• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral News: ಹೆತ್ತವರ ವಿರುದ್ಧವೇ ಕೋರ್ಟ್ ಮೊರೆ ಹೋದ ಮಗಳು; ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

Viral News: ಹೆತ್ತವರ ವಿರುದ್ಧವೇ ಕೋರ್ಟ್ ಮೊರೆ ಹೋದ ಮಗಳು; ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ನನ್ನ ಇಡೀ ಕುಟುಂಬ ನನ್ನ ವಿರುದ್ಧವಾಗಿದೆ. ಆದ್ದರಿಂದಲೇ ನನ್ನ ಖಾಸಗಿ ಕುಟುಂಬದ ವಿಷಯವನ್ನು ಈ ರೀತಿಯಾಗಿ ರೆಡ್ಡಿಟ್ ನಲ್ಲಿ ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಮಹಿಳೆ ಹೇಳಿದ್ದಾರೆ.

 • Share this:

ಸಾಮಾನ್ಯವಾಗಿ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ (Children), ಹೆತ್ತವರು (Parents) ಅವರಿಬ್ಬರ ಶಿಕ್ಷಣಕ್ಕೆ (Education) ಮತ್ತು ಮದುವೆಗೆ (Marriage) ಅಂತ ದುಡ್ಡನ್ನು ಕೂಡಿಡುತ್ತಾರೆ. ಇಬ್ಬರಿಗೂ ಸಮಾನವಾಗಿ ಖರ್ಚು ಮಾಡಬೇಕು ಮತ್ತು ಇಬ್ಬರು ಮಕ್ಕಳಲ್ಲಿ ಯಾರೊಬ್ಬರಿಗೂ ತಾರತಮ್ಯವಾಗಬಾರದು ಅಂತ ಈ ರೀತಿಯಾಗಿ ಇಬ್ಬರ ಸಲುವಾಗಿಯೂ ಪೋಷಕರು ಹಣವನ್ನು ಉಳಿತಾಯ (Money Saving) ಮಾಡಿರುತ್ತಾರೆ. ಹೀಗೆ ನೀವೂ ಕೂಡ ಎರಡು ಮಕ್ಕಳ ಪೋಷಕರಾಗಿದ್ದರೆ, ಅವರಿಗೆ ಅಂತಾ ಮೀಸಲಿದ್ದ ಹಣವನ್ನು ಅವರ ಸಲುವಾಗಿಯೇ ಖರ್ಚು ಮಾಡಿ. ಇಲ್ಲದಿದ್ದರೇ ನಿಮ್ಮ ಮೇಲೂ ಈ ಕೆಳಗಿನ ಘಟನೆಯಲ್ಲಿ ಆದ ಹಾಗೆ ಕೇಸ್‌ ಬೀಳಬಹುದು.


ಹೆತ್ತವರ ಮೇಲೆ ಕೇಸ್ ಹಾಕಿದ ಮಗಳು


ಈ ಘಟನೆಯ ಬಗ್ಗೆ ನೀವು ಕೇಳಿದರೆ, ಮಕ್ಕಳು ಈಗ ತಮ್ಮ ವಿದ್ಯಾಭ್ಯಾಸದ ಬಗ್ಗೆ ಎಷ್ಟರ ಮಟ್ಟಿಗೆ ಸೀರಿಯಸ್ ಆಗಿದ್ದಾರೆ ಅಂತ ತಿಳಿಯುತ್ತದೆ ಮತ್ತು ಅಷ್ಟೇ ಅಲ್ಲದೆ ಅವರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಜಾಗರೂಕರಾಗಿದ್ದಾರೆ ಅಂತ ಗೊತ್ತಾಗುತ್ತದೆ.


ತನ್ನ ಕಾಲೇಜು ಶಿಕ್ಷಣಕ್ಕಾಗಿ ಕೂಡಿಟ್ಟಂತಹ ಹಣವನ್ನು ಹೆತ್ತವರು ಮಗನ ಮದುವೆಗೆ ಬಳಸಿದ್ದಕ್ಕಾಗಿ ತನ್ನ ಹೆತ್ತವರ ವಿರುದ್ಧವೇ ಮೊಕದ್ದಮೆ ಹೂಡಿದ್ದೇನೆ ಎಂದು ಒಬ್ಬ ಮಹಿಳೆ ರಾಜಾರೋಷವಾಗಿ ಹೇಳಿಕೊಂಡಿದ್ದಾರೆ ನೋಡಿ. ಈ ಘಟನೆಯ ಬಗ್ಗೆ ಈ ಮಹಿಳೆ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದಾರೆ.


ಇದು ಅತ್ತೆ ಕೊಟ್ಟ ದುಡ್ಡು, ಹೆತ್ತವರು ಕೂಡಿಟ್ಟಿದ್ದಲ್ಲ


ರೆಡ್ಡಿಟ್ ಬಳಕೆದಾರರಾದ @Accomplished_Bar5656 ತಮ್ಮ ಅತ್ತೆ ತಮ್ಮ ಕುಟುಂಬದ ಎಲ್ಲಾ ಮಹಿಳೆಯರಿಗಾಗಿ ಉಳಿತಾಯ ಖಾತೆಯನ್ನು ತೆರೆದಿದ್ದರು ಎಂದು ತಿಳಿಸಿದ್ದಾರೆ.


"ನನ್ನ ಅತ್ತೆ ಬ್ರಿಟಿಷ್ ವ್ಯಕ್ತಿಯನ್ನು ಮದುವೆಯಾಗಿ ಅಮೆರಿಕಕ್ಕೆ ಹೋದರು ಮತ್ತು ಅಲ್ಲಿ ಅವರು ಉತ್ತಮವಾದ ಐಷಾರಾಮಿ ಜೀವನವನ್ನು ಹೊಂದಿದ್ದರು. ಅವರು ತನ್ನ ಅನೇಕ ಸೊಸೆಯಂದಿರು ಮತ್ತು ಮೊಮ್ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದಷ್ಟು ಧನಸಹಾಯ ಮಾಡಿದರು. ಅವರು ತೀರಿಕೊಂಡಾಗ, ತನ್ನಿಂದ ಸಾಧ್ಯವಿರುವ ಪ್ರತಿಯೊಬ್ಬ ಹುಡುಗಿಯ ಸಂಬಂಧಿಕರ ಖಾತೆಯಲ್ಲಿ ಹಣವನ್ನು ಜಮೆ ಮಾಡಿಸಿದ್ದರು" ಎಂದು ಹೇಳಿದರು.


ಇದಲ್ಲದೆ,  ಅವರು ಪೋಷಕರು ಆ ಕೂಡಿಟ್ಟಂತಹ ದುಡ್ಡನ್ನು ತೆಗೆದುಕೊಂಡು ಅವರು ಆ ಹಣವನ್ನು ತಮ್ಮ ಮಗನ ಮದುವೆಗೆ ಬಳಸಿದ್ದಾರೆ ಎಂದು ರೆಡ್ಡಿಟ್ ಬಳಕೆದಾರರು ಹೇಳಿದ್ದಾರೆ. ಈಗ ಇದನ್ನು ಅರಿತ ಮಹಿಳೆ ತನ್ನ ಹೆತ್ತವರ ವಿರುದ್ಧವೇ ಮೊಕದ್ದಮೆ ಹೂಡಿದ್ದಾಳೆ.


ಇದನ್ನೂ ಓದಿ: Parole: ಪ್ರೀತಿಸಿದವಳ ಕೈ ಹಿಡಿಯಲು ಪೆರೋಲ್ ಪಡೆದ ಕೈದಿ! ಜೈಲಿಂದ ಹೊರಬಂದ ಬಳಿಕ ಮದುವೆ!


ಮಗನ ಮದುವೆಗೆ ಹಣವನ್ನು ಖರ್ಚು ಮಾಡಿದ್ರಂತೆ ಪೋಷಕರು


ನಾನು ಅದರ ಬಗ್ಗೆ ನನ್ನ ಹೆತ್ತವರನ್ನು ಕೇಳಿದರೆ, ಅವರಿಗೆ ಹಣ ಕೂಡಲೇ ಬೇಕಾಗಿದ್ದರಿಂದ ಈ ಹಣವನ್ನು ಬಳಸಿದ್ದೇವೆ ಅಂತ ಅವರು ಹೇಳಿದರು ಎಂದು ಮಗಳು ಹೇಳಿದಳು. ಆದರೆ ಅಂತಿಮವಾಗಿ ನನ್ನ ಹೆತ್ತವರು ಆ ಹಣವನ್ನು ಎಲ್ಲಿ ಖರ್ಚು ಮಾಡಿದ್ದಾರೆ ಅಂತ ನಾನು ಕಂಡುಕೊಂಡೆ.


ಆಗ ನನಗೆ ಗೊತ್ತಾಯಿತು ಇವರು ಮಗನ ಮದುವೆಗೆ ಖರ್ಚು ಮಾಡಿದ್ದಾರೆ ಅಂತ. ಅದನ್ನು ಕೇಳಿದ ನನಗೆ ತುಂಬಾನೇ ಕೋಪ ಬಂತು. ನಾನು ಈಗ ವಿದ್ಯಾರ್ಥಿ ಸಾಲವನ್ನು ಪಡೆದುಕೊಂಡು ಓದುತ್ತಿದ್ದೇನೆ. ನನಗೆ ಉಳಿದಿರುವ ಹಣಕ್ಕಾಗಿ ನಾನು ಪ್ರಸ್ತುತ ಅವರ ವಿರುದ್ಧ ಮೊಕದ್ದಮೆ ಹೂಡುತ್ತಿದ್ದೇನೆ.
ನನ್ನ ಇಡೀ ಕುಟುಂಬ ನನ್ನ ವಿರುದ್ಧವಾಗಿದೆ. ಆದ್ದರಿಂದಲೇ ನನ್ನ ಖಾಸಗಿ ಕುಟುಂಬದ ವಿಷಯವನ್ನು ಈ ರೀತಿಯಾಗಿ ರೆಡ್ಡಿಟ್ ನಲ್ಲಿ ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಮಹಿಳೆ ಹೇಳಿದ್ದಾರೆ.


ಹಣದ ಬಗ್ಗೆ ನೆಟ್ಟಿಗರು ಹೇಳಿದ್ದೇನು?


ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು "ನಿನ್ನ ಹೆತ್ತವರು ನಿನ್ನಿಂದ ಹಣವನ್ನು ಕದಿಯುವ ಮೂಲಕ ತಮಗೆ ತಾವೇ ಅಪಮಾನವನ್ನುಂಟು ಮಾಡಿಕೊಂಡಿದ್ದಾರೆ” ಎಂದು ಹೇಳಿದರು.


ಇದನ್ನೂ ಓದಿ: Boyfriend: 22 ವರ್ಷದ ಈ ಸುಂದರಿಗೆ ಬಾಯ್​ಫ್ರೆಂಡ್ ಬೇಕಂತೆ, ಹುಡುಗರೇ ರೆಡಿಯಾಗಿ!

top videos


  ಇನ್ನೊಬ್ಬರು "ಅವರು ಈ ಕೆಲಸದಿಂದ ಮುಜುಗರಕ್ಕೊಳಗಾಗಿದ್ದಾರೆ ಮತ್ತು ಅವರು ಈಗ ತಕ್ಕ ಪರಿಣಾಮವನ್ನು ಎದುರಿಸಬೇಕಾಗಿದೆ. ನಿಮ್ಮ ಹಣವನ್ನು ನೀವು ಮರಳಿ ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. ಈ ಪೋಸ್ಟ್  37,000 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

  First published: