• Home
  • »
  • News
  • »
  • trend
  • »
  • Viral Video: ಅತ್ತೆಗಾಗಿ ಡ್ಯಾನ್ಸ್​ ಮಾಡಿದ ಸೊಸೆಮುದ್ದು! ಸಖತ್​ ವೈರಲ್​ ಆಯ್ತು ವಿಡಿಯೋ

Viral Video: ಅತ್ತೆಗಾಗಿ ಡ್ಯಾನ್ಸ್​ ಮಾಡಿದ ಸೊಸೆಮುದ್ದು! ಸಖತ್​ ವೈರಲ್​ ಆಯ್ತು ವಿಡಿಯೋ

ಅತ್ತೆಗಾಗಿ ನೃತ್ಯ ಮಾಡುತ್ತಾ ಇರುವ ಸೊಸೆ

ಅತ್ತೆಗಾಗಿ ನೃತ್ಯ ಮಾಡುತ್ತಾ ಇರುವ ಸೊಸೆ

ಎಷ್ಟೋ ಸೊಸೆಯಂದಿರು ಮದುವೆಯಾದ ನಂತರ ಮನೆಯಲ್ಲಿ ಅತ್ತೆಯನ್ನು ಬಯಸುವುದಿಲ್ಲ. ಅಂದರೆ ಮನೆಯಲ್ಲಿ ಅತ್ತೆ ಇರಬಾರದು ಅಂತ ಅಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಸೊಸೆ ಏನು ಮಾಡಿದ್ದಾರೆ ಎಂದು ನೋಡಿ.

  • Share this:

ಅತ್ತೆ ಸೊಸೆ ಅಂದರೆ ಜಗಳ ಅಂತ ಮೊದಲಿನಿಂದಲೂ ವಾಡಿಕೆ ಆಗಿಬಿಟ್ಟಿದೆ. ಅವರು ಪ್ರತಿನಿತ್ಯವೂ ಸಂತೋಷದಿಂದ ಇದ್ದು ಒಂದು ದಿನ ಜಗಳ  ಆಡಿದರೂ  ಕೂಡ ಊರಿನವರು ಮಾತನಾಡಿಕೊಳ್ಳುವುದೇ ಬೇರೆ ತರ.  ಇನ್ನು  ಎಷ್ಟೋ ಸೊಸೆಯಂದಿರು ಮದುವೆಯಾದ ನಂತರ ಮನೆಯಲ್ಲಿ ಅತ್ತೆಯನ್ನು ಬಯಸುವುದಿಲ್ಲ. ಅಂದರೆ ಮನೆಯಲ್ಲಿ (Home) ಅತ್ತೆ ಇರಬಾರದು ಅಂತ ಅಂದುಕೊಳ್ಳುತ್ತಾರೆ. ಇನ್ನೂ ಕೆಲವು ಮನೆಗಳಲ್ಲಿ ಇವರು ಅತ್ತೆ ಸೊಸೆನಾ ? ಅಥವಾ ಅಮ್ಮ ಮಗಳಾ ಎನ್ನುವ ಹಾಗೆ ಇರುತ್ತಾರೆ.  ಹೀಗಿರುವಾಗ ಸೊಸೆಯೊಬ್ಬಳು ತನ್ನ ಅತ್ತೆಗಾಗಿ ಇಷ್ಟೊಂದು ಸುಂದರ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social Media)ವಿಶೇಷ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಕೆಲವರಿಗೆ ನೃತ್ಯವೆಂದರೆ ತುಂಬಾ ಇಷ್ಟ. ಕೆಲವರು ಯಾವುದೇ ಡ್ಯಾನ್ಸ್​ ಕ್ಲಾಸ್ (Dance class)​ ಗಳಿಗೆ ಹೋಗಲಿಲ್ಲವೆಂದರೂ  ಸಹ ಬಹಳ ಸುಂದರವಾಗಿ ನೃತ್ಯ ಮಾಡುತ್ತಾರೆ. ಇದೇ ರೀತಿ ಮಹಿಳೆಯೊಬ್ಬರು ಮಾಡಿದ ನೃತ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಈ ಮಹಿಳೆ (Woman) ತನ್ನ ಅತ್ತೆಗಾಗಿ ಈ ನೃತ್ಯವನ್ನು ಮಾಡಿದ್ದಾಳೆ ಎಂಬುದು  ಇನ್ನೂ  ಕುತೂಹಲಕಾರಿಯಾಗಿದೆ.


ಈ ಸುಂದರವಾದ ಡ್ಯಾನ್ಸ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಉರ್ವಿಕರ್ ಚೌಧರಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಉರ್ವಿ ಬಾಲಿವುಡ್‌ನ 'ಹಮ್ ಸಾಥ್ ಸಾಥ್ ಹೈ' ಚಿತ್ರದ 'ಮೈಯಾ ಯಶೋದಾ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅದರಲ್ಲಿ ಕೆಂಪು ಸೀರೆ ಉಟ್ಟಿದ್ದಾಳೆ. ಆದ್ದರಿಂದ ಅವಳು ತುಂಬಾ ಸುಂದರವಾಗಿ ಕಾಣುತ್ತಾಳೆ. ಅವಳ ಅತ್ತೆಯು ಅವಳ ಮುಂದೆ ಸೋಫಾದಲ್ಲಿ ಕುಳಿತು ಉರ್ವಿಯ ನೃತ್ಯವನ್ನು ನೋಡುತ್ತಿದ್ದಾಳೆ. ಇನ್ನು ಕೆಲವು ಮಹಿಳೆಯರು ಕುಳಿತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗೆಯೇ ಜೋರಾಗಿ ಚಪ್ಪಾಳೆಯನ್ನು ತಟ್ಟುತ್ತಾ ಆಕೆಗೆ ಪ್ರೋತ್ಸಾಹಿಸುತ್ತಾ ಇದ್ದಾರೆ.


ಮನೆಯಲ್ಲಿ ನಡೆದ ಸಣ್ಣ ಕಾರ್ಯಕ್ರಮದ ವೇಳೆ ಕೆಲ ಮಹಿಳೆಯರು ಉರ್ವಿ ಮನೆಯಲ್ಲಿ ನೆರವೇರಿದ್ದರು. ಆಗ ಇದ್ದಕ್ಕಿದ್ದಂತೆ ಯಾರೋ ಮೈಯ ಯಶೋದೆಯ ಸುಂದರ ಹಾಡನ್ನು ನುಡಿಸಿದರು. ಈ ಹಾಡನ್ನು ಕೇಳಿದ ಉರ್ವಿ ನೃತ್ಯದ ಉತ್ಸಾಹವನ್ನು ತಡೆಯಲಾರದೆ ಹಾಡಿನ ಪದಗಳನ್ನು ಗುನುಗುತ್ತಾ ನೃತ್ಯ ಮಾಡಲು ಪ್ರಾರಂಭಿಸಿದರು. ಅವಳು ಎಷ್ಟು  ಸುಂದರವಾಗಿ ನೃತ್ಯ ಮಾಡಿದಳು ಎಂದರೆ ಅಲ್ಲಿ ನೆರೆದಿದ್ದ ಜನರೆಲ್ಲರೂ ಅವಳನ್ನು ನೋಡಿದರು. ಆಗ ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಎದ್ದು ಉರ್ವಿ ಮತ್ತು ಅವಳ ಅತ್ತೆಯ ಮುಖದಿಂದ ಸ್ವಲ್ಪ ಹಣವನ್ನು ಕೈಬೀಸಿ ಪಕ್ಕದಲ್ಲಿದ್ದ ಮಹಿಳೆಗೆ ನೀಡಿದರು. ಅಂದ್ರೆ ದೃಷ್ಠಿ ತೆಗೆದರು.


ಇದನ್ನೂ ಓದಿ: ಬೇಷರಂ ರಂಗ್‌ ಹಾಡಿಗೆ ಸಖತ್ತಾಗಿ ‌ ಸ್ಟೆಪ್ಸ್‌ ಹಾಕಿದ ಸೋಶಿಯಲ್​ ಮೀಡೀಯಾ ಇನ್‌ಫ್ಲ್ಯೂಯೆನ್ಸರ್!‌ವೈರಲ್‌ ಆದ ವಿಡಿಯೋ


ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲದಿಂದ ವೀಕ್ಷಿಸಲಾಗುತ್ತಿದೆ. ಈ ವೀಡಿಯೊವನ್ನು ಉರ್ವಿ  ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿದ್ದಾರೆ. ವೀಡಿಯೊ 4.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಉರ್ವಿ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ, "ಇದು ಪೂರ್ವಸಿದ್ಧತೆಯಿಲ್ಲದ ನೃತ್ಯ. ನಾನು ಈ ನೃತ್ಯಕ್ಕೆ ತಯಾರಿ ಮಾಡಲಿಲ್ಲ. ನನ್ನ ಗೆಳತಿ ಇದ್ದಕ್ಕಿದ್ದಂತೆ ಹಾಡನ್ನು ಹಾಕಿದಳು ಮತ್ತು ನಾನು ಅದನ್ನು ಗುನುಗುತ್ತಾ   ನೃತ್ಯ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ ಎಲ್ಲರೂ ತುಂಬಾ ಭಾವುಕರಾಗಿದ್ದರು." ಜೊತೆಗೆ ಕೊನೆಯಲ್ಲಿ ಅತ್ತೆ ತನ್ನ ಸೊಸೆಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ.
ಈ ವಿಡಿಯೋದಲ್ಲಿ ಅತ್ತೆ ಸೇರಿದಂತೆ ಎಲ್ಲಾ ಮಹಿಳೆಯರು ತಮ್ಮ ಸೊಸೆ ತುಂಬಾ ಸುಂದರವಾಗಿ ಡ್ಯಾನ್ಸ್ ಮಾಡಿದ್ದರಿಂದ ಭಾವುಕರಾಗಿದ್ದಾರೆ. ಈ ವೀಡಿಯೋ ನೋಡಿದ ನಂತರ ಅನೇಕ ಬಳಕೆದಾರರು ಅತ್ತೆ ಸೊಸೆ ಅಂದ್ರೆ ಹೀಗೆ ಇರಬೇಕು, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಇರಬೇಕು ಎಂದು ಹೇಳಿದ್ದಾರೆ.

First published: