• Home
  • »
  • News
  • »
  • trend
  • »
  • Cryptocurrency: ಕ್ರಿಪ್ಟೋಕರೆನ್ಸಿ ಮೌಲ್ಯ 700 ಪಟ್ಟು ಹೆಚ್ಚಾಗುತ್ತಿದ್ದಂತೆ ಉದ್ಯೋಗಿಯ ಸಂಬಳ ವಾಪಾಸ್ ಕೇಳಿದ ಕಂಪನಿ!

Cryptocurrency: ಕ್ರಿಪ್ಟೋಕರೆನ್ಸಿ ಮೌಲ್ಯ 700 ಪಟ್ಟು ಹೆಚ್ಚಾಗುತ್ತಿದ್ದಂತೆ ಉದ್ಯೋಗಿಯ ಸಂಬಳ ವಾಪಾಸ್ ಕೇಳಿದ ಕಂಪನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cryptocurrency Price: ಒಬ್ಬ ಉದ್ಯೋಗಿಗೆ ಕಂಪನಿಯೊಂದು ಕ್ರಿಪ್ಟೋಕರೆನ್ಸಿಯಲ್ಲಿ ವೇತನ ಪಾವತಿ ಮಾಡಿದೆ. ಆದರೆ, ಆ ಹಣದ ಮೌಲ್ಯ ಹೆಚ್ಚಾಗುತ್ತಿದ್ದಂತೆ ಅದನ್ನು ಹಿಂದಿರುಗಿಸಲು ಕೇಳಿಕೊಂಡಿದ್ದಾರೆ.

  • Share this:

ನೋಟಿನಂತೆ ಕ್ರಿಪ್ಟೋಕರೆನ್ಸಿಯನ್ನೂ ಬಳಸುವ ಕಾಲ ಇದು. ಕೆಲವರಂತೂ ಈ ರೀತಿಯ ಹಣದ ಮೌಲ್ಯವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ, ಈ ಕ್ರಿಪ್ಟೋಕರೆನ್ಸಿಯ ಮೌಲ್ಯ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಈ ಹಿನ್ನೆಲೆ ನೀವು ಯಾರಿಗಾದರೂ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿಯನ್ನು ನೀಡಿ, ನಂತರ ಅದರ ಮೌಲ್ಯ ಗಗನಕ್ಕೇರಿದ ಬಳಿಕ ನಿಮಗೆ ಬೇಸರವಾಗುತ್ತದೆ ಅಲ್ಲವೇ? ಇದೇ ರೀತಿ ಅನುಭವ ಸ್ಟಾರ್ಟಪ್‌ ಕಂಪನಿಗೂ ಆಗಿದೆ. ಒಬ್ಬ ಉದ್ಯೋಗಿಗೆ ಕಂಪನಿಯೊಂದು ಕ್ರಿಪ್ಟೋದಲ್ಲಿ ವೇತನ ಪಾವತಿ ಮಾಡಿದೆ. ಆದರೆ, ಆ ಹಣದ ಮೌಲ್ಯ ಹೆಚ್ಚಾಗುತ್ತಿದ್ದಂತೆ ಅದನ್ನು ಹಿಂದಿರುಗಿಸಲು ಕೇಳಿಕೊಂಡಿದ್ದಾರೆ.


ಹೌದು, marketwatch.comನಲ್ಲಿ ತನ್ನ ಈ ಕತೆಯನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು, ಟೆಕ್ ಸ್ಟಾರ್ಟ್ಅಪ್‌ಗಾಗಿ ಮಾಡಿದ ವ್ಯಾಪಾರ ಅಭಿವೃದ್ಧಿ ಕಾರ್ಯಗಳಿಗಾಗಿ ಕ್ರಿಪ್ಟೋಕರೆನ್ಸಿಯಲ್ಲಿ ಆತ ಒಪ್ಪಂದದಂತೆ ಸಂಬಳವನ್ನು ಪಡೆದರು ಎಂದು ಬರೆದಿದ್ದಾರೆ. ಆದರೆ, ವಹಿವಾಟಿನ ನಂತರ ಕ್ರಿಪ್ಟೋಕರೆನ್ಸಿಯ ಮೌಲ್ಯದಲ್ಲಿ ಏರಿಕೆಯಾದ ನಂತರ, ಕಂಪನಿಯು ಈಗ ಕ್ರಿಪ್ಟೋಕರೆನ್ಸಿಯನ್ನು ಹಿಂದಿರುಗಿಸಲು ಮತ್ತು ಕಳೆದ ವರ್ಷ ಮಾಡಿದ ಕೆಲಸಕ್ಕಾಗಿ ಅವುಗಳನ್ನು ಯುಎಸ್ ಡಾಲರ್‌ಗಳಲ್ಲಿ ಬಿಲ್ ಮಾಡಲು ಬಯಸಿದೆ.


ಕಂಪನಿಯು ಈ ಹಿಂದೆ ಯುಎಸ್ ಡಾಲರ್‌ನಲ್ಲಿ ಪಾವತಿಯ ಷರತ್ತನ್ನು ಹೊಂದಿದ್ದರೂ, ಆ ಷರತ್ತಿಗೆ ನಾನು ಒಪ್ಪಲಿಲ್ಲ. ಬದಲಾಗಿ ಕ್ರಿಪ್ಟೋಕರೆನ್ಸಿಯಲ್ಲಿ ಮಾತ್ರ ಸ್ವೀಕರಿಸುವ ಅಪಾಯ ತೆಗೆದುಕೊಂಡೆ. ಇದರಿಂದ ಹಣದ ಮೌಲ್ಯ ಕಡಿಮೆಯಾಗುವ ಸಾಧ್ಯತೆ ಇದ್ದರೂ, ತಾನು ಆ ರೀತಿ ಮಾಡಿದೆ. ನಂತರ, ಆಗಸ್ಟ್ 2020ರಲ್ಲಿ ನಾನು ಕ್ರಿಪ್ಟೋಕರೆನ್ಸಿಯಲ್ಲಿ ಸಂಬಳ ಪಡೆದುಕೊಂಡೆ. ಮತ್ತು ಅದರ ಮೌಲ್ಯ ಈಗ ಶೇಕಡಾ 700ಕ್ಕಿಂತ ಹೆಚ್ಚಾಗಿದೆ ಎಂದು ಆತ ಪೋಸ್ಟ್‌ ಮಾಡಿದ್ದಾನೆ.


ಇದನ್ನೂ ಓದಿ: ಈ ದ್ವೀಪದಲ್ಲಿರುವ ಎಸ್ಟೇಟ್​ ನೋಡಿಕೊಳ್ಳುವವರಿಗೆ 1 ಕೋಟಿ ರೂ. ಸಂಬಳ!


ಅಲ್ಲದೆ, ಈಗ ಆ ಸ್ಟಾರ್ಟಪ್‌ನ ಸಿಇಒ ಅವರಿಂದ ಮೇಲ್‌ ಬಂದಿದ್ದು, ತನ್ನ ವ್ಯವಹಾರ ಅಭಿವೃದ್ಧಿ ಕಾರ್ಯಗಳಿಂದ ಕಂಪನಿಗೆ ಯಾವುದೇ ಆದಾಯವನ್ನು ತಂದುಕೊಡದ ಕಾರಣ, ಅವರು ಕ್ರಿಪ್ಟೋ ಪಾವತಿಯನ್ನು ಮರಳಿಸಲು ಕೇಳಿದ್ದಾರೆ. ಅಲ್ಲದೆ, ಕ್ರಿಪ್ಟೋನ ಮೂಲ ಮೌಲ್ಯದಲ್ಲಿ, ಡಾಲರ್‌ಗಳ ಲೆಕ್ಕದಲ್ಲಿ ತಾನು ಮಾಡಿದ ಕೆಲಸಕ್ಕೆ ಇನ್‌ವಾಯ್ಸ್ ಮಾಡಬಹುದು ಎಂದು ಮೇಲ್‌ನಲ್ಲಿ ಹೇಳಲಾಗಿದೆ ಎಂದು ಆತ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.


ಈ ಹಿಂದೆ ತಾನು ಈ ಕಂಪನಿಯೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಸಿಇಒಗೆ ಕೊನೆಯ ಕ್ಷಣದಲ್ಲಿ ಪಾವತಿ ನಿಯಮಗಳನ್ನು ಬದಲಾಯಿಸುವ ಅಭ್ಯಾಸವಿದೆ ಎಂದು ವ್ಯಕ್ತಿ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ. ತಮ್ಮ ಈ ಕತೆಯನ್ನು ಪೋಸ್ಟ್‌ ಮಾಡಿಕೊಂಡ ಅವರು ನೆಟ್ಟಿಗರಿಂದ ನ್ಯಾಯಯುತ ಸಲಹೆಗಳನ್ನೂ ಕೇಳಿದ್ದಾರೆ.


ಈ ವ್ಯಕ್ತಿಯ ಪ್ರಶ್ನೆಗೆ ಮಾರ್ಕೆಟ್ ವಾಚ್‌ನ ವೈಯಕ್ತಿಕ ಹಣಕಾಸು ಸಂಪಾದಕ ಕ್ವೆಂಟಿನ್ ಫೋಟ್ರೆಲ್ ಉತ್ತರಿಸಿದ್ದು, ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಆತ ಚಿಂತಿಸಬಾರದು ಮತ್ತು ಕ್ರಿಪ್ಟೋಕರೆನ್ಸಿಯನ್ನು ಹಿಂದಿರುಗಿಸಲು ಸಂಪೂರ್ಣವಾಗಿ ನಿರಾಕರಿಸಿ ಎಂದು ಸಲಹೆ ನೀಡಿದ್ದಾರೆ. ಜತೆಗೆ, ಕ್ರಿಪ್ಟೋ, ಬಿಟ್‌ಕಾಯಿನ್ ಅಥವಾ ಎಥೆರಿಯಮ್ - ಈ ಯಾವುದೇ ಆಗಿರಲಿ ಅದರ ಮೌಲ್ಯ ಕುಸಿದಿದ್ದರೆ, ಯುಎಸ್ ಡಾಲರ್‌ನಲ್ಲಿ ಪಾವತಿಸಲು ಉದ್ಯೋಗದಾತ ಅಥವಾ ಕಂಪನಿ ಕೇಳುತ್ತಿರಲಿಲ್ಲ ಎಂದು ಫೋಟ್ರೆಲ್ ಸೂಚಿಸಿದ್ದಾರೆ. ಜತೆಗೆ, ಕಂಪನಿಗೆ ಈಗ ಒಪ್ಪಂದದಲ್ಲಿ ಸೇರಿಸದಿದ್ದರೆ ಪಾವತಿಯನ್ನು ಮರಳಿ ಕೇಳುವ ಹಕ್ಕು ಅಥವಾ ನಿಯಂತ್ರಣವಿಲ್ಲ ಎಂದು ಹೇಳಿದರು.


ಕಾರ್ಮಿಕ ಕಾನೂನು ತಜ್ಞರು ಸಹ ವ್ಯಕ್ತಿಯ ಪ್ರಶ್ನೆಗೆ ಅದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Published by:Sushma Chakre
First published: