Viral Photo: ತಂದೆಯಿಂದ ಮಗಳಿಗೆ ಹೃದಯಸ್ಪರ್ಶಿ ನೋಟ್; ಪತ್ರ ನೋಡಿ ನೆಟ್ಟಿಗರೇ ಭಾವುಕರಾದ್ರು!

ಇಲ್ಲಿ ಹೊಸದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಪೋಸ್ಟ್ ವೊಂದು ನಿಮ್ಮನ್ನು ಭಾವನಾತ್ಮಕಗೊಳಿಸದೆ ಇರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ತಂದೆ ತೀರಿಕೊಂಡ ಒಂಬತ್ತು ವರ್ಷಗಳ ನಂತರ ಅವರಿಂದ ಬರೆಯಲ್ಪಟ್ಟ ಒಂದು ಹೃದಯಸ್ಪರ್ಶಿ ನೋಟ್ ಅನ್ನು ಕಂಡುಕೊಂಡ ಮಹಿಳೆಯೊಬ್ಬಳು ಅದನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾಳೆ.

ತಂದೆಯಿಂದ ಮಗಳಿಗೆ ಹೃದಯಸ್ಪರ್ಶಿ ನೋಟ್

ತಂದೆಯಿಂದ ಮಗಳಿಗೆ ಹೃದಯಸ್ಪರ್ಶಿ ನೋಟ್

  • Share this:
ಜೀವನದಲ್ಲಿ ಒಬ್ಬ ವ್ಯಕ್ತಿಗೆ ತುಂಬಾ ನೋವು (Pain) ನೀಡುವ ಒಂದು ಸಂಗತಿ ಎಂದರೆ ಅವರನ್ನು ಪ್ರೀತಿಸುವ (Love) ಜೀವ ಅವರನ್ನು ಅಗಲಿದ ಸಮಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ನಮ್ಮನ್ನು ನಮ್ಮ ಹೆತ್ತವರಿಗಿಂತ (Parents) ಹೆಚ್ಚು ಇಷ್ಟಪಡುವ ಮತ್ತು ಪ್ರೀತಿಸುವವರು ಯಾರು ಇರುತ್ತಾರೆ ಹೇಳಿ? ಇದ್ದರೂ ಎಲ್ಲರೂ ಪೋಷಕರ ನಂತರವೇ ಎಂದು ಹೇಳಬಹುದು. ಪೋಷಕರು ನಮ್ಮನ್ನು ಅಗಲಿ ಕೆಲವು ವರ್ಷಗಳಾದ ನಂತರ ಮನೆಯಲ್ಲಿ (Home) ಅವರಿಗೆ ಸಂಬಂಧಪಟ್ಟ ಯಾವುದೇ ಒಂದು ವಸ್ತು ಕಣ್ಣಿಗೆ ಬಿದ್ದರೂ ಸಾಕು, ನಮ್ಮ ಮನದಾಳದಲ್ಲಿ ಇನ್ನೆನ್ನು ಮಾಸಲು ತಯಾರಾದ ಹೆತ್ತವರ ನೆನಪು (Memory) ಮತ್ತೆ ಪುಟಿದ್ದೆದ್ದು ಬರುತ್ತದೆ. ಆ ನೆನಪು ನಮಗೆ ಗೊತ್ತಿರದಂತೆ ನಮ್ಮ ಕಣ್ಣಿನಲ್ಲಿ ನೀರು ತರಿಸಿರುತ್ತದೆ. 

ತಂದೆ ಬರೆದ ಭಾವನಾತ್ಮಕ ಪತ್ರ ಪೋಸ್ಟ್
ಇಲ್ಲಿ ಹೊಸದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಪೋಸ್ಟ್ ವೊಂದು ನಿಮ್ಮನ್ನು ಭಾವನಾತ್ಮಕಗೊಳಿಸದೆ ಇರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ತಂದೆ ತೀರಿಕೊಂಡ ಒಂಬತ್ತು ವರ್ಷಗಳ ನಂತರ ಅವರಿಂದ ಬರೆಯಲ್ಪಟ್ಟ ಒಂದು ಹೃದಯಸ್ಪರ್ಶಿ ನೋಟ್ ಅನ್ನು ಕಂಡುಕೊಂಡ ಮಹಿಳೆಯೊಬ್ಬಳು ಅದನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾಳೆ.

ಅವರು ಬರೆದ ಪತ್ರದಲ್ಲಿ ಏನಿತ್ತು?
ಯುನೈಟೆಡ್ ಸ್ಟೇಟ್ಸ್ ನ ಲೂಯಿಸ್ವಿಲ್ಲೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಆಮಿ ಕ್ಲೂಕಿ, ತನ್ನ ದಿವಂಗತ ತಂದೆಯ ಜೇನುಸಾಕಣೆ ಸಲಕರಣೆಗಳನ್ನು ಹುಡುಕುತ್ತಿದ್ದಾಗ ಆ ಒಂದು ಪತ್ರ ಸಿಕ್ಕಿತು. ಜುಲೈ 27, 2012 ರಂದು ಬರೆದ ಈ ನೋಟ್ ನಿಜವಾಗಿಯೂ ನನ್ನ ಮಕ್ಕಳಲ್ಲಿ ಜೇನು ಸಾಕಣೆಯ ಬಗ್ಗೆ ಆಸಕ್ತಿಯನ್ನು ಕೆರಳಿಸಲು ಸಹಾಯ ಮಾಡಬಹುದು ಎಂದು ಬರೆದಿತ್ತು.

ಇದನ್ನೂ ಓದಿ: Sanna Marin: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವಿಡಿಯೋ ವೈರಲ್, ಡ್ರಗ್ಸ್ ಟೆಸ್ಟ್​ಗೆ ಒತ್ತಾಯ!

ಆ ನೋಟ್ ನಲ್ಲಿ "ಜೇನುಸಾಕಣೆಯ ಬಗ್ಗೆ ಕುತೂಹಲ ಹೊಂದಿರುವ ನನ್ನ ಮಕ್ಕಳಲ್ಲಿ ಒಬ್ಬರು ಈ ನೋಟ್ ಅನ್ನು ಕಂಡು ಹಿಡಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಜೇನು ಸಾಕಣೆ ನಿಜವಾಗಿಯೂ ತುಂಬಾ ಸುಲಭ ಮತ್ತು ನೀವು ಆನ್ಲೈನ್ ನಲ್ಲಿ ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು ಕಲಿಯಬಹುದು. ಜೇನುನೊಣಗಳು ಜೇನುತುಪ್ಪಕ್ಕಿಂತ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತವೆ ಮತ್ತು ಇದು ಹವ್ಯಾಸವಾಗಿ, ಹೆಚ್ಚುವರಿ ಆದಾಯದ ಮೂಲ ಸಹ ಆಗಬಹುದು. ಆದ್ದರಿಂದ ಭಯ ಪಡಬೇಡಿ, ಧೈರ್ಯದಿಂದಿರಿ.. ಗುಡ್ ಲಕ್" ಮತ್ತು ಅವರು ನೋಟ್ ನ ಕೊನೆಯಲ್ಲಿ "ಪ್ರೀತಿಯಿಂದ ನಿಮ್ಮ ಅಪ್ಪ" ಅಂತ ಸಹ ಅದರಲ್ಲಿ ಬರೆದಿತ್ತು.ಈ ನೋಟ್ ಅನ್ನು ಮಿಸ್ ಕ್ಲೂಕಿ ಮಂಗಳವಾರ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು "ನನ್ನ ತಂದೆ ಬರೆದ ನೋಟ್ ಅವರ ಸಾವಿನ ಒಂಬತ್ತು ವರ್ಷಗಳ ನಂತರ ಜೇನುನೊಣಗಳನ್ನು ಸಾಕುವ ಉಪಕರಣಗಳಲ್ಲಿ ಕಂಡುಬಂದಿದೆ. ಆದರೆ ಇವತ್ತು ನಮ್ಮೊಂದಿಗೆ ಅವರಿಲ್ಲ" ಎಂದು ಶೀರ್ಷಿಕೆಯಲ್ಲಿ ಮಗಳು ಬರೆದಿದ್ದಳು.

ಹೃದಯಸ್ಪರ್ಶಿ ಪತ್ರ ಟ್ವಿಟ್ಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ 
ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗಿನಿಂದಲೂ 7.3 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. 41,000ಕ್ಕೂ ಹೆಚ್ಚು ಬಳಕೆದಾರರು ಈ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ.

ತಂದೆಯೊಂದಿಗಿನ ಫೋಟೋ ಕೂಡ ಹಂಚಿಕೊಂಡ ಯುವತಿ
ನಂತರ, ಅದೇ ಟ್ವೀಟ್ ನ ಥ್ರೆಡ್ ನಲ್ಲಿ ಅವಳು ತನ್ನ ತಂದೆಯೊಂದಿಗೆ ಮೋಟಾರು ಬೈಕ್ ನಲ್ಲಿ ಕುಳಿತಿರುವ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದಾಳೆ. "ಈ ಪೋಸ್ಟ್ ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಆದರೆ ನನ್ನ ತಂದೆ ಇದ್ದರೆ ಇದನ್ನು ಮೆಚ್ಚುತ್ತಿದ್ದರು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.ಇದನ್ನೂ ಓದಿ:  Viral Video: ಪುಟ್ಟ ಮಗನಲ್ಲಿ ರೆಸ್ಟೋರೆಂಟ್​ನ ಬಿಲ್ ಪಾವತಿಸುವಂತೆ ಹೇಳಿದ ತಂದೆ! ನಗು ತರಿಸುವಂತಹ ಉತ್ತರ ನೀಡಿದ ಮಗ

ಪೋಸ್ಟ್ ಪ್ರಕಾರ, ಅವಳ ತಂದೆಯ ಹೆಸರು ರಿಕ್ ಕ್ಲೂಕಿ. ಅವರು 2013 ರಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ಆರು ಮಕ್ಕಳಿದ್ದಾರೆ, ಆಮಿ ಕ್ಲೂಕಿ ಹಿರಿಯವಳು. "ಓ ದೇವರೇ ಈ ಪೋಸ್ಟ್ ನೋಡಿ ನನ್ನ ಕಣ್ಣಲ್ಲಿ ನೀರು ಬಂತು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: