David Warner: ರೌಡಿ ಬೇಬಿ ಹಾಡಿನೊಂದಿಗೆ ಮತ್ತೆ ಮರಳಿದ ಕ್ರಿಕೆಟಿಗ ಡೇವಿಡ್ ವಾರ್ನರ್: ವಿಡಿಯೋ ವೈರಲ್​

ದಕ್ಷಿಣ ಭಾರತದ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸುತ್ತಿದ್ದ ಡೇವಿಡ್​ ವಾರ್ನರ್​ ಅವರು ಬಹಳ ಒತ್ತಾಯದ ಮೇರೆಗೆ ಮತ್ತೆ ಮರಳಿದ್ದಾರೆ. ಅದರಲ್ಲೂ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡಿನ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.

ಡೇವಿಡ್​ ವಾರ್ನರ್​

ಡೇವಿಡ್​ ವಾರ್ನರ್​

  • Share this:
ಆಸ್ಟ್ರೇಲಿಯ ಮತ್ತು ಸನ್‍ರೈಸರ್ಸ್ ಹೈದರಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ತನ್ನ ಹಾಸ್ಯ ಪ್ರವೃತ್ತಿ ಮತ್ತು ಕೆಲವು ಅತ್ಯಂತ ಜನಪ್ರಿಯ ರೀಫೇಸ್ಡ್‌ ವಿಡಿಯೋಗಳ ಮೂಲಕ ತಮ್ಮ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ. ಈವರೆಗೆ ಹಲವು ವಿದೇಶಿ ಮತ್ತು ಭಾರತೀಯ ಸಿನಿಮಾಗಳ ರೀಫೇಸ್ಡ್‌ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಅವರು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಕಳೆದ ವರ್ಷ ಲಾಕ್​ಡೌನ್​ ಆದಾಗಲೂ ಸಾಕಷ್ಟು ಭಾರತೀಯ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನೆಟ್ಟಿಗರನ್ನು ರಂಜಿಸುವ ಮೂಲಕ ಸುದ್ದಿಯಲ್ಲಿದ್ದರು. ಕ್ರಿಕೆಟ್​ ಆಟದ ಜೊತೆಗೆ ತಮ್ಮ ಡ್ಯಾನ್ಸಿಂಗ್​ ವಿಡಿಯೋಗಳ ಮೂಲಕವೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.  ಅಲ್ಲದೆ ಆಗ ತಮ್ಮ ಪತ್ನಿ ಕ್ಯಾಂಡಿ ವಾರ್ನರ್​ ಅವರಿಂದ ಡ್ಯಾನ್ಸ್​ ಕಲಿಯುತ್ತಿರುವುದಾಗಿಯೂ ಒಂದು ಫನ್ನಿ ವಿಡಿಯೋ ಹಂಚಿಕೊಂಡಿದ್ದರು. ನಂತರ ಲಾಕ್​ಡೌನ್​ ತೆರವುಗೊಂಡಿತ್ತು. ಆಗ ಡೇವಿಡ್​ ವಾರ್ನರ್​ ಅವರ ಕೆಲವು ವಿಡಿಯೋ ಬರುವುದು ಕಡಿಮೆಯಾಯಿತು. 

ಡ್ಯಾನ್ಸಿಂಗ್​ ವಿಡಿಯೋಗಳ ಜತೆಗೆ ರೀಫೇಸ್ಡ್​ ವಿಡಿಯೋಗಳನ್ನು ಮಾಡುವ ವಾರ್ನರ್​ ಅವರು ಹಲ್ಕ್, ರಾನ್ ವೇಸ್ಲಿ, ಮಿಸ್ಟರ್ ಬೀನ್ , ಹೋಮ್ ಅಲೋನ್ ಸಿನಿಮಾದ ಪುಟ್ಟ ಹುಡುಗ ಸೇರಿದಂತೆ ಹಲವಾರು ಜನಪ್ರಿಯ ಪಾತ್ರಗಳ ರೀಫೇಸ್ಡ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರೀಫೇಸ್ಡ್‌ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವ ವಾರ್ನರ್​, ವಿದೇಶಿ ಮಾತ್ರವಲ್ಲ, ಭಾರತೀಯ ಸಿನಿಮಾಗಳ ರೀಫೇಸ್ಡ್‌ ವಿಡಿಯೋಗಳನ್ನು ಹಾಕುವುದರಲ್ಲೂ ಅವರಿಗೆ ವಿಶೇಷ ಆನಂದ. ಈವರೆಗೆ ಅವರು ಸುಲ್ತಾನ್, ಬಾಹುಬಲಿ, ಅಕ್ಬರ್ ಮತ್ತು ಗೋಲ್‍ಮಾಲ್ 3 ಸಿನಿಮಾದ ಜನಪ್ರಿಯ “ಉಂಗಲಿ” ದೃಶ್ಯದ ರೀಫೇಸ್ಡ್‌ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.ಮೇ 19ರಂದು, ವಾರ್ನರ್ ಅವರು ತಮಿಳು ನಟ ಧನುಷ್ ಅಭಿನಯದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡಿನ ರೀಫೇಸ್ಡ್‌ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರ ಸಂತೋಷಕ್ಕೆ ಕೊನೆಯೇ ಇರಲಿಲ್ಲ. ಆರು ಗಂಟೆಯ ಅವಧಿಯೊಳಗೆ 2 ಮಿಲಿಯನ್ ವೀಕ್ಷಣೆ ಕಂಡು, 14 ಸಾವಿರಕ್ಕಿಂತಲೂ ಕಮೆಂಟ್​ಗಳನ್ನು ಪಡೆದ ಆ ವಿಡಿಯೋ ಸಖತ್​ ವೈರಲ್‍ ಆಗಿತ್ತು.
ನೆಟ್ಟಿಗರು, ವಾರ್ನರ್ ಅವರಿಗೆ  ಡೇವಿಡ್ ಧನುಷ್, ರೌಡಿ ಬೇಬಿ ವಾರ್ನರ್, ತಲೈವಾ ಮುಂತಾದ ಬಿರುದುಗಳನ್ನು ಕೊಡುತ್ತಿದ್ದು, ಬಾಸ್ ಈಸ್ ಬ್ಯಾಕ್​ ಎಂದು ಸ್ವಾಗತಿಸಿದ್ದಾರೆ. ಭಾರತದಲ್ಲಿ ವಾರ್ನರ್ ಅವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಕಲ್ಪನೆಯ ಎಲ್ಲೆ ಮೀರುವಂತದ್ದು. ಇನ್ನು ತೆಲುಗು ಹಾಗೂ ತಮಿಳು ಹಾಡುಗಳಿಗೆ ಡೇವಿಡ್ ವಾರ್ನರ್​ ಸ್ಟೆಪ್​ ಹಾಕಿದ್ದು, ಅಲ್ಲು ಅರ್ಜುನ್​ ಅಭಿನಯದ ಅಲಾ ವೈಕುಂಠಪುರಂ ಲೋ ಸಿನಿಮಾದ ಬುಟ್ಟ ಬೊಮ್ಮಾ ಹಾಡಿನ ವಿಡಿಯೋ ಸಖತ್​ ವೈರಲ್​ ಆಗಿ, ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಕಿಚ್ಚ ಸುದೀಪ್​

ಕೆಲವು ಪ್ರತಿಕ್ರಿಯೆಗಳಲ್ಲಿ , ಸಲಹೆಗಳು ಇಂತಿವೆ, ನೀವೇಕೆ ಟಾಲಿವುಡ್ ಸಿನಿಮಾಗಳಲ್ಲಿ ನಟಿಸಬಾರದು? ಹಾಗೇನಾದರು ಮಾಡಿದಲ್ಲಿ, ನೀವು ತೆಲುಗು ರಾಜ್ಯಗಳಲ್ಲಿ ದೊಡ್ಡ ಸೆನ್ಸೇಶನಲ್ ಆಗಿಬಿಡುತ್ತೀರಿ..! ಥಿಯೇಟರ್‌ಗಳು ನಿಮಗಾಗಿ ಕಾಯುತ್ತಿವೆ ಮತ್ತು ನಾಯಕಿಯ ಜಾಗದಲ್ಲಿ ಕ್ಯಾಂಡಿ ವಾರ್ನರ್ ಚಿತ್ರವನ್ನು ಎಡಿಟ್ ಮಾಡಿ ಹಾಕಬೇಕಿತ್ತು ಎಂದೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ: ಕೊರೋನಾ ಆದಷ್ಟು ಬೇಗ ಹೋಗಲಿ ಎಂದು ಕಾಯುತ್ತಿರುವ ಕ್ಯೂಟ್​ ರಶ್ಮಿಕಾ ಮಂದಣ್ಣ

ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ ಕಾರಣ, 14ನೇ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯ ಮುಂದೂಡಲ್ಪಟ್ಟದ್ದರಿಂದ, ಮಾಲ್ಡೀವ್ಸ್​ನಲ್ಲಿ 14 ದಿನಗಳ ಕ್ವಾರೈಂಟನ್ ಮುಗಿಸಿ, ಡೇವಿಡ್ ವಾರ್ನರ್ ಮತ್ತು ಇತರ ಆಸ್ಟ್ರೇಲಿಯ ಕ್ರಿಕೆಟಿಗರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಮುಂದಿನ ದಿನಗಳಲ್ಲೂ ವಾರ್ನರ್ ಇದೇ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ, ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ ಎಂಬ ನಿರೀಕ್ಷೆ ನಮ್ಮದು.
Published by:Anitha E
First published: