ಮನುಷ್ಯನು ದಿನಕ್ಕೊಂದು ತಂತ್ರಜ್ಞಾನವನ್ನು (Technology) ಆವಿಷ್ಕರಿಸುತ್ತಾ ಇರುತ್ತಾನೆ. ಜನರ ಸಹಾಯಕ್ಕಾಗಿ ಹೊಸ ಹೊಸ ಫೆಸಿಲಿಟಿಗಳು ಮಾರುಕಟ್ಟೆಗಳಲ್ಲಿ ಬರ್ತಾ ಇರುತ್ತದೆ. ಇವೆಲ್ಲವೂ ಕೂಡ ಕೇವಲ ಮಾನವನಿಗಾಗಿ ಮಾತ್ರ. ಪ್ರಾಣಿಗಳಿಗಾಗಿ ಅದೆಷ್ಟೋ ತಂತ್ರಜ್ಞಾನಗಳು ಬಂದರೂ ಕೂಡ ಅವುಗಳಿಗೆ ಅದನ್ನು ಬಳಕೆ ಮಾಡಲು ಗೊತ್ತಿರುವುದಿಲ್ಲ. ಮನುಷ್ಯರೇ ಅದನ್ನು ಬಳಸಿ ತೋರಿಸಬೇಕು. ಅದೇ ರೀತಿಯಾಗಿ ಇಲ್ಲೊಂದು ವಿಡಿಯೋ ವೈರಲ್ (Video Viral) ಆಗಿದೆ. ಹೊರ ಪ್ರಪಂಚ ಏನು ಅಂತ ಗೊತ್ತಿಲ್ಲದ ಪ್ರಾಣಿಗಳು ಅರಾಮದಾಯಕವಾಗಿ ಇರುತ್ತದೆ. ಅಂದರೆ, ಹೊಸ ಆವಿಷ್ಕಾರಗಳ ಬಗ್ಗೆ ಕಿಂಚಿತ್ತು ಅಂದಾಜು ಇರೋದಿಲ್ಲ. ಮೊಸಳೆಯ ವಿಡಿಯೋ ಒಂದು ವೈರಲ್ ಆಗಿದೆ. ಏನದು ಅಂತ ಕೇಳ್ತೀರಾ? ಇಲ್ಲಿದೆ ಸಂಪೂರ್ಣ ವಿವರ
ಹೌದು. ನೀರಿನೊಳಗೆ ಮತ್ತು ಹೊರಗೆ ವಾಸವಿರುವ ಪ್ರಾಣಿಯನ್ನು ಉಭಯವಾಸಿ ಅಂತ ಹೇಳಲಾಗುತ್ತದೆ. ಮೊಸಳೆ ಕೂಡ ಉಭಯವಾಸಿ ಜಾತಿಗೆ ಸೇರಿದ್ದು. ಎಲ್ಲಿ ಇದ್ದರೂ ಕೂಡ ಅವುಗಳು ಎಂದಿಗೂ ತನಗೆ ಬೇಕಾದ ಆಹಾರಗಳನ್ನು ಹುಡುಕುತ್ತಾ ಸ್ವತಂತ್ರ್ಯವಾಗಿ ಇರಲು ಇಚ್ಛಿಸುತ್ತವೆ. ಮೇಲೇ ಹಾರಾಡುವ ಹಕ್ಕಿಗಳು ಕಂಡಾಗ ಅವುಗಳು ಒಮಧು ನಿಮಷನೂ ಯೋಚೆ ಮಾಡದೇ ಉಪಾಯ ಮಾಡಿ ತನ್ನತ್ತ ಸೆಳೆದು ಗಭಕ್ಕನೇ ತಿಂದು ಬಿಡುತ್ತವೆ.
ವಿನೂತನ ಆವಿಷ್ಕಾರವಾದ ತಂತ್ರಜ್ಞಾನಗಳಲ್ಲಿ ಡ್ರೋನ್ ಕೂಡ ಒಂದು. ಮನುಷ್ಯನಿಗೆ ಆಗದಷ್ಟು ಬಾನೆತ್ತರಕ್ಕೆ ಹಾರುವ ಎಲೆಕ್ಟ್ರಾನಿಕ್ ಪಕ್ಷಿ ಅಂತ ಹೇಳಿದ್ರೂ ತಪ್ಪಾಗಲಾರದು. ಪರಿಸರದವನ್ನು ಸಂಪೂರ್ಣವಾಗಿ ತೋರಿಸಲು ಈ ಡ್ರೋನ್ ಸಹಕಾರಿಯಾಗಿದೆ. ಅಂದರೆ ಮೊದಲಿಗೆ ಎನ್ವಿರಾನ್ಮೆಂಟ್ಗಾಗಿ ಬಳಸಲಾಗುತ್ತಿದ್ದ ಈ ಡ್ರೋನ್ಗಳನ್ನು ಇದೀಗ ಎಲ್ಲಾ ಸಿನಿಮಾಗಳಲ್ಲಿ ಒಂದಾದ್ರೂ ಸೀನ್ಗಳಲ್ಲಿ ಬಳಸಲಾಗುತ್ತಿದೆ.
ಈ ಡ್ರೋನ್ಗಳ ಬಗ್ಗೆ ಪಾಪ ಮೂಕ ಪ್ರಾಣಿಗಳಿಗೆ ಏನು ಗೊತ್ತು ಅಲ್ವಾ? ಯಾಕೆ ಇಷ್ಟು ಪೀಠಿಕೆ ಹಾಕ್ತಾ ಇರೋದು ಅಂದ್ರೆ, ಇಲ್ಲೊಂದು ವೈರಲ್ ಆದ ವಿಡಿಯೋದಲ್ಲಿ ಈ ಡ್ರೋನ್ ಮತ್ತೆ ಮೊಸಳೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ವಿಡಿಯೋ ನೋಡಲು ನಮಗೆ ಸಖತ್ ಮಜಾ ಅಂತ ಅನಿಸಿದ್ರೂ , ಡ್ರೋನ್ ಓನರ್ಗಳಿಗೆ ಹೃದಯ ಬಾಯಿಗೆ ಬಂದಿರಬಹುದು.
Using drones to capture wildlife video footage. 🐊😮 pic.twitter.com/RCdzhTcGSf
— H0W_THlNGS_W0RK (@HowThingsWork_) December 19, 2022
ಇದನ್ನೂ ಓದಿ: ಭಾರತದಲ್ಲೇ ಇದೆ ಅಲೆಕ್ಸಾಂಡರ್ನ ಸೈನಿಕರ ಗ್ರಾಮ, ಇಲ್ಲಿ ಹೊರಗಿನಿಂದ ಬಂದವರು ಏನೂ ಮುಟ್ಟುವಂತಿಲ್ಲ!
ಈ ವಿಡಿಯೋಕ್ಕೆ 1 ಮಿಲಿಯನ್ಕ್ಕೂ ಅಧಿಕ ಲೈಕ್ಸ್ಗಳು ಬಂದಿದ್ದು, ಕಾಮಿಡಿಯ ಕಮೆಂಟ್ಗಳು ಬಂದಿದೆ. ಒಟ್ಟನಲ್ಲಿ ಆ ಡ್ರೋನ್ಅಂತೂ ವಾಪಾಸ್ ಸಿಕ್ಕಿರೋಲ್ಲ. ಸಿಕ್ಕಿದ್ರೂ ಅದು ಮೊದಲಿನ ಸ್ಥಿತಿಯಲ್ಲಿ ಇರೋದು ಡೌಟೇ ಬಿಡಿ. ನೀವು ಪ್ರಾಣಿಗಳ ಹತ್ತಿರ ಯಾವುದಾದರೂ ಮುಖ್ಯವಾದ ಮಿಷಿನ್ಗಳನ್ನು ಬಳಸುವಾಗ ಆದಷ್ಟು ಜಾಗರೂಕರಾಗಿರಿ. ಯಾಕೆ ಅಂದ್ರೆ ಈಗಷ್ಟೇ ನೋಡಿದ್ರೀ ಅಲ್ವಾ ವಿಡೀಯೋವನ್ನು.
ಮೂಕ ಪ್ರಾಣಿಗಳ ಮೇಲೆ ಯಾವುದೇ ಕೇಸ್ಗಳನ್ನು ಹಾಕಲು ಆಗೋದಿಲ್ಲ. ಆ ವಸ್ತುಗಳ ಮೇಲೆ ಇನ್ಸುರೆನ್ಸ್ ಇದ್ರೆ ಬಚಾವ್ ಆಗ್ತಾರೆ ಓನರ್ಸ್. ಈ ವಿಡಿಯೋ ನೋಡಿ ಅದೆಷ್ಟೋ ಜನರು ತಮ್ಮ ಮನೆಯಲ್ಲಿ ಸಾಕಿದ ಪ್ರಾಣಿಗಳಿಂದ ಮೊಬೈಲ್, ಲ್ಯಾಪ್ಟಾಪ್ಗಳನ್ನು ದೂರವಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ