಿಗೆ ಮರಣದ ಕುರಿತಾಗಿ ಜಾಗೃತಿ ಮೂಡಿಸಲು ಈ ಕೆಫೆ ಸಹಕಾರಿಯಾಗಿದೆ. ಮರಣದ ಕುರಿತು ಅರಿವು ಮೂಡಿಸುವುದರಿಂದ ಜನರಲ್ಲಿ ದುರಾಸೆ ಮತ್ತು ಕೋಪ ಕಡಿಮೆಯಾಗುವುದನ್ನು ಕಂಡಿದ್ದೇವೆ ' ಎನ್ನುವುದು  ಕಾಫಿ ಶಾಪ್ ಮಾಲೀಕ ವೀರನಟ್ ರೊಜಾಪ್ರಪ ಅವರ ಅಭಿಪ್ರಾಯ.  ಇವರು ವೃತ್ತಿಯಲ್ಲಿ ಪ್ರಾಧ್ಯಾಪಕ ಹಾಗೂ ಸಾಮಾಜಿಕ ಸಂಶೋಧಕರಾಗಿದ್ದಾರೆ.

'ಥಾಯ್ ಜನರಲ್ಲಿ ಹಿಂಸಾಚಾರ ಮತ್ತು ಭ್ರಷ್ಟಾಚಾರ ಮುಂತಾದ ದೀರ್ಘಕಾಲದ ಸಮಸ್ಯೆಗಳು ಬೇರೂರಿದೆ. ಇವುಗಳನ್ನು ಶಾಶ್ವತವಾಗಿ ತೊಡೆದು ಹಾಕಲು ಸಾವಿನ ಕುರಿತಾದ ಅನುಭವ ನೆರವಾಗುತ್ತದೆ. ವ್ಯಕ್ತಿಗಳಿಗೆ ಸಾವಿನ ಬಗ್ಗೆ ಜಾಗೃತಿ ಇದ್ದರೆ ಮಾತ್ರ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದು ಬೌದ್ಧ ಧರ್ಮದಲ್ಲಿ ವಿವರಿಸಿದೆ ಎಂದು' ಕೆಫೆಯ ಪರಿಕಲ್ಪನೆ ಬಗ್ಗೆ ವಿವರಿಸುತ್ತಾರೆ ಅವರು.
Loading...

'ಹದಿಹರೆಯದವರು ಶವಪೆಟ್ಟಿಗೆಯನ್ನು ಪ್ರವೇಶಿಸಿದಾಗ ನಮ್ಮ ಸಿಬ್ಬಂದಿ ಶವಪೆಟ್ಟಿಗೆಯನ್ನು ಮುಚ್ಚುತ್ತಾರೆ. ಸಂಪೂರ್ಣ ಕತ್ತಲೆಯಿಂದ ಕೂಡಿದ ಸಣ್ಣ ಸ್ಥಳದಲ್ಲಿ ಕಾಲ ಕಳೆದಾಗ ಅವರು ತಮ್ಮನ್ನು ತಾವೇ ಅರಿತುಕೊಳ್ಳುತ್ತಾರೆ. ಇಂತಹ ಪ್ರಯತ್ನಗಳಿಂದ ಹರೆಯದವರಿಗೆ ಮರಣದ ಅರಿವು ಮೂಡುತ್ತದೆ. ಈ ಪ್ರಯತ್ನದಿಂದ ಅನಾಚಾರ-ವ್ಯಸನಗಳಿಂದ ಮುಕ್ತಿ ಹೊಂದಲು ಯುವ ಸಮೂಹವನ್ನು ಪ್ರೇರೇಪಿಸಲಿದೆ' ಎಂಬುದು ಕೆಫೆಯ ಮಾಲೀಕರ ನಂಬಿಕೆ.

ಈ ಕೆಫೆಯ ಬಗ್ಗೆ ಥಾಯ್ ಜನರಲ್ಲಿ ಕೂಡ ಭಿನ್ನಾಭಿಪ್ರಾಯವಿದೆಯಂತೆ. ಈ ವಿವಾದದ ಕುರಿತು ಕೆಲವರು ಸಾಮಾಜಿಕ ತಾಣಗಳಲ್ಲೂ ಚರ್ಚಿಸಿದ್ದಾರೆ. ಇಂತಹ ವಿವಾದಗಳನ್ನು ಸ್ವಾಗತಿಸುವುದಾಗಿ ಕೆಫೆ ಮಾಲೀಕರು ತಿಳಿಸಿದ್ದಾರೆ.
First published:April 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ