ಹೆಂಡತಿಗೆ ವೀರ್ಯದ ಉಂಗುರ ಕೊಡಲು ಮುಂದಾದ ಗಂಡ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್

ಉಂಗುರದ ಒಳಭಾಗವನ್ನು ಟೊಳ್ಳು ಮಾಡಿ ಅದರಲ್ಲಿ ವೀರ್ಯ ತುಂಬ ಬೇಕು ಎನ್ನುವ ಆಲೋಚನೆ ಬ್ರಿಟನ್​ ವ್ಯಕ್ತಿಯದ್ದು. ಆದರೆ, ಈ ಆಲೋಚನೆಗೆ ರೂಪ ಕೊಡಲು ಯಾರೂ ಮುಂದೆ ಬರದೇ ಇರುವುದು ಸದ್ಯ ಈತನಿಗೆ ಬೇಸರ ಮೂಡಿಸಿದೆಯಂತೆ.

news18-kannada
Updated:November 8, 2019, 5:42 PM IST
ಹೆಂಡತಿಗೆ ವೀರ್ಯದ ಉಂಗುರ ಕೊಡಲು ಮುಂದಾದ ಗಂಡ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್
ಉಂಗುರದ ಒಳಭಾಗವನ್ನು ಟೊಳ್ಳು ಮಾಡಿ ಅದರಲ್ಲಿ ವೀರ್ಯ ತುಂಬ ಬೇಕು ಎನ್ನುವ ಆಲೋಚನೆ ಬ್ರಿಟನ್​ ವ್ಯಕ್ತಿಯದ್ದು. ಆದರೆ, ಈ ಆಲೋಚನೆಗೆ ರೂಪ ಕೊಡಲು ಯಾರೂ ಮುಂದೆ ಬರದೇ ಇರುವುದು ಸದ್ಯ ಈತನಿಗೆ ಬೇಸರ ಮೂಡಿಸಿದೆಯಂತೆ.
  • Share this:
ಹೆಂಡತಿಗೆ ಉಂಗುರ ಉಡುಗೊರೆ ನೀಡಬೇಕು ಎನ್ನುವ ಆಲೋಚನೆ ಆಕೆಯ ಪತಿಗೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಜನ್ಮ ದಿನಕ್ಕೆ, ಮದುವೆ ಆ್ಯನಿವರ್ಸರಿ ಹೀಗೆ ಬೇರೆ ಬೇರೆ ಸಮಯದಲ್ಲಿ ಚಿನ್ನ, ಡೈಮಂಡ್​ ಇಲ್ಲವೇ ಪ್ಲಾಟಿನಂ ಉಂಗುರವನ್ನು ಪತಿ ತನ್ನ ಪತ್ನಿಗೆ ನೀಡಿದ ಉದಾಹರಣೆಗಳು ಬೇಕಷ್ಟಿವೆ. ಆದರೆ, ಬ್ರಿಟನ್​ ವ್ಯಕ್ತಿಯೋರ್ವ ಹೆಂಡತಿಗೆ ವೀರ್ಯದ ಉಂಗುರ ನೀಡಲು ಮುಂದಾಗಿದ್ದಾನೆ.

ಬ್ರಿಟನ್​ ಮೂಲದ ವ್ಯಕ್ತಿ ಹೀಗೊಂದು ಆಲೋಚನೆ ಮಾಡಿದ್ದಾನೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಈತ, ವಿಭಿನ್ನ ಉಡುಗೊರೆಗಳನ್ನು ನೀಡುತ್ತಿದ್ದ. ಆತನ ಹೆಂಡತಿಯೂ ಭಿನ್ನ ರೀತಿಯ ಗಿಫ್ಟ್​​ ನೀಡುತ್ತಿದ್ದಳು. ಈಗ ಈತನಿಗೆ ಉಂಗುರದಲ್ಲಿ ತನ್ನ ವೀರ್ಯವನ್ನು ಇಟ್ಟು ಗಿಫ್ಟ್​​ ಮಾಡಬೇಕು ಎನ್ನುವ ಆಲೋಚನೆ ಬಂದಿದೆಯಂತೆ. ಈ ಉಂಗುರವನ್ನು ಕ್ರಿಸ್​ಮಸ್​ಗೆ ಉಡುಗೊರೆಯಾಗಿ ನೀಡಬೇಕು ಎನ್ನುವ ಆಲೋಚನೆ ಈತನದ್ದು.

ಈ ಆಲೋಚನೆ ಬಂದಿದ್ದೇ ತಡ ಬ್ರಿಟನ್​ ವ್ಯಕ್ತಿ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ಕೆಲವರು ಇವನ ಆಲೋಚನೆ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನೂ ಕೆಲವರು ಈತನಿಗೆ ತಲೆಕೆಟ್ಟಿದೆ ಎಂದು ಜರಿದಿದ್ದಾರೆ. ಈ ಬಗ್ಗೆ ಬೇಸರಗೊಂಡಿರುವ ಈತ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ.

ಇದನ್ನೂ ಓದಿ: ನಡುರಾತ್ರಿ ಮನೆಗೆ ಬಂದ ಗಂಡನಿಗೆ ಕಾದಿತ್ತು ಶಾಕ್​; ಬೆಡ್​ರೂಮ್​ನಲ್ಲಿ ಹೆಂಡತಿ ಜೊತೆ ಕೇಳಿತ್ತು ಪರಪುರುಷನ ನಗು

“ನನ್ನ ಆಲೋಚನೆ ಕೇಳಿ ಅನೇಕರು ನಕ್ಕಿದ್ದಾರೆ. ಆದರೆ, ನಾನು ಈ ಬಗ್ಗೆ ತುಂಬಾ ಗಂಭೀರವಾಗಿದ್ದೇನೆ. ಯಾರಿಗಾದರೂ ನನ್ನ ಆಲೋಚನೆ ಇಷ್ಟವಾಗಿ ಉಂಗುರ ಮಾಡಿಕೊಡಲು ಮುಂದೆ ಬನ್ನಿ,” ಎಂದು ಆತ ಕೋರಿದ್ದಾನೆ. ‘

ಉಂಗುರದ ಒಳಭಾಗವನ್ನು ಟೊಳ್ಳು ಮಾಡಿ ಅದರಲ್ಲಿ ವೀರ್ಯ ತುಂಬ ಬೇಕು ಎನ್ನುವ ಆಲೋಚನೆ ಬ್ರಿಟನ್​ ವ್ಯಕ್ತಿಯದ್ದು. ಆದರೆ, ಈ ಆಲೋಚನೆಗೆ ರೂಪ ಕೊಡಲು ಯಾರೂ ಮುಂದೆ ಬರದೇ ಇರುವುದು ಸದ್ಯ ಈತನಿಗೆ ಬೇಸರ ಮೂಡಿಸಿದೆಯಂತೆ. ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗಿದೆ.

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ