ಮನುಷ್ಯ ಜೀವನ (Human Life) ಮಾಡೋದು 4 ದಿನಗಳು. ಆದ್ರೆ ಚೆನ್ನಾಗಿ ಜೀವನ ಮಾಡಬೇಕು, ಇನ್ನೊಬ್ಬರಿಗೆ ಒಳಿತನ್ನು ಬಯಸಬೇಕು ಎಂಬೆಲ್ಲಾ ಮಾತುಗಳನ್ನು ಕೇಳುತ್ತೀವಿ ಅಲ್ವಾ? ಇನ್ನೂ ಕೆಲವರಿಗೆ ಬದುಕಿದ್ದಾಗ ಅವರ ಕಂಡರೆ ಭಯ ಇರೋಲ್ಲ. ಆದರೆ, ಸತ್ತಾದ ನಂತರ ತುಂಬಾ ಭಯ ಪಡುತ್ತಾರೆ. ರಾತ್ರಿಯಿಡೀ ಅವರ ಮುಖ ನೆನಪಿಗೆ ಬರೋದು, ಮಾತನಾಡಿದ ಹಾಗೆ ಆಗೋದು, ಅವರೊಂದಿಗೆ ಇದ್ದ ಕ್ಷಣಗಳೆಲ್ಲ ನೆನಪಾಗಿ ಭಯ ಪಡೋದು ಎಲ್ಲಾ ಅದೆಷ್ಟೋ ಜನರಿಗೆ ಅನುಭವಕ್ಕೆ ಬಂದಿರುತ್ತದೆ. ಹಾಗೆಯೇ ಅಂತ್ಯಸಂಸ್ಕಾರ ಅನ್ನೋದು ಒಂದೊಂದು ಜಾತಿ, ಪಂಗಡಗಳಲ್ಲಿ ವಿಭಿನ್ನವಾಗಿರುತ್ತದೆ. ಕೆಲವರಲ್ಲಿ ಹೆಣವನ್ನು ಸುಡುವುದು ಇದ್ರೆ, ಇನ್ನೂ ಕೆಲವರಲ್ಲಿ ಮಣ್ಣಿನಲ್ಲಿ (Soil) ಹೂಳುವ ಪದ್ಧತಿ ಇರುತ್ತದೆ. ಆದರೆ ಇಲ್ಲೊಂದು ಕಡೆಯ ಪದ್ಧತಿಯನ್ನು ಕೇಳಿದ್ರೆ ಪಕ್ಕಾ ಶಾಕ್ (Shock) ಆಗ್ತೀರಾ
ನಿಜ, ಶವವನ್ನು ತೆಗೆದುಕೊಂಡು ಹೋಗೋದಕ್ಕೆ ಶವಯಾತ್ರೆ ಅಂತ ಹೇಳುತ್ತಾರೆ. ಹಲವಾರು ಜನರು ಶವಕ್ಕೆ ಹೂವನ್ನು ಹಾಕುತ್ತಾ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ತಮಟೆಯನ್ನು ಬಾರಿಸುತ್ತಾ, ಶವದ ಮುಂದೆ ಹೆಜ್ಜೆ ಹಾಕುತ್ತಾ ತೆಗೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ಕಡೆಯಲ್ಲಿ ಶವವನ್ನೆ ಡ್ಯಾನ್ಸ್ ಮಾಡಿಸ್ತಾರಂತೆ.
ಮಡಗಾಸ್ಕರ್ ದೇಶದಲ್ಲಿ ಯಾರಾದರೂ ಸತ್ತಾಗ ಆಚರಿಸುವ ಈ ವಿಧಾನವನ್ನು ನೀವು ನೋಡಿದ್ರೇ ಎಂಥವರಿಗೂ ವಿಚಿತ್ರ ಅಂತ ಅನಿಸೋದು ಸಹಜ ಬಿಡಿ. ಯಾಕೆಂದ್ರೆ ಈ ದೇಶದಲ್ಲಿ ಯಾರಾದರೂ ಮರಣ ಹೊಂದಿದರೆ ಜನರು ಆ ಹೆಣವನ್ನು ಹಿಡಿದುಕೊಂಡು ನೃತ್ಯ ಮಾಡಲು ಮತ್ತು ಹಾಡಲು ಪ್ರಾರಂಭಿಸುತ್ತಾರೆ! ಮೃತ ದೇಹದೊಂದಿಗೆ ನರ್ತಿಸಲು ಶುರುಮಾಡುತ್ತಾರೆ. ಇದು ಆಶ್ಚರ್ಯವೆನಿಸಿದರೂ ಸತ್ಯ ಸಂಗತಿ. ಇದನ್ನೆಲ್ಲ ನೋಡಿದರೆ ಈ ದೇಶದ ಜನರು, ಅಲ್ಲಿನ ಸಂಪ್ರದಾಯ ಎಲ್ಲವೂ ಒಂದು ರೀತಿ ವಿಚಿತ್ರ ಅಂತ ಅನಿಸೋದು ಕಾಮನ್.
ಇವರು ನೃತ್ಯ ಮಾಡೋದು ಹೆಣದ ಕೊನೆಯ ಮೆರವಣಿಗೆಗಲ್ಲ. ಅದೇ ದಿನ ಸತ್ತ ಹೆಣದೊಂದಿಗೂ ಅಲ್ಲ. ಹಾಗೇನಾದರೂ ಅಂದುಕೊಂಡ್ರೆ, ಅದು ನಿಮ್ಮ ಊಹೆ ಅಷ್ಟೆ. ಮತ್ತೆ ಯಾವಾಗ ಎಂದು ಆಶ್ಚರ್ಯದಿಂದ ನೀವು ಕೇಳಬಹುದು. ಸತ್ತ ದೇಹವನ್ನು ಮಣ್ಣಿನಲ್ಲಿ ಹೂಳಿದ ಸುಮಾರು ಎರಡು ಅಥವಾ ಏಳು ವರ್ಷಗಳ ಬಳಿಕ ಜನರು ಆ ಹೆಣವನ್ನು ಸಮಾಧಿಯಿಂದ ಹೊರತೆಗೆಯುತ್ತಾರೆ. ಬಳಿಕ ಅದನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಾರೆ. ಕೊಳೆತು ನಾರುವ ಆ ಮೃತ ದೇಹದೊಂದಿಗೆ ನೃತ್ಯ ಮಾಡುತ್ತ, ಹಾಡುತ್ತ ಸಂಭ್ರಮಿಸುವ ಅಲ್ಲಿನ ಜನರು ಆ ಶವವನ್ನು ಮತ್ತೆ ಅದೇ ಜಾಗಕ್ಕೆ ಹೂಳುತ್ತಾರಂತೆ.
ಮಡಗಾಸ್ಕರ್ನಲ್ಲಿ ಆಚರಿಸುವ ಈ ವಿಚಿತ್ರ ಮತ್ತು ವಿಶಿಷ್ಟ ಪದ್ಧತಿಯನ್ನು ಅಲ್ಲಿನ ಜನರು ಫಮಡಿಹಾನಾ (Famadihana) ಎಂದು ಕರೆಯುತ್ತಾರೆ. ಅಂದರೆ ‘ಅಸ್ಥಿಪಂಜರ ರಚನೆ’ (turning of the skeleton) ಎಂದರ್ಥ. ಜನರ ಪ್ರಕಾರ, ಸತ್ತ ದೇಹದ ಮೇಲೆ ಮಾಂಸ ಇರುವವರೆಗೆ, ಆತ್ಮವು ಮತ್ತೊಂದು ದೇಹಕ್ಕೆ ಹೋಗಲು ಸಾಧ್ಯವಿಲ್ಲವಂತೆ. ಆದ್ದರಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಸಮಾಧಿಯಿಂದ ಹೊರಗೆ ತೆಗೆದು, ಅದರೊಂದಿಗೆ ನೃತ್ಯ ಮಾಡುವುದರಿಂದ ಅದು ಆದಷ್ಟು ಬೇಗ ಮಾಂಸ ಕಳೆದುಕೊಂಡು ಬರಿ ಎಲುಬು ಉಳಿಯುತ್ತದೆಯಂತೆ.
ಇದನ್ನೂ ಓದಿ: ಜೇಬು ಖಾಲಿಯಾಗಿಸುವ ಚಿಕನ್, ಮಟನ್ ಬಿರಿಯಾನಿ ಬೆಲೆ ಆಗ ಎಷ್ಟಿತ್ತು? ವೈರಲ್ ಆಯ್ತು 2001ರ ರೆಸ್ಟೋರೆಂಟ್ ಬಿಲ್
ಸತ್ತ ಮನುಷ್ಯನ ದೇಹವು ಎಷ್ಟು ಬೇಗ ಅಸ್ಥಿಪಂಜರವಾಗುತ್ತದೆಯೋ ಅಷ್ಟು ಬೇಗ ಅದು ಮುಕ್ತಿಯನ್ನು ಪಡೆಯುತ್ತದೆಯಂತೆ. ಅಲ್ಲದೆ ಇದರಿಂದ ಅವರು ಹೊಸ ಜೀವನವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಜನ ನಂಬುತ್ತಾರೆ. ಹೀಗಾಗಿ ಈ ಪದ್ಧತಿಯನ್ನು ಫಾಲೋ ಮಾಡ್ತಾರೆ.
ಈ ವಿಷಯವನ್ನು ಕೇಳಿದ್ರೆ ಒಂಥರಾ ಭಯ ಮತ್ತು ವಿಚಿತ್ರ ಅಂತ ಅನಿಸುತ್ತೆ ಅಲ್ವಾ? ಅದೆಷ್ಟೋ ವರ್ಷಗಳ ನಂತರ ಆ ಶವವನ್ನು ತೆಗೆಯೋದು ಅಂದ್ರೆ ಅಬ್ಬಬ್ಬಾ, ಅದ್ರಲ್ಲೂ ಅರ್ಧಂಬರ್ಧ ಕೊಳಿತಿರೋ ದೇಹ ಅಂದ್ರೆ ನಿಜಕ್ಕೂ ಭಯ ಆಗುತ್ತೆ. ಆದರೂ ಪ್ರಪಂಚದಲ್ಲಿ ಎಂಥೆಂತಾ ಮನುಷ್ಯರು ಇರ್ತಾರೆ ಅಲ್ವಾ? ಯಾವ್ದೆಲ್ಲಾ ಆಚರಣೆಗಳು ಇದೆ ಅಂತ ಕೇಳಿದ್ರೆ ಉಫ್ ಅಂತ ಅನಿಸುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ