• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Dating appಗಳಲ್ಲಿ ಲಸಿಕೆ ಪಡೆದವರಿಗೆ ಫುಲ್​ ಡಿಮ್ಯಾಂಡ್​​: Tinder, OkCupidನಲ್ಲಿ ಈಗ ವ್ಯಾಕ್ಸಿನೇಷನ್​ ಫೀಚರ್​​

Dating appಗಳಲ್ಲಿ ಲಸಿಕೆ ಪಡೆದವರಿಗೆ ಫುಲ್​ ಡಿಮ್ಯಾಂಡ್​​: Tinder, OkCupidನಲ್ಲಿ ಈಗ ವ್ಯಾಕ್ಸಿನೇಷನ್​ ಫೀಚರ್​​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಸಿಕೆ ಪಡೆದವರ ಬಗ್ಗೆ ಹೆಚ್ಚಿನ ಜನ ಹುಡಕಾಟ ನಡೆಸುತ್ತಿದ್ದು, ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ

  • Share this:

    ಕೋವಿಡ್​ ಸಂಕಷ್ಟ ಕಾಲದಲ್ಲಿ ಸೋಂಕಿನಿಂದ ರಕ್ಷಣೆ ಪಡೆಯಲು ನಮಗಿರುವ ಮಾರ್ಗ ಲಸಿಕೆ ಪಡೆಯುವುದಾಗಿದೆ. ಇದೇ ಹಿನ್ನಲೆ ಈಗ ವಾಕ್ಸಿನೇಷನ್​ ಆದವರಿಗೆ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಇತ್ತೀಚೆಗೆ ಮದುವೆಯಾದ ವರ/ ವಧು ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿರುವ ಘಟನೆಗಳು ಬೆಳಕಿಗೆ ಬಂದಿದ್ದವು. ಅಷ್ಟೇ ಅಲ್ಲದೇ, ಲಸಿಕೆ ಪಡೆದವರೇ ಬೇಕು ಎಂಬ ಜಾಹೀರಾತು ಕೂಡ ಕಂಡುಬಂದಿದ್ದವು. ಈಗ ಸಂಗಾತಿಯನ್ನು ಹುಡುಕುವ ಟಿಂಡರ್​, ಒಕೆ ಕ್ಯೂಪೆಡ್​ ಆ್ಯಪ್​ಗಳಲ್ಲೂ ಕೂಡ ಲಸಿಕೆ ಪಡೆದವರಿಗೆ ಫುಲ್​ ಡಿಮ್ಯಾಂಡ್​ ಹೆಚ್ಚಾಗಿದೆಯಂತೆ. ಈ ಕುರಿತು ಕಂಪನಿಯೇ ಅಧಿಕೃತವಾಗಿ ತಿಳಿಸಿದೆ. ಲಸಿಕೆ ಪಡೆದವರ ಬಗ್ಗೆ ಹೆಚ್ಚಿನ ಜನ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದೆ. ಇದೇ ಉದ್ದೇಶದಿಂದಲೇ ಆ್ಯಪ್​ನಲ್ಲಿ ಅನೇಕ ಮಾರ್ಪಡು ಮಾಡಲಾಗಿದ್ದು, ಲಸಿಕೆ ಕುರಿತು ಕೂಡ ಜಾಗೃತಿ ಮೂಡಿಸಲಾಗುತ್ತಿದೆ. 


    ಇದೇ ಕಾರಣಕ್ಕೆ ಲಸಿಕೆ ಕುರಿತು ಡೇಟಿಂಗ್​ ಆ್ಯಪ್​ಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿವೆ. ಟಿಂಡರ್​, ಒಕೆ ಕ್ಯೂಪಿಡ್​ನಂತಹ ಡೇಟಿಂಗ್​ ಆ್ಯಪ್​ಗಳಲ್ಲಿ ಲಸಿಕೆ ಕುರಿತ ಹೊಸ ಫೀಚರ್​ ಅನ್ನು ಪರಿಚಯಿಸಲಾಗಿದೆ. ಅಷ್ಟೇ ಅಲ್ಲದೇ ವಾಕ್ಸಿನೇಷನ್​ ಸ್ಟೀಕರ್​ ಮೂಲಕ ಕೂಡ ಬಳಕೆದಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಟಿಂಡರ್​ ಯುವಕರಲ್ಲಿ ಲಸಿಕೆ ಅರಿವು ಮೂಡಿಸುತ್ತಿದೆ. ಅಷ್ಟೇ ಅಲ್ಲದೇ ಟಿಂಡರ್​ ಹೊಸ ಲಸಿಕೆ ಕೇಂದ್ರ ಕುರಿತು ತಮ್ಮ ಬಳಕೆದಾರರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಕೂಡ ಮಾಡಿದೆ.


    ಟಿಂಡರ್​ ಬಳಕೆದಾರರು ಆ್ಯಪ್​ನಲ್ಲಿ ತಮ್ಮ ವಾಕ್ಸಿನೇಷನ್​ ಕುರಿತ ಮಾಹಿತಿಯನ್ನು ಕೂಡ ಹಂಚಿಕೊಳ್ಳಬಹುದು. ಈ ಮೂಲಕ ತಮ್ಮಗೆ ಅಭಿರುಚಿ ಹೊಂದಿರುವವರ ಹುಡುಕಾಟ ನಡೆಸಬಹುದು. ಲಸಿಕೆ ಪಡೆಯಲಾಗಿದೆ. ಲಸಿಕೆ ಶೀಘ್ರದಲ್ಲಿ ಪಡೆಯುತ್ತೇನೆ. ಇಮ್ಯುನಿಟಿ ಟುಗೆದರ್​ ಹಾಗೂ ಲಸಿಕೆಗಳು ಜೀವಗಳನ್ನು ಉಳಿಸುತ್ತವೆ ಎಂಬ ಹಲವಾರು ಸ್ಟೀಕರ್​ಗಳನ್ನು ಕೂಡ ಟಿಂಡರ್​ ಆ್ಯಪ್​ನಲ್ಲಿ ಕಾಣಬಹುದಾಗಿದೆ.


    ಇದನ್ನು ಓದಿ: ಸಣ್ಣ ಸಂಪಾದನೆಯಲ್ಲೂ ದೊಡ್ಡ ಉಳಿತಾಯ; ಇಲ್ಲಿದೆ ನೋಡಿ ಸರಳ ಮಾರ್ಗ


    ಲಸಿಕೆ ಮಾಹಿತಿ ಪಡೆಯಲು ಬಳಕೆದಾರರು ಟಿಂಡರ್​ ಕಂಪನಿಯ ವೆಬ್​ಸೈಟ್​ಗೆ ಭೇಟಿ ನೀಡಬಹುದು. ಈ ಮಾರ್ಗದರ್ಶನಗಳು ಬಳಕೆದಾರರಿಗೆ ಹೆಚ್ಚು ಶ್ರೀಮಂತವಾಗಿದ್ದು, ಸಂವಾದಾತ್ಮಕ ಸಂಪನ್ಮೂಲವಾಗಿದೆ ಎಂದಿದೆ. ಅಲ್ಲದೇ ಇದರ ಜೊತೆಗೆ ಸರಳ ಪ್ರಶ್ನೆಗಳಾದ ಲಸಿಕೆ ಎಂದರೆನು? ಲಸಿಕೆ ಅಗತ್ಯವೇನು| ಈಗ ನಾನು ಹೊರಗೆ ಹೋಗಬಹುದಾ? ಲಸಿಕೆ ನಂತರ ಸೋಂಕಿಗೆ ತುತ್ತಾಗಬಹುದಾ ಎಂಬ ಬಳಕೆದಾರರ ಪ್ರಶ್ನೆಗೂ ಉತ್ತರಿಸಲಿದೆ. ಇದರ ಜೊತೆಗೆ ಸರ್ಕಾರದಿಂದ ಅನುಮೋದಿತ ಲಸಿಕೆ ಮಾಹಿತಿ ನೀಡುವ ಜೊತೆಗೆ ಹತ್ತರಿದ ಲಸಿಕೆ ಕೇಂದ್ರದಲ್ಲಿ ಅಪಾಯಿಂಟ್​ಮೆಂಟ್​ ಬುಕ್​ ಮಾಡಲು ಕೂಡ ಅವಕಾಶ ನೀಡುತ್ತಿದೆ.
    ಟಿಂಡರ್​ ಆ್ಯಪ್​ನಲ್ಲಿ ವಾಕ್ಸಿನೇಷನ್​ ಚರ್ಚೆ ಬಹಳ ಜೋರಾಗಿದೆ. ಲಸಿಕೆ ಪಡೆದಿರುವ ಬಳಕೆದಾರರ ಪ್ರೋಫೈಲ್​ ಬಯೋಗಳು ಏರಿಕೆಯಾಗಿದೆ ಎಂದು ಟಿಂಡರ್​ ಸಂಸ್ಥೆ ಜನರಲ್​ ಮ್ಯಾನೇಜರ್​ ತರು ಕಪೂರ್​ ತಿಳಿಸಿದ್ದಾರೆ


    ಇದನ್ನು ಓದಿ: ದುಬೈನಲ್ಲಿ ಡ್ರೈವರ್ ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​​ ದಂಧೆ ರೂವಾರಿ


    ಒಕೆ ಕ್ಯೂಪಿಡ್​ ಅಲ್ಲಿ ವಾಕ್ಸಿನೇಷನೆಡೆಟ್​ ಪ್ರೋಫೈಲ್​


    ಲಸಿಕೆ ಪಡೆಯಲಾಗಿದೆ ಎಂಬ ಪ್ರೋಫೈಲ್​ ಬ್ಯಾಡ್ಜ್​ ಅನ್ನು ಒಕೆ ಕ್ಯೂಪಿಡ್​ ಆ್ಯಪ್​ ಕೂಡ ಬಿಡುಗಡೆ ಮಾಡಿದೆ. ಲಸಿಕೆ ಪಡೆದ ಬಳಕೆದಾರರು ಈ ಪ್ರೋಫೈಲ್​ ಬ್ಯಾಡ್ಜ್​ ಬಳಸುವ ಮೂಲಕ ತಮ್ಮ ಸಮಾನಭಿರುಚಿಯ ಜೋಡಿಯನ್ನು ಹುಡುಕಲು ಮುಂದಾಗಿದ್ದಾರೆ
    ಈ ಹೊಸ ಫೀಚರ್​ನಿಂದ ಶೇ. 35ರಷ್ಟು ಮ್ಯಾಚ್​ ರೇಟಿಂಗ್​ ಹೆಚ್ಚಾಗಿದೆ. ವಾಕ್ಸಿನೇಷನ್​ ಆದವರಿಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ ಎಂದು ಕಂಪನಿ ತಿಳಿಸಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:Seema R
    First published: