Swedenನಲ್ಲಿ ಕಾಗೆಗಳಿಗೆ ರಸ್ತೆಯಲ್ಲಿರುವ ಸಿಗರೇಟ್​ ತುಂಡನ್ನು ಸಂಗ್ರಹಿಸುವ ಕೆಲಸ - ಸಂಬಳದ ಬದಲಿಗೆ ಊಟ ಮಾತ್ರ

Crows Pick up Cigarette Butts: ಮನುಷ್ಯರಿಗೆ ಕೆಲಸ ಇಲ್ಲದ ಕಾಲದಲ್ಲಿ ಕಾಗೆಗಳಿಗೆ ಕೆಲಸ ಕೊಡುವುದೇ ಎಂದು ಬೇಸರಿಸಿಕೊಳ್ಳಬೇಡಿ. ಮನುಷ್ಯರಿಗಾದರೆ ಸಂಬಳ ಕೊಡಬೇಕು, ಕಾಗೆಗಳಿಗೆ ತಿಂಡಿ ಕೊಟ್ಟರೆ ಸಾಕು ಎನ್ನುವುದು ಈ ಕಾಗೆಗಳ ಉದ್ಯೋಗದಾತರ ಅಂಬೋಣ.

ಕೆಲಸದ ತಲ್ಲೀನವಾಗಿರುವ ಕಾಗೆ

ಕೆಲಸದ ತಲ್ಲೀನವಾಗಿರುವ ಕಾಗೆ

  • Share this:
ಮನುಷ್ಯರು ಪ್ರಾಣಿಗಳನ್ನು (Animals)  ದುಡಿಸಿಕೊಳ್ಳುವುದು ಅಥವಾ ನಾನಾ ರೀತಿಯಲ್ಲಿ ತನ್ನ ಲಾಭಕ್ಕೆ (Profit) ಬಳಸಿಕೊಳ್ಳುವುದು ಸಾಮಾನ್ಯ ಸಂಗತಿ. ಇನ್ನು ಸಾಕು ಪ್ರಾಣಿ, ಪಕ್ಷಿಗಳ (birds) ಜೀವನವಂತೂ ಮನುಷ್ಯನಿಗಾಗಿಯೇ ಮೀಸಲು ಎಂಬಂತಾಗಿದೆ. ಆದರೆ ನಮ್ಮ ಮುಂದೆಯೇ ಕಾ. . . ಕಾ.. ಎಂದು ಹಾರಾಡಿಕೊಂಡು, ಮನುಷ್ಯರಿಂದಲೇ ಆಹಾರ ಪಡೆಯುವ, ಕಿತ್ತುಕೊಳ್ಳುವ ಅಥವಾ ಕದಿಯುವ, ಅಷ್ಟೆಲ್ಲಾ ಮಾಡಿಯೂ, ಮನುಷ್ಯರ ಸಹವಾಸ ಮಾತ್ರ ತಮಗೆ ಬೇಡ ಎಂದುಕೊಂಡು ತಮ್ಮ ಮರ್ಜಿಯ ಮಾಲೀಕರಾಗಿ ಬದುಕುವ ಕಾಗೆಗಳನ್ನು (Crow)  ನಾವು ದುಡಿಸಿಕೊಳ್ಳುವ ಬಗ್ಗೆ ಯೋಚಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿದೆ ಎನ್ನುತ್ತಿದ್ದಾರೆ ಸ್ವೀಡನ್ ಮಂದಿ! ಈಗಾಗಲೇ , ಸ್ವೀಡಿಶ್ ನಗರದಲ್ಲಿ ಕಾಗೆಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆಯಂತೆ.

ಮನುಷ್ಯರಿಗೆ ಕೆಲಸ ಇಲ್ಲದ ಕಾಲದಲ್ಲಿ ಕಾಗೆಗಳಿಗೆ ಕೆಲಸ ಕೊಡುವುದೇ ಎಂದು ಬೇಸರಿಸಿಕೊಳ್ಳಬೇಡಿ. ಮನುಷ್ಯರಿಗಾದರೆ ಸಂಬಳ ಕೊಡಬೇಕು, ಕಾಗೆಗಳಿಗೆ ತಿಂಡಿ ಕೊಟ್ಟರೆ ಸಾಕು ಎನ್ನುವುದು ಈ ಕಾಗೆಗಳ ಉದ್ಯೋಗದಾತರ ಅಂಬೋಣ. ಸರಿ, ಸ್ವೀಡನ್‍ನ ಕಾಗೆಗಳಿಗೆ ಸಿಕ್ಕಿರುವ ಕೆಲಸವಾದರೂ ಯಾವುದಪ್ಪಾ ಎಂಬ ಕುತೂಹಲವೇ? ಅವುಗಳಿಗೆ ಸ್ವೀಡಿಶ್ ನಗರದ ಬೀದಿಗಳಲ್ಲಿ ಸೇದಿ ಬಿಸಾಡಿದ ಸಿಗರೇಟ್ ತುಂಡುಗಳನ್ನು ಸಂಗ್ರಹಿಸುವ ಕೆಲಸ ಕೊಡಲಾಗಿದೆಯಂತೆ! ಹಾಗಂತ ಕಾಗೆಗಳನ್ನು ಬಲವಂತವಾಗಿ ಈ ಕೆಲಸಕ್ಕೆ ನೇಮಿಸಿಕೊಂಡಿಲ್ಲ, ಅವುಗಳು ಸ್ವಯಂ ಪ್ರೇರಿತವಾಗಿ ಸೇರಿಕೊಂಡಿವೆ!

ರಾಜಧಾನಿ ಸ್ಟಾಕ್‍ಹೋಂನ ಸಮೀಪ ಇರುವ ಸೋಡರ್‍ಟೆಲಿಯಾ ನೈರುತ್ಯ ಭಾಗದಲ್ಲಿ , ಈ ವಸಂತ ಕಾಲದಲ್ಲಿ ಪ್ರಾಯೋಗಿಕ ಯೋಜನೆಯನ್ನು ಪರಿಚಯಿಸಲಾಗಿದೆ. ಅಲ್ಲಿ ಕಾಡು ಪಕ್ಷಿಗಳು, ಒಂದು ಸ್ಟಾರ್ಟ್ ಅಪ್ ವಿನ್ಯಾಸಗೊಳಿಸಿದ ಯಂತ್ರದಲ್ಲಿ, ತಾವು ತಂದು ಹಾಕುವ ಪ್ರತಿಯೊಂದು ಸಿಗರೇಟ್ ತುಂಡಿಗೆ ಪ್ರತಿಯಾಗಿ ಆಹಾರವನ್ನು ಪಡೆಯುತ್ತವೆ.

ಇದನ್ನೂ ಓದಿ: ಸತ್ತು ಹೋಗಿದ್ದಾನೆ ಎಂದು ತಿಳಿದ ವ್ಯಕ್ತಿ ಬಚಾವ್​ ಆಗಿದ್ದು ಗೊರಕೆಯಿಂದ

“ಅವು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿರುವ ಕಾಡು ಹಕ್ಕಿಗಳು” ಎಂದು ಹೇಳುತ್ತಾರೆ ಈ ಹೊಸ ವಿಧಾನದ ಹಿಂದಿರುವ ಕಂಪನಿಯಾದ ಕಾರ್ವಿಡ್ ಕ್ಲೀನಿಂಗ್‍ನ ಸ್ಥಾಪಕ ಕ್ರಿಶ್ಚಿಯನ್ ಗುಂಥೆರ್ -ಹ್ಯಾನ್ಸೆನ್.

“ಕಾಗೆಗಳಿಗೆ, ಸಿಗರೇಟ್ ತುಂಡುಗಳಿಗೆ ಪ್ರತಿಯಾಗಿ ಆಹಾರ ಬದಲಾಯಿಸಿಕೊಳ್ಳುವುದನ್ನು ಕಲಿಸಿದರೆ, ಅವು ನಮ್ಮ ಬೀದಿಗಳನ್ನು ಮತ್ತು ಚೌಕಗಳನ್ನು ಸ್ಚಚ್ಚಗೊಳಿಸಲು ಸಹಾಯ ಮಾಡಬಹುದು ಎನ್ನುತ್ತಾರೆ ಅವರು.

ಕ್ರಿಶ್ಚಿಯನ್ ಗುಂಥೆರ್ -ಹ್ಯಾನ್ಸೆನ್ ಅವರು, ಸ್ಟಾಕ್‍ಹೋಂನಲ್ಲಿ ಇರುವ ಮರು ಬಳಕೆ ಕೇಂದ್ರದಲ್ಲಿ ಕಾಗೆಗಳಿಗೆ ಹಲವು ತಿಂಗಳುಗಳ ಕಾಲ ತರಬೇತಿ ನೀಡಿದ್ದಾರೆ.

“ಕಾಗೆಗಳು ಮೂಲತಃ, ನಾವು ಸ್ವೀಡನ್‍ನಲ್ಲಿ ಹೊಂದಿರುವ ಅತ್ಯಂತ ಹೆಚ್ಚು ಬುದ್ಧಿವಂತ ಕಾಡು ಪಕ್ಷಿಗಳು ಮತ್ತು ಬಹುಶ:, ಬ್ರಿಟನ್‍ನಲ್ಲಿಯೂ ಸಹ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅವರು.

“ತಮಗೆ ಪ್ರತಿಫಲವನ್ನು ಕೊಡಿಸದೇ ಇರುವ ಕೆಲವು ಕಸ ಮತ್ತು ಕಲ್ಲು ಅಥವಾ ಎಲೆಗಳ ನಡುವಿನ ವ್ಯತ್ಯಾಸವನ್ನು ಅವು ಅರ್ಥ ಮಾಡಿಕೊಳ್ಳಬಲ್ಲವು ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು” ಎನ್ನುತ್ತಾರೆ ಅವರು.

ಈ ಕೆಲಸದಲ್ಲಿ ಪಕ್ಷಿಗಳು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿವೆ, ಅಂದರೆ ಈ ಯೋಜನೆಯು “ಮೂಲಭೂತವಾಗಿ ಒಂದು ವಿನಿಮಯ ವ್ಯವಸ್ಥೆ” ಎಂದು ಕ್ರಿಶ್ಚಿಯನ್ ಗುಂಥೆರ್ ಮಾಹಿತಿ ನೀಡಿದ್ದಾರೆ.

ಕೀಪ್ ಸ್ವೀಡನ್ ಟೈಡಿ ಫೌಂಡೇಶನ್ ಪ್ರಕಾರ, ಪ್ರತಿ ವರ್ಷ ಆ ದೇಶದ ಬೀದಿಗಳಲ್ಲಿ ಒಂದು ಬಿಲಿಯನ್ ಸಿಗರೇಟ್ ತುಂಡುಗಳನ್ನು ಬಿಸಾಡಲಾಗುತ್ತದೆ, ಪ್ರತಿಯೊಂದನ್ನು ಎತ್ತಿ ಹಾಕಲು ಎರಡು ಕ್ರೋನರ್ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕ್ರಿಶ್ಚಿಯನ್ ಹುಂತೆರ್ - ಹನ್ಸೆನ್ ಅವರ ನಂಬಿಕೆಯ ಪ್ರಕಾರ, ತನ್ನ ಕಾಗೆಗಳು ಅದರ ಹತ್ತನೆಯ ಬೆಲೆಗೆ ಕೆಲಸವನ್ನು ಮಾಡಬಹುದು ಮತ್ತು ಕೌನ್ಸಿಲ್‍ಗಳು ಕಸ ಸಂಗ್ರಹಣೆಗೆ ತೆರುವ ಹಣದ ಬಿಲ್‍ಗಳನ್ನು ಕಡಿತಗೊಳಿಸಬಹುದು.

ಇದನ್ನೂ ಓದಿ: ದಕ್ಷಿಣ ಕೊರಿಯಾದ ಈ ಹೊಸ ಮಾಸ್ಕ್​ ಬರೀ ಮುಚ್ಚಿಕೊಳ್ಳೋಕಂತೆ

ಸ್ವೀಡನ್‍ನಲ್ಲಿ ಕಾಗೆಗಳು ಮತ್ತು ಕಾಗೆಗಳ ಪ್ರಭೇದಕ್ಕೆ ಸೇರಿರುವ ಇತರ ಪಕ್ಷಿಗಳಾದ ರೂಕ್ಸ್‌ಗಳು, ಜ್ಯಾಕ್‍ಡಾವ್‍ಗಳು ಮತ್ತು ಮ್ಯಾಗ್‍ಪೈಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿವೆ, ಹಾಗಾಗಿ ಸಂಭಾವ್ಯ ಸಂಗ್ರಹಕಾರರ ಕೊರತೆ ಅಲ್ಲಿ ಖಂಡಿತಾ ತಲೆದೋರುವುದಿಲ್ಲ ಎಂಬುವುದು ಅವರ ನಂಬಿಕೆಯಾಗಿದೆ.
Published by:Sandhya M
First published: