• Home
  • »
  • News
  • »
  • trend
  • »
  • Cryptocurrency Price: ಎಲಾನ್‌ ಮಸ್ಕ್‌ ಮಾಡಿದ ಒಂದೇ ಒಂದು ಟ್ವೀಟ್‌ನಿಂದ ಕ್ರಿಪ್ಟೋಕರೆನ್ಸಿಯ ಮೌಲ್ಯದಲ್ಲಿ ಭಾರೀ ಏರಿಕೆ

Cryptocurrency Price: ಎಲಾನ್‌ ಮಸ್ಕ್‌ ಮಾಡಿದ ಒಂದೇ ಒಂದು ಟ್ವೀಟ್‌ನಿಂದ ಕ್ರಿಪ್ಟೋಕರೆನ್ಸಿಯ ಮೌಲ್ಯದಲ್ಲಿ ಭಾರೀ ಏರಿಕೆ

ಎಲಾನ್ ಮಸ್ಕ್ ಟ್ವೀಟ್

ಎಲಾನ್ ಮಸ್ಕ್ ಟ್ವೀಟ್

Cryptocurrency Value: ಜೂನ್ 25ರಂದು ಟ್ವೀಟ್‌ ಮಾಡಿದ್ದ ಎಲಾನ್‌ ಮಸ್ಕ್‌, ಶಿಬಾ ಇನು ಕ್ರಿಪ್ಟೋ ಕರೆನ್ಸಿಯನ್ನು ಫ್ಲೋಕಿ ಎಂದು ಹೆಸರಿಡುವುದಾಗಿ ಟ್ವೀಟ್‌ ಮಾಡಿದ್ದರು.

  • Share this:

ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಇವರ ಟ್ವೀಟ್‌ಗಳು ಬಹುತೇಕವಾಗಿ ಹೆಚ್ಚು ಸುದ್ದಿ ಮಾಡುತ್ತಿರುತ್ತದೆ. ವಾಟ್ಸ್‌ಆ್ಯಪ್‌ ಪ್ರತಿಸ್ಪರ್ಧಿ ಸಿಗ್ನಲ್‌ ಬಗ್ಗೆ ಅವರು ಮಾಡಿದ್ದ ಒಂದು ಟ್ವೀಟ್‌ನಿಂದ ಎಷ್ಟೋ ಜನರು ಸಿಗ್ನಲ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಅಲ್ಲದೆ, ಅವರು ಡಾಗಿ ಕಾಯಿನ್‌ ಬಗ್ಗೆ ಮಾಡಿದ ಟ್ವೀಟ್‌ಗಳಿಂದ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿತ್ತು. ಈಗ, ಎಲಾನ್‌ ಮಸ್ಕ್‌ ಡಾಗಿ ಕಾಯಿನ್‌ ಎಂಬ ಕ್ರಿಪ್ಟೋ ಕರೆನ್ಸಿಯ ಗೀಳಿನಿಂದ ಹೊರಬಂದಿದ್ದಾರೆ ಮತ್ತು ಅವರು ಹೊಸದೊಂದು ಕ್ರಿಪ್ಟೋಕರೆನ್ಸಿಯನ್ನು ಕಂಡುಕೊಂಡಿದ್ದಾರೆ ಎಂದು ತೋರುತ್ತದೆ. ಏಕೆಂದರೆ ಜೂನ್ 25ರಂದು ಟ್ವೀಟ್‌ ಮಾಡಿದ್ದ ಎಲಾನ್‌ ಮಸ್ಕ್‌, ಶಿಬಾ ಇನು ಕ್ರಿಪ್ಟೋ ಕರೆನ್ಸಿಯನ್ನು ಫ್ಲೋಕಿ ಎಂದು ಹೆಸರಿಡುವುದಾಗಿ ಟ್ವೀಟ್‌ ಮಾಡಿದ್ದರು. ಶುಕ್ರವಾರ ಸಂಜೆ 4:33ಕ್ಕೆ ಮಸ್ಕ್‌ ಈ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ನ ನಂತರ ಮಸ್ಕ್‌ ಎಫೆಕ್ಟ್‌ ಅದ್ಭುತವಾಗೇ ಕೆಲಸ ಮಾಡಿದೆ.


ಅಂದರೆ ಶಿಬಾ ಇನು ಕ್ರಿಪ್ಟೋ ಕರೆನ್ಸಿಯ ನಾಣ್ಯದ ಬೆಲೆಗಳು ಕಾಯಿನ್ ಮಾರ್ಕೆಟ್‌ಕ್ಯಾಪ್‌ನಲ್ಲಿ ಭಾರತೀಯ ಕಾಲಮಾನ ಸಂಜೆ 4:53 ಕ್ಕೆ ಶೇಕಡಾ 16 ರಷ್ಟು ಏರಿಕೆ ಕಂಡಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ 57.5 ಮಿಲಿಯನ್ ಫಾಲೋವರ್ಸ್‌ಗಳಿದ್ದು, ಈ ಹಿನ್ನೆಲೆ ಹಲವರು ಹೊಸ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಜಪಾನಿನ ತಳಿ ನಾಯಿಯ ಸಂಕೇತವನ್ನು ಡಾಗಿ ಕಾಯಿನ್‌ ಹಾಗೂ ಅದರ ಪ್ರತಿಸ್ಪರ್ಧಿ ಶಿಬಾ ಇನು ಹೊಂದಿದೆ. ಮಸ್ಕ್‌ ಶಿಬಾ ಇನು ಪರ ಟ್ವೀಟ್‌ ಮಾಡಿದ ಕಾರಣ ಅದನ್ನು ಟಾಗಿ ಕಾಯಿನ್‌ನ ಕಿಲ್ಲರ್‌ ಎಂಬ ಅಡ್ಡಹೆಸರಿನಿಂದಲೂ ಹಲವರು ಕರೆಯುತ್ತಿದ್ದಾರೆ. ಶಿಬಾ ಇನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತನ್ನನ್ನು ಆಗಸ್ಟ್ 2020 ರಲ್ಲಿ ಸ್ಥಾಪಿಸಿದ ವಿಕೇಂದ್ರೀಕೃತ ಸ್ವಾಭಾವಿಕ ಸಮುದಾಯ ಕಟ್ಟಡದ ಪ್ರಯೋಗವೆಂದು ವಿವರಿಸುತ್ತದೆ.


ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಎಷ್ಟು ಸೇಫ್?; ಇಲ್ಲಿದೆ ಮಾಹಿತಿ


ಕಳೆದ ತಿಂಗಳು ವಿಶ್ವದ ಕಿರಿಯ ಕ್ರಿಪ್ಟೋ ಬಿಲಿಯನೇರ್ ಮತ್ತು ಎಥೆರಿಯಮ್ ಸಂಸ್ಥಾಪಕ ವಿಟಾಲಿಕ್ ಬುಟೆರಿನ್ ಅವರು ಉದ್ಯಮಿ ಸಂದೀಪ್ ನಲಿವಾಲ್ ಸ್ಥಾಪಿಸಿದ ಭಾರತದ ಕೋವಿಡ್ ಪರಿಹಾರ ನಿಧಿಗೆ ಸುಮಾರು 1.2 ಬಿಲಿಯನ್ ಮೌಲ್ಯದ 50 ಟ್ರಿಲಿಯನ್ SHIB ಟೋಕನ್‌ಗಳನ್ನು ದೇಣಿಗೆ ನೀಡಿದಾಗ ಶಿಬಾ ಇನು ಕ್ರಿಪ್ಟೋ ಕರೆನ್ಸಿ ಹೆಚ್ಚು ಗಮನ ಸೆಳೆಯಿತು.

ಇನ್ನು, ಶಿಬಾ ಇನು ಕ್ರಿಪ್ಟೋ ಕರೆನ್ಸಿಯನ್ನು ಫ್ಲೋಕಿ ಎಂದು ಹೆಸರಿಡುವ ಬಗ್ಗೆ ಮಸ್ಕ್‌ ಟ್ವೀಟ್ ಮಾಡಿದ್ದರು. ಫ್ಲೋಕಿಯ ಹಿಂದಿನ ಅರ್ಥವೇನು ಎಂದು ಅನೇಕ ಬಳಕೆದಾರರು ಅಚ್ಚರಿಪಟ್ಟಿದ್ದಾರೆ. ಈ ಹೆಸರು ಮಾರ್ವೆಲ್ ಕಾಮಿಕ್ ಪಾತ್ರವಾದ ಲೋಕಿಯನ್ನು ಎಫ್‌ನೊಂದಿಗೆ ಅರ್ಥೈಸುತ್ತದೆ ಎಂದು ಕೆಲವರು ಊಹಿಸಿದರೆ, ಇತರರು ಡಾಗಿ ಕಾಯಿನ್‌ ಬಳಕೆದಾರರು ಮತ್ತು ಶಿಬಾ ಇನು ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಲ್ಲಿ ಕ್ರಿಪ್ಟೋ ಯುದ್ಧವನ್ನು ಹೇಗೆ ಪ್ರೇರೇಪಿಸುತ್ತದೆ ಎಂಬುದರ ಕುರಿತು ಮೀಮ್‌ಗಳನ್ನು ಹಂಚಿಕೊಂಡರು.


ಈ ಮಧ್ಯೆ, ಮಸ್ಕ್ ಬಿಟ್‌ ಕಾಯಿನ್‌ಗಳ ಬಗ್ಗೆ ತನ್ನ ಡಿಸ್‌ಲೈಕ್‌ ಅನ್ನು ವ್ಯಕ್ತಪಡಿಸುತ್ತಲೇ ಇದ್ದರು. ಸ್ಪೇಸ್‌ಎಕ್ಸ್ ಸಂಸ್ಥಾಪಕರು ಬಿಟ್‌ಕಾಯಿನ್ ಅನ್ನು ವಿಕೇಂದ್ರೀಕೃತ ಕರೆನ್ಸಿಗಳನ್ನು ಆಳುವ ಏಕೈಕ ಕ್ರಿಪ್ಟೋಕರೆನ್ಸಿ ಎಂದು ನಂಬುವ ಹೂಡಿಕೆದಾರರ ಬಿಟ್‌ಕಾಯಿನ್ ಬಳಕೆದಾರರ ವಿರುದ್ಧ ಟೀಕೆ ಮಾಡಿದ್ದಾರೆ. ಅಲ್ಲದೆ, ಬಿಟ್‌ಕಾಯಿನ್‌ ಮ್ಯಾಕ್ಸಿಸ್‌ ಬಗ್ಗೆ ವ್ಯಂಗ್ಯಭರಿತ ಟ್ವೀಟ್‌ ಮಾಡಿದ್ದರು.

ಅಲ್ಲದೆ, ಪರಿಸರದಲ್ಲಿ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುವ ಹಾನಿಕಾರಕ ಗಣಿಗಾರಿಕೆ ಪ್ರಕ್ರಿಯೆಗೆ ಮಸ್ಕ್ ಬಿಟ್‌ಕಾಯಿನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಕಾರಣದಿಂದಾಗಿ ಟೆಸ್ಲಾ ಕಳೆದ ತಿಂಗಳು ಬಿಟ್‌ಕಾಯಿನ್ ಮೂಲಕ ಮಾಡಿದ ಪಾವತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತ್ತು. ಆದರೆ, ನಂತರ ಆ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು.


Published by:Sushma Chakre
First published: