Viral Video: ತಾಯಿ ಹಾಡುತ್ತಿರುವ ಹಾಡನ್ನು ತನ್ಮಯತೆಯಿಂದ ಆಲಿಸುತ್ತಿರುವ ಮಗುವಿನ ವಿಡಿಯೋ ವೈರಲ್!

Cute Baby Listening Mother Song: ಈ ಸಣ್ಣ ವಿಡಿಯೋ ತುಣುಕನ್ನು ಬುಟೆಂಜೆಬೈಡನ್ ಎಂಬ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದನ್ನು ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ತುಂಬಾನೇ ವೈರಲ್ ಆಗಿದೆ.

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

  • Share this:

ಈ ಚಿಕ್ಕ ಮಕ್ಕಳು ನೋಡಲು ಎಷ್ಟು ಅಂದವಾಗಿರುತ್ತವೆ ಮತ್ತು ಅದರಲ್ಲಿಯೂ ಈ ಮಕ್ಕಳು ನಗುವುದನ್ನು ನೋಡುವುದಕ್ಕೆ ನಮ್ಮ ಎರಡು ಕಣ್ಣುಗಳು ಸಾಲದು. ನಾವು ಎಷ್ಟೇ ಒತ್ತಡದಿಂದ ಇದ್ದರೂ ಪುಟ್ಟ ಮಗುವಿನ ಜೊತೆಗೆ ಆಟವಾಡಿದರೆ ಸಾಕು ಮನಸ್ಸಿಗೆ ತುಂಬಾನೇ ಖುಷಿ ಆಗುತ್ತದೆ.ನೀವು ನಿಮ್ಮ ದಿನವನ್ನು ಪ್ರಾರಂಭಿಸುವ ಮುಂಚಿತವಾಗಿ ಬೆಳಿಗ್ಗೆ ನೀವು ಒಂದು ಮಗುವಿನ ಜೊತೆಗೆ ಸ್ವಲ್ಪ ಕಾಲ ಆಟವಾಡಿದರೆ ಆ ದಿನವೂ ನಿಮಗೆ ಒಂದು ಬಗೆಯ ಮನಸ್ಸಿಗೆ ಮುದ ಎನಿಸುವುದು ಸುಳ್ಳಲ್ಲ.


ಈ ಕಂದಮ್ಮಗಳು ತಮ್ಮ ತಾಯಿಯ ಕಂಕುಳಲ್ಲಿ ಮಲಗಿ ಅದರ ಎರಡು ಕಾಲುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಆಟವಾಡುತ್ತಿರುತ್ತವೆ ಮತ್ತು ನಾವು ಮಾಡುತ್ತಿರುವುದನ್ನು ತುಂಬಾ ಗಮನವಿಟ್ಟು ಕಣ್ಣು ಮಿಟುಕಿಸದೇ ನೋಡುವುದನ್ನು ನೋಡುವುದೇ ತುಂಬಾನೇ ಖುಷಿ ನೀಡುತ್ತದೆ.


ಇಂತಹದೇ ಒಂದು ಮುದ್ದಾದ ಮಗುವು ತನ್ನ ತಾಯಿಯ ತೋಳಿನಲ್ಲಿ ಮಲಗಿ ತಾಯಿಯು ಹಾಡುತ್ತಿರುವಂತಹ ಹಾಡನ್ನು ಕಣ್ಣು ಮಿಟುಕಿಸದೇ ಅತ್ತ ಇತ್ತ ಹೊರಳಾಡದೆ ಕೇಳಿ ಕಿಲಕಿಲ ನಗುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ.


ಈ 38 ಸೆಕೆಂಡುಗಳ ವೀಡಿಯೋ ತುಣುಕಿನಲ್ಲಿ ಒಬ್ಬ ತಾಯಿಯೂ ತನ್ನ ಪುಟ್ಟ ಕಂದಮ್ಮನಿಗಾಗಿ ಹಾಡೊಂದನ್ನು ಹಾಡುತ್ತಿದ್ದಾಳೆ ಮತ್ತು ಆ ಹಾಡನ್ನು ತುಂಬಾನೇ ಗಮನವಿಟ್ಟು ಆ ಪುಟ್ಟ ಕಂದಮ್ಮ ತನ್ನ ಕೈಯನ್ನು ಕೆನ್ನೆಯ ಕೆಳಗೆ ಇಟ್ಟುಕೊಂಡು ನೋಡುತ್ತಿದೆ. ವೀಡಿಯೋ ಕೊನೆಯಲ್ಲಿ ಆ ತಾಯಿಯೂ ತನ್ನ ಕಂದಮ್ಮನ ಮೂಗಿಗೆ ಒಂದು ಮುತ್ತನ್ನು ನೀಡುತ್ತಾಳೆ, ಆಗ ಪುಟ್ಟ ಕಂದಮ್ಮ ತನ್ನ ತಾಯಿಯನ್ನು ನೋಡಿ ನಗುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.


ಈ ಸಣ್ಣ ವಿಡಿಯೋ ತುಣುಕನ್ನು ಬುಟೆಂಜೆಬೈಡನ್ ಎಂಬ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದನ್ನು ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ತುಂಬಾನೇ ವೈರಲ್ ಆಗಿದೆ.





ಇದನ್ನೂ ಓದಿ: ಕೆಣಕಿದ ಯುವಕನನ್ನ ಬೆನ್ನಟ್ಟಿದ ಹುಂಜ- ನೆಟ್ಟಿಗರಲ್ಲಿ ನಗು ಮೂಡಿಸಿದ ವೈರಲ್ ವಿಡಿಯೋ

"ತಾಯಿಯ ಹಾಡನ್ನು ತುಂಬಾನೇ ಗಮನವಿಟ್ಟು ಆಲಿಸುತ್ತಿರುವ ಪುಟ್ಟ ಕಂದಮ್ಮ" ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದನ್ನು ನಾವು ಕಾಣಬಹುದಾಗಿದೆ. ಈ ವೀಡಿಯೋವನ್ನು 17,000ಕ್ಕೂ ಹೆಚ್ಚು ಜನರು ನೋಡಿ ಇಷ್ಟಪಟ್ಟಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು ತಮ್ಮ ಪ್ರತಿಕ್ರಿಯೆಯನ್ನು ಸಹ ಬರೆದಿದ್ದಾರೆ ಮತ್ತು ಅನೇಕರು ಈ ವೀಡಿಯೋವನ್ನು ಮೆಚ್ಚಿಕೊಂಡು ಮರುಟ್ವೀಟ್ ಸಹ ಮಾಡಿದ್ದಾರೆ.


ಈ ವೈರಲ್ ಆದ ಮುದ್ದಾದ ವಿಡಿಯೋವನ್ನು ನೋಡಿ ನೆಟ್ಟಿಗರು ತಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ಅವರ ನೆನಪನ್ನು ಮೆಲುಕು ಹಾಕಿದರೆ, ಇನ್ನೂ ಕೆಲವರು ಈ ವೀಡಿಯೋ ನೋಡಿ ಮಗುವಿನ ನಗುವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ.


ಇಂತಹ ವಿಡಿಯೋ ವೈರಲ್ ಆಗಿದ್ದು ಇದೇನು ಮೊದಲಲ್ಲ, ಕೆಲವು ದಿನಗಳ ಹಿಂದೆ ಒಂದು ಮಗು ನಾಯಿಮರಿಗಳು ಆಟವಾಡುತ್ತಿದ್ದುದ್ದನ್ನು ತುಂಬಾ ಹತ್ತಿರದಲ್ಲಿಯೇ ಕುಳಿತುಕೊಂಡು ನೋಡುತ್ತಿದ್ದ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಹೀಗೆ ಪುಟ್ಟ ಕಂದಮ್ಮಗಳು ಏನೇ ಮಾಡಿದರೂ ಅದು ತುಂಬಾ ಮುದ್ದಾಗಿ ಕಾಣುತ್ತದೆ. ಹಾಗಾಗಿ ಇಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಬೇಗನೆ ವೈರಲ್ ಆಗುತ್ತವೆ.


ಇದನ್ನೂ ಓದಿ: ಬಾರ್ಬಿ ಗೊಂಬೆಯಂತೆ ಕಾಣಲು ಬರೋಬ್ಬರಿ 24 ಲಕ್ಷ ಖರ್ಚು ಮಾಡಿದ ಆಸ್ಟ್ರೇಲಿಯಾದ ಯುವತಿ

ಸಾಮಾಜಿಕ ಜಾಲಾತಾಣಗಳೇ ಹಾಗೆ ಒಂದು ಮೂಲೆಯ ವಿಚಾರವನ್ನ ಇನ್ನೊಂದು ಮೂಲೆಗೆ ತಲುಪಿಸುವ ಕೆಲಸ ಮಾಡುತ್ತವೆ. ಇಂಥಹ ವಿಡಿಯೋಗಳನ್ನು ನೋಡಿ ಹಲವಾರು ಜನರ ಮುಖದಲ್ಲಿ ಮಂದಹಾಸ ಬೀರುತ್ತದೆ. ಕೆಲವರ ದಿನ ಚನ್ನಾಗಿರಲಿಲ್ಲ ಎಂದರೆ ಅದನ್ನು ಚನ್ನಾಗಿ ಮಾಡುವ ಶಕ್ತಿ ಈ ವಿಡಿಯೋಗಳಿದೆ.
Published by:Sandhya M
First published: