Viral Video: ಹೆದ್ದಾರಿಯಲ್ಲಿ ಹಣದ ಮಳೆ: ಸಿಕ್ಕಷ್ಟು ಬಾಚಿಕೊಂಡ ಜನರು

ಹೆದ್ದಾರಿ(Highway)ಯುದ್ದಕ್ಕೂ ಹಣ (Notes) ಹರಡಿದ್ದು, ಜನರು ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣವನ್ನು ಬಾಚಿಕೊಂಡಿದ್ದಾರೆ. ಹಣದ ಮಳೆಯಾಗಿ ಎರಡು ದಿನ ಕಳೆದ್ರೂ ಕೆಲವರು ಮಾತ್ರ ಇನ್ನೂ ಈ ವ್ಯಾಪ್ತಿಯಲ್ಲಿ ನೋಟುಗಳು ಸಿಗಬಹುದು ಎಂದು ನಿರೀಕ್ಷೆಯಲ್ಲಿ ಹುಡುಕಾಟ (Searching) ನಡೆಸುತ್ತಿದ್ದಾರೆ.

ಹಣದ ಮಳೆ

ಹಣದ ಮಳೆ

  • Share this:
ಕರ್ನಾಟಕ (Karnataka) ಸೇರಿದಂತೆ ದಕ್ಷಿಣ ಭಾರತದ (South India) ಎಲ್ಲ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಗೆ (Rainfall) ಜನರು ಹೈರಾಣು ಆಗಿದ್ದಾರೆ. ಈ ನಡುವೆ ಹಣದ ಮಳೆ (Money Rain)ಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾ(Social  Media)ದಲ್ಲಿ ಹರಿದಾಡುತ್ತಿದೆ. ಹೆದ್ದಾರಿ(Highway)ಯುದ್ದಕ್ಕೂ ಹಣ (Notes) ಹರಡಿದ್ದು, ಜನರು ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣವನ್ನು ಬಾಚಿಕೊಂಡಿದ್ದಾರೆ. ಹಣದ ಮಳೆಯಾಗಿ ಎರಡು ದಿನ ಕಳೆದ್ರೂ ಕೆಲವರು ಮಾತ್ರ ಇನ್ನೂ ಈ ವ್ಯಾಪ್ತಿಯಲ್ಲಿ ನೋಟುಗಳು ಸಿಗಬಹುದು ಎಂದು ನಿರೀಕ್ಷೆಯಲ್ಲಿ ಹುಡುಕಾಟ (Searching) ನಡೆಸುತ್ತಿದ್ದಾರೆ. ಕೆಲವರು ಹಣ ಆಯ್ದುಕೊಳ್ಳುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ (South California) ಹೆದ್ದಾರಿಯಲ್ಲಿ ಹಣದ ಮಳೆಯಾಗಿದೆ. ನವೆಂಬರ್ 19 ಶುಕ್ರವಾರ ಬೆಳಗ್ಗೆ 9.15ಕ್ಕೆ ಸ್ಯಾನ್ ಡಿಯಾಗೋದಿಂದ ಫೆಡರಲ್ ಇನ್ಸುರೆನ್ಸ್ ಕಾರ್ಪೋರೇಶನ್ ಕಚೇರಿಗಳಿಗೆ ಹಣವನ್ನು ಟ್ರಕ್ ಮೂಲಕ ರವಾನೆ ಮಾಡಲಾಗುತ್ತಿತ್ತು. ಭದ್ರತಾ ಸಿಬ್ಬಂದಿ ಮತ್ತು  ಸುಧಾರಿತ ತಂತ್ರಜ್ಞಾನ ಹೊಂದಿರುವ ಟ್ರಕ್ ಮೂಲಕ ಹಣ ಸಾಗಾಟ ನಡೆದುತ್ತು. ಆದ್ರೆ ಮಾರ್ಗ ಮಧ್ಯೆ  ಟ್ರಕ್ ಬಾಗಿಲು ತೆಗೆದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾಗಿವೆ.

ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಟ್ರಕ್ ನಲ್ಲಿದ್ದ ಹಲವು ಬ್ಯಾಗ್ ಗಳು ತೆರೆದ ಪರಿಣಾಮ ಅಪಾರ ಪ್ರಮಾಣದ ಹಣ ಗಾಳಿಗೆ ಹಾರಿಕೊಂಡು ಹೊರ ಬಂದಿವೆ. ಹಣ ಬೀಳುತ್ತಿರೋದನ್ನು ಕಂಡ ಜನರು ವಾಹನಗಳನ್ನು ನಿಲ್ಲಿಸಿ, ನೋಟುಗಳನ್ನು ಆಯ್ದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳು ನಿಂತ ಪರಿಣಾಮ ಟ್ರಾಫಿಕ್ ಸಹ ಉಂಟಾಗಿತ್ತು.

ಇದನ್ನೂ ಓದಿ: Scary Video: ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಕೆಂಪು ಏಡಿಗಳ ರಾಶಿ: ಗುಂಡಿಗೆ ಗಟ್ಟಿ ಇದ್ದವರು ಮಾತ್ರ ಈ ವಿಡಿಯೋ ನೋಡಿ!

ಹೆದ್ದಾರಿಯಲ್ಲಿ ಒಣಗಿದ ಎಲೆಗಳಂತೆ ಬಿದ್ದಿರುವ ಹಣವನ್ನು ಎತ್ತಿಕೊಂಡು ಜನರು ಸಂಭ್ರಮಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನು ಕೆಲವರು ಚೀಲಗಳಲ್ಲಿ ಹಣ ತುಂಬಿ ತಮ್ಮ ಕಾರ್ ಒಳಗೆ ಸುರಿದುಕೊಂಡಿದ್ದಾರೆ. ಒಂದಿಷ್ಟು ಜನ ಹಣವನ್ನು ತೂರಾಡಿ, ನಾವು ತುಂಬಾನೇ ಬೇಗ ಶ್ರೀಮಂತರಾಗುತ್ತಿದ್ದೇವೆ ಎಂದು ಹೇಳುತ್ತಾ ಕುಣಿದು ಕುಪ್ಪಳಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಮಹಿಳೆ

ಡೆಮ್ಮಿಬ್ಯಾಗ್ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಣದ ಮಳೆಯ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದು ನಾನು ನೋಡಿದ ಅಚ್ಚರಿಯ ಘಟನೆ, ಎಲ್ಲರೂ ತಮಗೆ ಬೇಕಾದಷ್ಟು ಹಣವನ್ನು ಯಾರ ಭಯವಿಲ್ಲದೇ ಆಯ್ದುಕೊಳ್ಳುತ್ತಿದ್ದಾರೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Video Viral: ಕಾರ್ ನಲ್ಲಿ ಬಂದು ಆಂಟಿ ಕದ್ದುಕೊಂಡು ಹೋಗಿದ್ದನ್ನ ಕಂಡು ನೆಟ್ಟಿಗರು ಶಾಕ್!

ಹಣ ಹಿಂದಿರುಗಿಸುವಂತೆ ಅಧಿಕಾರಿಗಳ ಮನವಿ

ಈ ಘಟನೆ ಬಳಿಕ ಅಧಿಕಾರಿಗಳು, ಸಾರ್ವಜನಿಕರು ಆಯ್ದುಕೊಂಡಿರುವ ಹಣವನ್ನು ದಯವಿಟ್ಟು ಹಿಂದಿರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಸ್ಯಾನ್ ಡಿಯಾಗೋ ಜನರು ಕಚೇರಿಗೆ ತೆರಳಿ ಹಣ ಹಿಂದಿರುಗಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
View this post on Instagram


A post shared by DEMI BAGBY (@demibagby)


ಘಟನೆ ಕುರಿತು ಮಾತನಾಡಿರುವ ಅಧಿಕಾರಿ ಸಾರ್ಟೆಂಜ್ ಕರ್ಟಿಸ್ ಮಾರ್ಟಿನ್, ಟ್ರಕ್ ನ ಒಂದು ಬಾಗಿಲು ತೆರೆದ ಪರಿಣಾಮ ಹಣದ ಬ್ಯಾಗ್ ಗಳು ಹೊರ ಬಿದ್ದಿವೆ, ಈ ಪರಿಣಾಮ ಶುಕ್ರವಾರ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಎಷ್ಟು ಹಣ ಪೋಲಾಯ್ತು ಮತ್ತು ಸಾರ್ವಜನಿಕರು ಹಿಂದಿರುಗಿಸಿದ ಹಣದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಆಂಧ್ರ ಪ್ರದೇಶದಲ್ಲಿ ಮೀನಿನ ಮಳೆ

2015ರಲ್ಲಿ ಆಂಧ್ರ ಪ್ರದೇಶದ  ಕೃಷ್ಣಾ ಜಿಲ್ಲೆಯ ನಂದಿಗಾಮ ಬಳಿಯ ಗೊಳ್ಳಮುಡಿ ಗ್ರಾಮದಲ್ಲಿ ಮಳೆಯಾಗಿತ್ತು, ಅಂದು ರಾತ್ರಿ ಭಾರೀ ಮಳೆಯಾಗಿತ್ತು. ಬೆಳಗ್ಗೆ ಗದ್ದೆಗಳಲ್ಲಿ ಮೀನಿನ ರಾಶಿಯೇ ಬಿದ್ದಿತ್ತು, 2013ರಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿಯೂ ಮೀನಿನ ಮಳೆಯಾಗಿತ್ತು.

ಸುಂಟರಗಾಳಿ ವಾಟರ್‌ಪ್ರೌಟ್‌ನ್ನು ಸೃಷ್ಟಿಸುತ್ತದೆ. ಈ ಸುಂಟರಗಾಳಿ ಮೀನು, ಕಪ್ಪೆಗಳಂತ ಜೀವಿಗಳನ್ನು ಸಹ ಹೊತ್ತೊಯ್ಯುತ್ತದೆ. ಇವು ಮೋಡ ಸೇರಿ ಮಳೆಯ ಜೊತೆ ಸೇರಿ ಯಾವುದೋ ಒಂದು ಪ್ರದೇಶದಲ್ಲಿ ಮಳೆಯಂತೆ ಬೀಳುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
Published by:Mahmadrafik K
First published: