• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Matrimony App: ಮ್ಯಾಟ್ರಿಮೊನಿಯಲ್ಲಿ ಸಿಕ್ಕ ವರನಿಗೆ ಜಾಬ್ ಆಫರ್ ಕೊಟ್ಟ ವಧು! ಸಿಟ್ಟಿಗೆ ಹುಡುಗಿಯ ತಂದೆ ಮಾಡಿದ್ದೇನು?

Matrimony App: ಮ್ಯಾಟ್ರಿಮೊನಿಯಲ್ಲಿ ಸಿಕ್ಕ ವರನಿಗೆ ಜಾಬ್ ಆಫರ್ ಕೊಟ್ಟ ವಧು! ಸಿಟ್ಟಿಗೆ ಹುಡುಗಿಯ ತಂದೆ ಮಾಡಿದ್ದೇನು?

ವೈರಲ್​ ಆದ ಹುಡುಗಿ

ವೈರಲ್​ ಆದ ಹುಡುಗಿ

ಮಗಳಿಗಾಗಿ ತಂದೆ ಮ್ಯಾಟ್ರಿಮೋನಿಯಲ್ಲಿ ಗಂಡು ನೋಡಿದ್ರು. ಕೊನೆಯಲ್ಲಿ ಫಾದರ್​ಗೆ ಕಾದಿತ್ತು ಬಿಗ್​ ಶಾಕ್​!

  • Share this:

ಇತ್ತೀಚಿಗಿನ ಕಾಲದಲ್ಲಿ ಮದುವೆ ಮಾಡೋದು, ಗಂಡು ಹೆಣ್ಣನ್ನು ಹುಡುಕೋದು ಅಂದ್ರೆ ದೊಡ್ಡ ಕೆಲಸ ಅಲ್ಲ ಬಿಡಿ. ಯಾಕಂದ್ರೆ ಮ್ಯಾಟ್ರೀಮೊನಿ ಅಂತಹ ಆ್ಯಪ್​ಗಳು ಇದೆ. ಇದ್ರಲ್ಲಿ ಪ್ರೊಫೈಲ್ (Profile)​ ಅಪ್ಡೇಟ್​ ಮಾಡಿದ್ರೆ ಸಾಕು ಕಾಲ್​ ಮೇಲೆ ಕಾಲ್​ಗಳು ಬರಲು ಆಗಮಿಸುತ್ತದೆ. ಒಂದು ಕಾಲದಲ್ಲಿ ಹುಡುಗ ಮತ್ತು ಹುಡುಗಿಯನ್ನು ಹುಡುಕೋದು ಅಂದ್ರೆ ಅಷ್ಟು ಈಸಿಯಾದ ಮಾತೇ ಆಗಿರಲ್ಲಿಲ್ಲ. ಬ್ರೋಕರ್​ಗಳು (Broker)ಮುಂದೆ ನಿಂತು ಎಲ್ಲಾ ಕೆಲಸಗಳನ್ನು ಮಾಡಿಸುತ್ತಾ ಇದ್ದರು. ಆದರೆ, ಇದು ನಿಜವಾಗಿಯೂ ಮುಂದುವರೆದ ಭಾಗ ಅಂತ ಹೇಳಬಹುದು. ಯಾಕಂದ್ರೆ ಇದೀಗ ಕೈಯಲ್ಲಿ ಇರುವಂತಹ ಮೊಬೈಲ್​ (Mobile) ನಿಂದಲೇ ಪ್ರತಿಯೊಂದನ್ನೂ ಅಳೆದು ತೂಗಬಹುದಾಗಿದೆ. ಅದುವೇ ಮ್ಯಾಟ್ರಿಮೋನಿ (Matrimony) ಆ್ಯಪ್​.


ಇದೀಗ ಇಂತಹದ್ದೇ ಒಂದು ಸುದ್ಧಿ ಸಖತ್​ ವೈರಲ್​ ಆಗ್ತಾ ಇದೆ. ಮಗಳು ಒಂದು ಒಳ್ಳೆಯ ಕಂಪನಿಯಲ್ಲಿ ಬಾಸ್​ ಆಗಿದ್ದಾಳೆ ಮತ್ತು ಮದುವೆಯ ವಯಸ್ಸಾಗಿದೆ ಎಂದು ತಂದೆ ಆಕೆಗೆ ಗಂಡು ಹುಡುಕಲು ಮ್ಯಾಟ್ರಿಮೊನಿಯಲ್ಲಿ ಗಂಡು ಹುಡುಕಲು ಆರಂಭಿಸುತ್ತಾರೆ. ಕೊನೆಗೆ ಆಗಿದ್ದೇ ಬೇರೆ.


ಮ್ಯಾಟ್ರಿಮೋನಿ ಆ್ಯಪ್​ನಲ್ಲಿ ಒಬ್ಬ ಓಕೆ ಆಗ್ತಾನೆ. ಅಂದ್ರೆ ಆತ ಮಾಡುತ್ತಿದ್ದ ವೃತ್ತಿ, ಮನೆತನ ಎಲ್ಲವೂ ತಂದೆಗೆ ಓಕೆ ಆಗಿ ಮಗಳಿಗೆ ಅವನ ಪ್ರೊಫೈಲ್​ನ್ನು ಕಳಿಸುತ್ತಾನೆ. ಆಗ ಮಗಳು ಏನು ಮಾಡ್ತಾಳೆ ಗೊತ್ತಾ?


ಯುವತಿಯ ಹೆಸರು ಉದಿತಾ ಪಾಲ್​. ಬೆಂಗಳೂರು ಮೂಲದ ಫಿನ್​​ಟೆಕ್​ ಕಂಪನಿಯೊಂದರ ಸಹ ಸಂಸ್ಥಾಪಕಿ. (ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣವರ್ಗಾವಣೆಯನ್ನು ಸುಗಮಗೊಳಿಸುವ ಕ್ಷೇತ್ರ.) ಈಕೆ ತನ್ನ ಅಪ್ಪ ಕಳಿಸಿದ ವ್ಯಕ್ತಿಯ ಉದ್ಯೋಗ ಅನುಭವ ನೋಡಿ, ಆತನನ್ನು ತನ್ನ ಕಂಪನಿಗೆ ನೇಮಕ ಮಾಡಿಕೊಳ್ಳಲು ಮುಂದಾದಳು.


ತಾನು ಮಾಡಿದ ಕೆಲಸ ಗೊತ್ತಾದ ಮೇಲೆ ತನ್ನ ತಂದೆ ಏನು ಮಾಡಿದರು ಎಂಬುದನ್ನೂ ಉದಿತಾ ಹೇಳಿಕೊಂಡಿದ್ದಾರೆ. ಅಪ್ಪ ವಾಟ್ಸ್​ಆ್ಯಪ್​​ನಲ್ಲಿ ಕಳಿಸಿದ ಮೆಸೇಜ್​​ಗಳ ಸ್ಕ್ರೀನ್​ಶಾಟ್​​ನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗಳು ಮಾಡಿದ ಕೆಲಸ ತಿಳಿದ ಅಪ್ಪ, ಆತಂಕದಿಂದಲೇ ಮೆಸೇಜ್​ ಮಾಡಿದ್ದಾರೆ. ‘ನಾನು ನಿನ್ನ ಬಳಿ ಮಾತನಾಡಬೇಕು-ಅರ್ಜೆಂಟ್​’ ಎಂದು ಮೊದಲ ಸಂದೇಶ ಕಳಿಸಿರುವ ಅವರು, ಬಳಿಕ ಸಾಲುಸಾಲು ಮೆಸೇಜ್ ಮಾಡಿದ್ದಾರೆ. ‘ಮ್ಯಾಟ್ರಿಮೋನಿ ಸೈಟ್​​ನಿಂದ ನೀನು ಉದ್ಯೋಗಕ್ಕೆ ಜನರನ್ನು ಹುಡುಕುವಂತಿಲ್ಲ, ನಾನೀಗ ಆ ಹುಡುಗನ ತಂದೆಗೆ ಏನು ಉತ್ತರ ಕೊಡಲಿ.


ಇದನ್ನೂ ಓದಿ: ರೈಲಿನ ಹಿಂದೆ X ಅಂತ ಸಿಂಬಲ್​ ಯಾಕೆ ಇರುತ್ತೆ? ಇಂಟ್ರೆಸ್ಟಿಂಗ್​ ಫ್ಯಾಕ್ಟ್​ ಇಲ್ಲಿದೆ


ನೀನು ಅವನಿಗೆ ಇಂಟರ್​ವ್ಯೂ ಲಿಂಕ್ ಕೊಟ್ಟಿದ್ದು ನನಗೆ ಗೊತ್ತಾಯಿತು’ ಎಂಬ ಸಂದೇಶಗಳನ್ನು ಮಗಳಿಗೆ ಕಳಿಸಿದ್ದಾರೆ. ಅದಕ್ಕೆ ಉದಿತಾ, ನಾನೇನು ಮಾಡಲಿ? ಆ ವ್ಯಕ್ತಿಗೆ ಫಿನ್​ಟೆಕ್​ ವಿಭಾಗದಲ್ಲಿ ಏಳುವರ್ಷ ಅನುಭವ ಇದೆ. ಹಾಗಾಗಿ ನಾವು ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.



ಉದಿತಾರ ಈ ಟ್ವೀಟ್​ ಸಿಕ್ಕಾಪಟೆ ವೈರಲ್ ಆಗುತ್ತಿದೆ. 8 ನೂರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ನೆಟ್ಟಿಗರಂತೂ ಇದು ಸಿಕ್ಕಾಪಟೆ ಕಾಮಿಡಿಯಾಗಿದೆ ಎಂದಿದ್ದಾರೆ. ಇದೆಲ್ಲದರ ಮಧ್ಯೆ ಅಪ್​ಡೇಟ್ ನ್ಯೂಸ್ ಕೊಟ್ಟಿರುವ ಉದಿತಾ, ನಾವು ಆ ವ್ಯಕ್ತಿಗೆ ಉದ್ಯೋಗ ಆಫರ್​ ಕೊಟ್ಟಿದ್ದೆವು. ಆದರೆ ಆತ ವರ್ಷಕ್ಕೆ 62 ಲಕ್ಷ ರೂ.ಪ್ಯಾಕೇಜ್​ ಬೇಡಿಕೆಯಿಟ್ಟ.




ನಮಗೆ ಅಷ್ಟು ಕೊಡಲು ಸಾಧ್ಯವೇ ಇಲ್ಲ. ಇದೆಲ್ಲದರ ಮಧ್ಯೆ ನನ್ನ ಅಪ್ಪ, ಮ್ಯಾಟ್ರಿಮೋನಿ ಸೈಟ್​​ನಲ್ಲಿರುವ ನನ್ನ ಪ್ರೊಫೈಲ್​​ನ್ನೇ ಡಿಲೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಒಟ್ಟಿನಲ್ಲಿ ತನ್ನ ಲೈಫ್​ ಪಾರ್ಟರ್​ನ್ನು ಹುಡುಕಿಕೋ ಎಂದು ಹೇಳಿದ ತಂದೆಗೆ ಮಗಳಿಂದ ಕಾದಿತ್ತು ಬಿಗ್​ ಶಾಕ್​! ಹೀಗಾಗಿಯೇ ಈ ಪೋಸ್ಟರ್​ ಸಖತ್​ ವೈರಲ್​ ಆಗಿದೆ. ನೀವೂ ನೋಡಿ ಬಿದ್ದು ಬಿದ್ದು ನಗ್ತೀರ.

First published: