Ravi Bala Sharma: ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿ ಡ್ಯಾನ್ಸಿಂಗ್ ದಾದಿಯ ಹೊಸ ವಿಡಿಯೋ..!

ಇನ್‍ಸ್ಟಾಗ್ರಾಂನಲ್ಲಿ ತನ್ನ ಡ್ಯಾನ್ಸ್ ವಿಡಿಯೋಗಳ ಮೂಲಕ ಜನಪ್ರಿಯರಾಗಿರುವ 63 ವರ್ಷದ ಅಜ್ಜಿ ರವಿ ಬಾಲಾ ಶರ್ಮಾ, ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ. ಅವರ ಹೊಸ ಇನ್‍ಸ್ಟಾ ಡ್ಯಾನ್ಸ್ ರೀಲ್ “ಯೇ ಜವಾನಿ ಹೇ ದಿವಾನಿ” ಸಿಕ್ಕಾಪಟ್ಟೆ ವೈರಲ್ ಆಗಿದೆ.

ಡ್ಯಾನ್ಸಿಂಗ್ ದಾದಿ ರವಿ ಬಾಲಾ ಶರ್ಮಾ

ಡ್ಯಾನ್ಸಿಂಗ್ ದಾದಿ ರವಿ ಬಾಲಾ ಶರ್ಮಾ

  • Share this:
ಕೆಲವು ಹಿರಿಯ ನಾಗರೀಕರಲ್ಲಿ ವಿಭಿನ್ನ ರೀತಿಯ ಜೀವನೋತ್ಸಾಹ ಇರುತ್ತದೆ. ಇಳಿ ವಯಸ್ಸಿನಲ್ಲೂ ಮನಸ್ಪೂರ್ತಿಯಾಗಿ ಹಾಡುವ, ಮನಸೋ ಇಚ್ಛೆ ನೃತ್ಯ ಮಾಡುವ , ಆಧುನಿಕ ಫ್ಯಾಶನ್‍ಗೆ ಒಗ್ಗಿಕೊಳ್ಳುವ, ಹೊಸದನ್ನು ಕಲಿಯುವ ತುಡಿತ ಹೊಂದಿರುವ ಅಥವಾ ಅಲಂಕಾರದಲ್ಲಿ ಆಸಕ್ತಿ ಇರುವ ಅನೇಕ ಹಿರಿ ಜೀವಗಳನ್ನು ನಾವು ಕಾಣಬಹುದು. ಹೌದು , ವಯಸ್ಸಿನ ಆಧಾರದ ಮೇಲೆ ಒಬ್ಬರ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಅಳೆಯುವಂತಿಲ್ಲ. ಅಂತದ್ದೇ ಹಿರಿಯ ವಯಸ್ಸಿನ ಮಹಿಳೆಯೊಬ್ಬರ ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿ ಜನಪ್ರಿಯ ಆಗುತ್ತಿದೆ. ಆ ವಿಡಿಯೋದಲ್ಲಿ 63 ವರ್ಷದ ಅಜ್ಜಿಯೊಬ್ಬರು  (Dancing Dadi) ಅದ್ಭುತವಾಗಿ ನೃತ್ಯ ಮಾಡುವು ದೃಶ್ಯವಿದೆ. ಈ ಅಜ್ಜಿ ಬೇರೆ ಯಾರೂ ಅಲ್ಲ, ಇನ್‍ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ಜನಪ್ರಿಯರಾಗಿರುವ ರವಿ ಬಾಲಾ ಶರ್ಮಾ. ಈ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿರುವ ರವಿ ಬಾಲಾ ಶರ್ಮಾ ಅವರ ನೃತ್ಯವನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಇನ್‍ಸ್ಟಾಗ್ರಾಂನ ತಮ್ಮ ಹೊಸ ಡ್ಯಾನ್ಸ್ ವಿಡಿಯೋದಲ್ಲಿ , ಟೈಗರ್ ಶ್ರಾಫ್ , ಅನ್ಯನ್ಯ ಪಾಂಡೆ , ತಾರಾ ಸುತಾರಿಯಾ ಮತ್ತು ಇತರರ ತಾರಾಗಣ ಹೊಂದಿರುವ ಸ್ಟುಡೆಂಟ್ ಆಫ್ ದ ಇಯರ್ ಸಿನಿಮಾದ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ತನ್ನ ಡ್ಯಾನ್ಸ್ ವಿಡಿಯೋಗಳ ಮೂಲಕ ಜನಪ್ರಿಯರಾಗಿರುವ 63 ವರ್ಷದ ಡ್ಯಾನ್ಸಿಂಗ್​ ದಾದಿ ರವಿ ಬಾಲಾ ಶರ್ಮಾ, (Ravi Bala Sharma)ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ. ಅವರ ಹೊಸ ಇನ್‍ಸ್ಟಾ ಡ್ಯಾನ್ಸ್ ರೀಲ್ “ಯೇ ಜವಾನಿ ಹೇ ದಿವಾನಿ” ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಶಾಲ್ ಮತ್ತು ಶೇಖರ್ ರಾಗ ಸಂಯೋಜನೆ ಮಾಡಿರುವ ‘ಯೇ ಜವಾನಿ’ ಹಾಡಿಗೆ ನೃತ್ಯ ಮಾಡುವ ದೃಶ್ಯದ ಮೂಲಕ ಆರಂಭ ಆಗುತ್ತದೆ ಈ ವಿಡಿಯೋ. ನೃತ್ಯದುದ್ದಕ್ಕೂ ಅವರ ಮೊಗದಲ್ಲಿ ಮಿನುಗುವ ಸುಂದರ ನಗು ನೋಡುಗರ ಹೃದಯ ಗೆಲುವುದರಲ್ಲಿ ಸಂಶಯ ಇಲ್ಲ. ಸಾಮಾನ್ಯ ಉಡುಗೆ ಧರಿಸಿದ ಬಾಲಾ ‘ಯೇ ಜವಾನಿ ಹೇ ದಿವಾನಿ. . . ‘ ಹಾಡಿಗೆ ರಾಗಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿ ನಟನಟಿಯರು ಹಾಡಿಗೆ ಹಾಕಿದ್ದ, ಜನಪ್ರಿಯ ಹುಕ್ ಹೆಜ್ಜೆಯನ್ನು ಕೂಡ ಅವರು ಸಮರ್ಪಕವಾಗಿ ಅನುಕರಿಸಿದ್ದಾರೆ.

ಇದನ್ನೂ ಓದಿ: Shankar Nag ಪುಣ್ಯ ಸ್ಮರಣೆ: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ನಟನ ಕುರಿತಾದ ಆಕ್ತಿಕರ ವಿಷಯಗಳು ಇಲ್ಲಿವೆ..!

ತನ್ನ ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ , ರವಿ ಬಾಲಾ ಅವರು “ಯೇ ಜವಾನಿ ಹೇ ದಿವಾನಿ” ಎಂಬ ಹಾಡಿನ ಸಾಲನ್ನೇ ಪೋಸ್ಟ್‌ಗೆ ಅಡಿಬರಹವನ್ನಾಗಿ ನೀಡಿದ್ದಾರೆ. ಸೆಪ್ಟೆಂಬರ್ 19 ರಂದು ಶೇರ್ ಮಾಡಲಾದ ಈ ಡ್ಯಾನ್ಸಿಂಗ್ ರೀಲ್ ವಿಡಿಯೋ, ಇದುವರೆಗೆ 64,000 ವೀಕ್ಷಣೆಗಳನ್ನು ಕಂಡಿದ್ದು, ಸುಮಾರು ನೂರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದೆ. ಬಾಲಾ ಅವರ ಇನ್‍ಸ್ಟಾಗ್ರಾಂ ಬೆಂಬಲಿಗರು ಅವರ ಈ ನೃತ್ಯ ಕಂಡು ಮಂತ್ರಮುಗ್ಧರಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ ಖ್ಯಾತಿಯ Priyanka Timmesh ಕೈ ಸೇರಿತು ಮತ್ತೊಂದು ಸಿನಿಮಾ..!

ಕೆಲವರಂತೂ ಇಂತಹ ಇನ್ನಷ್ಟು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ , ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವಂತೆ ಬಾಲಾ ಅವರಿಗೆ ಕೆಲವು ಅಭಿಮಾನಿಗಳು ವಿನಂತಿ ಮಾಡಿ ಕೊಂಡಿದ್ದಾರೆ. ಇನ್ನು ಕೆಲವು ಇನ್‍ಸ್ಟಾ ಬಳಕೆದಾರರಂತೂ, “ಅತಿ ಸುಂದರ”, “ಅದ್ಭುತ”, ನಿಮಗೊಂದು ಸಲಾಂ ಆಂಟಿ” ಎಂದೆಲ್ಲ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಈ ಮೊದಲು ಕೂಡ 63 ವರ್ಷದ ಅಜ್ಜಿ ರವಿ ಬಾಲಾ ಶರ್ಮಾ, ತಮ್ಮ ಅದ್ಭುತ ನೃತ್ಯದ ವಿಡಿಯೋ ಮತ್ತು ಮೊಮ್ಮಕ್ಕಳ ಜೊತೆಗಿನ ಕಾಮಿಡಿ ವಿಡಿಯೋಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರು.
Published by:Anitha E
First published: