(VIDEO) | ಇವರೇ ನೋಡಿ ಜಗತ್ತಿನ ಟಾಪ್​ 10 ಮಹಿಳಾ ಡಾನ್​ಗಳು

ಇವರ ಪ್ರತಿನಿತ್ಯದ ಗಳಿಕೆ ಕೋಟಿಗಳಲ್ಲಿವೆ, ಜತೆಗೆ ಇವರ ಲೈಫ್​ ಸ್ಟೈಲ್​ ಕೂಡ ಯಾವ ಸಿನೆಮಾ ನಟ-ನಟಿಯರಿಗಿಂತ ಕಡಿಮೆಯಿಲ್ಲ. ವಿಶ್ವದ ಟಾಪ್​ 10 ಶ್ರೀಮಂತ ಮತ್ತು ಡೇಂಜರಸ್​ ಮಹಿಳಾ ಡಾನ್​ಗಳ ಬಗೆಗಿನ ಸ್ಟೋರಿ ಇಲ್ಲಿದೆ

news18
Updated:February 4, 2019, 4:43 PM IST
(VIDEO) | ಇವರೇ ನೋಡಿ ಜಗತ್ತಿನ ಟಾಪ್​ 10 ಮಹಿಳಾ ಡಾನ್​ಗಳು
ಟಾಪ್​ ಟೆನ್​ ಮಹಿಳಾ ಡಾನ್​ಗಳು
news18
Updated: February 4, 2019, 4:43 PM IST
ಬೆಂಗಳೂರು: ಜಗತ್ತಿನಾದ್ಯಂತ ಇರುವ ಡೇಂಜರಸ್​ ಪುರುಷ ಡಾನ್​ಗಳ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಇಡೀ ಜಗತ್ತನ್ನು ದಶಕದಿಂದ ಆಳುತ್ತಿರುವ ದಾವೂದ್​ ಇಬ್ರಾಹಿಂ, ಅವರ ಜತೆಯಲ್ಲೇ ಇದ್ದು ದೊಡ್ಡ ಮಟ್ಟದಲ್ಲಿ ಅಪರಾಧ ಲೋಕದಲ್ಲಿ ಕುಖ್ಯಾತಿ ಗಳಿಸಿದ ಛೋಟಾ ರಾಜನ್​, ಛೋಟಾ ಶಕೀಲ್​ ಸೇರಿದಂತೆ ಹಲವು ಡಾನ್​ಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ.

ಅದರಂತೆ ಮೊನ್ನೆಯಷ್ಟೇ ಇಂಟರ್​ಪೋಲ್​ ಪೊಲೀಸರಿಂದ ಬಂಧನಕ್ಕೊಳಗಾದ ರವಿ ಪೂಜಾರಿ, ಕೆಲ ತಿಂಗಳ ಹಿಂದೆ ಬಂಧನಕ್ಕೊಳಗಾದ ಬನ್ನಂಜೆ ರಾಜಾ, ಇನ್ನೂ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜ ಇವರೂ ನಿಮಗೆ ಪರಿಚಿತರೇ. ಇನ್ನು ಮೆಕ್ಸಿಕನ್​ ಡ್ರಗ್​ ಲಾರ್ಡ್​ಗಳೂ ಎಲ್ಲರಿಗೂ ಪರಿಚಿತ. ಇವರ ಕುಖ್ಯಾತಿಯೂ ಡಾನ್​ಗಳಿಗಿಂತ ಕಡಿಮೆಯಿಲ್ಲ.

ಆದರೆ ನಿಮಗೆ ಡೇಂಜರಸ್​ ಮಹಿಳಾ ಡಾನ್​ಗಳ ಬಗ್ಗೆ ಎಷ್ಟು ಗೊತ್ತು? ಹೌದು ಪುರುಷ ಡಾನ್​ಗಳಂತೆ ಮತ್ತು ಅವರಿಗಿಂತ ಡೇಂಜರಸ್​ ಅನಿಸಿಕೊಂಡಿರುವ ಮಹಿಳಾ ಡಾನ್​ಗಳ ದಂಡೇ ಇದೆ. ಪ್ರಪಂಚಾದ್ಯಂತ ಹಲವು ದೇಶಗಳಲ್ಲಿ ಅಪರಾಧ ಲೋಕವನ್ನು ಇವರೇ ಆಳುತ್ತಿದ್ದಾರೆ. ಇವರು ಕೇವಲ ಡೇಂಜರಸ್​ ಅಷ್ಟೇ ಅಲ್ಲ, ಭಾರೀ ಶ್ರೀಮಂತರು ಕೂಡ. ಇವರ ಪ್ರತಿನಿತ್ಯದ ಗಳಿಕೆ ಕೋಟಿಗಳಲ್ಲಿವೆ, ಜತೆಗೆ ಇವರ ಲೈಫ್​ ಸ್ಟೈಲ್​ ಕೂಡ ಯಾವ ಸಿನೆಮಾ ನಟ-ನಟಿಯರಿಗಿಂತ ಕಡಿಮೆಯಿಲ್ಲ. ವಿಶ್ವದ ಟಾಪ್​ 10 ಶ್ರೀಮಂತ ಮತ್ತು ಡೇಂಜರಸ್​ ಮಹಿಳಾ ಡಾನ್​ಗಳ ಬಗೆಗಿನ ವಿಡಿಯೋ ಇಲ್ಲಿದೆ.

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ