ಹುತಾತ್ಮ ಯೋಧನ ತಂಗಿಯ ಮದುವೆಯನ್ನು ತಾವೇ ಮುಂದೆ ನಿಂತು ಮಾಡಿದ ಸೈನಿಕರು, ವಿಡಿಯೋ ನೋಡಿ

CRPF Jawans: ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಡಜನ್‌ಗಟ್ಟಲೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ವಧುವಿನ ಮೇಲೆ ಮುಸುಕು ಹಿಡಿದು ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ನೋಡಬಹುದಾಗಿದೆ.

ಮದುವೆಯಲ್ಲಿ ಯೋಧರು

ಮದುವೆಯಲ್ಲಿ ಯೋಧರು

  • Share this:
ನಾವು ಇಂದು ಮನೆಯಲ್ಲಿ ರಾತ್ರಿ ಹೊತ್ತು ಹಾಯಾಗಿ ಯಾವುದೇ ಚಿಂತೆ, ಭಯವಿಲ್ಲದೆ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ದೇಶದ ಗಡಿ(Borders ) ಕಾಯುವ ಮತ್ತು ರಕ್ಷಣೆ ಮಾಡುವ ಸೈನಿಕರಿಂದ(Soldiers) ಎಂದು ಹೇಳಬಹುದು. ನಮ್ಮ ದೇಶವನ್ನು(Country) ಮತ್ತು ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗುತ್ತದೆ.ಇಲ್ಲಿ ನಡೆದಿರುವ ಮತ್ತು ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿರುವ ವಿಡಿಯೋ ಸೈನಿಕರೊಬ್ಬರು ದೇಶ ರಕ್ಷಣೆಯಲ್ಲಿ (Defense) ತನ್ನ ಪ್ರಾಣ ತ್ಯಾಗ ಮಾಡಿದ್ದು, ಆತನ ತಂಗಿಯ ಮದುವೆಗೆ (Sister's marriage) ಆ ಹುತಾತ್ಮ ಯೋಧನ ಸಹೋದ್ಯೋಗಿಗಳು ಸಹೋದರಿಯ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೆ ಅಲ್ಲ ಅಣ್ಣ ಮಾಡಬೇಕಾದ ಎಲ್ಲಾ ಶಾಸ್ತ್ರಗಳನ್ನು ಮಾಡಿದ್ದಾರೆ.

ಕಣ್ಣುಗಳನ್ನು ಒದ್ದೆ ಮಾಡಿದೆ
ಈ ಹೃದಯಸ್ಪರ್ಶಿ ಘಟನೆಯಲ್ಲಿ ಹುತಾತ್ಮ ಸೈನಿಕನ ಸಹೋದರಿಯ ಮದುವೆಗೆ ಹಲವಾರು ಯೋಧರು ಹಾಜರಾದಾಗ ಮತ್ತು ಸಹೋದರ ಸಾಂಪ್ರದಾಯಿಕವಾಗಿ ಮಾಡುವ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಿದಾಗ ಆ ಸಹೋದರಿಗೆ ಮತ್ತು ಮನೆಯವರಿಗೆ ಎಷ್ಟು ಸಂತೋಷ ಆಗಿರಬಹುದು ಎಂದು ಯಾರು ಊಹಿಸಲು ಸಾಧ್ಯವೇ ಇಲ್ಲ. ಈಗ, ಈ ಮದುವೆಯ ವಿಡಿಯೋ ಅನೇಕರ ಕಣ್ಣುಗಳನ್ನು ಒದ್ದೆ ಮಾಡಿದೆ.

ಇದನ್ನೂ ಓದಿ: ಆರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 680 ಸಿಎಪಿಎಫ್ ಸಿಬ್ಬಂದಿ: ರಾಜ್ಯಸಭೆಗೆ ಮಾಹಿತಿ ನೀಡಿದ ಸರ್ಕಾರ

ವಿಡಿಯೋ ನೋಡಿ:

ಸಿಆರ್‌ಪಿಎಫ್ ಯೋಧರು ಭಾಗಿ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಡಜನ್‌ಗಟ್ಟಲೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ವಧುವಿನ ಮೇಲೆ ಮುಸುಕು ಹಿಡಿದು ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ನೋಡಬಹುದಾಗಿದೆ. ಹತ್ಯೆಗೀಡಾದ ತಮ್ಮ ಸಹೋದ್ಯೋಗಿ ಕಾನ್ಸ್ಟೇಬಲ್‌ ಶೈಲೇಂದ್ರ ಪ್ರತಾಪ್ ಸಿಂಗ್ ಗೌರವದ ಸಂಕೇತವಾಗಿ, ರಾಯ್‌ಬರೇಲಿಯ ಸಿಆರ್‌ಪಿಎಫ್ ಸಿಬ್ಬಂದಿ ವಿಶೇಷ ದಿನದಂದು ಕುಟುಂಬದೊಂದಿಗೆ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಅವರನ್ನು ಮರೆತಿಲ್ಲ
110 ಬಿಎನ್ ಸಿಆರ್‌ಪಿಎಫ್‌ ಬೆಟಾಲಿಯನ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಶೈಲೇಂದ್ರ ಪ್ರತಾಪ್ ಸಿಂಗ್ ಹುತಾತ್ಮರಾಗಿದ್ದರು" ಎಂದು ಅಧಿಕೃತ ಟ್ವೀಟ್ ಮಾಡಿದ್ದಾರೆ. ಹಾಗೂ, ಈ ಮದುವೆಯ ಫೋಟೋಗಳನ್ನು ಹಂಚಿಕೊಂಡು "ಅವರು ಹೋಗಿದ್ದಾರೆ. ಆದರೆ ಅವರನ್ನು ಮರೆತಿಲ್ಲ" ಎಂಬ ಶೀರ್ಷಿಕೆ ಬರೆದಿದ್ದಾರೆ.

ಹುತಾತ್ಮ ಕುಟುಂಬಕ್ಕೆ ಭರವಸೆ
ಸಿಂಗ್ 2008ರಲ್ಲಿ ಸಿಆರ್‌ಪಿಎಫ್ ಸೇರಿದ್ದು ಅವರನ್ನು ಪಡೆಯ 110ನೇ ಬೆಟಾಲಿಯನ್‌ನಲ್ಲಿ ನೇಮಿಸಲಾಯಿತು. ಅವರ ಬೆಟಾಲಿಯನ್ ಸೋಪೋರ್‌ನಲ್ಲಿತ್ತು. "ಸಿಆರ್‌ಪಿಎಫ್ ನಮ್ಮ ಹುತಾತ್ಮರಿಗೆ ವಂದಿಸುತ್ತದೆ ಮತ್ತು ನಮ್ಮ ಹುತಾತ್ಮ ಸಹೋದರರ ಕುಟುಂಬಗಳೊಂದಿಗೆ ಸದಾ ನಿಲ್ಲುತ್ತದೆ" ಎಂದು ಕಾಶ್ಮೀರ Ops ಸೆಕ್ಟರ್ ಸಿಆರ್‌ಪಿಎಫ್ ಆನ್‌ಲೈನ್ ನಲ್ಲಿ ಬರೆದಿದೆ. ಸ್ಥಳೀಯ ವರದಿಗಳ ಪ್ರಕಾರ, ಸಮವಸ್ತ್ರದಲ್ಲಿರುವ ಯೋಧರು ಸೋಮವಾರ ಮದುವೆಗೆ ಆಶ್ಚರ್ಯವಾಗಿ ಆಗಮಿಸಿದರು ಮತ್ತು ವಧು ಜ್ಯೋತಿಯ ಸಹೋದರ ಸ್ವತಃ ಮಾಡಬಹುದಾದ ಎಲ್ಲಾ ಆಚರಣೆಗಳನ್ನು ಇವರೆಲ್ಲರೂ ಮುಂದೆ ನಿಂತುಕೊಂಡು ಮಾಡಿದರು.

ಇದನ್ನೂ ಓದಿ: CRPF Recruitment 2021: ತಿಂಗಳಿಗೆ ₹85,000 ಸಂಬಳ, ಸಿಆರ್​​ಪಿಎಫ್​ನಲ್ಲಿ 60 ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ

ಕುಟುಂಬ ಸದಸ್ಯರು ಭಾವುಕ
ಸಿಂಗ್‌ರೊಂದಿಗೆ ಕರ್ತವ್ಯದಲ್ಲಿದ್ದ ಅವರ ಸಹೋದ್ಯೋಗಿಗಳು ಹತ್ತಿರದಲ್ಲಿ ಇದ್ದರು ಮತ್ತು ಅವರ ತಂಗಿ ಮದುವೆಯಾಗುತ್ತಿದ್ದಾರೆ ಎಂದು ತಿಳಿದಾಗ ಇತರ ಯೋಧರಿಗೆ ಮಾಹಿತಿ ನೀಡಿದರು ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾದ ಯೋಧರನ್ನು ನೋಡಿ, ಕುಟುಂಬ ಸದಸ್ಯರು ಭಾವುಕರಾದರು. ಸಿಂಗ್ ಪೋಷಕರು, ಪತ್ನಿ, ಮೂವರು ಸಹೋದರಿಯರು ಮತ್ತು 9 ವರ್ಷದ ಮಗನನ್ನು ಅಗಲಿದ್ದರು. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಸಹ ಸಮವಸ್ತ್ರ ಧರಿಸಿದ ಸ್ನೇಹಿತರನ್ನು ಶ್ಲಾಘಿಸಿದರು.
Published by:vanithasanjevani vanithasanjevani
First published: