• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Monkey Business: ಬಸ್ಸಿನಲ್ಲಿ ನಾಲ್ಕು ವಿದೇಶಿ ಮಂಗಗಳ ಕಳ್ಳಸಾಗಣೆ, ಈ ಕೋತಿಗಳ ರೇಟ್ ಕೇಳಿ ನೀವು ಮೂರ್ಛೆ ಹೋದ್ರೆ ನಾವು ಜವಾಬ್ದಾರರಲ್ಲ!

Monkey Business: ಬಸ್ಸಿನಲ್ಲಿ ನಾಲ್ಕು ವಿದೇಶಿ ಮಂಗಗಳ ಕಳ್ಳಸಾಗಣೆ, ಈ ಕೋತಿಗಳ ರೇಟ್ ಕೇಳಿ ನೀವು ಮೂರ್ಛೆ ಹೋದ್ರೆ ನಾವು ಜವಾಬ್ದಾರರಲ್ಲ!

ಸಾಂದರ್ಭಿಕ ಚಿತ್ರ:

ಸಾಂದರ್ಭಿಕ ಚಿತ್ರ:

ವಿದೇಶಿ ಮೂಲದ 4 ಮಂಗಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ 8 ರಂದು ಅಸ್ಸಾಂನಿಂದ ಸಿಲಿಗುರಿಗೆ ಹೋಗುವ ಬಸ್‍ನಲ್ಲಿ ವಿದೇಶಿ ಮಂಗಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ, ಸಿಲಿಗುರಿಯ ಬಸ್ ಒಂದಕ್ಕೆ (ಸಂಖ್ಯೆ- ಎಎಸ್19ಸಿ-937) ಮುತ್ತಿಗೆ ಹಾಕಿ, ಅಧಿಕಾರಿಗಳು ಆ ವಿದೇಶಿ ಕೋತಿಗಳನ್ನು ವಶಕ್ಕೆ ಪಡೆದರು. 

ಮುಂದೆ ಓದಿ ...
  • Share this:

ಉತ್ತರ ಬಂಗಾಳದ (North Bengal) ಕಮೀಷನರ್ ಆಫ್ ಕಸ್ಟಮ್ಸ್ ಜಲ್‍ಪೈಗುರಿ ಪ್ರಿವೆಂಟಿವ್ (Commissioner of Customs Jalpaiguri Preventive) ಘಟಕದ ಅಧಿಕಾರಿಗಳು, ಬಸ್ (Bus) ಒಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಿದೇಶಿ (Foreign) ಮೂಲದ 4 ಮಂಗಗಳನ್ನು (Monkey) ವಶಪಡಿಸಿಕೊಂಡಿದ್ದಾರೆ. ಮೇ 8 ರಂದು ಅಸ್ಸಾಂನಿಂದ ಸಿಲಿಗುರಿಗೆ ಹೋಗುವ ಬಸ್‍ನಲ್ಲಿ ವಿದೇಶಿ ಮಂಗಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ, ಸಿಲಿಗುರಿಯ ಬಸ್ ಒಂದಕ್ಕೆ (ಸಂಖ್ಯೆ- ಎಎಸ್19ಸಿ-937) ಮುತ್ತಿಗೆ ಹಾಕಿ, ಅಧಿಕಾರಿಗಳು (Officers) ಆ ವಿದೇಶಿ ಕೋತಿಗಳನ್ನು ವಶಕ್ಕೆ ಪಡೆದರು. ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ಆರಂಭಿಸಿದ್ದ ಅಧಿಕಾರಿಗಳಿಗೆ, ಆ ಬಸ್ಸು ಮೈನಾಗೂರಿನ ಕಡೆಗೆ ಚಲಿಸುತ್ತಿರುವುದು ಗಮನಕ್ಕೆ (Attention) ಬಂತು. ಮೇ 9 ರಂದು ಮುಂಜಾವಿನ ವೇಳೆ ಸುಮಾರು 3.30 ಕ್ಕೆ ಬಸ್ಸನ್ನು ತಡೆದು ನಿಲ್ಲಿಸಿದರು.


ಬಸ್‍ನ ಲೋವರ್ ಬೇಸ್‍ನ ಡೆಕ್‍ನಲ್ಲಿ ನಾಲ್ಕು ಮಂಗಗಳು
ತೀವ್ರ ಶೋಧದ ಬಳಿಕ, ಬಸ್‍ನ ಲೋವರ್ ಬೇಸ್‍ನ ಡೆಕ್‍ನಲ್ಲಿ ನಾಲ್ಕು ಮಂಗಗಳನ್ನು ಪಂಜರದಲ್ಲಿ ಬಚ್ಚಿಡಲಾಗಿರುವುದು ಕಂಡು ಬಂತು. ಆ ವಿದೇಶಿ ಮಂಗಗಳು ಯಾರಿಗೆ ಸೇರಿದ್ದು ಎಂದು ಬಸ್ಸಲ್ಲಿ ಇದ್ದವರನ್ನು ವಿಚಾರಿಸಿದಾಗ, ಯಾರೂ ಅದು ತಮ್ಮದೆಂದು ಹೇಳಿಕೊಂಡು ಮುಂದೆ ಬರಲಿಲ್ಲ.


ವಿದೇಶಿ ಮೂಲದ ಮಂಗಗಳು
ಆ ನಾಲ್ಕು ಮಂಗಗಳು ವಿದೇಶಿ ಮೂಲದ್ದೆಂದು ತಿಳಿದು ಬಂದಿದ್ದು, ಅವುಗಳನ್ನು ಚೈನಾ ಅಥವಾ ಬ್ಯಾಂಕಾಕ್ ಅಥವಾ ಆಸ್ಟ್ರೇಲಿಯಾದಿಂದ ಕಳ್ಳಸಾಗಾಣೆ ಮಾಡಲಾಗುತ್ತಿದ್ದು, ಮಧ್ಯ ಪೂರ್ವ ದೇಶಗಳಿಗೆ ಕಳುಹಿಸಲಾಗುತ್ತಿತ್ತು ಎಂದು ಊಹಿಸಲಾಗಿದೆ.


ಆಗ ಇನ್ನೂ ಕತ್ತಲೆ ಇದ್ದುದ್ದರಿಂದ, ಆ ಅವಕಾಶವನ್ನು ಬಳಸಿಕೊಂಡು, ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಪರಾರಿಯಾಗಿದ್ದಾರೆ. ಆ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರು. ಹಾಗಾಗಿ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ, ಜಲ್‍ಪೈಗುರಿ ಕಸ್ಟಮ್ ಅಧಿಕಾರಿಗಳು, ಸ್ಥಳೀಯ ಚಾಲಕನೊಬ್ಬನ ವ್ಯವಸ್ಥೆ ಮಾಡಿ, ಬಸ್ಸನ್ನು ಪ್ರಯಾಣಿಕರು ಮತ್ತು ಮಂಗಗಳ ಸಮೇತ ಸಿಲಿಗುರಿಗೆ ತಂದರು.


ಇದನ್ನೂ ಓದಿ:  Lamborghini: ಈತ ಶ್ರೀಮಂತ ಬಾಲಕ! 10ನೇ ವಯಸ್ಸಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್​​ ಪಡೆದುಕೊಂಡLamborghini: ಈತ ಶ್ರೀಮಂತ ಬಾಲಕ! 10ನೇ ವಯಸ್ಸಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್​​ ಪಡೆದುಕೊಂಡ


ಬಳಿಕ ಕಸ್ಟಮ್ ಅಧಿಕಾರಿಗಳು, ಸಿಲಿಗುರಿಯ ಸಲುಗಾರದ ಬೆಂಗಾಲ್ ಸಫಾರಿಯ ನಾರ್ತ್ ಬೆಂಗಾಲ್ ವೈಲ್ಡ್ ಪಾರ್ಕ್‍ನ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿದರು. ಅದರಂತೆ, ಆ ನಾಲ್ಕು ವಿದೇಶಿ ಮಂಗಗಳನ್ನು ಕಸ್ಟಮ್ ಅಧಿಕಾರಿಗಳು, ಬಂಗಾಳ ಸಫಾರಿಗೆ ತೆಗೆದುಕೊಂಡು ಹೋಗಿ, ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿದರು.


ಮಂಗಗಳ ಬೆಲೆ ಎಷ್ಟು?
ಬಂಗಾಳ ಸಫಾರಿಯ ಅಧಿಕಾರಿಗಳಿಗೆ, ಬಸ್‍ನಲ್ಲಿ ವಶಪಡಿಸಿಕೊಂಡಿದ್ದ ಆ ಮಂಗಗಳನ್ನು ಹಸ್ತಾಂತರಿಸುವ ಮೊದಲು, ಕಸ್ಟಮ್ ಅಧಿಕಾರಿಗಳು, ವನ್ಯಜೀವಿ ಸುರಕ್ಷತಾ ಕಾಯಿದೆ 1972 ಅನ್ನು ಉಲ್ಲಂಘಿಸಿ, ಭಾರತಕ್ಕೆ ವನ್ಯಜೀವಿಗಳನ್ನು ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡಿದ್ದಕ್ಕಾಗಿ, ಆ ಮಂಗಗಳನ್ನು 1962 ರ ಕಸ್ಟಮ್ ಆ್ಯಕ್ಟಿನ 11ಒ ಸೆಕ್ಷನ್ ಅಡಿಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ ಮತ್ತು ಅವುಗಳ ಮೌಲ್ಯ 1, 10,00,000 ರೂ,ಗಳು (ಅರಣ್ಯ ಅಧಿಕಾರಿಗಳು ಮಾಡಿರುವ ಅಂದಾಜು ಮೌಲ್ಯಮಾಪನ) ಎಂದು ತಿಳಿದುಬಂದಿದೆ.


ಆ ನಾಲ್ಕು ಮಂಗಗಳಿಗೆ ಪ್ರಸ್ತುತ ಸಾಲುಗರದ ಬೆಂಗಾಲ್ ಸಫಾರಿ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚೀಫ್ ವೈಲ್ಡ್‍ಲೈಫ್ ವಾರ್ಡನ್ ದೇಬಲ್ ರಾಯ್ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆ ನಾಲ್ಕು ಮಂಗಗಳು ತೀವ್ರ ನಿರ್ಜಲೀಕರಣದ ಸ್ಥಿತಿಯಲ್ಲಿ ಇದ್ದವು. ಆದರೆ ಈಗ ಅವುಗಳ ಸ್ಥಿತಿ ಸರಿಯಾಗಿದೆ ಮತ್ತು ಅವು ಪಶು ವೈದ್ಯರ ತಂಡದ ಆರೈಕೆಯಲ್ಲಿವೆ ಎಂದು ಅವರು ಹೇಳಿದ್ದಾರೆ.


ಆರೋಪಿಗಳನ್ನು ಬಂಧಿಸರು ಪೊಲೀಸರಿಂದ ಶೋಧಕಾರ್ಯ
“ದುರಾದೃಷ್ಟವಶಾತ್, ಪ್ರಾಣಿಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದವರನ್ನು ಬಂಧಿಸಲು ಸಾಧ್ಯವಾಗಲಿಲ್ಲ” ಎಂದ ಅವರು, “ಅಸ್ಸಾಂ- ಉತ್ತರ ಬಂಗಾಳ ಕಾರಿಡಾರ್ ಮೂಲಕ ನಡೆಯುವ ವನ್ಯಜೀವಿಗಳ ಕಳ್ಳಸಾಗಾಣಿಕೆಯನ್ನು ತಡೆಯಲು ಅರಣ್ಯ ಇಲಾಖೆಯು, ಕಸ್ಟಮ್ ಮತ್ತು ಪೊಲೀಸ್ ಇಲಾಖೆಯ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ:  Pregnant Women: ಭೋರ್ಗೆರೆವ ಅಲೆಗಳ ನಡುವೆ ಸಮುದ್ರದ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ


ಆ ನಾಲ್ಕು ವಿದೇಶಿ ಮಂಗಗಳನ್ನು ಮೃಗಾಲಯದಲ್ಲೇ ಇಡಬೇಕೋ ಅಥವಾ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಬೇಕೋ ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದರು. ಈ ಪ್ರಕರಣದ ಕುರಿತ ಹೆಚ್ಚುವರಿ ತನಿಖೆ ಪ್ರಗತಿಯಲ್ಲಿದೆ.

Published by:Ashwini Prabhu
First published: