ನಾವು ಚಿಕ್ಕವರಾಗಿದ್ದಾಗ (Childhood) ಮನೆಯಲ್ಲಿ ಸರಿಯಾಗಿ ಓದುವುದಿಲ್ಲ ಮತ್ತು ತುಂಟಾಟ ಜಾಸ್ತಿ ಅಂತ ನಮ್ಮ ಪೋಷಕರು (Parents) ನಮ್ಮನ್ನು ಸ್ವಲ್ಪ ಓದಿನ (Study) ಕಡೆ ಗಮನ ಕೊಡಲಿ ಮತ್ತು ಸ್ವಲ್ಪ ತುಂಟಾಟ ಕಡಿಮೆ ಮಾಡಿಕೊಂಡು ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತನ್ನು ಅಳವಡಿಸಿಕೊಳ್ಳಲಿ ಅಂತ ಒಂದೆರಡು ವರ್ಷಗಳ ಮಟ್ಟಿಗಾದರೂ ಈ ಹಾಸ್ಟೆಲ್ ಗಳಿಗೆ (Hostel) ನಮ್ಮನ್ನು ಕಳುಹಿಸಿರುತ್ತಾರೆ. ಈ ಹಾಸ್ಟೆಲ್ ಜೀವನ (Hostel Life) ಮನೆಯ ಜೀವನಕ್ಕಿಂತ ತುಂಬಾನೇ ವಿಭಿನ್ನವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹಾಸ್ಟೆಲ್ನಲ್ಲಿ ಮನೆಯಲ್ಲಿ ಸಿಗುವ ರೀತಿಯಲ್ಲಿ ಸ್ವಾದಿಷ್ಟಕರವಾದ ಅಮ್ಮ ಮಾಡಿದ ಅಡುಗೆ ಸಿಗುವುದಿಲ್ಲ. ಇನ್ನೂ ಮನೆಯಲ್ಲಿ ಅಮ್ಮ ಅಪ್ಪ ಶಾಲೆಗೆ ಹೋಗಲು ತಯಾರು ಮಾಡಿ ಕಳುಹಿಸಿದ ಹಾಗೆ ಹಾಸ್ಟೆಲ್ನಲ್ಲಿ ನಿಮಗೆ ಯಾರು ಸಹಾಯ ಮಾಡುವುದಿಲ್ಲ. ಅಲ್ಲಿ ಎಲ್ಲವನ್ನೂ ನೀವೇ ಮಾಡಿಕೊಳ್ಳಬೇಕಾಗುತ್ತದೆ.
ಆದ್ದರಿಂದಲೇ ಮಕ್ಕಳಿಗೆ ಸ್ವಲ್ಪ ಶಿಸ್ತು ಬರಲಿ ಅಂತ ಪೋಷಕರು ಹಾಸ್ಟೆಲ್ ಗೆ ಸೇರಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಮನೆಯಿಂದ ಹಾಸ್ಟೆಲ್ ಗೆ ಹೋದ ಮಕ್ಕಳು ಹೆಚ್ಚಾಗಿ ಈ ಆಹಾರದ ಬದಲಾವಣೆಗೆ ಸ್ವಲ್ಪ ಮಟ್ಟಿಗೆ ಹೆದರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದಕ್ಕೆ ಆಗೊಮ್ಮೆ ಈಗೊಮ್ಮೆ, ಹಾಸ್ಟೆಲ್ ವಿದ್ಯಾರ್ಥಿಗಳು ನೀರಸ ಮತ್ತು ಮೃದುವಾದ ಆಹಾರದಿಂದ ಬದಲಾವಣೆಯನ್ನು ಬಯಸುತ್ತಾರೆ.
ಆಗ ಕೆಲವು ಹುಡುಗ ಮತ್ತು ಹುಡುಗಿಯರು ಹಾಸ್ಟೆಲ್ನಿಂದ ತಮ್ಮನ್ನು ಹೊರಗೆ ಸುತ್ತಾಡಲು ಬಿಟ್ಟಾಗ ಹೊಟೇಲ್ಗಳಲ್ಲಿ ಹೋಗಿ ತಿಂಡಿ ತಿಂದು ಬರುವುದನ್ನು ನಾವು ನೋಡಿರುತ್ತೇವೆ.
ಅದರಲ್ಲೂ ಮನೆಗೆ ಬಂದರಂತೂ ಮುಗಿದೇ ಹೋಯ್ತು, ಅಮ್ಮ ನನಗೆ ಆ ತಿಂಡಿ ಮಾಡಿಕೊಡು, ಈ ತಿಂಡಿ ಮಾಡಿಕೊಡು ಅಂತ ಕೇಳಿ ಮಾಡಿಸಿಕೊಂಡು ಹೊಟ್ಟೆ ತುಂಬುವಷ್ಟು ತಿನ್ನುತ್ತಾರೆ ಅಂತ ಹೇಳಬಹುದು.
ಹಾಸ್ಟೆಲ್ ನಿಂದ ಮನೆಗೆ ಬಂದ ಮಗಳು ತನ್ನ ತಂದೆಗೆ ವಿನಂತಿಸಿಕೊಂಡಿದ್ದೇನು?
ಇಂತಹದೇ ಒಂದು ಹುಡುಗಿಯ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ನೆಟ್ಟಿಗರು ಸಹ ಅದನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ.
Daughter is coming home on 16th evening after 5 months. Hostel (and hers is a vaishnav one) really makes kids bhukkad-Bhikhari!
🤦🏽♂️🤦🏽♂️ pic.twitter.com/JOVRCYWX0Y
— Shwetank (@shwetankbhushan) December 11, 2022
ಇದನ್ನೂ ಓದಿ: Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!
ಆಕೆ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಐದು ತಿಂಗಳ ನಂತರ ಮನೆಗೆ ಮರಳುತ್ತಿದ್ದಾಳೆ. ಅವಳು ಬಂದ ದಿನದಂದು ಅವಳು ಏನು ತಿನ್ನಲು ಬಯಸುತ್ತಾಳೆ ಎಂಬುದರ ಸಂಪೂರ್ಣ ಮೆನುವನ್ನು ಶಿಕ್ಷಾ ತನ್ನ ತಂದೆಗೆ ಕಳುಹಿಸಿದ್ದಾಳೆ.
ಸ್ಟಾರ್ಟರ್ ಗಳಿಂದ ಹಿಡಿದು ಸಿಹಿ ತಿಂಡಿಯವರೆಗೆ, ಈ ಮೆನುವಿನಲ್ಲಿ ಎಲ್ಲವೂ ಇದೆ. ಅವಳ ಹಾಸ್ಟೆಲ್ನಲ್ಲಿ ಸಿಗುವಂತಹ ಸಸ್ಯಾಹಾರಿ ಆಹಾರವನ್ನು ಬಿಟ್ಟು ಮಾಂಸಾಹಾರಿ ಭಕ್ಷಗಳನ್ನೇ ಆಕೆ ತನ್ನ ಮೆನುವಿನಲ್ಲಿ ಬರೆದುಕೊಂಡಿದ್ದಾಳೆ.
ಪೋಸ್ಟ್ ನ ಶೀರ್ಷಿಕೆ ಹೇಗಿದೆ ನೋಡಿ
"ಮಗಳು 5 ತಿಂಗಳ ನಂತರ 16 ರಂದು ಸಂಜೆ ಮನೆಗೆ ಬರುತ್ತಾಳೆ. ಹಾಸ್ಟೆಲ್ ಗಳು ನಿಜವಾಗಿಯೂ ಮಕ್ಕಳನ್ನು ಆಹಾರಕ್ಕಾಗಿ ಪರಿತಪಿಸುವಂತೆ ಮಾಡುತ್ತದೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ 116 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನನ್ನ ಮಗಳು ಮದುವೆಯಾಗಿ 8 ವರ್ಷದ ಮಗನೊಂದಿಗೆ ತನ್ನದೇ ಆದ ಒಂದು ಒಳ್ಳೆಯ ಅಡಿಗೆಮನೆಯನ್ನು ನಡೆಸುತ್ತಿದ್ದರೂ ಸಹ ಆಕೆ ನನಗೆ ಇನ್ನೂ ಇಂತಹ ಉದ್ದನೆಯ ಲಿಸ್ಟ್ ಅನ್ನು ಕಳುಹಿಸುತ್ತಾಳೆ.
ಇದನ್ನೂ ಓದಿ: Viral Video: ಪ್ರಶ್ನೆ ಕೇಳಿದ್ದಕ್ಕೆ ಮಹಿಳೆಗೆ ಕಪಾಳಮೋಕ್ಷ ಮಾಡಿದ ಬ್ಯಾಂಕ್ ಉದ್ಯೋಗಿ!
ಈಗ ಅವಳ ಗಂಡನ ಮತ್ತು ಮಗುವಿನ ಇಚ್ಛೆಯ ಪಟ್ಟಿಯನ್ನು ಸಹ ಅವಳ ಸ್ವಂತಕ್ಕೆ ಸೇರಿಸಲಾಗಿದೆ" ಎಂದು ಹೇಳಿದರು.
It’s been a hilarious episode. But never enjoyed cooking more than this time.
All for you my sweetheart. pic.twitter.com/vvlGsPSUjl
— Shwetank (@shwetankbhushan) December 16, 2022
"ಹೀಗೆ ನಾನೊಬ್ಬನೇ ಮಾಡುವುದಿಲ್ಲ ಅಂತ ತಿಳಿದು ನನಗೆ ತುಂಬಾನೇ ಸಂತೋಷವಾಗಿದೆ" ಎಂದು ಮೂರನೇ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕ ಜನರು ಕಾಮೆಂಟ್ಸ್ ವಿಭಾಗದಲ್ಲಿ ನಗುವ ಮುಖದ ಎಮೋಜಿಗಳನ್ನು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ