ಪ್ರಸ್ತುತ ಇಂಟರ್ನೆಟ್ (Internet) ಜಗತ್ತಾಗಿದೆ. ಅಂದರೆ ನಮಗೆ ಬೇಜಾರಾದ್ರೆ ಮೊಬೈಲ್ ನೋಡ್ತೀವಿ, ಖುಷಿ ಆದ್ರೂ ಇದೇ ಮಾಡ್ತೀವಿ, ಹಸಿವಾದ್ರೆ ಫುಡ್ ಆರ್ಡರ್ ಮಾಡ್ತೀವಿ. ಒಟ್ನಲ್ಲಿ ಪ್ರತಿಯೊಂದಕ್ಕು ಕೂಡ ನಾವು ಇಂಟರ್ನೆಟ್ (Internet) ಮೊರೆ ಹೋಗುತ್ತೇವೆ. ಇದೇನು ತಪ್ಪಲ್ಲ. ಯಾಕಂದ್ರೆ ಸಮಾಜ ಮತ್ತು ತಂತ್ರಜ್ಞಾನ (Technology)ಬೆಳೆಯುತ್ತಾ ಇದ್ದಂತೆ ಅದಕ್ಕೆ ಹೊಂದಿಕೊಂಡು ಜನರು ಹೋಗ್ಲೇಬೇಕು. ಆದರೆ ಯಾವುದೂ ಕೂಡ ಅತಿಯಾಗಬಾರದು ಅಷ್ಟೇ. ಇದಕ್ಕೇ ಸಂಬಂಧಪಟ್ಟಂತೆ ಇದೀಗ ಒಂದು ವಿಷ್ಯ ಸಖತ್ ವೈರಲ್ (Viral) ಆಗ್ತಾ ಇದೆ.
ಒಂದಾನೊಂದು ಕಾಲದಲ್ಲಿ ಮಗು ಊಟ ಮಾಡದೇ ಹಠ ಮಾಡಿದ್ರೆ ತಾಯಿ ಚಂದಮಾಮನನ್ನು ತೋರಿಸಿ, ಕಥೆಗಳನ್ನು ಹೇಳುತ್ತಾ ಊಟ ಮಾಡಿಸುತ್ತಾ ಇದ್ದರು. ಇದರಿಂದ ನಾನಾರೀತಿಯ ಕಥೆಗಳು ಹುಟ್ಟುಕೊಂಡಿದೆ. ಆದರೆ, ಇತ್ತೀಚಿಗಿನ ಕಾಲದಲ್ಲಿ ನೋ ಚಂದಮಾಮಾ. ಏನಿದ್ರೂ ಮೊಬೈಲ್. ಈ ಮಾತನ್ನು ಎಲ್ರೂ ಒಪ್ಪಿಕೊಳ್ಳುತ್ತಾರೆ. ಯಾಕಂದ್ರೆ ಮಗು ಹಠ ಮಾಡ್ತು ಅಥವಾ ಊಟ ಮಾಡಿಲ್ಲ ಅಂದ್ರೆ ಬೇರೆ ರೀತಿಯ ಫುಡ್ ಆರ್ಡರ್ ಮಾಡ್ತಾರೆ ಇಲ್ಲಾಂದ್ರೆ ಮೊಬೈಲ್ಗಳಲ್ಲಿ ಕಾರ್ಟೂನ್ಗಳನ್ನು ಹಾಕಿ ಕೊಡ್ತಾರೆ. ಇದರಿಂದ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ.
ಹೀಗೆಯೇ ಅಪ್ಪ ಅಮ್ಮ ಮೊಬೈಲ್ನಲ್ಲಿ ಫುಡ್ ಆರ್ಡರ್ ಮಾಡೋದನ್ನು ಮಗು ನೋಡಿ ಅದೂ ಕೂಡ ತನ್ನ ತಂದೆಯ ಮೊಬೈಲ್ ಇಂದ ಫುಡ್ ಆರ್ಡರ್ ಮಾಡಿ. ಮನೆಯ ಬಾಗಿಲ ಬಳಿ ಡೆಲಿವರಿ ಬಾಯ್ ಬಂದು ಬಿಲ್ ತೋರಿಸಿದಾಗ ತಂದೆ ಶಾಕ್ ಆಗಿದ್ದಾರೆ.
ಏನಿದು ವೈರಲ್ ವಿಷಯ?
ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂಬುದಕ್ಕೇ ಪ್ರತ್ಯಕ್ಷ ಸಾಕ್ಷಿ ಸಿಕ್ಕಿದೆ ನೋಡಿ. ಮಗುವಿನ ಕೈಗೆ ತಂದೆ ಮೊಬೈಲ್ ಕೊಟ್ಟು ದೊಡ್ಡ ತಪ್ಪು ಮಾಡಿದ್ದಾರೆ. ಇಂದಿನ ಅಂತರ್ಜಾಲ ಜಗತ್ತಿನಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸ್ಮಾರ್ಟ್ ಫೋನ್ ಬಳಸುವುದನ್ನು ಕಾಣುತ್ತಿದ್ದೇವೆ.
ಇದನ್ನೂ ಓದಿ: ಸೊಂಡಿಲಿನಂತಾ ಮೂಗು, ಮುದ್ದಾದ ಮಗು! ಭೂಮಿ ಮೇಲೆ ಅವತರಿಸೇಬಿಟ್ಟನಾ ಗಣೇಶ?
ಕೀತ್ ಸ್ಟೋನ್‌ಹೌಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಈ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮೊಬೈಲ್ನಲ್ಲಿ ಏನೋ ಮಗು ಆಟ ಆಡ್ತಾ ಇದೆ ಅಂತ ತಂದೆ ಸುಮ್ಮನೆ ಇದ್ದರು. ಆಗ ಮನೆಯ ಡೋರ್ ಬೆಲ್ ಆಗಿದೆ. ಬಾಗಿಲು ತೆಗೆದು ನೋಡಿದ್ರೆ ಫುಡ್ ಡೆಲಿವರಿ ಬಾಯ್. ಬಿಲ್ ನೋಡಿದಾಗ ತಂದೆಯ ತಲೆ ಫುಲ್ ಗಿರ ಗಿರ. ಯಾಕಂದ್ರೆ ಅವರ ಪುಟ್ಟ ಮಗ ರೂ.82233.50 ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದರು.
View this post on Instagram
ಜಂಬೋ ಶ್ರಿಂಪ್ 5, ಸಲಾಡ್, 3 ಹನಿ, ಚಿಲ್ಲಿ ಚೀಸ್ ಫ್ರೈಸ್ ಅನ್ನು ಆರ್ಡರ್ ಮಾಡಬಹುದು. ನೀವು ಚಿಕನ್ ಷಾವರ್ಮಾ ಸ್ಯಾಂಡ್ವಿಚ್ ಮತ್ತು ಐಸ್ ಕ್ರೀಮ್ ಹೀಗೆ ಫುಡ್ಗಳು ಮನೆ ಬಾಗಿಲಿಗೆ ಬಂದಿತ್ತು. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪೋಸ್ಟ್‌ನಲ್ಲಿ ವಿವಿಧ ಪ್ರತಿಕ್ರಿಯೆಗಳು ಸಹ ಕಂಡುಬರುತ್ತವೆ.
ಈ ಹಿಂದೆಯೂ ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿತ್ತು. ಆದ್ದರಿಂದ, ನೀವು ಮಕ್ಕಳಿಗೆ ಮೊಬೈಲ್ ಫೋನ್ ನೀಡಿದರೆ, ಅವರ ಮೇಲೆ ನಿಗಾ ಇಡುವುದು ಅಷ್ಟೇ ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ