Viral Video: ಒಂದು ಕೂದಲೆಳೆಯನ್ನು ಕತ್ತರಿಸಿದಕ್ಕೆ ಎಷ್ಟು ಟಿಪ್ಸ್ ನೀಡಿದ್ದಾರೆ ನೋಡಿ!

ಯಾರಿಗಾದರೂ ಒಂದು ಚಿಕ್ಕ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಜನರ ಮಧ್ಯೆ ಸ್ಟೀವನ್ ಈ ವಿಡಿಯೋದಲ್ಲಿ ಅನೇಕರ ಬಳಿ ಹೋಗಿ ಹಣ ಸಹಾಯ ಮಾಡಿ ಅವರ ಮುಖದಲ್ಲಿ ನಗು ತಂದಿರುವುದನ್ನು ಕಾಣಬಹುದಾಗಿದೆ.

Steven Schapiro

Steven Schapiro

  • Share this:

ನಾವು ಮಾಡಿದಂತಹ ಕೆಲಸಗಳಿಗೆ ಸೂಕ್ತವಾದ ಬೆಲೆ ನೀಡಲು ನೂರು ಬಾರಿ ಯೋಚನೆ ಮಾಡುವಂತಹ ಕಾಲವಿದು, ಅಂತಹದರಲ್ಲಿ ಇಲ್ಲಿ ಒಬ್ಬ ವ್ಯಕ್ತಿ ತನ್ನ ಒಂದು ಕೂದಲಿನ ಎಳೆ ಕತ್ತರಿಸಲು ಕೇಶ ವಿನ್ಯಾಸಕಿಗೆ ಎಷ್ಟು ಹಣ ಟಿಪ್ಸ್ ಆಗಿ ನೀಡಿದ್ದಾರೆ ಅಂತ ನೋಡಿದರೆ ನೀವು ಇಂತಹ ಮಹಾನುಭಾವರೂ ಇರುತ್ತಾರೆಯೇ ಸಮಾಜದಲ್ಲಿ ಎಂದು ಅಚ್ಚರಿಯಾಗುವುದಂತೂ ಗ್ಯಾರಂಟಿ. ಸ್ಟೀವನ್ ಸ್ಕ್ಯಾಪಿರೋ ಎನ್ನುವ ಯೂಟ್ಯೂಬ್ ಖಾತೆ ಹೊಂದಿರುವಂತಹ ವ್ಯಕ್ತಿಯು ಸುಮಾರು ಕೇಶ ವಿನ್ಯಾಸಕರ ಸೆಲೂನ್‌ಗೆ ಹೋಗಿದ್ದು, ತನ್ನ ಒಂದೇ ಒಂದು ಕೂದಲೆಳೆ ಕತ್ತರಿಸಲು ಹೇಳುತ್ತಾನೆ. ಕೇಶ ವಿನ್ಯಾಸಕರು ಅವರ ಒಂದು ಕೂದಲಿನ ಎಳೆಯನ್ನು ಕತ್ತರಿಸಿದ ನಂತರ ಅವರಿಗೆ ಟಿಪ್ಸ್ ನೀಡಿ ಹೋಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಯಾರಿಗಾದರೂ ಒಂದು ಚಿಕ್ಕ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಜನರ ಮಧ್ಯೆ ಸ್ಟೀವನ್ ಈ ವಿಡಿಯೋದಲ್ಲಿ ಅನೇಕರ ಬಳಿ ಹೋಗಿ ಹಣ ಸಹಾಯ ಮಾಡಿ ಅವರ ಮುಖದಲ್ಲಿ ನಗು ತಂದಿರುವುದನ್ನು ಕಾಣಬಹುದಾಗಿದೆ.


ಸ್ಟೀವನ್ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಸೆಲೂನ್ ಗಳಿಗೆ ಹೋಗಿ ತಮ್ಮ ಒಂದು ಕೂದಲೆಳೆ ಕತ್ತರಿಸಿದಕ್ಕಾಗಿ ಅವರಿಗೆ ಟಿಪ್ಸ್ ನೀಡಿರುವುದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.


ವಿಡಿಯೋದಲ್ಲಿ, ಆತ ಕೇಶ ವಿನ್ಯಾಸಕಿಯೊಂದಿಗೆ ಮಾತಿಗಿಳಿದಿದ್ದು ಕಂಡುಬರುತ್ತದೆ. ಮೊದಲಿಗೆ, ಅವನ ಕೋರಿಕೆಯಿಂದ ಅವಳು ದಿಗ್ಭ್ರಮೆಗೊಂಡಳು. "ನೀನು ಇಲ್ಲಿಗೆ ಬಂದಿರುವುದು ಕೇವಲ ನಿನ್ನ ಒಂದು ಕೂದಲೆಳೆಯನ್ನು ಕತ್ತರಿಸಿಕೊಳ್ಳುವುದಕ್ಕೆ ಅಷ್ಟೆನಾ, ನಾನು ಬೇರೆ ಏನನ್ನೂ ಮಾಡಬೇಕಾಗಿಲ್ಲವೇ" ಎಂದು ಅವನನ್ನು ತುಂಬಾ ವಿನಯದಿಂದ ಕೇಳುತ್ತಾಳೆ. ಆಗ ಅವನು ನನಗೆ ಕೇವಲ ಒಂದೇ ಕೂದಲೆಳೆಯನ್ನು ಕತ್ತರಿಸಿಕೊಳ್ಳಬೇಕಾಗಿತ್ತು ಎಂದು ಹೇಳುತ್ತಾನೆ.


ನಾನೇನೂ ಮಾಡಿಲ್ಲ. ಹಾಗಾಗಿ ನನಗೆ ಏನು ಕೊಡಬೇಡ ಎಂದು ಅವಳು ಹೇಳುತ್ತಾಳೆ. ತನ್ನ ಕೂದಲಿನ ಕೇವಲ ಒಂದು ಎಳೆ ಕತ್ತರಿಸಲು ಆಕೆಗೆ 500 ಡಾಲರ್ ಟಿಪ್ಸ್ ನೀಡಿದನು. ಅದನ್ನು ಮೊದಲಿಗೆ ಬೇಡ ಎಂದು ತಿರಸ್ಕರಿಸಿದರೂ ನಂತರ ಆಕೆ ಅದನ್ನು ಇಟ್ಟುಕೊಂಡು ನನಗೆ ಅಂಗಡಿಯ ಬಾಡಿಗೆ ಕಟ್ಟಲು ಹಣವಿರಲಿಲ್ಲ ಎಂದು ಹೇಳಿದಳು. “ನಾನು ಬಾಡಿಗೆ ಹಣ ಹೇಗೆ ಹೊಂದಿಸುವುದು ಎಂದು ತುಂಬಾ ಚಿಂತಿತಳಾಗಿದ್ದೆ, ದೇವರೇ ನಿಮ್ಮನ್ನು ಕಳುಹಿಸಿದ್ದಾರೆ” ಎಂದು ಖುಷಿಯಿಂದ ಸ್ಟೀವನ್ ಅನ್ನು ತಬ್ಬಿಕೊಂಡಿದ್ದು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.




ಹೃದಯ ಸ್ಪರ್ಶಿಸುವ ಈ ವಿಡಿಯೊವನ್ನು ಆಗಸ್ಟ್ 9 ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಯಿತು. ಇಲ್ಲಿಯವರೆಗೆ, ಇದನ್ನು 2,47,633 ಜನರು ವೀಕ್ಷಿಸಿದ್ದಾರೆ. ನಂತರ, ಇದನ್ನು ರೆಡ್ಡಿಟ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಯಿತು.


"ಮೊದಲು ಸೆಲೂನ್‌ನಲ್ಲಿರುವ ಕೇಶ ವಿನ್ಯಾಸಕಿ ಒಂದು ಕೂದಲೆಳೆ ಕತ್ತರಿಸಿದ್ದಕ್ಕಾಗಿ ಏನೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಾಳೆ. ಅವಳಿಗೆ ಬಾಡಿಗೆ ಹಣ ಹೊಂದಿಸ ಬೇಕಿದ್ದರೂ ಅವಳು ಅದನ್ನು ತೋರಿಸಿಕೊಳ್ಳದೆ ದೊಡ್ಡ ಗುಣ ಮೆರೆದಿದ್ದಾಳೆ," ಎಂದು ನೆಟ್ಟಿಗರು ಬರೆದಿದ್ದಾರೆ.


First published: