ತಂದೆ ಮಗಳ ಬಾಂಧವ್ಯ ಬಹಳ ವಿಶೇಷವಾದದ್ದು, ಮಗಳಿಗೆ ತಂದೆಯೇ ಮೊದಲ ಹೀರೋ. ಹಾಗೆಯೆ ತಂದೆಗೆ ಮಗಳೇ ಪ್ರಪಂಚ. ಯಾವುದೇ ಕಲ್ಮಶವಿಲ್ಲದ ಸಂಬಂಧ ಇದು. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಈ ಸಂಬಂಧಗಳ ಕುರಿತು ಕೆಟ್ಟ ಸುದ್ದಿಗಳನ್ನು ಕೇಳಿರುತ್ತೇವೆ. ಎಲ್ಲೋ ಮಗಳನ್ನು ಅತ್ಯಾಚಾರ ಮಾಡಿದ ತಂದೆ, ಕೊಲೆ ಮಾಡಿದ ಸುದ್ದಿ , ಅಥವಾ ಹಣಕ್ಕಾಗಿ ತಂದೆಯನ್ನು ಕೊಂದ ಮಗಳು ಹೀಗೆ. ಆದರೆ ಇಲ್ಲೊಬ್ಬ ಯುವತಿ ತನ್ನ ತಂದೆಯನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ.
ಮಲೇಷಿಯಾದಲ್ಲಿ ನಡೆದ ಪ್ರಕರಣವೊಂದು ವಕೀಲೆ ಹಾಕಿದ ಪೋಸ್ಟ್ ಮೂಲಕ ಸುದ್ದಿಯಾಗಿದ್ದು, 20 ವರ್ಷದ ಹುಡುಗಿಯೊಬ್ಬಳು ತಾನು ತನ್ನ ತಂದೆಯ ಮಗುವಿನ ತಾಯಿಯಾಗುತ್ತಿದ್ದೇನೆ ಎಂದು ತಿಳಿದ ಕಾರಣ, ತಂದೆಯ ಜೊತೆ ವಿವಾಹವಾಗಿದ್ದಾಳೆ.
ತನ್ನ ಫೇಸ್ಬುಕ್ ಖಾತೆಯಲ್ಲಿ, ನೂರ್ ಫಾತಿಹಾ ಅಜ್ಜಾಹ್ರಾ ಎನ್ನುವ ವಕೀಲೆ ಒಂದು ಪ್ರಕರಣದ ಕುರಿತು ಬರೆದಿದ್ದು ಇಬ್ಬರು ಸಹ ಪರಸ್ಪರ ಭಾವನೆಗಳನ್ನು ಹೊಂದಿದ್ದರಿಂದ, ಅವರು ಲೈಂಗಿಕವಾಗಿ ಸಹ ಮುಂದುವರೆದಿದ್ದರು ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಮುಖ್ಯ ಅಂಶವೆಂದರೆ ಆ ಹುಡುಗಿಯ ತಾಯಿ ಸಹ ತಮ್ಮ ಮಗಳನ್ನು ಮದುವೆಯಾಗಲು ಪತಿಗೆ ಒಪ್ಪಿಗೆ ನೀಡಿ, ತನ್ನ ಮದುವೆಯನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಲಾಗಿದೆ. ಕುಟುಂಬದ ಒಳಿತಿಗಾಗಿ ತಾಯಿ ಈ ತ್ಯಾಗ ಮಾಡಿದ್ದಾರೆ ಎಂದು ನೂರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿತ್ಯವೂ ಪಕ್ಕದ ಮನೆಯ ಗೆಳತಿಗೆ ಮುತ್ತಿಕ್ಕುವ ಗೋಲ್ಡನ್ ರಿಟ್ರೀವರ್ ಶ್ವಾನ!
ಎರಡು ಕಡೆಗಳಲ್ಲಿ ಮದುವೆಗೆ ತಮ್ಮ ಒಪ್ಪಿಗೆ ನೀಡಿದರೂ ಸಹ ದೇಶದ ರಾಷ್ಟ್ರೀಯ ನೋಂದಣಿ ಇಲಾಖೆಯು ಮಗುವಿನ ನೋಂದಣಿಯನ್ನು ಮಾಡಲು ಒಪ್ಪಲಿಲ್ಲ. ಇಲಾಖೆಯ ಪ್ರಕಾರ ಮಗುವಿನ ವಂಶಾವಳಿಯನ್ನು ನಿರ್ಧರಿಸಬೇಕಾಗಿರುವುದರಿಂದ, ನ್ಯಾಯಲಯದ ಮೊರೆ ಹೋಗಬೇಕಾಗುತ್ತದೆ ಎಂದು ಸೂಚನೆ ನೀಡಿದೆ.
ಇನ್ನು ವಕೀಲೆಯ ಬಳಿ ಆ ಯುವತಿ, ನಾವು ಮದುವೆಯಾಗಿದ್ದರಿಂದ ಮಗುವಿನ ಹೆಸರನ್ನು ನನ್ನ ಗಂಡನ ಹೆಸರಿನೊಂದಿಗೆ ಏಕೆ ನೋಂದಾಯಿಸಲು ಸಾಧ್ಯವಿಲ್ಲ ಎಂದು ನೋವಿನಲ್ಲಿ ಕೇಳಿದ್ದಳು ಎಂದು ವಕೀಲೆ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ಬುಕ್ ಈ ಪೋಸ್ಟ್ ವೈರಲ್ ಆಗಿದ್ದು, ಫೇಸ್ ಬುಕ್ನಲ್ಲಿಯೇ ಸುಮಾರು 20,000 ಕ್ಕೂ ಹೆಚ್ಚು ಶೇರ್ಗಳನ್ನು ಗಳಿಸಿದೆ. ದೇಶದ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಕುಟುಂಬದ ಕಥೆ ಮತ್ತು ನಿರ್ಧಾರದಿಂದ ನೆಟಿಜನ್ಗಳು ಹೆಚ್ಚು ಆಘಾತಕ್ಕೊಳಗಾಗಿದ್ದು, ಕೆಲವರು ಯುವತಿಯ ನಡೆಯ ವಿರುದ್ಧ ಕಿಡಿಕಾರಿದ್ದಾರೆ. ನಾವು ಬದುಕುತ್ತಿರುವ ಜಗತ್ತು ತುಂಬಾ ಚಿಂತಾಜನಕವಾಗಿದೆ. ನಮ್ಮ ಸ್ವಂತ ಮಕ್ಕಳ ಬಗೆಗಿನ ನಮ್ಮ ದೃಷ್ಟಿಕೋನವು ಕಾಮಪ್ರಚೋದಕವಾಗಿರಬಾರದು ... ಏಕೆಂದರೆ ಪೋಷಕರು ಮಕ್ಕಳ ಶಿಕ್ಷಕರಾಗಿರಬೇಕು. ಬದಲಾಗಿ, ಅಶ್ಲೀಲ ವಿವಾಹವು ಮಗುವಿಗೆ ಯಾವುದೇ ತೊಂದರೆಯಾಗದೆ, ವಂಶಾವಳಿಯನ್ನು ನೀಡಬಹುದು ಎಂಬ ನಂಬಿಕೆಯಿದೆ ಎಂದು ಫೇಸ್ಬುಕ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನವರು ಈ ಕಥೆಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದರೂ ಸಹ ಕೆಲವರು ಕುಟುಂಬ ವ್ಯವಸ್ಥೆ ಹೀಗೆ ಹೇಗೆ ಬದಲಾಯಿತು ಎಂದು ಗೊಂದಲ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹಿರಿಯರು ಮಾಡುವ ತಪ್ಪುಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಸತ್ಯ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ