ವಿಶ್ವದ ಅತ್ಯಂತ ವಿಷಕಾರಿ ಹಾವೊಂದು(Poisonous Snake) ಇತ್ತೀಚೆಗೆ ಭಾರತದಿಂದ ಇಂಗ್ಲೆಂಡ್(India- England)ಗೆ ದೀರ್ಘ ಪ್ರಯಾಣ ಮಾಡಿತು. ಹೇಗೆ ಅಂತೀರಾ? ಹಡಗಿನ ಕಂಟೇನರ್(Container)ನಲ್ಲಿ ! ಹೌದು, ಭಾರತದಿಂದ ಇಂಗ್ಲೆಂಡ್(England)ಗೆ ತಲುಪಿದ ಹಡಗಿನ ಕಂಟೇನರ್‌ನಲ್ಲಿ ಗರಗಸ ಮಂಡಲ ಹಾವೊಂದು ಪತ್ತೆಯಾಯಿತು. ಅದನ್ನು ಹಿಡಿಯಲು ಬ್ರಿಟಿಷ್(British) ಪ್ರಾಣಿ ಆಸ್ಪತ್ರೆಯ ಸಿಬ್ಬಂದಿ ಕರೆಯಲಾಯಿತು. ಆದರೆ ಆಸ್ಪತ್ರೆಯ ಸಿಬ್ಬಂದಿ ಆ ಹಾವನ್ನು ಹಿಡಿಯಬೇಕಾದರೆ, ಅತ್ಯಂತ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಯಿತು. ಇಂಗ್ಲೆಂಡಿನ ಸೌತ್ ಎಸೆಕ್ಸ್ ವನ್ಯಜೀವಿ ಆಸ್ಪತ್ರೆ ಈ ಘಟನೆಯ ಕುರಿತು ಫೇಸ್‍ಬುಕ್ ಪೋಸ್ಟ್(Facebook post) ನಲ್ಲಿ ಮಾಹಿತಿ ನೀಡಿದೆ.
ಆಸ್ಪತ್ರೆಯ ಪ್ರಕಾರ, ಭಾರತದಿಂದ ಬಂದ ಹಡಗಿನಲ್ಲಿದ್ದ ಒಂದು ಕಂಟೇನರ್‌ನಲ್ಲಿ ಪತ್ತೆಯಾಗಿರುವ ಹಾವನ್ನು ಹಿಡಿಯಲು ಅವರಿಗೆ ಕರೆ ಬಂದಿತು. ಬಿಬಿಸಿ ವರದಿಯ ಪ್ರಕಾರ, ಕಲ್ಲುಗಳನ್ನು ಸಾಗಿಸುವ ಹಡಗಿನ ಕಂಟೇನರ್‌ನಲ್ಲಿದ್ದ ಹಾವನ್ನು ಕಲ್ಲು ಕೆಲಸಗಾರನೊಬ್ಬ ಪತ್ತೆಹಚ್ಚಿದ.
ಹಡಗಿನಲ್ಲಿ ರಹಸ್ಯವಾಗಿ ಬಂದ ಹಾವು
ಆಸ್ಪತ್ರೆಯು ಉರಗ ತಜ್ಞ ಮತ್ತು ಪಶು ವೈದ್ಯರನ್ನು ಒಳಗೊಂಡ ತಂಡವನ್ನು ಅಲ್ಲಿಗೆ ಕಳುಹಿಸಿತು. ಆ ತಂಡ ಹಾವನ್ನು ಕಂಡ ತಕ್ಷಣವೇ ಅದು, ಇಂಗ್ಲೆಂಡ್‍ನ ಸ್ಥಳೀಯ ಸರೀಸೃಪಗಳ ಪ್ರಭೇದಕ್ಕೆ ಸೇರಿರುವ ಹಾವಲ್ಲ ಎಂಬುದನ್ನು ಅರಿತುಕೊಂಡರು.
“ ಇಂದಿನ ಹಲವಾರು ಬ್ರಿಟಿಷ್ ವನ್ಯಜೀವಿ ಪ್ರಭೇದಗಳ ಜೊತೆಗೆ, ನಮಗೆ, ತನ್ನದಲ್ಲದ ದೇಶಕ್ಕೆ ಬಂದಿರುವ ಜೀವಿಯೊಂದರ ಬಗ್ಗೆಯೂ ಕರೆ ಬಂದಿತ್ತು” ಎಂದು ಫೇಸ್‍ಬುಕ್ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಆ ಹಾವು ವಿಶ್ವದ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದು ಎಂದು ತಂಡವು ಅರ್ಥ ಮಾಡಿಕೊಂಡಿದೆ. “
ಇದನ್ನೂ ಓದಿ:Viral Video: ಪೋಪ್ ಫ್ರಾನ್ಸಿಸ್ ಹಾಕಿದ್ದ ಟೋಪಿ ಕದಿಯಲು ಯತ್ನಿಸಿದ 10 ವರ್ಷದ ಹುಡುಗ; ವಿಡಿಯೋ ವೈರಲ್
ವಿಶ್ವದ ಅತ್ಯಂತ ವಿಷಕಾರಿ ಹಾವು
ಇದನ್ನು ಗರಗಸ ಮಂಡಲ ಎಂದು ಗುರುತಿಸಲಾಗಿದೆ ಮತ್ತು ಈ ಮೊದಲು ಒಂದನ್ನು ಹೊಂದಿದ್ದರಿಂದ , ಈ ಸರೀಸೃಪಗಳು ಎಷ್ಟು ಅಪಾಯಕಾರಿ ಎಂಬುದರ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ಅವು ಕೆಲವು ಅತ್ಯಂತ ಪ್ರಮುಖ ಮಾರಣಾಂತಿಕ ಹಾವುಗಳಲ್ಲಿ ಒಂದಾಗಿದೆ (ಇತರ ಎಲ್ಲಾ ಜಾತಿಗಳಿಗಿಂತ , ಇದು ಅಧಿಕ ಜನರನ್ನು ಕೊಂದಿದೆ ಎಂದು ನಂಬಲಾಗಿದೆ)” ಎಂದು ಆಸ್ಪತ್ರೆ ತಿಳಿಸಿದೆ.
ಹಾವನ್ನು ಸೆರೆ ಹಿಡಿಯುವ ಮುನ್ನ , ಇತರ ಅಧಿಕಾರಿಗಳನ್ನು ಕೂಡ ಸಂಪರ್ಕಿಸಲಾಗಿದೆ ಎಂಬುದನ್ನು ಪೋಸ್ಟ್‌ನಿಂದ ನಾವು ಅರ್ಥ ಮಾಡಿಕೊಳ್ಳಬಹುದು. ಹಾವನ್ನು ಸೆರೆ ಹಿಡಿದು , ಮಾನವ ಸಂಪರ್ಕದಿಂದ ದೂರ ಇರಿಸಲಾಗಿದೆ. “ಅದೀಗ , ಎಚ್ಚರಿಕೆಯ ಚಿಹ್ನೆಗಳನ್ನು ಹಾಕಲಾಗಿರುವ, ಸೀಲ್ ಮಾಡಲಾದ ಕೋಣೆಯೊಳಗೆ ಮುಚ್ಚಿದ ಬಾಕ್ಸ್‌ನೊಳಗಿದೆ. ನಮ್ಮ ಮ್ಯಾನೇಜರ್ ಸಂಪರ್ಕಿಸಿದ, ಸೂಕ್ತ ಸೌಲಭ್ಯವುಳ್ಳ ಸಂಗ್ರಹಕ್ಕೆ ಕಾಯುತ್ತಿದ್ದೇವೆ” ಎಂದು ಆಸ್ಪತ್ರೆ ತಿಳಿಸಿದೆ.
ಹಾವಿನ ಪ್ರಯಾಣದ ಕಥೆಯೇ ರೋಚಕ
ಸಾಮಾಜಿಕ ಮಾಧ್ಯಮದಲ್ಲಿ, ಆಸ್ಪತ್ರೆಯ ಸಿಬ್ಬಂದಿಯ ಶ್ರಮವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. “ಅತ್ಯುತ್ತಮ ತಂಡ, ರಕ್ಷಣೆಯ ಸಂದರ್ಭದಲ್ಲಿ ಅಡ್ರೆನಿಲ್ ಖಂಡಿತಾ ಚಾಲನೆಯಲ್ಲಿದ್ದಿರಬಹುದು. ಎಂತಹ ಸುಂದರ ಜೀವಿ” ಎಂದು ಒಬ್ಬರು ನೆಟ್ಟಿಗ ಬರೆದುಕೊಂಡಿದ್ದರೆ, ಇನ್ನೊಬ್ಬರು,” ನಾನು ಉರಗ ಪ್ರೇಮಿ ಅಲ್ಲದಿದ್ದರೂ, ಅದು ಸುರಕ್ಷಿತವಾಗಿದೆ ಮತ್ತು ಅಂತಹ ಸುದೀರ್ಘ ಪಯಣದ ನಂತರ ಮತ್ತೆ ಜೀವಿಸಲಿದೆ ಎಂಬುದನ್ನು ತಿಳಿದು ಖುಷಿ ಆಗಿದೆ. ಇಂತಹ ಕಾಳಜಿಯುಳ್ಳ ಜನರ ಗುಂಪಾಗಿರುವ ನಿಮಗೆ ಧನ್ಯವಾದಗಳು” ಎಂದು ಬರೆದಿದ್ದಾರೆ.
“ವಾವ್ , ಎಷ್ಟು ಸುಂದರವಾಗಿದೆ. ಓದುವ ಮುನ್ನ ಅದೊಂದು ಪ್ರೆಟ್ಜೆಲ್ ಎಂದುಕೊಂಡೆ” ಎಂದು ಮತ್ತೊಬ್ಬರು ಬರೆದಿದ್ದಾರೆ.
ನೆಟ್ಟಿಗರು ಬರೆದ ಕಾಮೆಂಟ್ಗಳೇನು?
ಇನ್ನೊಬ್ಬ ನೆಟ್ಟಿಗನಿಗೆ, ಆ ಹಾವಿನ ಸ್ಥಿತಿ ಮುಂದೆ ಏನಾಗಲಿದೆ ಎಂದು ಎಷ್ಟು ಕುತೂಹಲ ಎಂದರೆ, “ ಯಾವ ಆಯ್ಕೆಗಳಿವೆ? ಪ್ರಾಣಿ ಸಂಗ್ರಹಾಲಯ? ವಿಜ್ಞಾನ ಸೌಲಭ್ಯಗಳು ಅಥವಾ ನಾಶ? “ ಎಂದು ಪ್ರಶ್ನಿಸಿದ್ದಾರೆ. ಅವರ ಆ ಪ್ರಶ್ನೆಗಳಿಗೆ, “ ನಾವು ಯಾವುದೇ ಪ್ರಾಣಿಗೆ ಅತ್ಯುತ್ತಮ ಆರೈಕೆ ನೀಡದೆ ಮರು ವಸತಿ ಕಲ್ಪಿಸುವುದಿಲ್ಲ ಅಥವಾ ಅನಗತ್ಯವಾಗಿ ಸಾಯಿಸುವುದೂ ಇಲ್ಲ” ಎಂದು ಆಸ್ಪತ್ರೆ ಸಿಬ್ಬಂದಿ ಉತ್ತರಿಸಿದ್ದಾರೆ.
“ನೀವು ಮತ್ತು ನಿಮ್ಮ ಸೇವೆ ಅದ್ಭುತ. ಈ ಸುಂದರ ಜೀವಿ ಸುಂದರ ಬದುಕನ್ನು ಹೊಂದಲಿದೆ ಎಂದು ನಿರೀಕ್ಷಿಸುತ್ತೇನೆ (ಸುರಕ್ಷಿತ),” ಎಂದು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾಗಿದೆ.
ಒಮ್ಮೆ , ಮಹಾರಾಷ್ಟ್ರದಲ್ಲಿ ಎರಡು ತಲೆಯ ಹಾವೊಂದು ಜನರನ್ನು ಅಚ್ಚರಿಗೊಳಿಸಿತ್ತು. ಅನುವಂಶಿಕ ಅಸಂಗತತೆಯೇ ಅದರ ದೈಹಿಕ ರಚನೆಗೆ ಕಾರಣವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ