ಸಾಮಾನ್ಯವಾಗಿ ಅಮ್ಮ ಮತ್ತು ಮಗನ ಸಂಬಂಧ (Relationship) ಒಂದು ರೀತಿಯಾದರೆ, ಈ ತಂದೆ ಮತ್ತು ಮಗನ ಸಂಬಂಧ ಬೇರೆಯದ್ದೆ ರೀತಿಯಲ್ಲಿ ಇರುತ್ತದೆ. ಅಮ್ಮ ಮತ್ತು ಮಗನ ಸಂಬಂಧದಲ್ಲಿ, ಮಗ ಮದುವೆಯಾಗುವವರೆಗೂ (Marriage) ತನ್ನ ಜೀವನದಲ್ಲಿ ಏನೇ ನಡೆದರೂ ಮನೆಗೆ ಬಂದ ತಕ್ಷಣ ಮೊದಲು ಎಲ್ಲಾ ವಿಷಯವನ್ನು ಅಮ್ಮನ ಬಳಿ ಹೇಳಿಕೊಳ್ಳಬೇಕು ಅನ್ನೋ ಹಂಬಲವಿರುತ್ತದೆ. ‘ಅಮ್ಮ ಇವತ್ತು ಕಾಲೇಜಿನಲ್ಲಿ ಮೇಷ್ಟ್ರು ಹೀಗಂದ್ರು, ಕಾಲೇಜಿನಲ್ಲಿ (College) ಒಂದು ಹುಡುಗಿ ತುಂಬಾ ಚೆನ್ನಾಗಿದ್ದಾಳೆ ನೋಡೋಕೆ ಅಂತೆಲ್ಲಾ ನೇರವಾದ ಮಾತುಗಳಿಂದ ಈ ಅಮ್ಮ-ಮಗನ ಸಂಬಂಧ ಕೂಡಿದ್ದರೆ, ಇತ್ತ ಅಪ್ಪ-ಮಗನ (Father-Son) ಸಂಬಂಧದಲ್ಲಿ ಈ ಅಂಶವು ಮಿಸ್ ಆಗಿರುತ್ತದೆ, ಅಲ್ಲಿ ಮಾತುಗಳಿಗಿಂತ ಮೌನವೇ ಜಾಸ್ತಿ ಮಾತಾಡ್ತಾ ಇರುತ್ತೆ.
ಅಪ್ಪ-ಮಗನ ಸಂಬಂಧದಲ್ಲಿ ಅಷ್ಟೊಂದು ಮಾತುಗಳಿರುವುದಿಲ್ಲ
ಅಪ್ಪ-ಮಗನ ಸಂಬಂಧವು ತುಂಬಾನೇ ಭಾವನಾತ್ಮಕವಾಗಿದ್ದರೂ ಸಹ ಆ ಭಾವನೆಗಳು ಹೊರಗೆ ವ್ಯಕ್ತವಾಗುವುದಿಲ್ಲ ಮತ್ತು ಅವರಿಬ್ಬರು ಏನೇ ಮಾತಾಡಬೇಕೆಂದರೂ ಅನೇಕ ಬಾರಿ ತಾಯಿಯ ಮೂಲಕವೇ ಮಾತಾಡುತ್ತಾರೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಬಿಡಿ. ಕೆಲವೊಬ್ಬ ತಂದೆ-ಮಗ ಒಳ್ಳೆಯ ಸ್ನೇಹಿತರಿದ್ದಂತೆ ಇರುತ್ತಾರೆ. ಆದರೆ ಇದು ತುಂಬಾನೇ ಅಪರೂಪವಾಗಿರುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ತಂದೆ-ಮಗನ ಸಂಬಂಧದಲ್ಲಿ ಬಾಯಿ ಮಾತಾಡುವುದಿಲ್ಲ, ಹೃದಯ ಮಾತಾಡುತ್ತೆ. ಎಂದರೆ ತಂದೆ ಆ ಕ್ಷಣಕ್ಕೆ ಏನಂತ ಅಂದುಕೊಳ್ಳುತ್ತಿರಬಹುದು ಅಂತ ಮಗನಿಗೆ ಅರ್ಥವಾದರೆ, ಮಗನ ತಲೆಯಲ್ಲಿ ಯಾವ ವಿಷಯ ಓಡಾಡುತ್ತಿದೆ ಅಂತ ತಂದೆಯ ಹೃದಯಕ್ಕೆ ಅರ್ಥವಾಗುತ್ತದೆ.
ಇದನ್ನೂ ಓದಿ: ನಾನ್‌ವೆಜ್ ಮಾಡುವಾಗ ಅಡುಗೆ ಕೋಣೆ ಕಿಟಕಿ ಮುಚ್ಚಿ! ಪಕ್ಕದ ಮನೆಗೆ ಸಸ್ಯಹಾರಿ ಕುಟುಂಬ ಬರೆದ ಪತ್ರ ಫುಲ್ ವೈರಲ್
ತಂದೆ-ಮಗನ ಈ ವಿಡಿಯೋ ನೀವು ನೋಡಲೇಬೇಕು
ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ತೋರಿಸುವ ಹೃದಯಸ್ಪರ್ಶಿ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ನೋಡುಗರ ಗಮನವನ್ನು ಸೆಳೆಯುತ್ತಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ತಂದೆ ತನ್ನ ಜೀವನದಲ್ಲಿಯೇ ಮೊದಲ ಬಾರಿಗೆ ವಿಮಾನವನ್ನು ಹತ್ತಿರುತ್ತಾರೆ. ಅವರ ಕಣ್ಣಿಗೆ ಮತ್ತು ಅನುಭವಕ್ಕೆ ಅದೆಲ್ಲವೂ ಹೊಸತು. ಅವರ ಬಹುದಿನದ ಕನಸಿಗೆ ಇಂದು ರೆಕ್ಕೆ ಬಂದಿರುವ ದಿನ. ಆ ಮುಖದಲ್ಲಿರುವ ಖುಷಿಯನ್ನು ಮಗ ತನ್ನ ಫೋನ್ ನಲ್ಲೇ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.
View this post on Instagram
ತನ್ನ ತಂದೆಯ ಖುಷಿಯನ್ನು ವಿಡಿಯೋದಲ್ಲಿ ಸೆರೆಹಿಡಿದ ಮಗ..
ನಂತರ ಲಾಂಬಾ ಅವರು ತನ್ನ ಮುಂಬೈ ಮನೆಗೆ ಹೋದಾಗ, ಅಲ್ಲಿ ತನ್ನ ತಂದೆ ಕಿಟಕಿಯಲ್ಲಿ ನೋಡುತ್ತಾ ನಗುತ್ತಿರುವ ದೃಶ್ಯವನ್ನು ಸಹ ಈ ರೆಕಾರ್ಡ್ ಮಾಡಿರುತ್ತಾರೆ. "ನೀವು ನಿಮ್ಮ ತಂದೆಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕೂರಿಸಿ ಮುಂಬೈಗೆ ಕರೆತಂದಿದ್ದೀರಿ" ಎಂದು ವೀಡಿಯೋದಲ್ಲಿನ ಪಠ್ಯದಲ್ಲಿ ಬರೆಯಲಾಗಿದೆ. ಈ ಕ್ಲಿಪ್ ನ ಹಿನ್ನಲೆಯಲ್ಲಿ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಅರಿಜಿತ್ ಸಿಂಗ್ ಅವರು ಹಾಡಿದ 'ತೇರೆ ಹವಾಲೆ' ಹಾಡನ್ನು ಹೊಂದಿಸಿರುವುದು ಇನ್ನಷ್ಟು ವಿಡಿಯೋವನ್ನು ನೋಡುವಂತೆ ಮಾಡಿದೆ.
"ನೀವು ಮಗನಾಗಿ ಹೆಮ್ಮೆ ಪಡುತ್ತೀರಿ" ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದನ್ನು ಶೇರ್ ಮಾಡಿದ ನಂತರ, ಈ ವೀಡಿಯೊ 1.3 ಲಕ್ಷ ವೀಕ್ಷಣೆಗಳು ಮತ್ತು 26,000 ಲೈಕ್ ಗಳನ್ನು ಗಳಿಸಿದೆ. "ಈ ಕ್ಷಣಕ್ಕಾಗಿ ನಾವು ಬದುಕುತ್ತಿದ್ದೇವೆ" ಎಂದು ವ್ಯಕ್ತಿಯೊಬ್ಬರು ವಿಡಿಯೋ ನೋಡಿ ಹೇಳಿದರು.
ಇನ್ನೊಬ್ಬ ವ್ಯಕ್ತಿ "ಎಂತಹ ಮುದ್ದಾದ ವಿಡಿಯೋ ಇದು! ಯಾವಾಗಲೂ ಹೀಗೆ ಇರಿ" ಅಂತ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ