Cryptocurrency: ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಎಷ್ಟು ಸೇಫ್?; ಇಲ್ಲಿದೆ ಮಾಹಿತಿ

Cryptocurrency Price Today: ಕ್ರಿಪ್ಟೋಕರೆನ್ಸಿ ಆರ್ಥಿಕ ಜಗತ್ತಿನ ಮುಂದಿನ ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿಗೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದರೂ, ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ತಮ್ಮ ಹಣವನ್ನು ವರ್ಚುವಲ್ ವ್ಯಾಪಾರದ ಜಾಗದಲ್ಲಿ ಇರಿಸಲು ಹಿಂಜರಿಯುತ್ತಾರೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ ಎಂಬುದನ್ನು ಈ ಚರ್ಚೆಯಲ್ಲಿ ತಿಳಿಯೋಣ. ವರ್ಚುವಲ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಸರ್ಕಾರವು ವಿಕೇಂದ್ರೀಕೃತ ವರ್ಚುವಲ್ ನಾಣ್ಯಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಹೋದರೆ, ಭಾರತದಲ್ಲಿ ಹೂಡಿಕೆದಾರರು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದರೂ, ವರ್ಚುವಲ್ ಕರೆನ್ಸಿಗಳು ಮತ್ತು ವಿಶ್ಲೇಷಕರೊಂದಿಗೆ ಪರಿಚಿತವಾಗಿರುವ ತಜ್ಞರು ಕ್ರಿಪ್ಟೋ ವ್ಯಾಪಾರವನ್ನು ನಿಯಂತ್ರಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಭಾವಿಸುತ್ತಾರೆ.

ಕ್ರಿಪ್ಟೋಕರೆನ್ಸಿ ಆರ್ಥಿಕ ಜಗತ್ತಿನ ಮುಂದಿನ ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಅನೇಕ ನಿಯಂತ್ರಕ ರಕ್ಷಣೆಯ ಕೊರತೆಯು ಹೂಡಿಕೆದಾರರನ್ನು ಕ್ರಿಪ್ಟೋಕರೆನ್ಸಿಗಳ ಹಿಮ್ಮುಖಗೊಳಿಸುತ್ತಿವೆ ಎನ್ನುವುದು ತಜ್ಞರ ಅಭಿಪ್ರಾಯ. ಇದಲ್ಲದೆ, ಕ್ರಿಪ್ಟೋಕರೆನ್ಸಿ ಹ್ಯಾಕಿಂಗ್‌ಗೆ ಒಡ್ಡಿಕೊಳ್ಳುವುದು, ಪಾಸ್‌ವರ್ಡ್‌ ಮರೆತು ಹೋದ ಸಮಯದಲ್ಲಿ ಸರಿಯಾದ ಮಾರ್ಗ ಸಿಗದೇ ಇರುವುದು ಮತ್ತು ಮಾಲ್‌ವೇರ್ ದಾಳಿಗಳು ಮತ್ತು ಹಗರಣಗಳು ಸೇರಿದಂತೆ ಕೆಲವು ಇತರ ಅಪಾಯಗಳು ವರ್ಚುವಲ್ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿವೆ.

ಭಾರತೀಯರು ಸಾಮಾನ್ಯವಾಗಿ ವ್ಯಾಪಾರದ ಆಯ್ಕೆಗಳಲ್ಲಿ ಸಣ್ಣ ಹೂಡಿಕೆದಾರರು ಎಂದು ಹೇಳಬಹುದು. ಇದೀಗ ಸಾಂಪ್ರದಾಯಿಕ ಆಯ್ಕೆಗಳ ಬದಲು ಕ್ರಿಪ್ಟೋ ಸ್ವತ್ತುಗಳ ಮೇಲೆ ತಮ್ಮ ಸ್ವತ್ತುಗಳನ್ನು ಹೂಡಲು, ಕ್ರಿಪ್ಟೋಕರೆನ್ಸಿ ಜಾಗವನ್ನು ಅನ್ವೇಷಿಸಲು ಉತ್ಸುಕರಾಗಿದ್ದರೂ ಸಹ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ತಮ್ಮ ಜ್ಞಾನದ ಕೊರತೆಯೊಂದ ಹಿಂಜರಿಯುತ್ತಾರೆ. ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ಇದು ಸುರಕ್ಷಿತವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರವು ಸಹ ಕ್ಲಿಷ್ಟಕರವಾಗಿದೆ. ಏಕೆಂದರೆ ಇದು ನಂಬಿಕೆಗೆ ಅರ್ಹವಾಗಿಲ್ಲವೆನ್ನುವುದು ಮತ್ತು ಗ್ರಾಹಕ ಸ್ನೇಹಿಯಾಗಿಲ್ಲ ಎನ್ನುವುದು ಮೂಲ ಕಾರಣವಾಗಿದೆ.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿ ಮೌಲ್ಯ 700 ಪಟ್ಟು ಹೆಚ್ಚಾಗುತ್ತಿದ್ದಂತೆ ಉದ್ಯೋಗಿಯ ಸಂಬಳ ವಾಪಾಸ್ ಕೇಳಿದ ಕಂಪನಿ!

ಆದರೂ, ತಮ್ಮ ಸ್ಪಷ್ಟ ಹೂಡಿಕೆಯ ದೃಷ್ಟಿಕೋನದಿಂದ, ಬಿಟ್‌ ಕಾಯಿನ್‌, ಎಥೆರಿಯಮ್ (ಈಥರ್) ಅಥವಾ ಇನ್ನಾವುದೇ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಅಪಾಯಗಳು ಇತರ ಸಾಂಪ್ರದಾಯಿಕ ಸ್ವತ್ತುಗಳಿಗಿಂತ ಭಿನ್ನವಾಗಿರುವುದಿಲ್ಲ ಎನ್ನುವುದು ವಾಸ್ತವ. ವರ್ಚುವಲ್ ಮಾರುಕಟ್ಟೆಯು ಹೆಚ್ಚಿನ ಚಂಚಲತೆಯನ್ನು ಎದುರಿಸುತ್ತಿದೆ ಎಂಬ ಅಂಶವನ್ನು ಹೊರತುಪಡಿಸಿ ಆರ್ಥಿಕ ತಜ್ಞರಿಗೆ ಇದರ ಅಳತೆಗೋಲನ್ನು ಅಂದಾಜಿಸುವುದು ಅತಿ ಸುಲಭವಾಗಿದೆ.

ಜನಪ್ರಿಯ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ವಾಜಿರ್‌ ಎಕ್ಸ್‌ ಸಿಇಒ ನಿಶ್ಚಲ್‌ ಶೆಟ್ಟಿ ಅವರು ಈ ನಿಟ್ಟಿನಲ್ಲಿ ಹೂಡಿಕೆದಾರರಲ್ಲಿ ಭರವಸೆ ತುಂಬುವ ಮಾತನ್ನಾಡುತ್ತಾರೆ. ಫಿಯೆಟ್ ಕರೆನ್ಸಿಗಳು ಮತ್ತು ಷೇರುಗಳನ್ನು ರಕ್ಷಿಸಲು ಚಿನ್ನದಂತೆಯೇ ಕ್ರಿಪ್ಟೋಕರೆನ್ಸಿಗಳು ಮುಖ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶೆಟ್ಟಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲ ಹಂತದಲ್ಲಿ ಕ್ರಿಪ್ಟೋಕರೆನ್ಸಿ ಬೇಡಿಕೆ ವೇಗವಾಗಿ ಬೆಳೆಯಲು ಇದು ಒಂದು ಕಾರಣವಾಗಿದೆ. ಫಿಯೆಟ್ ಕರೆನ್ಸಿಗಳು ಮತ್ತು ಸ್ಟಾಕ್‌ಗಳಂತಲ್ಲದೆ, ಕ್ರಿಪ್ಟೋಕರೆನ್ಸಿಗಳು ಹಣದುಬ್ಬರದಿಂದ ಹೆಚ್ಚು ಪ್ರಭಾವ ಬೀರುವುದಿಲ್ಲ ಮತ್ತು ಚಿನ್ನಕ್ಕೆ ಆದರ್ಶ ಪರ್ಯಾಯವನ್ನು ನೀಡುತ್ತವೆ. ಇದು ಮತ್ತೊಂದು ಆದ್ಯತೆಯ ಮುಖ್ಯ ಹೂಡಿಕೆಯಾಗಿದೆ.

ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಭಾರತದಲ್ಲಿ ಕಾನೂನುಬದ್ಧವಾಗಿದೆ. ಮತ್ತು ವರ್ಚುವಲ್ ನಾಣ್ಯಗಳನ್ನು ಖರೀದಿಸುವುದನ್ನು ಅಥವಾ ಮಾರಾಟ ಮಾಡುವುದನ್ನು ವ್ಯಕ್ತಿಗಳು ನಿಷೇಧಿಸುವ ಯಾವುದೇ ಕಾನೂನುಗಳಿಲ್ಲ ಎಂದು ಸಹ ಗಮನಿಸಬೇಕು. ಹೆಚ್ಚಿನ ಅಪಾಯದ ಹಸಿವನ್ನು ಹೊಂದಿರುವ ಮತ್ತು ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ತಾಳ್ಮೆ ಹೊಂದಿರುವ ಜನರಿಗೆ, ಕ್ರಿಪ್ಟೋಕರೆನ್ಸಿ ಜಾಗವನ್ನು ಅನ್ವೇಷಿಸುವುದು ಅಂತಹ ಕೆಟ್ಟ ಆಲೋಚನೆಯಾಗಿಲ್ಲ. ಹೂಡಿಕೆ ಮಾಡುವ ಮೊದಲು ಜನರು ಸಾಕಷ್ಟು ಸಂಶೋಧನೆ ನಡೆಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಎಂದು ಶೆಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ.
Published by:Sushma Chakre
First published: