HOME » NEWS » Trend » CUSTOMER GIVES RS 36 LAKH TIP ON RS 15000 BILL COPY OF THE BILL PHOTO GOES VIRAL HG

ಅಯ್ಯೋ..! 15 ಸಾವಿರ ಬಿಲ್​ ಆಗಿದ್ದಕ್ಕೆ ಹೋಟೆಲ್​ ವೇಟರ್​ಗೆ ಆತ ನೀಡಿದ್ದು 36 ಲಕ್ಷ ರೂಪಾಯಿ ಟಿಪ್​​!

ಹೌದು. ಅಮೆರಿಕದಲ್ಲಿ ಇಂತಹದೊಂದು ಘಟನೆ ನಡೆದಿದೆ. ಅಲ್ಲಿನ ಆಂಥೋನಿ ಅಟ್​ ಪ್ಯಾಕ್ಸನ್​​ ರೆಸ್ಟೋರೆಂಟ್​​ಗೆ ಗ್ರಾಹಕನೊಬ್ಬ ಬಂದಿದ್ದ. ಬೇಕಾದ ಆಹಾರಗಳನ್ನು ಆರ್ಡರ್​ ಮಾಡಿದ್ದಾನೆ. ಆತ ಆರ್ಡರ್​ ಮಾಡಿದಂತೆ ವೇಟರ್​ ಆತನಿಗೆ ತಂದುಕೊಟ್ಟಿದ್ದಾಳೆ.

news18-kannada
Updated:December 18, 2020, 8:22 PM IST
ಅಯ್ಯೋ..! 15 ಸಾವಿರ ಬಿಲ್​ ಆಗಿದ್ದಕ್ಕೆ ಹೋಟೆಲ್​ ವೇಟರ್​ಗೆ ಆತ ನೀಡಿದ್ದು 36 ಲಕ್ಷ ರೂಪಾಯಿ ಟಿಪ್​​!
ಹಣ
  • Share this:
ಹೋಟೆಲ್​ಗೆ​ ತೆರಳಿ ಬೇಕಾದ ತಿಸಿಸನ್ನ ತಿಂದ ನಂತರ ಆಹಾರ ತಂದು ಕೊಟ್ಟ ವೇಟರ್​ಗೆ ಟಿಪ್​​​​​ ಕೊಡುವುದು ಮಾಮೂಲಿ. ಕೆಲವರು 100, 200, 500, 1000 ರೂ ಟಿಪ್ಸ್​ ನೀಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ದುಬಾರಿ ಟಿಪ್​ ನೀಡಿದ್ದಾನೆ. ಆತ ವೇಟರ್​ ನೀಡಿದ ಟಿಪ್​ ಎಷ್ಟೆಂದು ತಿಳಿದರೆ ಅಚ್ಚರಿ ಆಗೋದರಲ್ಲಿ ನೋ ಡೌಟ್​!

ಹೌದು. ಅಮೆರಿಕದಲ್ಲಿ ಇಂತಹದೊಂದು ಘಟನೆ ನಡೆದಿದೆ. ಅಲ್ಲಿನ ಆಂಥೋನಿ ಅಟ್​ ಪ್ಯಾಕ್ಸನ್​​ ರೆಸ್ಟೋರೆಂಟ್​​ಗೆ ಗ್ರಾಹಕನೊಬ್ಬ ಬಂದಿದ್ದ. ಬೇಕಾದ ಆಹಾರಗಳನ್ನು ಆರ್ಡರ್​ ಮಾಡಿದ್ದಾನೆ. ಆತ ಆರ್ಡರ್​ ಮಾಡಿದಂತೆ ವೇಟರ್​ ಆತನಿಗೆ ತಂದುಕೊಟ್ಟಿದ್ದಾಳೆ.

ವ್ಯಕ್ತಿ ಸುಮಾರು 205 ಡಾಲರ್​ (15 ಸಾವಿರ ರೂಪಾಯಿ)ನಷ್ಟು ಆಹಾರವನ್ನು ತಿಂದಿದ್ದಾನೆ. ನಂತರ ಗಿಯನ್ನಾ ಡಿ ಏಂಜೆಲೊ ಎಂಬ ವೇಟರ್​ ಆತನಿಗೆ ಬಿಲ್​ ತಂದುಕೊಟ್ಟಿದ್ದಾಳೆ. ಆದರೆ ಆತ ಮಾತ್ರ ಗಿಯನ್ನಾ ಡಿ ಏಂಜೆಲೊಗೆ 36 ಲಕ್ಷ ರೂಪಾಯಿ ಟಿಪ್​ ನೀಡಿದ್ದಾನೆ.  ಒಂದೇ ಸಮನೆ ದುಬಾರಿ ಟಿಪ್​​ ನೀಡಿದ್ದನ್ನು ನೋಡಿ ಗಿಯನ್ನಾ ಡಿ ಏಂಜೆಲೊ ಅಚ್ಚರಿಗೆ ಒಳಗಾಗಿದ್ದಾಳೆ. ನಂತರ ಸ್ವೀಕರಿಸಿದ್ದಾಳೆ.

ಆಂಥೋನಿ ಅಟ್​​ ಪ್ಯಾಕ್ಸನ್​ ರೆಸ್ಟೊರೆಂಟ್​ ಈ ವಿಚಾರವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ಬಿಲ್ಲಿನ ಫೋಟೋವನ್ನು ಶೇರ್​ ಮಾಡಿದ್ದಾರೆ. ಅನೇಕರು ಈ ಫೋಟೋವನ್ನು ಕಂಡು ಅಚ್ಚರಿ ಸೂಚಿಸಿದ್ದಾರೆ.ಗಿಯನ್ನಾ ಡಿ ಏಂಜೆಲೊ 36 ಲಕ್ಷವನ್ನು ಟಿಪ್ಸ್​ ಆಗಿ ಪಡೆದ ನಂತರ ಆ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾಳೆ. ಅಷ್ಟು ಹಣವನ್ನು ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವುದಾಗಿ ತಿಳಿಸಿದ್ದಾಳೆ.
Published by: Harshith AS
First published: December 18, 2020, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories