ಸಿಪ್ರಸ್ (ಏಪ್ರಿಲ್ 04): ಪ್ರತಿಯೊಬ್ಬರು ಏನಾದರೊಂದು ಸಾಧನೆ ಮಾಡಬೇಕೆಂದು ಆಶಿಸುತ್ತಾರೆ. ಅದರಲ್ಲಿ ಕೆಲವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರುವ ತವಕದಲ್ಲಿರುತ್ತಾರೆ. ಅದಕ್ಕಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿ ಶ್ರಮವಹಿಸುತ್ತಾರೆ. ನೃತ್ಯ, ಹಾಡು, ಕಂಠಪಾಠ, ಬರವಣಿಗೆ, ಚಿತ್ರಕಲೆ ಹೀಗೆ ನಾನಾ ರಂಗದಲ್ಲಿ ಹೆಸರುಗಳಿಸಿ ಗಿನ್ನೆಸ್ ದಾಖಲೆ ಮಾಡಬೇಕು ಎಂದು ತವಕ ಪಡುತ್ತಾರೆ. ಆದರೆ ಇಲ್ಲೊಬ್ಬ ವಧು ಮದುವೆಯ ವೇಲ್‍ನಿಂದ ಗಿನ್ನೆಸ್ ದಾಖಲೆ ಮಾಡಬೇಕೆಂದು ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾಳೆ.
ಮದುವೆ ಕುರಿತು ಪ್ರತಿಯೊಬ್ಬರು ತಮ್ಮದೇ ಕನಸು ಕಾಣುತ್ತಾರೆ. ಪ್ರತಿ ಧರ್ಮದಲ್ಲಿ ಮದುವೆಯ ಸಂಪ್ರದಾಯಗಳು, ಶಾಸ್ತ್ರಗಳು, ಉಡುಗೆ-ತೊಡುಗೆ ವಿಭಿನ್ನವಾಗಿರುತ್ತದೆ. ಹಿಂದೂಗಳಲ್ಲಿ ಸೀರೆ ಧರಿಸಿದರೆ, ಕಿಶ್ಚಿಯನ್ ಧರ್ಮದಲ್ಲಿ ಬಿಳಿ ಬಣ್ಣದ ಗೌನ್ ತೊಟ್ಟು ಅಪ್ಸರೆಯ ರೀತಿಯಲ್ಲಿ ಕಾಣುತ್ತಾರೆ. ಇದೇ ವೇಳೆ ಬಿಳಿ ಬಣ್ಣದ ವೇಲ್ ಕೂಡ ಕಡ್ಡಾಯವಾಗಿರುತ್ತದೆ. ಇದೇ ವೇಲ್‍ನಿಂದ ಮಹಿಳೆಯೊಬ್ಬಳು ಗಿನ್ನೆಸ್ ದಾಖಲೆ ಬರೆದಿದ್ದಾಳೆ.
ಹೌದು ನಿಜ.. ವಧು ಸುಮಾರು ಆರು ಕಿ.ಮೀ ಉದ್ದದಷ್ಟು ತನ್ನ ವೇಲ್ ಅನ್ನು ಹರಡಿ ಗಿನ್ನೆಸ್ ದಾಖಲೆಯ ಪುಟ ಸೇರಿದ್ದಾಳೆ. ಒಮ್ಮೆ ಈ ವಿಡಿಯೋ ನೋಡಿದರೆ ಕ್ರೀಡಾಂಗಣದಲ್ಲಿ ಹಾಲು ಸುರಿದಿದ್ದಾರೆಯೇ ಎಂದು ಎನಿಸುತ್ತದೆ.
ಐಲ್ಯಾಂಡ್‍ನ ಸಿಪ್ರಸ್‍ನ ಮರಿಯಾ ಪರಸ್ಕೇವಾ ಮದುವೆಯ ಗೌನ್ ಜೊತೆಗಿನ ವೇಲ್ ಬರೋಬ್ಬರಿ 6962.6 ಮೀಟರ್ ಅಂದರೆ 63.5 ಅಮೆರಿಕದ ಫುಟ್‍ಬಾಲ್ ಕ್ರೀಡಾಂಗಣಗಳಷ್ಟು ಉದ್ದವಿದೆ. 22,843 ಅಡಿ 2.11 ಇಂಚು ಇರುವ ವೇಲ್ ಅನ್ನು ತೊಟ್ಟ ಮರಿಯಾ ತನ್ನ ಪತಿಯೊಂದಿಗೆ ನಿಂತು ಇಷ್ಟು ಉದ್ದದ ವೇಲ್ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಇವರ ಈ ಸಾಹಸ ಎಲ್ಲೆಡೆ ಮನೆಮಾತಾಗಿದೆ. ಈ ವೇಲ್‌ನ ವಿಡಿಯೋವನ್ನು ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಕೆಲವರು ಈ ವೇಲ್ ಕಂಡು ಆಶ್ಚರ್ಯಗೊಂಡರೆ ಇನ್ನು ಕೆಲವರು ಈ ಯೋಜನೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಆ ದಿನ ಗಾಳಿ ಬಂದಿದ್ದರೆ? ಅವರ ಮದುವೆ ದಿನ ಎಷ್ಟು ದಿನಗಳ ಕಾಲ ಸುಂದರವಾಗಿ ಇರುತ್ತದೋ ಅದಕ್ಕಿಂತ ಸುಂದರವಾಗಿದೆ ಆಕೆಯ ವೇಲ್ಎಂದು ಕಮೆಂಟ್ ಮಾಡಿದ್ದಾರೆ.
GWR ವೆಬ್‍ಸೈಟ್ ಪ್ರಕಾರ, ಮರಿಯಾ ಅವರ ವೇಲ್ ತಯಾರಿಸಿದವರ ಬಳಿ ವಿಚಾರಿಸಿದಾಗ ಆ ವೇಲ್‍ಗೆ 400 ಯೂರೋ ಅಂದರೆ ಭಾರತದ ಕರೆನ್ಸಿ ಪ್ರಕಾರ 34,536 ರೂ. ಆಗಿದೆ. ನಂತರ ಒಂದು ಶಾಲೆಯ ಮೈದಾನದಲ್ಲಿ ವೇಲ್‍ನ ಅಳತೆಯನ್ನು ತೆಗೆದುಕೊಳ್ಳಲಾಯಿತು. ನಂತರ ವೇಲ್ ತಯಾರಿಸಿದ ಬಳಿಕ ಟ್ರಕ್‌ನಲ್ಲಿ ವೇಲ್ ತೆಗೆದುಕೊಂಡು ಬಂದು ಸ್ನೇಹಿತರ ಸಹಾಯದಿಂದ ಕ್ರೀಡಾಂಗಣದ ತುಂಬಾ ಹರಡಲಾಯಿತು ಎಂದು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ