HOME » NEWS » Trend » CURIOUS ELEPHANT COMES ACROSS A HELMET WATCH VIRAL VIDEO HG

ಹಲಸಿನ ಹಣ್ಣು ಎಂದು ಹೆಲ್ಮೆಟ್ ತಿಂದ ಆನೆ! ದೃಶ್ಯ ವೈರಲ್​

Viral Video: ಇಲ್ಲೊಂದು ಆನೆ ಹಲಸಿನ ಹಣ್ಣು ಅಥವಾ ಕಲ್ಲಂಗಡಿ ಹಣ್ಣು ಎಂಬ ಗೊಂದಲದಲ್ಲಿ ಹೆಲ್ಮೆಟ್​ವೊಂದನ್ನು ತಿಂದಿದೆ. ಈ ದೃಶ್ಯ ಸಾನಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

news18-kannada
Updated:June 11, 2021, 1:40 PM IST
ಹಲಸಿನ ಹಣ್ಣು ಎಂದು ಹೆಲ್ಮೆಟ್ ತಿಂದ ಆನೆ! ದೃಶ್ಯ ವೈರಲ್​
ಆನೆ
  • Share this:
ಈ ಸಮಯದಲ್ಲಿ ಮಲೆನಾಡಿನ ಕಡೆಗೆ ಬಂದರೆ ಘಮ ಘಮ ಎಂಬ ಹಲಸಿನ ಹಣ್ಣಿನ ಪರಿಮಳ, ಅದರ ಜೊತೆಗೆ ಕಾಡು ಮಾವಿನ ಹಣ್ಣಿನ ಸುವಾಸನೆ. ಇವರೆಡನ್ನು ಒಂದು ಬಾರಿ ಸವಿದರೆ ಸಾಕು ಮನಸ್ಸಲ್ಲಿ ಆಹಾ..ಎಂಬ ಉದ್ಧಾರ. ಮಾವಿನ ಹಣ್ಣು ಅಥವಾ ಹಲಸಿನ ಹಣ್ಣಿಗೆ ಮನುಷ್ಯರು ಮಾತ್ರವಲ್ಲ, ಕಾಡಿನಲ್ಲಿದ್ದ ಪ್ರಾಣಿಗಳು ಸಹ ನಾಡಿಗೆ ಬರುತ್ತವೆ. ಹಲಸಿನ ಹಣ್ಣಿನ ಸುವಾಸನೆಗಂತೂ ಆನೆ, ಹಕ್ಕಿಗಳು, ಕೋತಿಗಳು ಓಡೋಡಿ ಬರುತ್ತದೆ. ಮರಹತ್ತಿ ಕಿತ್ತು ತಿನ್ನುತ್ತವೆ. ಆದರಂತೆ ಇಲ್ಲೊಂದು ಆನೆ ಹಲಸಿನ ಹಣ್ಣು ಅಥವಾ ಕಲ್ಲಂಗಡಿ ಹಣ್ಣು ಎಂಬ ಗೊಂದಲದಲ್ಲಿ ಹೆಲ್ಮೆಟ್​ವೊಂದನ್ನು ತಿಂದಿದೆ. ಈ ದೃಶ್ಯ ಸಾನಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಸ್ಸಾಂನ ಗುವಾಹಟಿಯ ಪಂಜಾಬರಿಯಲ್ಲಿ ಆನೆಯೊಂದು ಹೆಲ್ಮೆಟ್​ ತಿನ್ನುವ ದೃಶ್ಯ ಸೆರೆಯಾಗಿದೆ. ದೃಶ್ಯ ನೋಡಿದಾಗ ಆನೆ ಕನ್ಫೂಸ್​ ಆಗಿದೆಯಾ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಏಕೆಂದರೆ ದಾರಿಯಲ್ಲಿ ಸಾಗುತ್ತಿರುವ ಗಜ ಅಲ್ಲೇ ಪಕ್ಕದಲ್ಲಿದ್ದ ಬೈಕ್​ವೊಂದರ ಮೇಲಿರುವ ಹೆಲ್ಮಟ್​ ಕಂಡು ಅದನ್ನು ಮೆಲ್ಲಗೆ ಸೊಂಡಿಲಿನಿಂದ ತೆಗೆದುಕೊಂಡು ನೇರವಾಗಿ ಬಾಯಿಗೆ ಇಟ್ಟುಕೊಂಡು ತೆರಳಿದೆ. ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.




ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್​ ಅಂಗುಸಾಮಿ, ಸುಸಂತ ನಂದ ಅವರು ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್​​ ಮಾಡಿದ್ದಾರೆ. ಅನೇಕರು ದೃಶ್ಯ ಕಂಡು ಕಾಮೆಂಟ್​ ಬರೆದಿದ್ದಾರೆ. 30 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಕೆಲವರನ್ನು ಟ್ವಿಟ್ಟರ್​ನಲ್ಲಿ ನಗಯವ ಇಮೋಜಿ ಹಾಕಿ ಕಾಮೆಂಟ್​ ಬರೆದಿದ್ದಾರೆ.

ಇನ್ನು ಕೆಲವರು ಆನೆಯ ಆರೋಗ್ಯದ ಬಗ್ಗೆ ಕಾಮೆಂಟ್​ ಬರೆದರೆ. ಮತ್ತೆ ಕೆಲವರು ಮುಂದೇನಾಯ್ತು ಎಂದು ಪ್ರಶ್ನಿಸಿದ್ದಾರೆ. ಅಂದಹಾಗೆಯೇ ಮಂಗಳವಾರದಂದು ಈ ದೃಶ್ಯ ಸೆರೆಯಾಗಿದೆ.
Published by: Harshith AS
First published: June 11, 2021, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories