Viral News: ಸಿಗರೇಟ್ ಗಾಗಿ ವ್ಯಕ್ತಿಯ ಜೊತೆ ಸ್ನೇಹ ಬೆಳೆಸಿದ ಕಾಗೆ: ಮುಂದೇನಾಯ್ತು ಗೊತ್ತಾ?

ಕಳೆದ ವರ್ಷ ಒಮ್ಮೆ ತೋಟದಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದಾಗ ಕಾಗೆ ಬಂದು ನನ್ನ ಭುಜದ ಮೇಲೆ ಕುಳಿತಿತು. ಆ ವೇಳೆ ನಾನು ಕೈಯಲ್ಲಿದ್ದ ಸಿಗರೇಟ್ ಕೆಳಗೆ ಬಿಸಾಡಿದನು. ಆಗ ಕಾಗೆ ಕೆಳಗೆ ಹೋಗಿ ಬಿದ್ದ ಸಿಗರೇಟ್ ಬಾಯಲ್ಲಿ ಹಿಡಿದು ಸೇದಲಾರಂಭಿಸಿತು. ಅಂದಿನಿಂದ ನಾನು ಮತ್ತು ಕ್ರೇಗ್ ಸ್ನೇಹಿತರಾದೆವು ಎಂದು ಪ್ರೀಟ್ ಹೇಳುತ್ತಾರೆ.

ಕಾಗೆ ಜೊತೆ ಫ್ರೀಟ್

ಕಾಗೆ ಜೊತೆ ಫ್ರೀಟ್

  • Share this:
ನಿಮ್ಮ ಸುತ್ತಮುತ್ತ ಪ್ರಾಣಿ ಮತ್ತು ಮನುಷ್ಯರ ನಡುವಿನ ಭಾಂದವ್ಯ ಮತ್ತು ಸ್ನೇಹವನ್ನು (Relationship between man and animal) ನೋಡಿರ್ತಿರಿ. ಕೆಲ ಘಟನೆಗಳ ಬಗ್ಗೆ ಕತೆಯನ್ನೂ (Story) ಸಹ ಕೇಳಿರುತ್ತಿರಿ. ಕೆಲವೊಮ್ಮೆ ಪ್ರಾಣಿಗಳೇ ತನ್ನ ಒಡೆಯನ ಜೀವ ಉಳಿಸಿರುವ ಘಟನೆಗಳು ವರದಿಯಾಗಿವೆ. ಇಂದು ನಾವು ಹೇಳುತ್ತಿರುವ ಕಾಗೆ (Crow) ಮತ್ತು ಮನುಷ್ಯನ ಸ್ನೇಹಕ್ಕೆ ಸಿಗರೇಟ್ (cigarette) ಕಾರಣ. ಹೌದು. ಕಳೆದ ವರ್ಷ ಕೊರೊನಾದಿಂದ ಉಂಟಾದ ಲಾಕ್‌ಡೌನ್ (Lockdown)‌ ನಲ್ಲಿ, ಇಂಗ್ಲೆಂಡ್‌ ನ ಪೂರ್ವ ಸಸೆಕ್ಸ್‌ನಲ್ಲಿ ವಾಸಿಸುತ್ತಿದ್ದ ಪೀಟ್ ತನ್ನ ತೋಟಕ್ಕೆ ಬಂದ ಕಾಗೆಯೊಂದಿಗೆ ಸ್ನೇಹ ಬೆಳೆಸಿದನು. ಈಗ ಪೀಟ್ ಆ ಕಾಗೆ ಜೊತೆ ಸಿಗರೇಟ್ ಸೇದುತ್ತಾನೆ.

37 ವರ್ಷದ ಪೀಟ್ ಬಳಿ ಒಮ್ಮೆ ಒಂದು ಕಾಗೆ ಬರುತ್ತದೆ. ಅದು ಬಿಸಾಡಿದ್ದ ಸಿಗರೇಟ್ ಬಾಯಲ್ಲಿರಿಸಿಕೊಂಡಿತ್ತು. ಅಂದಿನಿಂದ ಆ ಕಾಗೆ ಪೀಟ್ ಮನೆಗೆ ಬರತೊಡಗಿದೆ. ಕಾಗೆ ಮತ್ತು ಪೀಟ್ ನಡುವೆ ಸ್ನೇಹ ಬೆಳೆದಿದೆ. ತಮ್ಮ ಬಳಿ ಬರೋ ಕಾಗೆ ಕ್ರೇಗ್ ಎಂದು ಹೆಸರಿಟ್ಟಿದ್ದಾನೆ ಪ್ರೀಟ್.

ಪ್ರತಿದಿನ ಪ್ರೀಟ್ ಮನೆಗೆ ಬರುತ್ತಿದ್ದ ಕಾಗೆ!

ಪ್ರತಿದಿನ ಬರುತ್ತಿದ್ದ ಕಾಗೆಗೆ ಪೀಟ್ ಸಿಗರೇಟ್ ನೀಡುತ್ತಿದ್ದನು. ಸುಮಾರು ಎರಡು ತಿಂಗಳ ಕಾಲ ಪೀಟ್ ಮತ್ತು ಕಾಗೆಯ ಸ್ನೇಹ ಬೆಳೆದಿತ್ತು. ಎರಡು ಮಕ್ಕಳ ತಂದೆಯಾಗಿರುವ ಪೀಟ್., ಕಾಗೆ ಜೊತೆ ಸಮಯ ಕಳೆದಿದ್ದಾರೆ. ಆದ್ರೆ ಈಗ ಕಾಗೆ ಪೀಟ್ ಮನೆಗೆ ಬರೋದನ್ನ ನಿಲ್ಲಿಸಿದೆ. ಅತಿಯಾದ ಸಿಗರೇಟ್ ಸೇವನೆಯಿಂದ ಕಾಗೆ ಸಾವನ್ನಪ್ಪಿರಬಹುದು ಎಂದು ಫೀಟ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Weird Professions: ಕಾಲುಗಳ ಫೋಟೋ ಮಾರಾಟ ಮಾಡಿ ಹಣ ಸಂಪಾದಿಸುವ ಮಹಿಳೆ: ಹೀಗೂ ಒಂದು ಕೆಲಸ ಉಂಟು!

ಇಬ್ಬರ ಸ್ನೇಹ ಬೆಳೆದಿದ್ದು ಹೇಗೆ?

ಕಳೆದ ವರ್ಷ ಒಮ್ಮೆ ತೋಟದಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದಾಗ ಕಾಗೆ ಬಂದು ನನ್ನ ಭುಜದ ಮೇಲೆ ಕುಳಿತಿತು. ಆ ವೇಳೆ ನಾನು ಕೈಯಲ್ಲಿದ್ದ ಸಿಗರೇಟ್ ಕೆಳಗೆ ಬಿಸಾಡಿದನು. ಆಗ ಕಾಗೆ ಕೆಳಗೆ ಹೋಗಿ ಬಿದ್ದ ಸಿಗರೇಟ್ ಬಾಯಲ್ಲಿ ಹಿಡಿದು ಸೇದಲಾರಂಭಿಸಿತು. ಅಂದಿನಿಂದ ನಾನು ಮತ್ತು ಕ್ರೇಗ್ ಸ್ನೇಹಿತರಾದೆವು ಎಂದು ಪ್ರೀಟ್ ಹೇಳುತ್ತಾರೆ.

ಪ್ರತಿದಿನ ಕ್ರೇಗ್ ಪೀಟ್ ಜೊತೆ ಧೂಮಪಾನ ಮಾಡಲು ಅವನ ಮನೆಗೆ ಬರಲಾರಂಭಿಸಿದ. ಅಂದಿನಿಂದ ಪ್ರೀಟ್ ಮುಂದಿನ ಹಲವು ತಿಂಗಳುಗಳವರೆಗೆ ನಿರಂತರವಾಗಿ ಕಾಗೆ ಬರುತ್ತಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್ ನಿಂದ ಪ್ರೀಟ್ ಮನೆಗೆ ಕಾಗೆ ಬರುತ್ತಿಲ್ಲ.

Crow befriended man for smoking may now be dead
ಕಾಗೆ ಜೊತೆ ಫ್ರೀಟ್


ಕಾಗೆ ಜೊತೆಗೆ 6 ಸಾವಿರಕ್ಕೂ ಅಧಿಕ ಫೋಟೋ

ಪೀಟ್ ತನ್ನ ಧೂಮಪಾನ ಸಂಗಾತಿಯೊಂದಿಗೆ ಸುಮಾರು ಆರು ಸಾವಿರ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಅವರು ಅವೆಲ್ಲವನ್ನೂ NFT ಕಲಾಕೃತಿಗಳಾಗಿ ಪರಿವರ್ತಿಸಿ ಕ್ರೇಗ್ ಎಂಬ ಹೆಸರಿನ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಎರಡು ತಿಂಗಳಿನಿಂದ ಮನೆಗೆ ಬಾರದ ಕಾಗೆ

ಈಗ ಪೀಟ್ ಮನೆಗೆ ಕ್ರೇಗ್ ಬರುತ್ತಿಲ್ಲ ಎಂದು ಚಿಂತೆಗೀಡಾಗಿದ್ದಾರೆ. ಕ್ರೇಗ್ ಇನ್ನು ಮುಂದೆ ಜಗತ್ತಿನಲ್ಲಿಲ್ಲ ಎಂದು ಏಕೆ ತೋರುತ್ತದೆ ಎಂದು ಅವರು ಹೇಳಿದರು. ಬಹುಶಃ ಅವರು ಧೂಮಪಾನದ ಕಾರಣದಿಂದಾಗಿ ಸತ್ತಿರಬಹುದು. ಪೀಟ್‌ನ ಹೊರತಾಗಿ, ಅವನ ಮಕ್ಕಳಿಬ್ಬರೂ ಕ್ರೇಗ್‌ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:  Weird Black House: 4 ಕೋಟಿಗೆ ಮಾರಾಟ ಆಗ್ತಿದೆ ಕಪ್ಪು ಮನೆ: ಇಲ್ಲಿ ಹಗಲಿನಲ್ಲಿಯೂ ಕತ್ತಲು

10 ರೂಪಾಯಿ ನೋಟಿನ ಮೇಲೆ ಪ್ರೇಮ ಪತ್ರ

ಒಂದು ಪ್ರೇಮ ಸಂದೇಶವನ್ನು ನೋಟಿನ ಮೇಲೆ ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಬರೆದು ಕಳುಹಿಸಿದ್ದಾಳೆ. ತನ್ನ ಮದುವೆ ನಿಶ್ಚಯವಾಗುತ್ತಿದ್ದಂತೆ ತನ್ನೊಂದಿಗೆ ಓಡಿ ಹೋಗುವಂತೆ ಪ್ರಿಯತಮೆ ತನ್ನ ಪ್ರಿಯಕರನನ್ನು ಕೇಳಿಕೊಂಡಿದ್ದಳು. ಸಂದೇಶ ಬರೆದಿರುವ ಆ ನೋಟಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಮತ್ತು ಆನ್‌ಲೈನ್‌ನಲ್ಲಿ ಅನೇಕ ಜೋಕ್‌ಗಳನ್ನು ಸಹ ಇದು ಹುಟ್ಟುಹಾಕಿದೆ ಎಂದು ಹೇಳಬಹುದು.
Published by:Mahmadrafik K
First published: