CTET: ಕೇಂದ್ರಿಯ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುತ್ತಿರುವವರು ಓದಲೇಬೇಕಾದ ಸುದ್ದಿ

CTET: ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ನಿಖರವಾದ ಪರೀಕ್ಷೆಯ ದಿನಾಂಕ ತಿಳಿಸಲಾಗುತ್ತದೆ ಈ ಪರೀಕ್ಷೆಯು ವಿಶೇಷವಾಗಿ ದೇಶಾದ್ಯಂತ 20 ಭಾಷೆಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಈ ಬಾರಿ ನಡೆಯಲಿರುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (Central Board of Secondary Education)(ಸಿಟಿಇಟಿ) ಗೆ ಹಾಜರಾಗುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಮುಖ್ಯವಾದ ಮಾಹಿತಿ. ಆದೇನಪ್ಪಾ ಅಂತೀರಾ? ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ 15ನೇ ಆವೃತ್ತಿಯನ್ನು ಡಿಸೆಂಬರ್ (December)16ನೇ ತಾರೀಖಿನಿಂದ ನಡೆಸಲಾಗುವುದು ಎಂದು ಈಗಾಗಲೇ ಘೋಷಿಸಿದ್ದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.nಹೊಸ ಮಾಹಿತಿ ಏನೆಂದರೆ, ಈ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಪ್ರವೇಶ ಪತ್ರವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಪರೀಕ್ಷೆಗೆ(Exam) ಹಾಜರಾಗಲು ಇಚ್ಚಿಸುವಂತಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ctet.nic.in ನಲ್ಲಿ ಹೇಗೆ ಡೌನ್‌ಲೋಡ್ (Download)ಮಾಡುವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಈ ಪರೀಕ್ಷೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Teacher Eligibility Test)(ಸಿಬಿಎಸ್‌ಇ) ಆಯೋಜಿಸಲಿದೆ.

ಗೊಂದಲ ಸಹಜ
ಸಿಟಿಇಟಿ ಡಿಸೆಂಬರ್ 2021 ಪ್ರವೇಶ ಪತ್ರಗಳನ್ನು ಪರೀಕ್ಷಾರ್ಥಿಗಳುhttps://ctet.nic.inಅಧಿಕೃತ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪರೀಕ್ಷಾ ಮಂಡಳಿಯವರು ತಿಳಿಸಿದ್ದಾರೆ. ಇದನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂದು ಬಹುತೇಕರಿಗೆ ಗೊಂದಲ ಇರುವುದು ಸಹಜ.

ಇದನ್ನೂ ಓದಿ: Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, BE. B Tech ಪಾಸಾದವರಿಗೆ ಇಂಡಿಯನ್ ಆರ್ಮಿಯಲ್ಲಿ ಉದ್ಯೋಗ

ಈ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಮೊದಲಿಗೆ ಪರೀಕ್ಷಾರ್ಥಿಗಳುhttps://ctet.nic.inಸಿಟಿಇಟಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
ಒಮ್ಮೆ ಈ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನ ಮುಖಪುಟದಲ್ಲಿ ಲಭ್ಯವಿರುವ 'ಸಿಟಿಇಟಿ ಡಿಸೆಂಬರ್ 2021 ಪ್ರವೇಶ ಪತ್ರ' ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗಿದೆ.
ನಂತರ ಅಭ್ಯರ್ಥಿಗಳು ಲಾಗ್ ಇನ್ ಆಗಲು ತಮ್ಮ ರುಜುವಾತುಗಳನ್ನು ನಮೂದಿಸಬೇಕು.
ಲಾಗಿನ್ ಮಾಡಿದ ನಂತರ, ನೀವು ನಿಮ್ಮ ಸಿಟಿಇಟಿ ಡಿಸೆಂಬರ್ 2021 ಪ್ರವೇಶ ಪತ್ರವನ್ನು ವೀಕ್ಷಿಸಬಹುದು ಮತ್ತು ಅದನ್ನು ನೀವು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ತಿದ್ದುಪಡಿಗೆ ತಕ್ಷಣವೇ ಸಂಪರ್ಕಿಸಿ
ದೃಢೀಕರಣ ಪುಟದಿಂದ ಭಿನ್ನವಾದ ಅಭ್ಯರ್ಥಿಯ ವಿವರಗಳಿಗೆ ಸಂಬಂಧಿಸಿದಂತೆ ಇ-ಪ್ರವೇಶ ಪತ್ರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅಥವಾ ಅಭ್ಯರ್ಥಿಗಳ ವಿವರದಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ಅಭ್ಯರ್ಥಿಗಳು ಅಗತ್ಯ ತಿದ್ದುಪಡಿಗಳಿಗಾಗಿ ಸಿಟಿಇಟಿ ಘಟಕವನ್ನು ತಕ್ಷಣವೇ ಸಂಪರ್ಕಿಸಬೇಕಾಗುತ್ತದೆ.

20 ಭಾಷೆಗಳಲ್ಲಿಪರೀಕ್ಷೆ
ಸಿಬಿಎಸ್‌ಇ ಡಿಸೆಂಬರ್ 16, 2021 ಮತ್ತು ಜನವರಿ 13, 2022ರ ನಡುವೆ ಕಂಪ್ಯೂಟರ್ ಆಧಾರಿತ ಟೆಸ್ಟ್ (ಸಿಬಿಟಿ) ಮೋಡ್‌ನಲ್ಲಿ ಸಿಟಿಇಟಿ ನಡೆಸಲಿದೆ ಎಂಬುದು ಇಲ್ಲಿ ಗಮನಿಸಬೇಕಾದಂತಹ ಅಂಶವಾಗಿದೆ. ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ನಿಖರವಾದ ಪರೀಕ್ಷೆಯ ದಿನಾಂಕ ತಿಳಿಸಲಾಗುತ್ತದೆ. ಈ ಪರೀಕ್ಷೆಯು ವಿಶೇಷವಾಗಿ, ದೇಶಾದ್ಯಂತ 20 ಭಾಷೆಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 20ರಂದು ಪ್ರಾರಂಭವಾಗಿ ಮತ್ತು ಅಕ್ಟೋಬರ್ 19ರವರೆಗೆ ಪ್ರಕ್ರಿಯೆ ಮುಂದುವರೆದಿತ್ತು. ಇತ್ತೀಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಸಿಟಿಇಟಿhttps://ctet.nic.inಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: JOB ALERT: ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ

ಕೊವಿಡ್-19 ರೂಪಾಂತರ ಕಾರಣದಿಂದಾಗಿ ಅಭ್ಯರ್ಥಿಗಳು ಎದುರಿಸುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಹಾಜರಾಗಲು ಬಯಸುವ ಅಭ್ಯರ್ಥಿಗಳಿಗೆ ಕೆಲ ತಿದ್ದುಪಡಿಗೂ ಅವಕಾಶ ನೀಡಲು ಸಿಬಿಎಸ್‌ಇ ನಿರ್ಧರಿಸಿತ್ತು. ಸಾಮಾಜಿಕ ಅಂತರ ಮತ್ತಿತರ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆಯನ್ನು ನಡೆಸಲಾಗುವುದು. ಕೊರೊನಾ ಸೋಂಕಿನಿಂದಾಗಿ ಕಳೆದೆರಡು ವರ್ಷ ದೇಶದಲ್ಲಿ ಅನೇಕ ಪರೀಕ್ಷೆಗಳನ್ನು ಮುಂದೂಡಾಗಿತ್ತು. ಪರೀಕ್ಷೆ ನಡೆಯುವ ನಗರದ ಬದಲಾವಣೆ ಸೇರಿದಂತೆ ಇತರೆ ಬದಲಾವಣೆಗೂ  ಅಸಂಖ್ಯಾತ ಅಭ್ಯರ್ಥಿಗಳಿಂದ ಮನವಿ ಸ್ವೀಕರಿಸಲಾಗಿತ್ತು. ಒಟ್ಟಿನಲ್ಲಿ ಕೋವಿಡ್‌ ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ ಅರ್ಹತಾ ಪರೀಕ್ಷೆ ಅಭ್ಯರ್ಥಿಗಳ ಕನಸುನ್ನು ನುಚ್ಚು ನೂರು ಮಾಡಿದೆ ಎಂದರೆ ತಪ್ಪಾಗಲಾರದು.
Published by:vanithasanjevani vanithasanjevani
First published: