Viral Video: ಈ ನಾಯಿಗಿರೋ ನಿಯತ್ತು ಮನುಷ್ಯರಿಗೂ ಇಲ್ಲ ನೋಡಿ! ಎಷ್ಟು ಚೆಂದ ಅಲ್ವಾ ಶ್ವಾನಗಳ ಪ್ರೀತಿ?

ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರು 'ವಾರೆ ವಾ' ಎನ್ನುತ್ತಾ ಹೊಗುಳುತ್ತಿರುವ ಈ ವೈರಲ್ ವಿಡಿಯೋದಲ್ಲಿ, ಜರ್ಮನ್ ಶೆಫರ್ಡ್ ತಳಿಯ ನಾಯಿಯೊಂದು ತನ್ನ ಮಾಲೀಕನಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಜರ್ಮನ್ ಶೆಫರ್ಡ್

ಜರ್ಮನ್ ಶೆಫರ್ಡ್

  • Share this:
ನಾಯಿಗಳು (Dog) ಮನುಷ್ಯನ ಆಪ್ತ ಸ್ನೇಹಿತರು (Friends) ಮತ್ತು ನಂಬಿಕಸ್ತ ಒಡನಾಡಿಗಳೂ ಕೂಡ ಎಂಬುವುದನದನ್ನು ಒಪ್ಪದವರು ತುಂಬಾ ವಿರಳ. ಒಂದು ವೇಳೆ ಅಂತವರ್ಯಾರಾದರೂ ಇದ್ದರೆ, ಅವರು ಇನ್‍ಸ್ಟಾಗ್ರಾಂನಲ್ಲಿ (Instagram) ವೈರಲ್ (Viral) ಆಗುತ್ತಿರುವ ಈ ವಿಡಿಯೋವನ್ನೊಮ್ಮೆ (Video) ಖಂಡಿತಾ ನೋಡಬೇಕು. ಈ ವಿಡಿಯೋ ನಿಮ್ಮ ಮುಖದಲ್ಲಿ ನಗು (Smile) ಮೂಡಿಸುವುದು ಮಾತ್ರವಲ್ಲ, ನಾಯಿಗಳು ಮನುಷ್ಯನಿಗೆ ಏನೆಲ್ಲಾ ಸಹಾಯ ಮಾಡಬಲ್ಲವು ಎಂಬುದನ್ನು ಕೂಡ ತೋರಿಸುತ್ತದೆ. ವಿಡಿಯೋದಲ್ಲಿ ನಾಯಿಯ ಅಂತಹ ಯಾವ ಮಹಾ ಕಾರ್ಯವಿದೆಯಪ್ಪಾ ಎನ್ನುತ್ತೀರಾ? ಆ ನಾಯಿ ತನ್ನ ಮಾಲೀಕನ ಆಫೀಸ್‍ಗೆ (Office) ಮಧ್ಯಾಹ್ನದ ಬುತ್ತಿಯನ್ನು (Tiffin) ತೆಗೆದುಕೊಂಡು ಹೋಗುತ್ತದೆ!

ಹೌದು, ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರು 'ವಾರೆ ವಾ' ಎನ್ನುತ್ತಾ ಹೊಗುಳುತ್ತಿರುವ ಈ ವೈರಲ್ ವಿಡಿಯೋದಲ್ಲಿ, ಜರ್ಮನ್ ಶೆಫರ್ಡ್ ತಳಿಯ ನಾಯಿಯೊಂದು ತನ್ನ ಮಾಲೀಕನಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಜರ್ಮನ್ ಶೆಫರ್ಡ್ ನಾಯಿ, ಮಾಲೀಕನ ಅಫೀಸಿನ ಕಡೆಗೆ ರಸ್ತೆಯ ಬದಿಯಲ್ಲಿ ಸಂತೋಷದಿಂದ ನಡೆದುಕೊಂಡು ಹೋಗುತ್ತಿರುತ್ತದೆ. ತನ್ನ ಬಾಯಿಯಲ್ಲಿ ಊಟದ ಡಬ್ಬಿಯನ್ನು ಗಟ್ಟಿಯಾಗಿ ಕಚ್ಚಿಕೊಂಡಿರುತ್ತದೆ. ದಾರಿಯ ಬದಿಯಲ್ಲಿ ಸಾಗುತ್ತಿರುವಾಗ, ವಾಹನವೊಂದು ಬರುತ್ತಿರುವುದನ್ನು ಕಂಡು ಜಾಗೃತವಾಗಿ, ರಸ್ತೆ ಬದಿಯ ತಗ್ಗಿನ ಜಾಗವೊಂದಕ್ಕೆ ಸರಿದು ನಿಂತು, ಆ ವಾಹನ ಹೋದ ಮೇಲೆ ಮತ್ತೇ ಪಾದಾಚಾರಿ ಮಾರ್ಗವನ್ನು ಹತ್ತಿ ಮತ್ತೆ ಮುಂದೆ ಸಾಗುತ್ತದೆ. ಶೇರು ಉತ್ತಮ ತರಬೇತಿ ಪಡೆದ ನಾಯಿಯಾಗಿದ್ದು, ರಸ್ತೆಯಲ್ಲಿ ಓಡಾಡುವ ವಾಹನಗಳ ಸನಿಹಕ್ಕೆ ಹೋಗದೆ, ಸುರಕ್ಷಿತವಾಗಿ ಹೇಗೆ ನಡೆಯಬೇಕು ಎಂಬ ಜ್ಞಾನವನ್ನು ಹೊಂದಿದೆ.

ಮಾಲೀಕನಿಗೆ ಊಟ ಕೊಂಡೊಯ್ಯುವ ನಾಯಿ
ಈ ವಿಡಿಯೋದ ಜೊತೆಗೆ ನಾಯಿಯ ಕುರಿತ ಮಾಹಿತಿಯನ್ನು ಕೂಡ ನೀಡಲಾಗಿದೆ. ಅದರ ಹೆಸರು ಶೇರು. ಅದು ಪ್ರತೀ ದಿನ ಬೆಳಿಗ್ಗೆ ಎರಡು ಕಿಲೋ ಮೀಟರ್ ದೂರದಲ್ಲಿರುವ ತನ್ನ ಮಾಲೀಕನ ಕಚೇರಿಗೆ ನಡೆದುಕೊಂಡು ಹೋಗಿ, ಮಧ್ಯಾಹ್ನದ ಊಟದ ಡಬ್ಬಿಯನ್ನು ತಲುಪಿಸಿ ಬರುತ್ತದೆಯಂತೆ.

ಇದನ್ನೂ ಓದಿ:   Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!

ಈ ವಿಡಿಯೋಗೆ “ಇದು ಸೂಪರ್ ಕ್ಯೂಟ್ ಆಗಿದೆಯಲ್ಲವೇ?” ಎಂಬ ಅಡಿಬರಹವನ್ನು ಕೂಡ ನೀಡಲಾಗಿದೆ. @timssyvats ಎಂಬ ಹೆಸರಿನ ಖಾತೆಯುಳ್ಳ ಇನ್‍ಸ್ಟಾಗ್ರಾಂ ಬ್ಲಾಗರ್ ಒಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ ಅವರ ಖಾತೆಗೆ 46,000 ಕ್ಕಿಂತಲೂ ಹೆಚ್ಚು ಹಿಂಬಾಲಕರು ಇದ್ದಾರೆ.

ಶೇರುವಿನ ಬಗ್ಗೆ ಮಾಲೀಕ ಹೇಳಿದ್ದು ಹೀಗೆ
“ಇಲ್ಲಿ ಹಿಮಾಚಲ ಪ್ರದೇಶದಲ್ಲಿ ನಾಯಿಗಳನ್ನು ಮನೆಯಲ್ಲಿ ಕೂಡಿ ಹಾಕುವುದಿಲ್ಲ ಮತ್ತು ಎಷ್ಟಾಗುತ್ತದೆಯೋ ಅಷ್ಟು ಹೊರಗೆ ಸುತ್ತಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಶೇರುವಿಗೆ ಬಾಲ್ಯದಿಂದಲೇ ತರಬೇತಿ ನೀಡಲಾಗಿದೆ ಮತ್ತು ನಿತ್ಯವೂ ತಂದೆಯ ಮಧ್ಯಾಹ್ನದ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗುತ್ತಾನೆ. ಆದರೆ ಅವನ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಕುಟುಂಬದ ಒಬ್ಬ ಸದಸ್ಯರು ಜೊತೆಗೆ ಇರುತ್ತಾರೆ” ಎಂದು ಈ ವಿಡಿಯೋ ಪೋಸ್ಟ್ ಮಾಡಿರುವ ಬ್ಲಾಗರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸುಮಾರು ಆರು ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೆ ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳು ಹರಿದು ಬಂದಿವೆ. ನೆಟ್ಟಿಗರು ಇನ್ನೂ ಕೂಡ ತಮ್ಮ ಪ್ರತಿಕ್ರಿಯೆಗಳ ಮೂಲಕ ಶೇರುವನ್ನು ಹೊಗಳುತ್ತಲೇ ಇದ್ದಾರೆ. ಈ ವಿಡಿಯೋ ಇದುವರೆಗೆ 8.6 ಮಿಲಿಯನ್‍ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಇದನ್ನೂ ಓದಿ:   Butterfly: ಈ ಚಂದದ ಚಿಟ್ಟೆಗಳು ಇನ್ನೆಂದೂ ಕಾಣ ಸಿಗದು! ಅಳಿವಿನಂಚಿನಲ್ಲಿರೋ ಅಪರೂಪದ ಪಾತರಗಿತ್ತಿಗಳಿವು

ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು “ಇದು ತುಂಬಾ ಕ್ಯೂಟ್ ಆಗಿದೆ ಮತ್ತು ಆಡೋರೆಬಲ್ ಆಗಿದೆ, ಅವನಿಗೆ ರಸ್ತೆ ಸುರಕ್ಷತೆಯ ಬಗ್ಗೆ ಕೂಡ ಗೊತ್ತಿದೆ. ದೇವರು ಯಾವಾಗಲೂ ಒಳ್ಳೆಯದನ್ನು ಮಾಡಲಿ ಮತ್ತು ಅವರಿಂದ ಕಲಿಯುವುದು ತುಂಬಾ ಇದೆ” ಎಂದು ಬರೆದಿದ್ದಾರೆ. “ನಾನೀಗ ಅತ್ತು ಬಿಡುತ್ತೇನೆ” ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. “ಮುದ್ದಾಗಿದೆ ಮತ್ತು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತದ್ದು. . . .ಅವನು ರಸ್ತೆಯ ಮೇಲೆ ತುಂಬಾ ಜಾಗರೂಕತೆಯಿಂದ ನಡೆದುಕೊಂಡು ಹೋಗುತ್ತಿದ್ದಾನೆ” ಎಂದು ಇನ್ನೊಬ್ಬರು ಪ್ರಶಂಸಿಸಿದ್ದಾರೆ.
Published by:Ashwini Prabhu
First published: