Lullaby: ಮಗುವನ್ನು ನಿದ್ರಿಸಲು ಅಜ್ಜಿ ಹೇಳುವ ಲಾಲಿ ಹಾಡು ಹಾಡಿ! ಗೊತ್ತಿಲ್ಲ ಅಂದ್ರೆ ಈ ವಿಡಿಯೋ ನೋಡಿ

ಮೊದಲೇ ಹೇಳಿದಂತೆ ಲಾಲಿ ಹಾಡು ಜಾನಪದ ಹಾಡು ಎಂದು ಹೇಳಬಹುದು. ಏಕೆಂದರೆ ಇದು ಬಾಯಿಂದ ಬಾಯಿಗೆ ಬಂದ ಹಾಡು. ಹಾಗಾಗಿ ಇದನ್ನು ಜಾನಪದದ ಗುಂಪಿಗೆ ಸೇರಿಸಬಹುದು. ಅದರಲ್ಲೂ ಜಾನಪದ ಹಾಡುಗಳೂ ಕೂಡ ಬಾಯಿಂದ ಬಾಯಿಗೆ ಬಂದಂತವು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಪುಟಾಣಿ ಮಕ್ಕಳನ್ನು ನೋಡುವುದೇ ಒಂದು ಚೆಂದ. ಅದರಲ್ಲೂ ಅವರ ನಗು, ತೊದಲು ನುಡಿ ನೋಡಿದಾಗಲಂತೂ ಎಂಥವರ ಮನಸ್ಸು (Mind) ಕೂಡ ಕರಗಿ ಹೋಗುತ್ತದೆ. ಕೆಲವರಂತೂ ಪುಟಾಣಿ ಕಂದಮ್ಮಗಳು (Baby) ಕಂಡರೆ ಸಾಕು ಕೈಯಲ್ಲೆತ್ತಿಕೊಂಡು ಮುದ್ದಾಡದೆ ಇರಲಾರರು. ಮನೆಯಲ್ಲಿರುವ ಹಿರಿಯರು ಅಥವಾ ಅಜ್ಜಿಗಳಿಗೆ ಕಂದನ ಜೊತೆಗೆ ಮಾತನಾಡುತ್ತಾ, ಆಟವಾಡುತ್ತಾ, ಅವರ ಚಾಕರಿ ಮಾಡುತ್ತಾ ಇರುತ್ತಾರೆ. ಮಕ್ಕಳು ಅತ್ತಾಗ ಅವರನ್ನು ಸಮಧಾನ ಮಾಡುವುದೇ ಒಂದು ಸಾಹಸದ ಕೆಲಸ. ಅದರಲ್ಲೂ ಎಲ್ಲರಿಗೆ ಮಕ್ಕಳನ್ನು ಸಮಧಾನ ಮಾಡಲು ಬರುವುದಿಲ್ಲ. ತಾಯಿ (Mother), ಅಜ್ಜಿಯನ್ನು (Grandmother) ಬಿಟ್ಟರೆ ತಂದೆಗೂ ಮಕ್ಕಳನ್ನು ಹೇಗೆ ಸಮಧಾನ ಮಾಡಬೇಕು ಎಂದು ತಿಳಿದಿಲ್ಲ. ಹಿಂದೆಲ್ಲಾ ಮಕ್ಕಳು ಅತ್ತಾಗ ಅವರನ್ನು ಸಮಧಾನ ಮಾಡಿ ನಿದ್ರಿಸುವಂತೆ ಮಾಡಲು ಲಾಲಿ ಹಾಡು ಹಾಡುತ್ತಿದ್ದರು. ಇದೊಂದು ಜನಪದ ಹಾಡು ಆಗಿದೆ. ಅಂದೆಲ್ಲಾ ಬಹುತೇಕ ಮನೆಯಲ್ಲಿನ ಹಿರಿಯರಿಗೆ ಈ ಲಾಲಿ ಹಾಡು (Lullaby) ತಿಳಿದಿತ್ತು. ತಾಯಂದಿರು ಮಗು ಅತ್ತಾಗ ನೇರವಾಗಿ ಹಿರಿಯರನ್ನು ಕರೆದು ಲಾಲಿ ಹಾಡು ಹಾಡುವಂತೆ ಕೇಳುತ್ತಿದ್ದರು. ಆದರೀಗ ಕಾಲ ಬದಲಾದಂತೆ ಲಾಲಿ ಹಾಡುಗಳು ಮರೆಯಾಗಿವೆ. ಈಗೇನಿದ್ದರು ಕ್ಯಾಸೆಟ್​, ಮೊಬೈಲ್​ ಹಾಡುಗಳೇ ಕೇಳಿಬರುತ್ತಿದೆ. ಆದರೆ ನಿಜವಾದ ಲಾಲಿ ಹಾಡು ಹೇಗಿದೆ ಕೇಳೋಣ..

    ಮೊದಲೇ ಹೇಳಿದಂತೆ ಲಾಲಿ ಹಾಡು ಜಾನಪದ ಹಾಡು ಎಂದು ಹೇಳಬಹುದು. ಏಕೆಂದರೆ ಇದು ಬಾಯಿಂದ ಬಾಯಿಗೆ ಬಂದ ಹಾಡು. ಹಾಗಾಗಿ ಇದನ್ನು ಜಾನಪದದ ಗುಂಪಿಗೆ ಸೇರಿಸಬಹುದು. ಅದರಲ್ಲೂ ಜಾನಪದ ಹಾಡುಗಳೂ ಕೂಡ ಬಾಯಿಂದ ಬಾಯಿಗೆ ಬಂದಂತವು. ಹಿಂದಿನ ಕಾಲದಲ್ಲಿ ಮಗುವನ್ನು ನಿದ್ರಿಸಲು ಅಥವಾ ಸಮಧಾನ ಪಡಿಸಲು ಲಾಲಿ ಹಾಡುಗಳನ್ನು ಹಾಡುತ್ತಿದ್ದರು. ಆದರೀಗ ಇಂತಹ ಸಂದರ್ಭಗಳು ಮರೆಯಾಗಿವೆ. ಮಗುವನ್ನು ನಿದ್ರಿಸಲು ಅನೇಕ ಮ್ಯೂಸಿಕ್​ಗಳು ಬಂದಿವೆ, ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ತಾಯಂದಿರು ಇದನ್ನು ಬಳಸಿಕೊಂಡು ಮಗುವನ್ನು ನಿದ್ರಿಸುತ್ತಾರೆ.

    ಲಾಲಿ ಹಾಡಿನಲ್ಲಿ ಏನಿದೆ?

    ಮಕ್ಕಳಿಗೆ ಸ್ನಾನ ಆದ ಬಳಿಕ ಬೇಗನೆ ನಿದ್ರೆ ಬರುತ್ತದೆ. ಅದಕ್ಕೆ ತಾಯಂದಿರುವ ಸಂಜೆಯ ವೇಳೆಗೆ ಮಗುವಿಗೆ ಆಹಾರ ನೀಡಿ, ಬಳಿಕ ಎಣ್ಣೆ ಹಚ್ಚಿ ಆ ಬಳಿಕ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಆದರೆ ಸಂಜೆ ಎಣ್ಣೆ ಹಚ್ಚುವ ಸಮಯದಲ್ಲೇ ಮಗು ನಿದ್ರೆಗೆ ಜಾರುತ್ತದೆ. ಸ್ನಾನ ಆದ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತದೆ. ಒಂದು ವೇಳೆ ನಿದ್ರೆ ಸರಿಯಾದಗೆ ಇದ್ದರೆ ಮಗು ಕೂಗಲು ಶುರು ಮಾಡುತ್ತದೆ. ಈ ವೇಳೆ ಮನೆಯ ಹಿರಿಯರು ಮಕ್ಕಳಿಗೆ ಲಾಲಿ ಹಾಡು ಹಾಡುವುದಿದೆ. ಲಾಲಿ ಹಾಡನ್ನು ಕೇಳುತ್ತಾ ಮಗು ನಿದ್ರಿಸುತ್ತದೆ.

    ಇದನ್ನೂ ಓದಿ: Kodava: ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಕೈಲ್ ಪೊಳ್ದ್

    ಅಂದಹಾಗೆಯೇ ಲಾಲಿ ಹಾಡಿನಲ್ಲಿ ಏನಿದೆ ಎಂಬುದು ಈಗಿನ ಜನರಿಗಂತೂ ತಿಳಿಯದು. ಲಾಲಿ ಹಾಡಿನಲ್ಲಿ ಮಗುವಿನ ವರ್ಣನೆಯಿದೆ. ಸಂಸ್ಕ್ರತಿಯ ವರ್ಣನೆಯಿದೆ. ಸಾಕಷ್ಟು ವಿಚಾರಗಳನ್ನು ಈ ಲಾಲಿ ಹಾಡು ಹೊಂದಿದೆ. ತಾಯಂದಿರು ಅಥವಾ ಅಜ್ಜಿಯರು ಇದನ್ನು ರಾಗವಾಗಿ ಹಾಡುತ್ತಾರೆ. ಇಲ್ಲಿ ಇವರೇ ಮ್ಯೂಸಿಕ್​ ಕಂಪೋಸರ್​ ಆಗಿರುವುದರಿಂದ ಅವರ ರಾಗಕ್ಕೆ ಮಗು ಹಾಡು ಕೇಳುತ್ತಾ ನಿದ್ರಿಸುತ್ತದೆ.



    ಇದನ್ನೂ ಓದಿ: Diet And Health: ಮೂವತ್ತರ ನಂತರವೂ ಫಿಟ್ ಆಗಿರಲು ನಿಮ್ಮ ಆಹಾರದಲ್ಲಿ ಈ ಪೋಷಕಾಂಶ ಸೇರಿಸಿ

    ನಿಮಗೆ ಗೊತ್ತಾ ಕೃಷ್ಣ ಮರದ ಕೆಳಗೆ ಕೊಳಲನ್ನು ಊದುತ್ತಿರುವಾಗ ಹಸುಗಳು ಅದರ ರಾಗಕ್ಕೆ ಆನಂದದಿಂದ ಹುಲ್ಲು ತಿನ್ನುತ್ತಿದ್ದವಂತೆ. ಅಷ್ಟೇ ಏಕೆ ಕೊಳಲಿನ ಧ್ವನಿಗೆ ಆಕಳುಗಳು ಹಾಲು ನೀಡುತ್ತಿದ್ದವಂತೆ. ಅದೇ ರೀತಿ ಇಲ್ಲಿ ತಾಯಿಯ ಲಾಲಿ ಹಾಡಿಗೆ ಮಕ್ಕಳು ನಿದ್ರಿಸುತ್ತಾರೆ. ಸದ್ಯಕ್ಕಂತೂ ಲಾಲಿ ಹಾಡು ಎಂಬುದು ಮರೆಯಾಗಿದೆ. ಬೆರಳೆಣಿಕೆಯಷ್ಟು ಹಿರಿಯರಿಗೆ ಮಾತ್ರ ಈ ಲಾಲಿ ಹಾಡುಗಳ ನೆನಪಿದೆ. ಒಂದು ವೇಳೆ ಇದನ್ನು ಕಲಿಯುವ ಹಂಬಲ ನಿಮಗಿದ್ದರೆ ಈ ವಿಡಿಯೋದಲ್ಲಿದೆ ನೋಡಿ.
    Published by:Harshith AS
    First published: