Viral Video: ಆಟಿಕೆಯೊಂದಿಗೆ ಎಷ್ಟು ಮುದ್ದಾಗಿ ಆಡ್ತಿದೆ ಈ ಸಾಕುನಾಯಿ! ಮಿಸ್​ ಮಾಡದೆ ಈ ವಿಡಿಯೋ ನೋಡಿ

ಸುಂದರವಾದ ಗೋಲ್ಡನ್ ರಿಟ್ರೈವರ್ ಆರಾಮಾಗಿ ಮಲಗಿ ಒಂದು ಮೃದುವಾದ ಬೊಂಬೆಯೊಂದಿಗೆ ತನ್ನ ಆಟ ಶುರು ಮಾಡುವುದನ್ನು ನಾವು ನೋಡಬಹುದು. ನಂತರ ನಾಯಿ ಆ ಮೃದುವಾದ ಬೊಂಬೆಯನ್ನು ಅದರ ಬಾಯಿಯ ಹತ್ತಿರಕ್ಕೆ ತಂದು ಚುಂಬಿಸುತ್ತದೆ. ನಾಯಿ ತನ್ನ ಆಟಿಕೆಯೊಂದಿಗೆ ಆಡುವುದನ್ನು ಎಷ್ಟು ಇಷ್ಟಪಡುತ್ತದೆ ಎಂಬುದನ್ನು ಈ ವಿಡಿಯೋ ನಮಗೆ ತೋರಿಸುತ್ತದೆ ಅಂತ ಹೇಳಿದರೆ ಸುಳ್ಳಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮನೆಯಲ್ಲಿ ಒಂದು ಸಾಕುಪ್ರಾಣಿ (Pet Dog) ಇದ್ದರೆ ಸಾಕು, ಸಮಯ ಹೋಗಿದ್ದೆ ಗೊತ್ತಾಗಲ್ಲ ಮತ್ತು ಯಾವುದೇ ಸಮಯದಲ್ಲಿ ನಮಗೆ ಬೋರ್ ಅಂತ ಅನ್ನಿಸುವುದೇ ಇಲ್ಲ. ಅದಕ್ಕೆ ಇರಬೇಕು ಅನೇಕರು ಮನೆಯಲ್ಲಿ (Home) ಒಂದು ಪುಟ್ಟ ಮುದ್ದಾದ ಪ್ರಾಣಿಯನ್ನು ಸಾಕಿಕೊಳ್ಳುತ್ತಾರೆ. ಅದರಲ್ಲೂ ಮಕ್ಕಳು ಶಾಲೆಗೆ ಹೋದ ಮೇಲೆ ಮನೆಯಲ್ಲಿರುವ ಗೃಹಿಣಿಗೆ ರಕ್ಷಣೆ ಆಗಿ ಸದಾ ಜೊತೆಯಲ್ಲಿ ಇರುತ್ತದೆ ಮತ್ತು ಮಕ್ಕಳಿಗೆ (Children) ಅದರ ಜೊತೆಗೆ ಆಟವಾಡಲು ಮತ್ತು ಅದನ್ನು ಮುದ್ದು ಮಾಡಲು ಸಹ ತುಂಬಾನೇ ಖುಷಿ ಕೊಡುತ್ತದೆ. ಈ ಸಾಕುಪ್ರಾಣಿಗಳಿಗೆ ಮನೆಯ ಮಾಲೀಕರಿಂದ ಕಾಳಜಿ, ಪ್ರೀತಿ ಮತ್ತು ವಾತ್ಸಲ್ಯ ಮಾತ್ರವಲ್ಲದೇ, ಮನೆಯ ಒಡೆಯನಿಂದ ಹೆಚ್ಚುವರಿ ಸಮಯವೂ ಬೇಕಾಗುತ್ತದೆ.

ಒಟ್ಟಿನಲ್ಲಿ ನಿಮ್ಮ ಮನೆಯಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರೋ, ಈ ಸಾಕುಪ್ರಾಣಿಗಳನ್ನು ಸಹ ಹಾಗೆಯೇ ನೋಡಿಕೊಳ್ಳಬೇಕಾಗುತ್ತದೆ. ಆದರೆ ಈ ಸಾಕುಪ್ರಾಣಿಗಳು ಮನಸ್ಸಿಗೆ ತುಂಬಾನೇ ಖುಷಿ ಕೊಡುತ್ತವೆ.

ಆದರೆ ಕೆಲವೊಮ್ಮೆ ಮನೆಯಲ್ಲಿರುವ ಎಲ್ಲಾ ಸದಸ್ಯರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇರುವಾಗ, ಸಾಕುಪ್ರಾಣಿಯ ಕಡೆಗೆ ಗಮನ ನೀಡುವವರು ಯಾರೂ ಇರುವುದಿಲ್ಲ. ಆಗ ಸಾಕುಪ್ರಾಣಿಗಳು ನಿಮ್ಮ ಮನೆಯಲ್ಲಿರುವ ಆಟಿಕೆ ಸಾಮಾನುಗಳನ್ನು, ಅದರಲ್ಲೂ ಈ ಮೃದುವಾದ ಬೊಂಬೆಗಳ ಜೊತೆಗೆ ಆಟವಾಡುವುದನ್ನು ನಾವು ನೋಡಿರುತ್ತೇವೆ.

ಈ ವಿಡಿಯೋದಲ್ಲಿ ನಾಯಿ ಏನು ಮಾಡಿದೆ?
ಹೇಗೆ ಈ ಸಾಕುಪ್ರಾಣಿಗಳು ತಮ್ಮ ಮಾಲೀಕರು ದೂರದಲ್ಲಿರುವಾಗ ಮನೆಯಲ್ಲಿ ಲಭ್ಯವಿರುವ ಆಟಿಕೆಗಳನ್ನು ಉತ್ತಮವಾಗಿ ಬಳಸಲು ಪ್ರಯತ್ನಿಸುತ್ತವೆ ಅಂತ ತೋರಿಸುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಕೇವಲ ಏಳೆ ಏಳು ಸೆಕೆಂಡುಗಳಿರುವ ಈ ವಿಡಿಯೋ ತುಣುಕು ನಿಮಗೆ ಖುಷಿ ನೀಡುವುದಂತೂ ಗ್ಯಾರೆಂಟಿ.

ಇದನ್ನೂ ಓದಿ: Viral Video: ಮುನಿಸಿಕೊಂಡ ನಾಯಿಯನ್ನು ಖುಷಿಪಡಿಸಿದ ಕೀಟ! ಈ ಕ್ಯೂಟ್ ವಿಡಿಯೋ ನೀವೂ ನೋಡಿ

ಬ್ಯೂಟೆಂಗೆಬೀಡೆನ್ ಸೋಮವಾರ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಮನೆಯ ಸೋಫಾದ ಮೇಲೆ ಸುಂದರವಾದ ಗೋಲ್ಡನ್ ರಿಟ್ರೈವರ್ ಆರಾಮಾಗಿ ಮಲಗಿ ಒಂದು ಮೃದುವಾದ ಬೊಂಬೆಯೊಂದಿಗೆ ತನ್ನ ಆಟ ಶುರು ಮಾಡುವುದನ್ನು ನಾವು ನೋಡಬಹುದು. ನಂತರ ನಾಯಿ ಆ ಮೃದುವಾದ ಬೊಂಬೆಯನ್ನು ಅದರ ಬಾಯಿಯ ಹತ್ತಿರಕ್ಕೆ ತಂದು ಚುಂಬಿಸುತ್ತದೆ. ನಾಯಿ ತನ್ನ ಆಟಿಕೆಯೊಂದಿಗೆ ಆಡುವುದನ್ನು ಎಷ್ಟು ಇಷ್ಟಪಡುತ್ತದೆ ಎಂಬುದನ್ನು ಈ ವಿಡಿಯೋ ನಮಗೆ ತೋರಿಸುತ್ತದೆ ಅಂತ ಹೇಳಿದರೆ ಸುಳ್ಳಲ್ಲ.ಈ ಪೋಸ್ಟ್ ಪ್ರಕಾರ, ನಾಯಿಯ ಹೆಸರು ಟೆಡ್ಡಿ, ಅದು ಅದರ ಮಾಲೀಕ ಜೊನಾಥನ್ ಅವರೊಂದಿಗೆ ವಾಸಿಸುತ್ತದೆ. ನಾಯಿ ಮತ್ತು ಅದರ ಮಾಲೀಕರು "ಏ ಗಾಯ್ ಆಂಡ್ ಎ ಗೋಲ್ಡನ್" ಎಂಬ ಹೆಸರಿನೊಂದಿಗೆ ಪ್ರತ್ಯೇಕ ಟ್ವಿಟರ್ ಹ್ಯಾಂಡಲ್ ಅನ್ನು ಸಹ ಇವರು ಹೊಂದಿದ್ದಾರೆ.

3 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಈ ವಿಡಿಯೋ
ಕೆಲವೇ ಗಂಟೆಗಳಲ್ಲಿ, ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಪೋಸ್ಟ್ ಅನ್ನು 11,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಮಾಡಿದ್ದಾರೆ ಮತ್ತು ಇನ್ನೂ ಈ ಸಂಖ್ಯೆ ಹೀಗೆ ಮುಂದುವರೆಯುತ್ತಲೇ ಇದೆ. ಹಲವಾರು ಬಳಕೆದಾರರು ಈ ಪೋಸ್ಟ್ ಅನ್ನು ತಮ್ಮದೇ ಆದ ಸಾಕುಪ್ರಾಣಿಗಳೊಂದಿಗೆ ಸಂಬಂಧಿಸಿದ್ದಾರೆ ಮತ್ತು ಸುಂದರವಾದ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಇತರರು ವೀಡಿಯೋವನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ.

ಇದನ್ನೂ ಓದಿ: Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು

ಸಾಕುನಾಯಿಗಳ ಮತ್ತೊಂದು ವಿಡಿಯೋ ವೈರಲ್..
ಇತ್ತೀಚಿನ ಒಂದು ವೈರಲ್ ವಿಡಿಯೋದಲ್ಲಿ ಎರಡು ಗೋಲ್ಡನ್ ರಿಟ್ರೈವರ್ ಗಳು ಬೆಳಿಗ್ಗೆ ತಮ್ಮ ಮನೆಯ ಒಡೆಯನ ಹಾಸಿಗೆಯ ಬಳಿ ಹೋಗಿ ಅವನನ್ನು ನಿದ್ರೆಯಿಂದ ಎಚ್ಚರಗೊಳಿಸುವುದನ್ನು ತೋರಿಸಿದೆ. ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ನಂತರ, ಈ ವೀಡಿಯೋ 1.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.
Published by:Ashwini Prabhu
First published: