• Home
  • »
  • News
  • »
  • trend
  • »
  • Viral News: ಸತ್ತ ಕೀಟ ಮತ್ತೆ ಜೀವಂತ! ಈ ವಿಚಿತ್ರ ಸಂಗತಿಯ ಹಿಂದಿನ ಸತ್ಯ ಇಲ್ಲಿದೆ

Viral News: ಸತ್ತ ಕೀಟ ಮತ್ತೆ ಜೀವಂತ! ಈ ವಿಚಿತ್ರ ಸಂಗತಿಯ ಹಿಂದಿನ ಸತ್ಯ ಇಲ್ಲಿದೆ

ಪರಾವಲಂಬಿಯೊಂದು ಸತ್ತ ಕೀಟದಲ್ಲಿ ಹೊಕ್ಕಿ ಕೊಳೆಯುತ್ತಿರುವ ಆ ಕೀಟವನ್ನು ಪುನಃ ನಡೆದಾಡುವಂತೆ ಮಾಡಿದೆ.

ಪರಾವಲಂಬಿಯೊಂದು ಸತ್ತ ಕೀಟದಲ್ಲಿ ಹೊಕ್ಕಿ ಕೊಳೆಯುತ್ತಿರುವ ಆ ಕೀಟವನ್ನು ಪುನಃ ನಡೆದಾಡುವಂತೆ ಮಾಡಿದೆ.

ಪರಾವಲಂಬಿಯೊಂದು ಸತ್ತ ಕೀಟದಲ್ಲಿ ಹೊಕ್ಕಿ ಕೊಳೆಯುತ್ತಿರುವ ಆ ಕೀಟವನ್ನು ಪುನಃ ನಡೆದಾಡುವಂತೆ ಮಾಡಿದೆ.

  • Share this:

ಪ್ರಕೃತಿಯ ಬಗ್ಗೆ ನಾವು ಯೋಚಿಸಿದಾಗ ನಮ್ಮ ಕಣ್ಣಿಗೆ ಪ್ರತ್ಯಕ್ಷವಾಗುವುದು ಸುಂದರವಾದ ಪ್ರಾಣಿ (Animals) ಪಕ್ಷಿಗಳು, ದಟ್ಟವಾದ ಅರಣ್ಯ, ಅಗಾಧವಾದ ಸರೋವರಗಳು, ಸಸ್ಯಗಳು, ಸಸ್ಯ ಹಾಗೂ ಪ್ರಾಣಿ ಪ್ರಭೇದಗಳು ಹೀಗೆ ಅರಣ್ಯದಲ್ಲಿರುವ ಅತ್ಯಂತ ಅನೂಹ್ಯವಾದ ಪ್ರಪಂಚವೇ (World) ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಅರಣ್ಯ (Forest) ಕೂಡ ಕೆಲವೊಂದು ವಿಚಿತ್ರಗಳನ್ನು ತನ್ನೊಂದಿಗೆ ಮಿಳಿತಗೊಳಿಸಿದೆ ಹಾಗೂ ಅನೇಕ ಕೌತುಕಮಯವಾದ ವಿಸ್ಮಯಗಳಿಗೆ  (Wonder) ಸಾಕ್ಷಿಯಾಗಿದೆ.


ಸತ್ತ ಕೀಟವನ್ನು ಪುನಃ ನಡೆಯುವಂತೆ ಮಾಡಿದ ನರ ಪರಾವಲಂಬಿ


ನರ ಪರಾವಲಂಬಿಗಳು ಪ್ರಾಣಿಗಳ ಮೆದುಳನ್ನು ಗುಲಾಮರನ್ನಾಗಿಸಿ, ಅದರ ನಡವಳಿಕೆಯನ್ನು ನಿಯಂತ್ರಿಸುವುದು ಮತ್ತು ಅದನ್ನು ಜಡಭರಿತವಾಗಿ ಪರಿವರ್ತಿಸುವುದನ್ನು ನಮಗೆ ಚಿತ್ರಿಸಲಾಗುವುದಿಲ್ಲ. ಆದರೆ ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಕಂಡುಬಂದ ವಿಡಿಯೋವೊಂದರಲ್ಲಿ ನರ-ಪರಾವಲಂಬಿಯೊಂದು ಸತ್ತ ಕೀಟದಲ್ಲಿ ಹೊಕ್ಕಿ ಕೊಳೆಯುತ್ತಿರುವ ಆ ಕೀಟವನ್ನು ಪುನಃ ನಡೆದಾಡುವಂತೆ ಮಾಡಿದೆ.


ಸತ್ತ ಕೀಟದ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ ಮತ್ತೊಂದು ಪರಾವಲಂಬಿ


ಭಾರತೀಯ ಅರಣ್ಯ ಸೇವೆಯ ಉದ್ಯೋಗಿ ಡಾ. ಸಾಮ್ರಾಟ್ ಗೌಡ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಬಹುಪಾಲು ಆಂತರಿಕ ಅಂಗಗಳಿಲ್ಲದಿರುವ ಕೀಟವು ಸಾಮಾನ್ಯವಾಗಿ ಚಲಿಸುತ್ತಿರುವಂತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಸತ್ತ ಕೀಟದ ಶರೀರವನ್ನು ಹಿಡಿತಕ್ಕೆ ತಂದುಕೊಂಡ ನರ-ಪರಾವಲಂಬಿಯು ಅದನ್ನು ನಡೆದಾಡುವಂತೆ ಮಾಡಿದೆ ಎಂಬ ಶೀರ್ಷಿಕೆಯನ್ನು ಸಾಮ್ರಾಟ್ ನೀಡಿದ್ದಾರೆ.


ನ್ಯಾಷನಲ್ ಜಿಯಾಗ್ರಫಿಕ್ ಹೇಳುವಂತೆ, "ಕೆಲವು ಪರಾವಲಂಬಿಗಳು ತಮ್ಮ ಅತಿಥೇಯರನ್ನು (ಪರಾವಲಂಬಿ ವಾಸಿಸುವ ಪ್ರಾಣಿ ಅಥವಾ ಸಸ್ಯ) ಹೆಚ್ಚು ಕಡಿಮೆ ತಮಗೆ ಬೇಕಾದಂತೆಯೇ ಈ ಜೀವಿಗಳನ್ನು ನಡೆಸಿಕೊಳ್ಳುತ್ತವೆ. ಮನಸ್ಸಿನ ನಿಯಂತ್ರಣವನ್ನು ಹೊಂದಿರುವ ಈ ನಿಪುಣರು ತಮ್ಮ ಆತಿಥೇಯರನ್ನು ಆಂತರಿಕವಾಗಿ ತುಂಬಾ ಕುಶಲತೆಯಿಂದ ನಿರ್ವಹಿಸುತ್ತಾರೆ, ಅಂತಿಮವಾಗಿ ಇದು ಪರಾವಲಂಬಿಗೆ ಪ್ರಯೋಜನಕಾರಿಯಾದ ಸ್ವಯಂ-ವಿನಾಶಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಎಂದಾಗಿದೆ".


ಇದನ್ನೂ ಓದಿ: ಪ್ರೇಯಸಿಗೆ ವಿಮಾನದಲ್ಲಿ ಪ್ರಪೋಸ್ ಮಾಡಿದ ಪ್ರಿಯಕರ!


ಸಿನಿಮಾಗಳಲ್ಲಿ ಬರುವ ಝೋಂಬಿಗಳೂ ಕಾಲ್ಪನಿಕವೇ?


ಈ ವಿಡಿಯೋದಿಂದ ತಿಳಿದು ಬರುವ ಒಂದು ಅಂಶವೆಂದರೆ ಝೋಂಬಿಗಳು (ಮೃತದೇಹವನ್ನು ಜೀವಂತಗೊಳಿಸುವುದು) ನಿಜವಾಗಿವೆ ಹಾಗೂ ನಮ್ಮ ಪರಿಸರದ ಒಂದು ಭಾಗವಾಗಿದೆ. ಬರೇ ಕಥೆ, ಕಾದಂಬರಿ ಹಾಗೂ ಸಿನಿಮಾಗಳಲ್ಲಿ ಬರುವ ಕಾಲ್ಪನಿಕ ಕಥಾಪಾತ್ರವಲ್ಲ. ಮುಂದಿನ ಝೋಂಬಿ ಆಧಾರಿತ ಕಥಾನಕ ನಿಮ್ಮ ಮನಸ್ಸಿಗೆ ಬಂದಿತೆಂದರೆ ಅದನ್ನು ನಿಸರ್ಗದ ಆವಿಷ್ಕಾರ, ಭಯಾನಕತೆ ಹಾಗೂ ದಿಗ್ಭ್ರಮೆಗೊಳಿಸುವ ಪ್ರದರ್ಶನಕ್ಕಿಂತ ಬೇರೇನನ್ನು ಕಲ್ಪಿಸಬೇಡಿ ಎಂದು ಶೀರ್ಷಿಕೆ ತಿಳಿಸಿದೆ.


10 ಮಿಲಿಯನ್ ವೀಕ್ಷಣೆ ಪಡೆದುಕೊಂಡ ಇನ್ನೊಂದು ವಿಡಿಯೋ


ಝೋಂಬಿಗೆ ಸಂಬಂಧಿತ ಇನ್ನೊಂದು ವಿಡಿಯೋ ಟ್ವಿಟರ್‌ನಲ್ಲಿ 10 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೈರಲ್ ಆದ ವಿಡಿಯೋದಲ್ಲಿ ಕೂಡ ಜೀವಂತವಾಗಿರದೇ ಇರುವ ಕೀಟವು ನಡೆದಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಮನಸ್ಸಿನ ನಿಯಂತ್ರಣವನ್ನು ಪಡೆದುಕೊಳ್ಳುವ ಶಿಲೀಂಧ್ರಗಳು, ಕೀಟಗಳ ಮನಸ್ಸಿನ ನಿಯಂತ್ರಣವನ್ನು ಪಡೆದುಕೊಂಡು ಅವುಗಳ ಬೀಜಕಗಳನ್ನು ಹರಡಲು ಮತ್ತು ಬದುಕಲು ಹೆಚ್ಚಿನ ಕೀಟಗಳಿಗೆ ಸೋಂಕು ತಗುಲಿಸುವ ಸಲುವಾಗಿ ವಿಚಿತ್ರವಾದ ನಡವಳಿಕೆಗಳ ಊಹೆಗೆ ಕಾರಣವಾಗುತ್ತವೆ ಎಂದು ತಿಳಿಸಿದೆ.


ಇದನ್ನೂ ಓದಿ: ದೀಪಾವಳಿಗೆ ಹಿಂಗೆಲ್ಲಾ ಮನೆ ಕ್ಲೀನ್‌ ಮಾಡ್ತಾರಾ! ಸ್ವಲ್ಪ ಮಿಸ್‌ ಆದ್ರೂ ಕಥೆ ಅಷ್ಟೇ


ಅನುಭವ ಬಿಚ್ಚಿಟ್ಟ ಬಳಕೆದಾರರು


ಈ ವಿಡಿಯೋವನ್ನು ನೋಡಿದ ಟ್ವಿಟರ್ ಬಳಕೆದಾರರು ಪ್ರಕೃತಿಯ ಈ ಭಯಾನಕತೆಗೆ ಬೆಚ್ಚಿಬಿದ್ದಿದ್ದರೆ ಇನ್ನು ಕೆಲವರು ಕೌತುಕಕ್ಕೆ ಬೆರಗಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೀಟಗಳು ಎಲ್ಲಾ ಪ್ರಾಣಿಗಳಿಗಿಂತಲೂ ಅತಿಕಡಿಮೆ ಜೀವಿತಾವಧಿಯನ್ನು ಪಡೆದುಕೊಳ್ಳುತ್ತವೆ ಹಾಗೂ ಅತ್ಯಂತ ಹೀನಾಯ ಜೀವನವನ್ನು ಹೊಂದಿರುತ್ತವೆ.


ಏಕೆಂದರೆ ಅವು ಬದುಕಿರುವಷ್ಟು ಸಮಯ ಅಪಾಯ ಅವುಗಳನ್ನು ಸುತ್ತುತಲ್ಲೇ ಇರುತ್ತದೆ. ಕೀಟಗಳಲ್ಲಿ ಜಿರಳೆಗಳನ್ನು ನಾನು ಇಷ್ಟಪಡುವುದಿಲ್ಲ ಎಂದು ಬಳಕೆದಾರರೊಬ್ಬರು ಕೀಟಗಳ ಬಗ್ಗೆ ತಮಗಿರುವ ಅನುಭವವನ್ನು ಬರೆದುಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಬರುವ ಜೋಂಬಿ ಕಥೆಗಳಿಗೂ ಪ್ರಕೃತಿಯಲ್ಲಿ ನಡೆಯುತ್ತಿರುವ ಈ ವಿಚಿತ್ರಕ್ಕೂ ಸಾಮ್ಯತೆ ಇದೆ ಎಂದೇ ಹೆಚ್ಚಿನ ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು